ಬೆಂಗಳೂರು: ನಿಮಗೆ ಮಹಾಭಾರತದ (Mahabharat) ಪವರ್ ಫುಲ್ ಪಾತ್ರಗಳಲ್ಲಿ (Powerful character) ಒಂದಾದ ಧುರ್ಯೋಧನನ (Duryodhana) ಬಗ್ಗೆ ಗೊತ್ತೇ ಇರುತ್ತದೆ. ಭೀಮನಿಂದ (Bheema) ಸೋತ ಧುರ್ಯೋದನ ಜೀವಭಯದಲ್ಲಿ ಕೆರೆಯೊಳಗೆ (Lake) ಅವಿತು ಕುಳಿತು ಕೊಳ್ಳುತ್ತಾನೆ. ಅರೇ ಈಗೇಕಪ್ಪಾ ಆ ಕಥೆ ಅಂತೀರಾ? ಇಲ್ಲಿ ನೋಡಿ ಒಬ್ಬ ಮಹಿಳೆ (Lady) ಗಂಡನೊಂದಿಗೆ (Husband) ಮುನಿಸಿಕೊಂಡು ಕೆರೆ ಮಧ್ಯದಲ್ಲಿ ಹೋಗಿ ಕುಳಿತಿದ್ದಾಳೆ. ಸಾಮಾನ್ಯವಾಗಿ ಹೆಂಡತಿ ಗಂಡನ ಜೊತೆ ಮುನಿಸಿಕೊಂಡು ಒಂದೆರಡು ದಿನ ಮಾತು ಬಿಡ್ತಾಳೆ, ಅದೂ ಸಾಲದಾದಾಗ ಬ್ಯಾಗ್ (Bag) ಹಿಡ್ಕೊಂಡು ತವರಿಗೆ ಹೋಗ್ತಾಳೆ. ಜಗಳ ವಿಪರೀತಕ್ಕೆ ಹೋದ್ರೆ ಡಿವೋರ್ಸ್‌ವರೆಗೂ (Divorce) ಹೋಗಬಹುದು. ಆದ್ರೆ ಇಲ್ಲಿ ಈ ಮಹಿಳೆ ಜಗಳ ಮಾಡಿಕೊಂಡು ಕೆರೆ ಮಧ್ಯದಲ್ಲಿ ಕುಳಿತಿದ್ದಾಳೆ. ಅಷ್ಟಕ್ಕೂ ಆಕೆ ವರ್ತನೆಗೆ ಕಾರಣ ಏನು? ಗಂಡ, ಹೆಂಡತಿ ಮಧ್ಯ ಆಗಿದ್ದಾದರೂ ಏನು? ಇಲ್ಲಿದೆ ಸಂಪೂರ್ಣ ಮಾಹಿತಿ…
ಗಂಡನ ಜೊತೆ ಮುನಿಸಿಕೊಂಡು ಹೋದ ಮಹಿಳೆ
ಗಂಡ, ಹೆಂಡತಿ ಜಗಳ ಆಡೋದು ಕಾಮನ್. ಗಂಡ ಹೆಂಡತಿ ಜಗಳ ಉಂಡು ಮಲಗುವ ತನಕ ಅಂತಾರೆ. ಆದ್ರೆ ಇಲ್ಲಿ ಉಂಡು ಮಲಗಿ, ಎದ್ದ ಮೇಲೂ ಗಂಡ ಹೆಂಡತಿ ಜಗಳ ಮುಂದುವರೆದಿತ್ತು. ಗಂಡನ ಜೊತೆ ಜಗಳ ಮಾಡಿಕೊಂಡಿದ್ದ ಮಹಿಳೆ ಮನೆ ಬಿಟ್ಟು ಹೊರಟಿದ್ದಳು. ಸೀದಾ ಆಕೆ ಹೋಗಿದ್ದು ಕೆರೆ ಮಧ್ಯಕ್ಕೆ. ಬೆಂಗಳೂರಿನ ಕೊರಮಂಗಲದ ಮೇಡರಪಾಳ್ಯದಲ್ಲಿ ಇಂಥದ್ದೊಂದು ಘಟನೆ ನಡೆದಿದೆ.
ಕೆರೆ ಮಧ್ಯದಲ್ಲಿ ಹೋಗಿ ಕುಳಿತ ಮಹಿಳೆ
ಗಂಡ, ಹೆಂಡತಿ ಇಬ್ಬರೂ ಕೋರಮಂಗಲದ ಮೇಡರಪಾಳ್ಯದ ನಿವಾಸಿಗಳಾಗಿದ್ದಾರೆ. ಇಂದು ಬೆಳಗ್ಗೆ ಗಂಡ, ಹೆಂಡತಿ ಇಬ್ಬರೂ ಜಗಳ ಮಾಡಿಕೊಂಡಿದ್ದಾಳೆ. ಗಂಡನ ಜೊತೆ ಮುನಿಸಿಕೊಂಡ ಹೆಂಡತಿ, ಕೋರಮಂಗಲ ಕೆರೆಗೆ ಬಂದು, ಕೆರೆ ಮಧ್ಯದಲ್ಲಿ ಕುಳಿತಿದ್ದಾಳೆ. ಬೆಳಗ್ಗೆ 7 ಗಂಟೆಗೆ ಕುಳಿತವಳು 9 ಗಂಟೆ ವರೆಗೂ ಅಲ್ಲೇ ಕುಳಿತಿದ್ದಳು.
ಇದನ್ನೂ ಓದಿ: G.T.Devegowda: ಶಾಸಕ ಜಿ.ಟಿ.ದೇವೇಗೌಡರ ಮೊಮ್ಮಗಳು ನಿಧನ - ಅನಾರೋಗ್ಯದಿಂದ ಕೊನೆಯುಸಿರೆಳೆದ 3 ವರ್ಷದ ಕಂದಮ್ಮ
ಸಾರ್ವಜನಿಕರ ಮನವಿಗೂ ಜಗ್ಗದ ಮಹಿಳೆ
ಕೆರೆ ಸಮೀಪದ ಪಾರ್ಕ್‌ಗೆ ವಾಕಿಂಗ್, ಜಾಗಿಂಗ್‌ಗೆ ಬಂದ ಸಾರ್ವಜನಿಕರು ಆಕೆ ಕೆರೆ ಮಧ್ಯದಲ್ಲಿ ಕುಳಿತಿರುವುದನ್ನು ನೋಡಿದ್ದಾರೆ. ಕೆರೆ ಬಳಿ ಬಂದು, ಆಕೆಯ ಕಷ್ಟ ಸುಖ ವಿಚಾರಿಸಿದ್ದಾರೆ. ಆಗಿದ್ದು ಆಗಿ ಹೋಯ್ತು, ಈಗ ಅಲ್ಲಿಂದ ಬಂದು, ಮನೆಗೆ ಹೋಗಮ್ಮ ಅಂತ ಬುದ್ದಿ ಹೇಳಿದ್ದಾರೆ. ಆದರೆ ಆಕೆ ಮಾತ್ರ ಜಪ್ಪಯ್ಯ ಅಂದ್ರೂ ಕೆರೆ ಮಧ್ಯದಿಂದ ಎದ್ದು ಬರಲೇ ಇಲ್ಲ.
ಮನವೊಲಿಸಿ ಮನೆಗೆ ಕಳಿಸಿದ ಪೊಲೀಸರು
ಕೊನೆಗೆ ಕೋರಮಂಗಲ ಠಾಣೆ ಪೊಲೀಸರಿಗೆ ಸಾರ್ವಜನಿಕರೇ ವಿಚಾರ ತಿಳಿಸಿದ್ದಾರೆ. ಆಗ ಸ್ಥಳಕ್ಕೆ ದೌಡಾಯಿಸಿ ಬಂದ ಪೊಲೀಸರು, ಮಹಿಳೆಗೆ ಬುದ್ದಿ ಹೇಳಿದ್ದಾರೆ. ಸತತ ಬುದ್ದಿವಾದ ಹೇಳಿದ ಬಳಿಕ, ಬರೋಬ್ಬರಿ 2 ತಾಸುಗಳ ನಂತರ ಆಕೆ ಕೆರೆಯ ಮಧ್ಯದಿಂದ ಎದ್ದು, ದಡಕ್ಕೆ ಬಂದಿದ್ದಾಳೆ.
ಇದನ್ನೂ ಓದಿ: Crime Story: ಬಣ್ಣದ ಚಿತ್ತಾರವಿದ್ದ ಕಾರ್ ಒಳಗಿತ್ತು ಕೊಳೆತ ಶವ! ವಾಸನೆ ಗ್ರಹಿಸಿ ಹೋದವ್ರು ಶಾಕ್
ಮಗುವಿಗೆ ಹೆಚ್ಚು ಎದೆ ಹಾಲುಣಿಸಿದ್ದಕ್ಕೆ ಹೆಂಡತಿ ಮೇಲೆ ಹಲ್ಲೆ ಮಾಡಿದ ಪತಿ
ಅದೊಂದು ತರದ ಕಥೆಯಾದರೆ, ಇದೊಂದು ತರದ ವ್ಯಥೆ. ಪುಟ್ಟ ಕಂದನಿಗೆ ಎದೆ ಹಾಲುಣಿಸಿದ್ದಕ್ಕೆ ಗಂಡ ಹೆಂಡತಿಗೆ ಹೊಡೆದಿರುವ ಅಮಾನವೀಯ ಘಟನೆ ನಡೆದಿದೆ. ಗುಜರಾತ್‌ನ ಗಾಂಧಿನಗರದಲ್ಲಿ ವಿಚಿತ್ರ ಘಟನೆಯೊಂದು ನಡೆದಿದೆ, ಮಗುವಿನ ಬಗ್ಗೆ ಗಂಡ ಹೆಂಡತಿಯರು ಜಗಳವಾಡುತ್ತಾರೆ. ತಿನ್ನುವ ಅಭ್ಯಾಸಗಳ ಕಾರಣಕ್ಕೆ ಗಂಡ ಹೆಂಡತಿಯನ್ನು ಹೊಡೆಯಲು ಹಿಂದೆ ಸರಿಯಲಿಲ್ಲ ಪತ್ನಿ ವೃತ್ತಿಯಲ್ಲಿ ಇಂಜಿನಿಯರ್. ಮಗುವಿಗೆ ಹೆಚ್ಚು ಹಾಲು ನೀಡುತ್ತಿದ್ದು ಇದರಿಂದ ಮಗುವಿನ ತೂಕ ಅಗತ್ಯಕ್ಕಿಂತ ಜಾಸ್ತಿ ಆಗುತ್ತಿದೆ ಎಂದು ಪತಿ ದೂರಿ ಪತ್ನಿಯನ್ನು ಹೊಡೆದು ಮನೆಯಿಂದ ಹೊರ ಹಾಕಿದ್ದ, ಪತಿ ವಿರುದ್ಧ ಇಂತಹ ಗಂಭೀರ ಆರೋಪ ಮಾಡಿದ್ದಾಳೆ.
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ