corona blast in bangalore: ಹೋದ್ಯ ಪಿಶಾಚಿ ಅಂದ್ರೆ ಬಂದೆ ಗವಾಕ್ಷಿ ಅನ್ನುವಂತಾಗಿದೆ ಕೊರೊನಾ ಕಥೆ. ಕೊರೊನಾ ಮಹಾಮಾರಿಯ ಆರ್ಭಟ ನಗರದಲ್ಲಿ ಇನ್ನೇನು ಕಡಿಮೆ ಆಗ್ತಾ ಇದೆ ಅನ್ನೋ ಅಷ್ಟರಲ್ಲಿ ಕ್ಲಸ್ಟರ್ ಮಟ್ಟದಲ್ಲಿ ಕೊರೊನಾ ಹಬ್ಬುತ್ತಿದೆ. ಕೊರೊನಾ ನಿಯಮವನ್ನೂ ಉಲ್ಲಂಘಿಸಿ ಮೋಜು ಮಸ್ತಿಯಲ್ಲಿ ಭಾಗಿಯಾಗಿದ್ದವರಿಗೆ ಸೋಂಕು ಹಬ್ಬಿದೆ. ಅನ್ ಲೈ ನ್ ಮೂಲಕ ಊಟವನ್ನೂ ತರಿಸಿಕೊಂಡು, ಕೊರೊನಾ ಇಲ್ಲವೇನೋ ಎಂಬಂತೆ ಪಾರ್ಟಿಯಲ್ಲಿ ಭಾಗಿಯಾಗಿದ್ದವರಿಗೆ ಈಗ ಕೊರೊನಾ ವಕ್ಕರಿಸಿದೆ. ಎಲ್ಲರೂ ಕ್ವಾರಂಟೈನ್ ನಲ್ಲಿದ್ದಾರೆ.
ಕಾಲೇಜ್ ಸೀಲ್ ಡೌನ್.!!
ನಿನ್ನೆಯಷ್ಟೆ ಒಂದು ಮನೆಯಿಂದ ಮೂರು ಮನೆಗೆ ಹರಡಿದ್ದ ಕೊರೊನಾ ಸೋಂಕು 10 ಜನರಿಗೆ ವಕ್ಕರಿಸಿ ಬಿಟ್ಟಿತ್ತು. ಇಂದು ಕಾಲೇಜ್‌ವೊಂದರಲ್ಲಿ ಕೊರೊನಾ ಬ್ಲಾಸ್ಟ್ ಆಗಿದೆ. ಸುಮಾರು 34 ವಿದ್ಯಾರ್ಥಿಗಳಿಗೆ ಸೋಂಕು ಹರಡಿದೆ. ಹೌದು, ಸಂಭಾವ್ಯ ಕೋವಿಡ್ ಮೂರನೇ ಅಲೆಯ ಭೀತಿ ನಡುವೆ ನಗರದ ಮಹದೇವಪುರದ ಹೊರಮಾವು ವಾರ್ಡಿನ ಕ್ರಿಶ್ಚಿಯನ್ ಕಾಲೇಜಿನಲ್ಲಿ ಒಟ್ಟು 34 ವಿದ್ಯಾರ್ಥಿಗಳಿಗೆ ಕೊರೊನಾ ಪಾಸಿಟಿವ್ ಆಗಿದೆ. 12 ವಿದ್ಯಾರ್ಥಿಗಳು, 22 ವಿದ್ಯಾರ್ಥಿನಿಯರು ಕೊರೊನಾ ಸೋಂಕು ತಗುಲಿದ್ದು, ಸೋಂಕಿತ ವಿದ್ಯಾರ್ಥಿಗಳನ್ನು ಕೋವಿಡ್ ಕೇರ್ ಸೆಂಟರ್‌ಗೆ ಶಿಫ್ಟ್ ಮಾಡಲಾಗಿದೆ. ಬಹುತೇಕರಿಗೆ ಕೋವಿಡ್ ಲಕ್ಷಣ ಇಲ್ಲದಿದ್ದರೂ, ಪಾಸಿಟಿವ್ ವರದಿ ಬಂದಿದೆ. ಆದರೂ, ಹೋಂ ಕ್ವಾರಂಟೈನ್‌ನಲ್ಲಿ ಇದ್ದು, ನಿಗಾವಹಿಸಲು ಬಿಬಿಎಂಪಿ ಆರೋಗ್ಯ ಅಧಿಕಾರಿಗಳು ಮುಂದಾಗಿದ್ದಾರೆ.
ಕಾಲೇಜಿನ 412 ವಿದ್ಯಾರ್ಥಿಗಳಿಗೆ ಕೊರೊನಾ ಟೆಸ್ಟ್!
ಇನ್ನು ಈ ಮಟ್ಟಿಗೆ ಕೊರೊನಾ ಈ ಕಾಲೇಜಿನಲ್ಲಿ ಬ್ಲಾಸ್ಟ್ ಆಗೋದಕ್ಕೆ ಕಾರಣ ಗೆಟ್ ಟು ಗೆದರ್ ಪಾರ್ಟಿ ಎನ್ನಲಾಗಿದೆ. ಇಲ್ಲಿಗೆ ಬಂದಿದ್ದ ಅನೇಕ ವಿದ್ಯಾರ್ಥಿಗಳು ಆನ್‌ಲೈನ್ ಊಟ, ತಿಂಡಿ ತಿನಿಸುಗಳನ್ನು ಖರೀದಿಸಿದ್ದರಂತೆ. ಇದಾದ ಎರಡು ದಿನಗಳಲ್ಲಿ ಮೊದಲು ಮೂರು ವಿದ್ಯಾರ್ಥಿಗಳಿಗೆ ಕೋವಿಡ್ ಗುಣ ಲಕ್ಷಣಗಳು ಕಾಣಿಸಿಕೊಂಡಿದೆ. ಬಳಿಕ ಮೂವರು ಕೋವಿಡ್ ಪರೀಕ್ಷೆಗೆ ಒಳಪಡಿಸಿದಾಗ ಪಾಸಿಟಿವ್ ಬಂದಿದೆ. ಸದ್ಯ ಕಾಲೇಜಿನ ಒಟ್ಟು 412 ವಿದ್ಯಾರ್ಥಿಗಳನ್ನು ಸ್ವಾಬ್ ಟೆಸ್ಟ್ನ ತೆಗೆದುಕೊಂಡು ಪರೀಕ್ಷೆಗೆ ಕಳಿಸಿದೆ ಬಿಬಿಎಂಪಿ.
ಹೊರ ರಾಜ್ಯದ ವಿದ್ಯಾರ್ಥಿಗಳಿಗೆ ಸೋಂಕು
ಅಷ್ಟೆ ಅಲ್ಲ ಇಡೀ ಕಾಲೇಜನ್ನು ಬಿಬಿಎಂಪಿ ಸೀಲ್ ಡೌನ್ ಮಾಡಿದೆ. ಈ ಬಗ್ಗೆ ಬಿಬಿಎಂಪಿ ಕಮಿಷನರ್ ನ ಕೇಳಿದರೆ, ಮಹಾದೇವಪುರ ನಗರದ ಕೊರೋನಾ ಹೆಚ್ಚಿರುವ ವಲಯ. ಇಲ್ಲಿ ಹೆಚ್ಚು ರಾಜ್ಯದ ಹೊರಗಿಂದ ಬಂದವರಿದ್ದಾರೆ. ಟೆಕ್ ಕಂಪೆನಿಗಳಿದ್ದಾವೆ. ಕಾಲೇಜು ವಿದ್ಯಾರ್ಥಿಗಳೂ ಕೂಡ ಬಹುತೇಕ ಅನ್ಯ ರಾಜ್ಯದಿಂದಲೇ ಬಂದವರು. ಹೀಗಾಗಿ ಹೆಚ್ಚು ಸೋಂಕು ಪತ್ತೆಯಾಗುತ್ತಿದೆ. ಆದರೂ ಪಾಲಿಕೆ ಹೆಚ್ಚಿನ ನಿಗಾ ವಹಿಸಿ ಕ್ರಮ ಕೈಗೊಳ್ಳುತ್ತಿದೆ ಎಂದರು.
ಇದನ್ನೂ ಓದಿ: Covid Vaccine- ವ್ಯಾಕ್ಸಿನ್ ಸಿಗುತ್ತಿಲ್ಲವೆನ್ನುವವರಿಗೆ ಗುಡ್ ನ್ಯೂಸ್; ಲಸಿಕೆ ಹಂಚಿಕೆ ಹೆಚ್ಚಿಸಲು ಬಿಬಿಎಂಪಿ ವಿವಿಧ ಕ್ರಮಗಳು
ಒಟ್ನಲ್ಲಿ ಕೊರೊನಾ ನಿಯಮವಿದ್ದರೂ ಸೋಂಕು ಹೆಚ್ಚಾಗುತ್ತೆ ಅಂತಾ ಗೊತ್ತಿದ್ದರೂ ಪಾರ್ಟಿ ಮಾಡಿದ ಪರಿಣಾಮ ಇದೀಗ 34 ಜನ ವಿದ್ಯಾರ್ಥಿಗಳಿಗೆ ಸೋಂಕು ತಗುಲಿದೆ. ಈ ಸೋಂಕಿತರ ಸಂಖ್ಯೆ ಏರಿಕೆಯಾಗುವ ಸಾಧ್ಯತೆ ಕೂಡ ಇದೆ. ಯಾಕಂದ್ರೆ ಇದೇ ಕಾಲೇಜಿನ 412 ವಿದ್ಯಾರ್ಥಿಗಳ ಸ್ವ್ಯಾಬ್ ತೆಗೆದುಕೊಳ್ಳಲಾಗಿದೆ. ಇದರಲ್ಲಿನ್ನೆಷ್ಟು ಸೋಂಕಿತರು ಪತ್ತೆಯಾಗಿಲಿದ್ದಾರೆ ಎನ್ನುವುದೇ ಸದ್ಯದ ಆತಂಕದ ವಿಚಾರ.
ನ್ಯೂಸ್18 ಕನ್ನಡ ಕಳಕಳಿ: ಕೊರೋನಾ ಪಾಸಿಟಿವ್ ಕೇಸ್ಗಳ ಸಂಖ್ಯೆ ರಾಜ್ಯದಲ್ಲಿ ತಗ್ಗಿದೆಯಾದರೂ ಸೋಂಕಿನ ಅಪಾಯದಿಂದ ಸಂಪೂರ್ಣವಾಗಿ ಇನ್ನೂ ಯಾರೂ ಸುರಕ್ಷಿತರಲ್ಲ. ಹೀಗಾಗಿ ಪ್ರತಿಯೊಬ್ಬರು ಕೋವಿಡ್ ನಿಯಮಗಳಾದ ಮಾಸ್ಕ್ ಧರಿಸುವುದು, ಸಾಮಾಜಿಕ ಅಂತರ ಕಾಯ್ದುಕೊಳ್ಳುವುದನ್ನು ಮರೆಯಬಾರದು. ಆದಷ್ಟು ಶೀಘ್ರವೇ ಲಸಿಕೆ ಪಡೆದು ಸೋಂಕಿನ ವಿರುದ್ಧದ ಯುದ್ಧದಲ್ಲಿ ಪ್ರತಿಯೊಬ್ಬರು ಕೈ ಜೋಡಿಸಬೇಕು. ನಾವು ಸುರಕ್ಷಿತವಾಗಿ ಇದ್ದು, ನಮ್ಮಿಂದ ಇತರರಿಗೆ ಸೋಂಕು ಹಬ್ಬದಂತೆ ಜವಾಬ್ದಾರಿಯುತವಾಗಿ ನಡೆದುಕೊಳ್ಳಬೇಕು.
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ