Crime News: ಗರ್ಭಿಣಿ ಪತ್ನಿಗೆ ಬೆಂಕಿ ಹಚ್ಚಿದ, ಮಗುವಿಗೂ ಕಚ್ಚಿದ! ಇವನೇನು ಪತಿಯೋ, ರಾಕ್ಷಸನೋ?

ಹೆಂಡತಿ ಕೂಲಿ ಮಾಡಿ ತಂದ ದುಡ್ಡಲ್ಲೇ ಶೋಕಿ ಮಾಡಿದ್ದಲ್ಲದೇ, ಆಕೆಯ ಮೇಲೆ ಪಾಪಿ ಪತಿ ದೌರ್ಜನ್ಯ ಎಸಗಿದ್ದಾನೆ. ಗರ್ಭಿಣಿ ಎನ್ನುವುದನ್ನೂ ನೋಡದೇ ಸುಡಲು ಯತ್ನಿಸಿದ್ದಾನೆ. ಪುಟ್ಟ ಮಗುವನ್ನೂ ಕಚ್ಚಿ ಗಾಯಗೊಳಿಸಿದ್ದಾನೆ.

ಪತ್ನಿ ಜೊತೆ ಆರೋಪಿ ಬಾಬು

ಪತ್ನಿ ಜೊತೆ ಆರೋಪಿ ಬಾಬು

  • Share this:
ಬೆಂಗಳೂರು: ಬಯಸಿ ಬಯಸಿ ಮದುವೆಯಾಗಿದ್ದ (Marriage) ಪತಿಯೇ (Husband) ಗರ್ಭಿಣಿ (Pregnant) ಪತ್ನಿ (Wife) ಮೇಲೆ ಡಿಸೇಲ್ (Diesel) ಸುರಿದು, ಬೆಂಕಿ ಹಚ್ಚಲು ಪ್ರಯತ್ನಿಸಿದ್ದಾನೆ. ಮನೆಯಲ್ಲಿದ್ದ ಪುಟ್ಟ ಮಗುವಿಗೂ (Child) ಕಚ್ಚಿ, ಗಾಯಗೊಳಿಸಿದ್ದಾನೆ. ಇಂಥದ್ದೊಂದು ಘಟನೆ ಬೆಂಗಳೂರಿನಲ್ಲಿ (Bengaluru) ನಡೆದಿದೆ. ಮತ್ತೊಂದೆಡೆ ಧಾರವಾಡದಲ್ಲಿ (Dharwad) ಪತ್ನಿಯನ್ನು ಕೊಂದ (Murder) ಪತಿ, ಬಳಿಕ ತಾನೂ ಆತ್ನಹತ್ಯೆಗೆ (Suicide) ಶರಣಾಗಿದ್ದಾನೆ. ಇನ್ನು ಹುಬ್ಬಳ್ಳಿಯಲ್ಲಿ (Hubballi) ಮಚ್ಚಿನಿಂದ ಕೊಚ್ಚಿ ರೌಡಿಶೀಟರ್ (Rowdy Sheeter) ನನ್ನು ಭೀಕರವಾಗಿ ಕೊಲೆ ಮಾಡಲಾಗಿದೆ.

ಗರ್ಭಿಣಿ ಪತ್ನಿಗೆ ಡೀಸೆಲ್ ಸುರಿದು ಬೆಂಕಿ ಹಚ್ಚಲು ಯತ್ನ

ಮೂರು ತಿಂಗಳ ಗರ್ಭಿಣಿ ಪತ್ನಿಗೆ ಡೀಸೆಲ್ ಸುರಿದು ಕೊಲೆಯತ್ನ ನಡೆಸಿದ ಘಟನೆ ಬೆಂಗಳೂರಿನಲ್ಲಿ ನಡೆದಿದೆ. 23 ವರ್ಷದ ಮೀನಾ ಎಂಬಾಕೆ ಮೇಲೆ ಆಕೆಯ ಪತಿ ಬಾಬು ದೌರ್ಜನ್ಯ ನಡೆಸಿದ್ದಾನೆ. ಮೀನಾ ಈ ಬಾಬುವನ್ನು 2ನೇ ಮದುವೆ ಆಗಿದ್ದರು. ಮೀನಾ ಕೂಲಿ‌ ಮಾಡಿ ಕೂಡಿಟ್ಟ ಹಣವನ್ನು ಬಾಬು ಕುಡಿದು ಹಾಳು ಮಾಡ್ತಿದ್ದ ಎಂದು ತಿಳಿದುಬಂದಿದೆ.

ಇದೇ ವಿಚಾರಕ್ಕೆ ಮನೆಯಲ್ಲಿ ಗಲಾಟೆ ನಡೆಯುತ್ತಾ ಇತ್ತು. ನಿನ್ನೆ ಗಲಾಟೆ ವಿಪರೀತಕ್ಕೆ ಹೋಗಿ, ಮೀನಾ ಕೊಲೆಗೆ ಬಾಬು ಯತ್ನಿಸಿದ್ದಾನೆ. ಸದ್ಯ ಗಾಯಗೊಂಡಿರುವ ಮೀನಾಳನ್ನು ವಿಕ್ಟೋರಿಯಾ ಆಸ್ಪತ್ರೆಗೆ ದಾಖಲಿಸಿ, ಚಿಕಿತ್ಸೆ ಕೊಡಿಸಲಾಗುತ್ತಿದೆ.

ಎರಡೂವರೆ ವರ್ಷದ ಕಂದಮ್ಮನನ್ನು ಕಚ್ಚಿದ ರಾಕ್ಷಸ

ಇಷ್ಟಕ್ಕೆ ಸುಮ್ಮನಾಗದ ಈ ಬಾಬು, ಮನೆಯಲ್ಲಿದ್ದ ಮಗುವಿನ ಮೇಲೂ ದೌರ್ಜನ್ಯ ಎಸಗಿದ್ದಾನೆ. ಎರಡೂವರೆ ವರ್ಷದ ಪುಟ್ಟ ಮಗುವನ್ನು ಕಚ್ಚಿ ವಿಕೃತಿ ಮೆರೆದ್ದಾನೆ.

ಇದನ್ನೂ ಓದಿ: Gadag: ಹಾಡಹಗಲೇ ಪತ್ನಿ ಮೇಲೆ ಡೆಡ್ಲಿ ಅಟ್ಯಾಕ್, 23 ಬಾರಿ ಮನಸೋ ಇಚ್ಚೆ ಮಚ್ಚಿನಿಂದ ಇರಿದು ಹಲ್ಲೆ

ಮೊದಲ ಪತಿ ಮರಣದ ನಂತರ 2ನೇ ಮದುವೆ

7 ವರ್ಷದ ಹಿಂದೆ ವಿಜಯಕಾಂತ ಎಂಬುವವರನ್ನ ವರಿಸಿದ್ದ ಮೀನಾಗೆ 3 ಜನ ಹೆಣ್ಣು ಮಕ್ಕಳಿದ್ದಾರೆ. ಆದರೆ ದುರದೃಷ್ಟವಷಾತ್ ಮೂರು ವರ್ಷದ ಹಿಂದೆ ವಿಜಯಕಾಂತ್ ತೀರಿಹೋಗಿದ್ದರು. ನಂತರ ಮೀನಾಗೆ ಈ ಬಾಬು ಪರಿಚಯವಾಗಿತ್ತು. ಬಳಿಕ, ಇಬ್ಬರು ಮದುವೆ ಆಗಿ ಬೈಯಪ್ಪನಹಳ್ಳಿಯಲ್ಲಿ ಒಂದು ವರ್ಷದಿಂದ ವಾಸವಿದ್ದರು.

ನಾನೇ ಸಾಯಿಸ್ತೀನಿ ಎಂದು ಡೀಸೆಲ್ ಸುರಿದ ಪಾಪಿ

ಮೀನಾ ಕೂಲಿ‌ ಮಾಡಿ ಕೂಡಿಟ್ಟ ಹಣವನ್ನು ಬಾಬು ಕುಡಿದು ಹಾಳು ಮಾಡ್ತಿದ್ದ ಎಂದು ತಿಳಿದುಬಂದಿದೆ. ಈ ವೇಳೆ ಜಗಳವಾಗಿ ದುಡ್ಡು ಕೇಳಿದ್ರೆ ಮೈಮೇಲೆ ಡೀಸೆಲ್ ಸುರಿದು ಸತ್ತೋಗುತ್ತೇನೆ ಎಂದು ಮೀನಾ ಹೇಳಿದ್ದರು. ಇದಕ್ಕೆ ಪ್ರತಿಯಾಗಿ, ನೀನ್ಯಾಕೆ ಸಾಯ್ತೀಯಾ ನಾನೆ ಸಾಯಿಸ್ತೇನೆಂದು ಸ್ಟೌನಲ್ಲಿದ್ದ ಡೀಸೆಲ್ ಸುರಿದು ಬೆಂಕಿ ಹಚ್ಚಿದ್ದಾನೆ.

ಇದೀಗ ಘಟನೆ ಸಂಬಂಧ ಬೈಯಪ್ಪನಹಳ್ಳಿ ಪೊಲೀಸ್ ಠಾಣೆಯಲ್ಲಿ ದೂರು ದಾಖಲು ಮಾಡಲಾಗಿದೆ. ಬೈಯಪ್ಪನಹಳ್ಳಿ ಪೊಲೀಸರಿಂದ ಆರೋಪಿ ಬಾಬು ಬಂಧನ ಮಾಡಲಾಗಿದೆ.

ಪತ್ನಿಯನ್ನು ಕೊಂದು ಆತ್ಮಹತ್ಯೆ ಮಾಡಿಕೊಂಡ ಪತಿ

ಪತಿಯೊಬ್ಬ ತನ್ನ ಪತ್ನಿಯನ್ನು ಕೊಂದು, ಬಳಿಕ ತಾನೂ ಆತ್ಮಹತ್ಯೆ ಮಾಡಿಕೊಂಡ ಘಟನೆ ಧಾರವಾಡದಲ್ಲಿ ನಡೆದಿದೆ. ನಗರದ ಹೊರವಲಯದ ಗಣೇಶನಗರದ ಗಳವಿ ದಡ್ಡಿಯಲ್ಲಿ ಚಟ್ಟು ಗದಗವಾಲೆ ಎಂಬಾತ ಆತ್ಮಹತ್ಯೆ ಮಾಡಿಕೊಂಡಿದ್ದಾನೆ.

ಕಳೆದ ರಾತ್ರಿ ಜಗಳದ ಬಳಿಕ ದುರಂತ

ಈತ ತನ್ನ ಪತ್ನಿ ಮನಿಷಾಳನ್ನು ಕೊಲೆ ಮಾಡಿದ್ದಾನೆ. ಪತಿ ಹಾಗೂ ಪತ್ನಿ ಇಬ್ಬರೂ ಗೋವಾದಲ್ಲಿ ಕೆಲಸಕ್ಕೆ ಎಂದು ಹೋಗಿದ್ರು. ಕಳೆದ ನಾಲ್ಕು ದಿನಗಳ ಹಿಂದೆಯಷ್ಟೇ ಮನೆಗೆ ವಾಪಸ್ ಬಂದಿದ್ದರು. ಕಳೆದ ರಾತ್ರಿ ಇಬ್ಬರ ನಡುವೆ ಯಾವುದೋ ಕಾರಣಕ್ಕೆ ಜಗಳ ನಡೆದಿದೆ. ಇದೇ ಕಾರಣಕ್ಕೆ ಆಕೆಯನ್ನು ಕೊಂದು, ಈತ ತಾನೂ ಸೂಸೈಡ್ ಮಾಡಿಕೊಂಡಿದ್ದಾನೆ.

ಇದನ್ನೂ ಓದಿ: Fetus Death: ಆಸ್ಪತ್ರೆಯ ಬಾತ್ ರೂಮ್​ನಲ್ಲಿ ಭ್ರೂಣ ಪತ್ತೆ, ಕೊಳೆತ ಸ್ಥಿತಿಯಲ್ಲಿ ನವಜಾತ ಶಿಶು

 ಮಚ್ಚಿನಿಂದ ಕೊಚ್ಚಿ ರೌಡಿಶೀಟರ್ ಕೊಲೆ

ಮಚ್ಚಿನಿಂದ ಕೊಚ್ಚಿ ರೌಡಿಶೀಟರ್ ಒಬ್ಬನನ್ನು ಭೀಕರವಾಗಿ ಕೊಲೆ ಮಾಡಿರುವ ಘಟನೆ ಹುಬ್ಬಳ್ಳಿಯ ಅರವಿಂದ ನಗರದ ಪಿ.ಎನ್.ಟಿ. ಕ್ವಾಟರ್ಸ್ ಹಿಂಬದಿಯ ರಸ್ತೆಯಲ್ಲಿ ನಡೆದಿದೆ. ತೊರವಿಹಕ್ಕಲದ ನಿವಾಸಿ ಅಕ್ಬರ್ ಅಲ್ಲಾಭಕ್ಷ್ ಮುಲ್ಲಾ ಹತ್ಯೆಗೀಡಾದ ರೌಡಿಶೀಟರ್.

ಮುಖದ ಗುರುತು ಸಿಗದ ರೀತಿಯಲ್ಲಿ ಮಚ್ಚಿನಿಂದ ಕೊಚ್ಚಿ ಬರ್ಬರ ಹತ್ಯೆ ಮಾಡಲಾಗಿದೆ. ಶಿರಡಿ ನಗರದ ರಮೇಶ್ ನೀರಗಟ್ಟಿ ಹಾಗೂ ಇಂದಿರಾನಗರದ ನವೀನ್ ಎಂಬುವರೊಂದಿಗೆ ಕುಡಿದು ಮನೆಗೆ ವಾಪಸ್ಸಾಗುವ ವೇಳೆ ಹತ್ಯೆ ಮಾಡಲಾಗಿದೆ.
Published by:Annappa Achari
First published: