Tragedy Story: ಡ್ಯಾನ್ಸರ್ ಆಗಬೇಕೆಂದುಕೊಂಡವನಿಗೆ ಓಡಾಡಲೇ ಆಗುತ್ತಿಲ್ಲ! ಪಟಾಕಿಯಿಂದ ಸುಟ್ಟೇ ಹೋಯ್ತು ಬದುಕು

ಆ ಯುವಕ ತಾನು ಡ್ಯಾನ್ಸರ್ ಆಗ್ಬೇಕು ಅಂತ ಕನಸು ಕಂಡಿದ್ದ. ಈ ಘಟನೆಯಿಂದ ಆತನ ಜೀವನವೇ ಹೋಯ್ತು. ಇದೀಗ ಒಂದು ಕಣ್ಣು ಕಾಣಿಸಲ್ಲ, ಓಡಾಡಲು ಕಾಲು ಮೊದಲಿನಂತೆ ಆಗಲ್ಲ.. ಮುಖ ಮತ್ತು ಕಾಲು ಕುರೂಪವಾಗಿದೆ. ಪಟಾಕಿ ಆತನ ಬದುಕನ್ನೇ ಸುಟ್ಟುಹಾಕಿದೆ.

ಪಟಾಕಿ ಸ್ಫೋಟದಲ್ಲಿ ಗಾಯಗೊಂಡಿರುವ ಯುವಕ

ಪಟಾಕಿ ಸ್ಫೋಟದಲ್ಲಿ ಗಾಯಗೊಂಡಿರುವ ಯುವಕ

  • Share this:
ಬೆಂಗಳೂರು: ಆತ ಡ್ಯಾನ್ಸರ್ (Dancer) ಆಗ್ಬೇಕೆಂದು ಕನಸು (Dreams) ಕಂಡಿದ್ದ. ಆದರೆ ಆ ಒಂದು ಘಟನೆ (Incident)  ಯುವಕನ ಕನಸನ್ನೇ ಕಸಿದಿದೆ. ಎರಡು ತಿಂಗಳು ಆಸ್ಪತ್ರೆಯಲ್ಲಿ (Hospital) ಸಾವಿನೊಂದಿಗೆ ಹೋರಾಟ ನಡೆಸಿದ್ದ. ಆ ಏರಿಯಾಗೆ ಸ್ಪುರದ್ರೂಪಿಯಾಗಿದ್ದವನು ಈಗ ಕುರೂಪಿಯಾಗಿದ್ದಾನೆ. ಸ್ಪ್ರಿಂಗ್ ನಂತೆ (Spring) ಜಂಪ್ (Jump) ಮಾಡಿ ಡ್ಯಾನ್ಸ್ (Dance) ಮಾಡ್ತಿದ್ದವನಿಗೆ ಈಗ ಓಡಾಡಲು ಸಹ ಆಗದ ಪರಿಸ್ಥಿತಿ ಬಂದಿದೆ. ಪಟಾಪಟ್ ಎಂದು ಎರಡು ಕಣ್ಣು ತಿರುಗಿಸ್ತಿದ್ದವನಿಗೆ ಈಗ ಒಂದು ಕಡೆ ಕಣ್ಣೇ ಕಾಣಿಸದ ಸ್ಥಿತಿಯಿದೆ. ಹೌದು ಇಡೀ ರಾಜಧಾನಿ ಬೆಂಗಳೂರನ್ನೇ (Bengaluru) ಬೆಚ್ಚಿಸಿದ್ದ ನ್ಯೂ ತರಗು ಪೇಟೆಯ (New Taragpet) ಪಟಾಕಿ ಸ್ಫೋಟ (Crackers Blast) ಪ್ರಕರಣದ ಸಂತ್ರಸ್ತನ ಕಥೆಯಿದು. ಅದ್ರಲ್ಲಿ ಮೂವರು ಸಾವನ್ನಪ್ಲಿದ್ರೆ, ಮೂವರು ಗಂಭೀರವಾಗಿ ಗಾಯಗೊಂಡಿದ್ರು. ಈ ಪೈಕಿ ಗಾಯಾಳು ಯುವಕ ಮಂಜುನಾಥ್ ಎಂಬುವನ ಕಣ್ಣೀರಿನ ಕಥೆಯಿತು.

ಪಟಾಕಿ ಸ್ಫೋಟದಿಂದ ಪಕ್ಕದ ಮನೆ ಯುವಕನಿಗೆ ಗಾಯ

ಸೆಪ್ಟೆಂಬರ್ 23 ರಂದು ನ್ಯೂ ತರಗು ಪೇಟೆಯಲ್ಲಿ ನಡೆದಿದ್ದ ಪಟಾಕಿ ಸ್ಪೋಟ ಘಟನೆಯಿದು. ಟಾಟಾ ಏಸ್ ಟೆಂಪೋಗೆ ಪಟಾಕಿ ಬಾಕ್ಸ್ ತುಂಬುವಾಗ ಧಿಡೀರ್ ಎಂದು ಸ್ಫೋಟಗೊಂಡಿತ್ತು. ತಮಿಳುನಾಡಿನ ಮನೋಹರ್ , ವಯೋವೃದ್ದ ಹಾಗೂ ಮತ್ತೊಬ್ಬ ಮೆಕಾನಿಕ್ ಸಾವನ್ನಪ್ಪಿದ್ರು.. ಅದೇ ಸಂದರ್ಭದಲ್ಲಿ ಮಾರಣಾಂತಿಕವಾಗಿ ಗಾಯಗೊಂಡಿದ್ದ ಪಕ್ಕದ ಮನೆಯ ಮಂಜುನಾಥ್ ಗೆ ಮುಖದ ಭಾಗ, ಕಣ್ಣಿನ ಭಾಗ  ಹಾಗೂ ಎಡಗಾಲು ಸಂಪೂರ್ಣ ಕಿತ್ತು ರಕ್ತಮಯವಾಗಿತ್ತು..

8 ತಿಂಗಳ ಚಿಕಿತ್ಸೆ ಬಳಿಕ ಕೊಂಚ ಸುಧಾರಣೆ

ಎಂಟು ತಿಂಗಳು ಕಳೆದ್ರೂ ಇದುವರೆಗೂ ಸ್ಪೋಟದ ವಸ್ತು ಏನೆಂದು ರಿಪೋರ್ಟ್ ಬಂದಿಲ್ಲ.. ಹೈದ್ರಾಬಾದ್ ಬಳಿಕ ಬೆಂಗಳೂರಿನ ಎಫ್ ಎಸ್ ಎಲ್ ಗೆ ರವಾನೆ ಮಾಡಲಾಗಿದೆ.. ಪೋಷಕರು ಯಾರ ಸಹಾಯವಿಲ್ದೆ ಎರಡು ತಿಂಗಳು ಆಸ್ಪತ್ರೆಯಲ್ಲಿ ಚಿಕಿತ್ಸೆ ಕೊಡಿಸಿದ್ದು, ಇದೀಗ ಕೊಂಚ ಗುಣಮುಖನಾಗಿದ್ದಾನೆ. ಗುಣಮುಖನಾಗಿದ್ರೂ ಮಗನ ಕುರೂಪ ಸ್ಥಿತಿ ಕಂಡು ಅಪ್ಪನ ರೋಧನೆಯಿದೆ.

ಇದನ್ನೂ ಓದಿ: Murder: ಕೊಲೆಯಲ್ಲಿ ಅಂತ್ಯವಾದ ತ್ರಿಕೋನ ಪ್ರೇಮಕಥೆ! ಮಾಜಿ ಪ್ರೇಮಿಯಿಂದ ಯುವಕನ ಕೊಲೆ

ಡ್ಯಾನ್ಸರ್‌ ಆಗಬೇಕೆಂದುಕೊಂಡವನಿಗೆ ಓಡಾಡಲೇ ಆಗುತ್ತಿಲ್ಲ!

ಘಟನೆ ನಡೆದ ದಿನ ಸಹಾಯ ಮಾಡುವುದಾಗಿ ಹೇಳಿ ಯಾರೂ ಬರಲಿಲ್ಲ.. ಹದಿನಾಲ್ಕು ಲಕ್ಷ ಹಣ ಖರ್ಚಾಯ್ತು, ಸಾಲ ಮಾಡಿ ಮಗನನ್ನ ಬದುಕಿಸಿಕೊಂಡೆ ಎಂದು ತಂದೆಯ ಕಣ್ಣೀರು ಹಾಕ್ತಿದ್ದಾರೆ.. ಶಾಸಕ ಜಮೀರ್ ಅಹ್ಮದ್ ಎರಡು ಲಕ್ಷ ಹಣ ಕೊಟ್ಟು ಹೋದವರು ಬರಲೇ ಇಲ್ಲ.. ಮಗನ ಬದುಕಿನ ಕನಸ್ಸು ಮುಗಿಯಿತು.. ಕಣ್ಣು ಕಾಣಿಸಲ್ಲ ಅಂತ ಅವ್ನಿಗೆ ಡಿಎಲ್ ಕೊಟ್ಟಿಲ್ಲ‌.. ಡ್ಯಾನ್ಸ್ ನಲ್ಲಿ ಸಾಧನೆ ಮಾಡ್ಬೇಕು ಅಂತ ಕನಸು ಕಂಡಿದ್ದವನು ಈಗ ಓಡಾಡಲು ಆಗಲ್ಲವೆಂದು ಬಾವುಕರಾಗಿದ್ದಾರೆ.

ಈಗಿನ ಪರಿಸ್ಥಿತಿ ನೆನೆದು ಕಣ್ಣೀರಿಟ್ಟ ಯುವಕ

ಅಷ್ಟಕ್ಕೂ ಅವತ್ತು ಏನಾಯ್ತು, ಘಟನೆ ಬಳಿಕ ಅನುಭವಿಸಿದ ನೋವು ಏನು ಅಂತ ಮಂಜುನಾಥ್ ಮಾತಾಡಿದ್ದಾರೆ‌... ತಾನು ಡ್ಯಾನ್ಸರ್ ಆಗ್ಬೇಕೆಂದು ಕನಸು ಕಂಡಿದ್ದೆ.. ಈ ಘಟನೆಯಿಂದ ನನ್ನ ಜೀವನವೇ ಹೋಯ್ತು.. ಒಂದು ಕಣ್ಣು ಕಾಣಿಸಲ್ಲ, ಓಡಾಡಲು ಕಾಲು ಮೊದಲಿನಂತೆ ಆಗಲ್ಲ... ಮುಖ ಮತ್ತು ಕಾಲೂ ಕುರೂಪವಾಗಿದೆ ಎಂದು ಕಣ್ಣೀರು ಹಾಕಿದ್ದಾರೆ‌..

ಮನೆ ಬಳಿ ನಿಂತಿದ್ದಾಗಲೇ ನಡೆದಿತ್ತು ಅವಘಡ

ಅವತ್ತು ಮಂಜುನಾಥ್ ಜಿಮ್ ಹೋಗಲು ಹೊರಬಂದು ಮೆಕಾನಿಕ್ ಜೊತೆ ಮಾತಾಡಿಕೊಂಡು ನಿಂತಿದ್ದ.. ಇದೇ ವೇಳೆ ಇದ್ದಕ್ಕಿದ್ದಂತೆ ಪಟಾಕಿ ಸ್ಫೋಟಗೊಂಡು ಅವಗಢ ನಡೆದಿತ್ತು... ಮುಖ ಛಿದ್ರವಾಗಿ ಕಾಲು ಮುರಿದಿತ್ತು.. ಆಗ ಕೂಡಲೇ ಸ್ಥಳೀಯರು ಗಾಯಾಳು ಮಂಜುನಾಥ್ ನನ್ನ ಆಸ್ಪತ್ರೆಗೆ ದಾಖಲಿಸಿದ್ರು.. ಎರಡು ತಿಂಗಳ ಕಾಲ ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಕೊಡಿಸಲಾಗಿತ್ತು...

ಇದನ್ನೂ ಓದಿ: Accident: ಕಾರು-ಟಿಟಿ ನಡುವೆ ಡಿಕ್ಕಿ, ಇಬ್ಬರು ಬಲಿ! ಸಾವು-ಬದುಕಿನ ನಡುವೆ ಮತ್ತೊಬ್ಬನ ಹೋರಾಟ

ಆದ್ರೂ ಕಣ್ಣು ಮತ್ತು ಕಾಲು ವಿರೂಪ ಹಿನ್ನಲೆ‌ ಕುಟುಂಬಸ್ಥರ ಆಕ್ರಂದನ ಮುಗಿಲುಮುಟ್ಟಿದೆ‌..‌ ತಾನು ಕಂಡಿದ್ದ ಕನಸು ನನಸಾಗಲಿಲ್ಲವೆಂದು ರೋಧನೆ ಪಟ್ಟಿದ್ದಾನೆ..ಸರ್ಕಾರದ ಸಹಾಯವಿಲ್ಲವೆಂದು ಪೋಷಕರು ಅಸಮಧಾನ ವ್ಯಕ್ತಪಡಿಸಿದ್ರು..
Published by:Annappa Achari
First published: