40% Commission Govt ಆರೋಪ: ಸರ್ಕಾರದ ವಿರುದ್ಧ ರಾಜ್ಯಪಾಲರಿಗೆ ದೂರು ನೀಡಿದ Congress ನಿಯೋಗ

Congress Complaint to Governor : ನಮ್ಮ ಸರ್ಕಾರದ ಅವಧಿಯಲ್ಲಿ PM Modi ಕಾಂಗ್ರೆಸ್​ದು 10% Commission Govt ಎಂದು ಆರೋಪಿಸಿದ್ದರು. ಈಗ ಗುತ್ತಿಗೆದಾರರೇ ಬಿಜೆಪಿ ಸರ್ಕಾರ 40% Commission ಪಡೆಯುತ್ತಿದೆ ಎಂದು ಆರೋಪಿಸಿದ್ದಾರೆ.

ರಾಜ್ಯಪಾಲರಿಗೆ ದೂರು ನೀಡಿದ ಕಾಂಗ್ರೆಸ್​ ನಿಯೋಗ

ರಾಜ್ಯಪಾಲರಿಗೆ ದೂರು ನೀಡಿದ ಕಾಂಗ್ರೆಸ್​ ನಿಯೋಗ

  • Share this:
ಬೆಂಗಳೂರು: ರಾಜ್ಯ ಬಿಜೆಪಿ ಸರ್ಕಾರದ (BJP Government) ಆಡಳಿತದಲ್ಲಿ ಯಾವುದೇ ಕೆಲಸವಾಗಬೇಕಾದರೂ ಶೇ.40ರಷ್ಟು ಕಮಿಷನ್​ (40% Commission) ನೀಡಬೇಕು ಎಂಬ ಆರೋಪ ಕೇಳಿ ಬಂದಿದೆ. ಈ ಸಂಬಂಧ ಗುತ್ತಿಗೆದಾರ ಕೆಂಬಣ್ಣ ಎಂಬುವರು ಪ್ರಧಾನಿ ಮೋದಿಗೆ (PM Modi) ಬರೆದಿರುವ ಪತ್ರವನ್ನು ಆಧರಿಸಿ ಇಂದು ಕಾಂಗ್ರೆಸ್​ (Congress) ನಿಯೋಗ ರಾಜ್ಯಪಾಲರನ್ನು (Governor) ಭೇಟಿಯಾಗಿ ರಾಜ್ಯ ಸರ್ಕಾರದ ವಿರುದ್ಧ ದೂರು ನೀಡಿದೆ. ಪ್ರತಿಪಕ್ಷ ನಾಯಕ ಸಿದ್ದರಾಮಯ್ಯ ನೇತೃತ್ವದಲ್ಲಿ ಕೆಪಿಸಿಸಿ ಅಧ್ಯಕ್ಷ ಡಿಕೆ ಶಿವಕುಮಾರ್​, ರಾಮಲಿಂಗಾರೆಡ್ಡಿ ಸೇರಿದಂತೆ ಹಲವು ಕಾಂಗ್ರೆಸ್​ ನಾಯಕರು ರಾಜ್ಯಪಾಲರ ಭವನಕ್ಕೆ ತೆರಳಿ ರಾಜ್ಯಪಾಲ ತಾವರ್​ ಚಂದ್​ ಗೆಹ್ಲೋಟ್​ಗೆ ದೂರು ನೀಡಿದರು. ಹೀಗಾಗಿ ಇದೊಂದು ಗಂಭೀರವಾದ ಪ್ರಕರಣವಾಗಿದ್ದು, ದೊಡ್ಡ ಮಟ್ಟದಲ್ಲಿ ಭ್ರಷ್ಟಾಚಾರ ನಡೆದಿರುವ ಸಾಧ್ಯತೆಯಿದೆ. ಪ್ರಕರಣವನ್ನ ನೀವು ತನಿಖೆಗೆ ವಹಿಸುವಂತೆ ಸೂಚಿಸಬೇಕು ಎಂದು ರಾಜ್ಯಪಾಲರನ್ನು ಕಾಂಗ್ರೆಸ್​ ನಿಯೋಗ ಒತ್ತಾಯಿಸಿರು. ರಾಜ್ಯದಲ್ಲಿ ಭ್ರಷ್ಟಾಚಾರ ವ್ಯಾಪಕವಾಗಿ ನಡೆಯುತ್ತಿದೆ, ಸಂವಿಧಾನಾತ್ಮಕವಾಗಿ ಸರ್ಕಾರ ನಡೆಯುತ್ತಿಲ್ಲ. 356 ಅಡಿಯಲ್ಲಿ ರಾಷ್ಟ್ರಪತಿ ಅಳ್ವಿಕೆ ಜಾರಿ ಮಾಡುವಂತೆ ಮನವಿ ಮಾಡಿದರು.

 ನಮ್ಮದು 10% ಕಮಿಷನ್​ ಸರ್ಕಾರ ಅಂದಿದ್ದರು..

ರಾಜ್ಯಪಾಲ ಭೇಟಿ ಬಳಿಕ ಮಾತನಾಡಿದ ಸಿದ್ದರಾಮಯ್ಯ, ನಮ್ಮ ಸರ್ಕಾರದ ಅವಧಿಯಲ್ಲಿ ಪ್ರಧಾನಿ ಮೋದಿ ಕಾಂಗ್ರೆಸ್​ದು 10% ಕಮಿಷನ್​ ಸರ್ಕಾರ ಎಂದು ಆರೋಪಿಸಿದ್ದರು. ಈಗ ಗುತ್ತಿಗೆದಾರರೇ ಬಿಜೆಪಿ ಸರ್ಕಾರ 40% ಕಮಿಷನ್ ಪಡೆಯುತ್ತಿದೆ ಎಂದು ಆರೋಪಿಸಿದ್ದಾರೆ. ಪ್ರಧಾನಿಯವರಿಗೂ ದೂರು ಸಲ್ಲಿಸಿದ್ದಾರೆ ಎಂದು ತಿರುಗೇಟು ನೀಡಿದರು. ಸರ್ಕಾರ ವಜಾ ಮಾಡಿ ರಾಷ್ಟ್ರಪತಿ ಅಳ್ವಿಕೆ ಜಾರಿ ಮಾಡಬೇಕು. ಇಂತಹ ಭ್ರಷ್ಟಾಚಾರ ಸರ್ಕಾರ ನಾವು ಎಂದು ಕಂಡಿಲ್ಲ ಎಂದು ಆಕ್ರೋಶ ವ್ಯಕ್ತಪಡಿಸಿದರು.

ಕರ್ನಾಟಕದ ಇತಿಹಾಸದಲ್ಲೇ ಮೊದಲು

ರಾಜ್ಯಪಾಲರನ್ನು ನಾವು ಭೇಟಿ ಮಾಡಿ, ಮನವಿ ಸಲ್ಲಿಸಿದ್ದೇವೆ. ಗುತ್ತಿಗೆದಾರ ಸಂಘದವರು ಪ್ರಧಾನಿ ಮೋದಿಗೆ ಪತ್ರ ಬರೆದಿದ್ದರು. 40% ಪರ್ಸೆಂಟ್ ಕಮಿಷನ್ ಮಂತ್ರಿಗಳಿಗೆ, ಅಧಿಕಾರಿಗಳಿಗೆ ಕೊಡಬೇಕು ಎಂದು ಪತ್ರದಲ್ಲಿ ಬರೆಯಲಾಗಿತ್ತು. 06 ಜುಲೈ 2021 ರಲ್ಲಿ ಕೆಂಪಣ್ಣ ಎಂಬುವವರು ಪತ್ರ ಬರೆದಿದ್ದರು . ಕರ್ನಾಟಕದ ಇತಿಹಾಸದಲ್ಲಿ ಮೊದಲ ಬಾರಿಗೆ ಈ ರೀತಿ ಬರೆದಿದ್ದಾರೆ. ಮಂತ್ರಿಗಳಿಗೆ, ಅಧಿಕಾರಿಗಳಿಗೆ ಕಮಿಷನ್ ಕೊಡಬೇಕು ಎಂದು ಬರೆದಿದ್ದು ಇತಿಹಾಸದಲ್ಲಿ ಮೊದಲು. ಕಳೆದ ಎಲೆಕ್ಷನ್ ನಲ್ಲಿ ಮೋದಿ ಹೇಳಿದ್ದರು. ಕಾಂಗ್ರೆಸ್ ಸರ್ಕಾರ 10% ಕಮಿಷನ್ ಸರ್ಕಾರ ಎಂದು ಹೇಳಿದ್ದರು. ದಾಖಲೆಗಳು ಇಲ್ಲದೆ ಆರೋಪ ಮಾಡಿದ್ರು. ನಾವು ಇವತ್ತು ರಾಜ್ಯಪಾಲರಿಗೆ ಕೆಂಪಣ್ಣ ಬರೆದಿರುವ ದಾಖಲೆ ಕೊಟ್ಟಿದ್ದೇವೆ ಎಂದರು.

ಇದಕ್ಕಿಂತ ಇನ್ನೇನು ಸಾಕ್ಷಿ ಬೇಕು

ಈ ಸಂಬಂಧ ಸಿಎಸ್ ಗೆ ತನಿಖೆಗೆ ಸೂಚಿಸಿದ್ದೇನೆಂಬ ಸಿಎಂ ಹೇಳಿಕೆಗೆ ಪ್ರತಿಕ್ರಿಯಿಸಿದ ಸಿದ್ದರಾಮಯ್ಯ, ಸಿಎಸ್ ತನಿಖೆ ಮಾಡಿದರೆ ಸತ್ಯ ಹೊರಬರಲ್ಲ. ಸುಪ್ರೀಂ ಕೋರ್ಟ್​​ ಜಡ್ಜ್ ಅಧ್ಯಕ್ಷತೆಯಲ್ಲಿ ತನಿಖೆಯಾಗಬೇಕು. ಯಾವ್ಯಾವ ಡಿಪಾರ್ಟ್ ಮೆಂಟ್ ನಲ್ಲಿ ಕಮೀಷನ್ ಅನ್ನೋದು ಹೇಳಲಾಗಿದೆ. ಅರ್ಬನ್ ಡೆವಲಪ್ ಮೆಂಟ್,ಪಿಡಬ್ಲ್ಯುಡಿ ಮೆನ್ಶನ್ ಮಾಡಿದ್ದಾರೆ. ಇದಕ್ಕಿಂತ ಇನ್ನೇನು ಸಾಕ್ಷಿ ಬೇಕು, ಇದರ ಬಗ್ಗೆ ತನಿಖೆಯಾಗಬೇಕು ಎಂದು ಒತ್ತಾಯಿಸಿದರು.

ಇದನ್ನೂ ಓದಿ: ನನ್ನ ಹೇಳಿಕೆಯಿಂದ ಕೆಲಸದಲ್ಲೂ ನನಗೆ ಹಿನ್ನಡೆಯಾಗಿದೆ; ವಿಚಾರಣೆ ವೇಳೆ ಗದ್ಗದಿತರಾದ Hamsalekha

ಕೆಪಿಸಿಸಿ ಅಧ್ಯಕ್ಷ ಡಿಕೆ ಶಿವಕುಮಾರ್​ ಮಾತನಾಡಿ, ಕಂಟ್ರಾಕ್ಟರ್ ಅಸೋಸಿಯೇಶನ್ ದೂರು ನೀಡಿದೆ. ಗ್ರಾಮೀಣಾಭಿವೃದ್ಧಿ, ಲೋಕೋಪಯೋಗಿ, ನೀರಾವರಿ ಇಲಾಖೆ ಗುತ್ತಿಗೆದಾರರಿದ್ದಾರೆ. ಅವರು ಲಕ್ಷ ಕೋಟಿಯ ಬಗ್ಗೆ ದೂರು ಕೊಟ್ಟಿದ್ದಾರೆ. ಯಾವ್ಯಾವುದಲ್ಲಿ ಅಕ್ರಮ ಆಗಿದೆ ಅನ್ನೋದನ್ನ ತಿಳಿಸ್ತೇವೆ, ಮುಂದಿನ ದಿನಗಳಲ್ಲಿ ದಾಖಲೆ ಬಿಡುಗಡೆಮಾಡ್ತೇವೆ. ನ್ಯಾಯಾಂಗ ತನಿಖೆಯೇ ಆಗಬೇಕು, ಪಾರದರ್ಶಕ ಅನ್ನೋದು ಎಲ್ಲಿದೆ. ಕಂಟ್ರಾಕ್ಟರ್ ಗಳೇ ದೂರು ಕೊಟ್ಟಿದ್ದಾರಲ್ಲ. ಸ್ಟೇಜ್ ಬೈ ಸ್ಟೇಜ್ ನಾವು ಮುಂದುವರಿಯುತ್ತೇವೆ ಎಂದು ತಿಳಿಸಿದರು.
Published by:Kavya V
First published: