Bengaluru to Pakistan: ಜೈಲಿನಲ್ಲಿದ್ದ ಮಹಿಳೆಗೆ ಪಾಕ್ ಪೌರತ್ವ! ಆಕೆ ಬೆಂಗಳೂರಿಗೆ ಬಂದಿದ್ದೇ ರೋಚಕ
ಈಕೆ ಜೈಲು ಸೇರಿತ್ತಿದ್ದಂತೆ ಕೈಹಿಡಿದ ಪತಿ ಎಸ್ಕೇಪ್ ಆದ. ಜೈಲಿನಲ್ಲೇ ಹೆಣ್ಣು ಮಗುವಿಗೆ ಜನ್ಮ ನೀಡಿದ್ದ ಮಹಿಳೆ, ಈಗ ಜೈಲಿನಿಂದ ಹೊರಬಂದರೂ ಊರಿಗೆ ಹೋಗಲಾಗುತ್ತಿಲ್ಲ. ಪಾಕಿಸ್ತಾನದ ಪೌರತ್ವವೇನೋ ಸಿಕ್ಕಿದೆ, ಆದರೂ ಅಲ್ಲಿಗೆ ವಾಪಸ್ ಹೋಗುವುದು ಯಾವಾಗಲೋ?
ಬೆಂಗಳೂರು: ಎಲ್ಲಿಯ ಪಾಕಿಸ್ತಾನ (Pakistan), ಎಲ್ಲಿಯ ಬೆಂಗಳೂರು (Bengaluru)? ಆದರೆ ಒಬ್ಬ ಮಹಿಳೆ (Lady) ಈಗ ಇಲ್ಲಿಂದ ಅಲ್ಲಿಗೆ ವಾಪಸ್ ಪ್ರಯಾಣ (Return Journey) ಬೆಳೆಸುವ ಸಾಧ್ಯತೆ ಇದೆ. ಅದರೂ ತನ್ನ ಪುಟ್ಟ ಮಗುವಿನೊಂದಿಗೆ (Small Bbay) ಬೆಂಗಳೂರಿನಿಂದ ಪಾಕಿಸ್ತಾನಕ್ಕೆ ವಾಪಸ್ ಹೋಗಲಿದ್ದಾಳೆ. ಸದ್ಯ ಆ ಮಹಿಳೆ ಬೆಂಗಳೂರು ಪರಪ್ಪನ ಅಗ್ರಹಾರದ (Parappana Agrahara) ಸೆಂಟ್ರಲ್ ಜೈಲಿನಲ್ಲಿ (Central Jail) ಇದ್ದಾಳೆ. ಇದೀಗ ಆಕೆಗೆ ಪಾಕಿಸ್ತಾನದ ಪೌರತ್ವ (Citizenship) ಸಿಕ್ಕಿದೆ. ಹಾಗಿದ್ರೆ ಆಕೆ ಯಾರು? ಆಕೆ ಬೆಂಗಳೂರು ಜೈಲಿಗೆ ಹೇಗೆ ಬಂದಳು? ಇದೀಗ ಪಾಕ್ ಪೌರತ್ವ ಸಿಕ್ಕಿದ ಬಳಿಕ ಆಕೆ ಏನ್ ಮಾಡ್ತಾಳೆ? ಇಲ್ಲಿದೆ ನೋಡಿ ಮಹಿಳಾ ಜೈಲು ಹಕ್ಕಿಯ ಇಂಟ್ರೆಸ್ಟಿಂಗ್ ಕಥೆ…
ಜೈಲು ಹಕ್ಕಿಯಾಗಿದ್ದ ಆ ಮಹಿಳೆ ಯಾರು?
ಕಳೆದ 4 ವರ್ಷಗಳಿಂದ ಜೈಲಿನಲ್ಲಿ ಶಿಕ್ಷೆ ಅನುಭವಿಸುತ್ತಿರುವ ಮಹಿಳೆ ಹೆಸರು ಸುಮೈರಾ. ಫೆಬ್ರವರಿ 18ರಂದು ಆಕೆಗೆ ಪಾಕಿಸ್ತಾನ ಸರ್ಕಾರದಿಂದ ಅಧಿಕೃತವಾಗಿ ಪಾಕಿಸ್ತಾನದ ನಾಗರಿಕತ್ವ ಸಿಕ್ಕಿದೆಯಂತೆ. ಈ ಬಗ್ಗೆ ಪಾಕಿಸ್ತಾನದ ಪ್ರಮುಖ ಪತ್ರಿಕೆಯೊಂದು ವರದಿ ಮಾಡಿದೆ.
ಪರಿಶೀಲನೆ ಮಾಡಿದ ಬಳಿಕ ಪೌರತ್ವ
“ಬೆಂಗಳೂರು ಜೈಲು ಕೇಂದ್ರದಲ್ಲಿರುವ ಸುಮೈರಾ ಅವರ ಕುಟುಂಬ ವೃಕ್ಷವನ್ನು ನ್ಯಾಷನಲ್ ಡೇಟಾಬೇಸ್ ಮತ್ತು ರೆಗ್ಯುಲೇಟರಿ ಅಥಾರಿಟಿ (ನದ್ರಾ) ಪರಿಶೀಲಿಸಿದ ನಂತರ, ನಮ್ಮ ಸಚಿವಾಲಯವು ಅವರಿಗೆ ನಾಗರಿಕ ಪ್ರಮಾಣಪತ್ರವನ್ನು ನೀಡಿದೆ ಅಂತ ಪಾಕಿಸ್ತಾನ ಆಂತರಿಕ ಸಚಿವ ಶೇಖ್ ರಶೀದ್ ಅಹ್ಮದ್ ಹೇಳಿದ್ದಾರೆ” ಅಂತ ಪಾಕಿಸ್ತಾನದ ಪ್ರಮುಖ ಪತ್ರಿಕೆಯಾದ ‘ಡಾನ್ ಪತ್ರಿಕೆ’ ವರದಿ ಮಾಡಿದೆ.
ಪಾಕಿಸ್ತಾನ ಸಂಸತ್ನಲ್ಲೂ ಪ್ರಕರಣ ಪ್ರಸ್ತಾಪ
ಸುಮೈರಾ ಪ್ರಕರಣವನ್ನು ಪಾಕಿಸ್ತಾನ ಮುಸ್ಲಿಂ ಲೀಗ್-ನವಾಜ್ (ಪಿಎಂಎಲ್-ಎನ್) ಸೆನೆಟರ್ ಇರ್ಫಾನ್ ಸಿದ್ದಿಕಿ ಅವರು ಸೆನೆಟ್ನಲ್ಲಿ ಪ್ರಸ್ತಾಪಿಸಿದ್ದರು. ಈ ವೇಳೆ ಸಚಿವರು ಉತ್ತರ ನೀಡಿದ್ದಾರೆ.
ಪೌರತ್ವದ ಪ್ರಮಾಣಪತ್ರವನ್ನು ವಿದೇಶಾಂಗ ವ್ಯವಹಾರಗಳ ಸಚಿವಾಲಯಕ್ಕೆ ಕಳುಹಿಸಲಾಗಿದೆ ಮತ್ತು ನವದೆಹಲಿಯಲ್ಲಿರುವ ಪಾಕಿಸ್ತಾನದ ಹೈಕಮಿಷನ್ ಆಕೆಗೆ ಪ್ರಯಾಣದ ದಾಖಲೆಯನ್ನು ನೀಡಲಿದ್ದು, ಮಗಳೊಂದಿಗೆ ಪಾಕಿಸ್ತಾನಕ್ಕೆ ಮರಳಲು ಅವಕಾಶ ನೀಡುತ್ತದೆ ಎಂದು ಅವರು ಹೇಳಿದ್ದಾರೆ.
ಪಾಕಿಸ್ತಾನದ ಮಹಿಳೆ ಬೆಂಗಳೂರು ಜೈಲು ಸೇರಿದ್ದು ಹೇಗೆ?
ಕತಾರ್ನಲ್ಲಿ ವಾಸಿಸುತ್ತಿದ್ದ ಸುಮೈರಾ, ಕೇರಳದ ಪಾಲಕ್ಕಾಡ್ನ ಮೊಹಮ್ಮದ್ ಶಿಬಾಬ್ ಎಂಬಾತನ್ನು ವಿವಾಹವಾಗಿದ್ದರು. ಇಬ್ಬರೂ 2016ರಲ್ಲಿ ವಿವಾಹವಾಗಿ, ನಂತರ ವೀಸಾ ಇಲ್ಲದೇ, ಅಕ್ರಮವಾಗಿ ಭಾರತಕ್ಕೆ ಪ್ರವೇಶಿಸಿದರು. ದಂಪತಿ ನೇಪಾಳದ ಗಡಿ ದಾಟಿ ಪ್ರವೇಶಿಸಿ, ಪಶ್ಚಿಮ ಬಂಗಾಳ ತಲುಪಿ, ನಂತರ ಬೆಂಗಳೂರಿಗೆ ಬಂದಿದ್ದರು.
ಜೈಲಿನಲ್ಲೇ ಹೆಣ್ಣು ಮಗುವಿಗೆ ಜನ್ಮ ನೀಡಿದ್ದ ಸುಮೈರಾ
2017ರಲ್ಲಿ ಸುಮೈರಾಳನ್ನು ಬಂಧಿಸಲಾಯಿತು, ವಿಚಾರಣೆ ಬಳಿಕ ಮೂರು ವರ್ಷಗಳ ಜೈಲು ಶಿಕ್ಷೆ ವಿಧಿಸಲಾಯಿತು. ಜೈಲು ಸೇರಿ ಎರಡೇ ತಿಂಗಳಿಗೆ ಆಕೆ ಹೆಣ್ಣು ಮಗುವಿಗೆ ಜನ್ಮ ನೀಡಿದಳು. ಅತ್ತ ಆಕೆ ಜೈಲು ಸೇರುತ್ತಿದ್ದಂತೆ ಇತ್ತ ಈಕೆಯ ಪತಿ ಆಕೆಯನ್ನು ತೊರೆದಿದ್ದ. ಜೈಲಿನಿಂದ ಹೊರಬಂದ ನಂತರ ಸುಮೈರಾ ತನ್ನ ಮಗಳೊಂದಿಗೆ ಬೆಂಗಳೂರಿನ ಬಂಧನ ಕೇಂದ್ರದಲ್ಲಿ ವಾಸಿಸುತ್ತಿದ್ದಾಳೆ.
“ಈ ಬಗ್ಗೆ ಮಾಹಿತಿ ಇಲ್ಲ” ಎನ್ನುತ್ತಿರುವ ಭಾರತೀಯ ಅಧಿಕಾರಿಗಳು
ಈ ಮಧ್ಯೆ ಸುಮೈರಾಗೆ ಪಾಕಿಸ್ತಾನಿ ಪೌರತ್ವವನ್ನು ನೀಡುವ ಬಗ್ಗೆ ಭಾರತ ಸರ್ಕಾರ ಅಥವಾ ಪಾಕಿಸ್ತಾನ ಅಧಿಕಾರಿಗಳಿಂದ ಯಾವುದೇ ಮಾಹಿತಿ ಬಂದಿಲ್ಲ ಅಂತ ಬೆಂಗಳೂರಿನ ಜೈಲು ಅಧಿಕಾರಿಗಳು ತಿಳಿಸಿದ್ದಾರೆ. ಶುಕ್ರವಾರ ಹೇಳಿದ್ದಾರೆ.
ಸದ್ಯ ಸುಮೈರಾ ಹಾಗೂ ಆಕೆಯ ಮಗು ಬೆಂಗಳೂರು ಜೈಲು ಕೇಂದ್ರದಲ್ಲಿ ಇದ್ದಾರೆ. ಒಂದು ವೇಳೆ ಪಾಕಿಸ್ತಾನದ ಪೌರತ್ವ ಸಿಕ್ಕಿರುವುದು ಕನ್ಫರ್ಮ್ ಆದರೆ ಆಕೆ ಮಗುವಿನೊಂದಿಗೆ ತನ್ನ ದೇಶಕ್ಕೆ ವಾಪಸ್ ತೆರಳಲಿದ್ದಾಳೆ.