Namma Metro : ನಾಗವಾರ-ಗೊಟ್ಟಿಗೆರೆ ಮೆಟ್ರೋ ಮಾರ್ಗ ನಿರ್ಮಾಣಕ್ಕೆ 350 ಮರಗಳ ಮಾರಣಹೋಮ

ಹೈ ಕೋರ್ಟ್​​ ಒಂದು‌ ಮರ‌ ಕಡಿದರೆ 10 ಸಸಿ ನೆಡಬೇಕು ಎಂದು ಆದೇಶಿಸಿತ್ತು. ಅದೂ ಕೂಡ ನಗರದ ಒಳಭಾಗದಲ್ಲೇ ಸಸಿ ನೆಡಬೇಕು, ನಗರದ ಹೊರಗಡೆ ನೆಟ್ಟರೆ ಆಗಲ್ಲ ಎಂದಿತ್ತು ನ್ಯಾಯಾಲಯ. ಹೀಗಾಗಿ ಒಂದು ಮರದ ಬದಲಿಗೆ ಹತ್ತು ಸಸಿ ನೆಡಲು ಮುಂದಾಗಿದೆ ನಮ್ಮ ಮೆಟ್ರೋ.

ಮೆಟ್ರೋ ಹಾದಿ ನಿರ್ಮಾಣ ಸ್ಥಳದಲ್ಲಿನ ಮರಗಳು

ಮೆಟ್ರೋ ಹಾದಿ ನಿರ್ಮಾಣ ಸ್ಥಳದಲ್ಲಿನ ಮರಗಳು

  • Share this:
ನಮ್ಮ ಮೆಟ್ರೋ  ಎರಡನೇ ಹಂತದ ಕಾಮಗಾರಿಗೆ ಮತ್ತೊಂದು‌ ವಿಘ್ನ ಎದುರಾಗಿದೆ.‌ ನಮ್ಮ ಮೆಟ್ರೋ  ಎರಡನೇ ಹಂತದ ಕಾಮಗಾರಿ ಆರಂಭವಾದಗಿಂದ ಒಂದಲ್ಲ ಒಂದು ಸಮಸ್ಯೆ ಎದುರಾಗ್ತಾನೆ‌ ಇದೆ.‌ ಎಲ್ಲಾ ಅಡೆ ತಡೆಗಳನ್ನ ಮೀರಿ ಮತ್ತೆ ಕಾಮಗಾರಿ ಆರಂಭ ಮಾಡುತ್ತಿರುವ ಮೆಟ್ರೋ ನಿಯಮಕ್ಕೆ ಪುನಃ ಹೊಸದೊಂದು ಸವಾಲ್ ಎದುರಾಗಿದೆ.‌ 

ಸುಮಾರು 21 ಕಿ.ಮೀ ಉದ್ದ ನಾಗವಾರ ಗೊಟ್ಟಿಗೆರೆ ಮಾರ್ಗಕ್ಕೆ 350 ಮರಗಳು ಅಡ್ಡಿಯಾಗಿವೆಯಂತೆ. ಪ್ರತಿ ಬಾರಿ ನಮ್ಮ ಮೆಟ್ರೋ ಹೊಸ ಹೊಸ ಮಾರ್ಗದ ಕಾಮಗಾರಿ ಶುರುವಾಗುವಾಗ ಒಂದಲ್ಲಾ ಒಂದು ವಿಘ್ನಗಳು ನಮ್ಮ ಮೆಟ್ರೊಗೆ ಎದುರಾಗುತ್ತಲೇ ಇರುತ್ತದೆ. ಈ ಬಾರಿಯೂ ನಾಗವಾರ ಗೊಟ್ಟಿಗೆರೆ ನೂತನ ಮಾರ್ಗ ನಿರ್ಮಾಣ ಕಾಮಗಾರಿಗೂ ಅಂಥದ್ದೇ ಒಂದು ಸಮಸ್ಯೆ ಜೋತು ಬಿದ್ದಿದೆ. ನಾಗವಾರ ಗೊಟ್ಟಿಗೆರೆ ನಡುವಣ ಮೆಟ್ರೋ ಹಾದಿ ನಿರ್ಮಾಣಕ್ಕೆ 350 ಮರಗಳು ತಡೆಗೋಡೆಯಾಗಿ ನಿಂತಿದೆ. ಇದನ್ನು ಕಡಿದು ಕಾಮಗಾರಿ ಮುಂದುವರೆಸಲು‌ ಯೋಚಿಸಿದ್ದ ನಮ್ಮ ಮೆಟ್ರೋಗೆ ಹೈ ಕೋರ್ಟ್ ಕಿವಿ ಹಿಂಡಿತ್ತು. ಇದೀಗ ಹೈಕೋರ್ಟ್ ನ ಮಾತಿಗೆ ತಲೆಬಾಗಿದ ನಮ್ಮ ಮೆಟ್ರೋ ಕಾಮಗಾರಿ ಮತ್ತೆ ಶುರು ಮಾಡಿದೆ. ಆದರೆ 350 ಮರಗಳನ್ನು ಕಡಿಯುವುದೇನೋ‌ ಸರಿ. ಆದರೆ ಅದಕ್ಕೆ ಬದಲಾಗಿ ಒಂದು ಮರಕ್ಕೆ‌ ಹತ್ತು ಮರಗಳನ್ನು ನೆಡಲು ನಮ್ಮ ಮೆಟ್ರೋ ಸಿದ್ಧತೆ ಮಾಡಿಕೊಳ್ಳುತ್ತಿದೆ.

ಹೌದು, ಕಡಿಯಲು ಹೊರಟ ನಮ್ಮ ಮೆಟ್ರೋಗೆ ಹೈ ಕೋರ್ಟ್ ಚಾಟಿ ಬೀಸಿತ್ತು. ಪ್ರಕರಣದ ಬಗ್ಗೆ ವಿಚಾರಿಸಿ ನಮ್ಮ ಮೆಟ್ರೋಗೆ ಖಡಕ್ ತಾಕೀತು ಮಾಡಿದ್ದ  ಹೈ ಕೋರ್ಟ್, ಒಂದು‌ ಮರ‌ ಕಡಿದರೆ 10 ಸಸಿ ನೆಡಬೇಕು ಎಂದು ಆದೇಶಿಸಿತ್ತು. ಅದೂ ಕೂಡ ನಗರದ ಒಳಭಾಗದಲ್ಲೇ ಸಸಿ ನೆಡಬೇಕು, ನಗರದ ಹೊರಗಡೆ ನೆಟ್ಟರೆ ಆಗಲ್ಲ ಎಂದಿತ್ತು ನ್ಯಾಯಾಲಯ. ಹೀಗಾಗಿ ಒಂದು ಮರದ ಬದಲಿಗೆ ಹತ್ತು ಸಸಿ ನೆಡಲು ಮುಂದಾಗಿದೆ ನಮ್ಮ ಮೆಟ್ರೋ.

ಇದನ್ನೂ ಓದಿ: ಶುರುವಾಯ್ತಾ ಕೊರೊನಾ 3ನೇ ಅಲೆ: ಬೆಂಗಳೂರು ಅಪಾರ್ಟ್​​​ಮೆಂಟ್​​ನಲ್ಲಿ ಸೋಂಕು ಸ್ಫೋಟ, ಸೀಲ್​​ಡೌನ್​​!

ಈ ಮೂಲಕ ನಾಗವಾರ - ಗೊಟ್ಟಿಗೆರೆ 21km ಉದ್ದದ ಮಾರ್ಗಕ್ಕೆ‌ ಅಡ್ಡಲಾಗಿದ್ದ 350 ಮರಗಳಿಗೆ ಕೊಡಲಿ ಏಟು ಫಿಕ್ಸ್ ಆಗಿದೆ. ಆದರೆ, ಇದಕ್ಕೆ‌ ಆಕ್ಷೇಪ ವ್ಯಕ್ತ ಪಡಿಸುತ್ತಿರುವ ಪರಿಸರವಾದಿಗಳು, ಹೈ ಕೋರ್ಟ್ ಆದೇಶ ಒಪ್ಪಿಗೆ ಆಗುವಂತದ್ದು. ಆದರೆ  3,500 ಮರಗಳನ್ನು‌ ನಮ್ಮ ಮೆಟ್ರೋ ನೆಡುತ್ತಾ..? ಎಂಬ ಸಂಶಯ ನಮ್ಮದು ಎನ್ನುತ್ತಿದ್ದಾರೆ. ಒಂದು‌ ಮರ ಕೂಡ ಮುಖ್ಯವಾದದ್ದು. 3,500 ಸಸಿಗಳನ್ನು‌ ಈ‌ ಸಿಟಿಯೊಳಗಡೆ ಎಲ್ಲಿ ನೆಡುತ್ತಾರೆ. ಅಭಿವೃದ್ಧಿ ಹೆಸರಿನಲ್ಲಿ‌ ಪ್ರಕೃತಿಯನ್ನು‌ ಹಾಳು ಗೆಡವುದು ಸರಿಯಲ್ಲ ಎಂದು ಬಿಬಿಎಂಪಿ ಜೀವ ವೈವಿಧ್ಯ ಸಮಿತಿ ಸದಸ್ಯ‌ ವಿಜಯ್ ನಿಶಾಂತ್ ಅಭಿಪ್ರಾಯಪಟ್ಟಿದ್ದಾರೆ.

ಈಗ 350 ಮರಗಳ ಬದಲಿಗೆ ಬದಲಿಗೆ ನಗರದ ಒಳಭಾಗದಲ್ಲೇ‌ 3,500 ಸಸಿಗಳನ್ನು ನೆಡಲು ನಮ್ಮ ಮೆಟ್ರೋ ಸಿದ್ಧತೆ ಮಾಡಿಕೊಳ್ಳುತ್ತಿದೆ. ಇದಕ್ಕಂತಲೇ ಬಿಬಿಎಂಪಿ, BDA, ಭದ್ರತಾ ನೆಲದಲ್ಲಿ ನೆಡಲು ಚಿಂತನೆ ಮಾಡಿಕೊಂಡಿದೆ. ಈ‌ ಹಿನ್ನೆಲೆ ಭರದಿಂದ‌ ಆರಂಭವಾದ ಎರಡನೇ ಹಂತದ ನಾಗವಾರ - ಗೊಟ್ಟಿಗೆರೆ ಮಾರ್ಗ ಕಾಮಗಾರಿ ಶೀಘ್ರವೇ ಮುಕ್ತಾಯ ಕಾಣುವ ನಿರೀಕ್ಷೆ ಇದೆ.
Published by:Kavya V
First published: