• ಹೋಂ
  • »
  • ನ್ಯೂಸ್
  • »
  • ರಾಜ್ಯ
  • »
  • ’’ಕಣ್ಣೆದುರೆ ಬಾಂಬ್​ ಸಿಡಿದು 30 ಜನ ಸತ್ತರು’’: ಬೆಂಗಳೂರಿಗೆ ಬಂದ ಆಫ್ಘಾನ್​ ಕುಟುಂಬ ಬಿಚ್ಚಿಟ್ಟ ಭಯಾನಕ ಸತ್ಯ

’’ಕಣ್ಣೆದುರೆ ಬಾಂಬ್​ ಸಿಡಿದು 30 ಜನ ಸತ್ತರು’’: ಬೆಂಗಳೂರಿಗೆ ಬಂದ ಆಫ್ಘಾನ್​ ಕುಟುಂಬ ಬಿಚ್ಚಿಟ್ಟ ಭಯಾನಕ ಸತ್ಯ

ತಾಲಿಬಾನ್ ಬಂಡುಕೋರರು

ತಾಲಿಬಾನ್ ಬಂಡುಕೋರರು

ತಾಲಿಬಾನಿಗಳು ಕಂಡ ಕಂಡವರನ್ನು ಗುಂಡಿಟ್ಟು ಕೊಂದಿದ್ದಾರೆ. ನಮ್ಮ ಪರಿಚಯಸ್ಥ ಪೊಲೀಸರೊಬ್ಬರನ್ನು ಅತ್ಯಂತ ಬರ್ಬರವಾಗಿ ಮತ್ತು ಹೀನಾಯವಾಗಿ ಕೊಂದು ಹಾಕಿದರು. ಅತ್ಯಂತ ಜೀವ ಹಿಂಡುವ ಸಂಗತಿ ಎಂದರೇ ಅವರ ಸ್ವೇಹಿತನನ್ನು  ತಾಲಿಬಾನಿಗಳು ಹಿಡಿದು ಜೀವಂತವಾಗಿ ಬೆಂಕಿ ಹಚ್ಚಿ ಸಾಯಿಸಿದರು.

  • Share this:

ಭಾರತದ ನೆರೆಯ ರಾಷ್ಟ್ರ  ಅಫ್ಘಾನಿಸ್ತಾನದ ಪರಿಸ್ಥಿತಿ ದಿನದಿಂದ ದಿನಕ್ಕೆ ಹದಗೆಡುತ್ತಿದ್ದು, ಅಲ್ಲಿನ ಜನರು ಭಯೋತ್ಪಾದಕರ ಕ್ರೌರ್ಯಕ್ಕೆ ಅಕ್ಷರಶಃ ನಲುಗಿ ಹೋಗಿದ್ದಾರೆ. ಕಳೆದ ಅನೇಕ ದಿನಗಳ ಹಿಂದೆಯೇ ಪರಿಸ್ಥಿತಿಯನ್ನು ಅರ್ಥ ಮಾಡಿಕೊಂಡಿದ್ದ ಒಂದಷ್ಟು ಜನ ನಾಗರಿಕರು ನರಕ ಸದೃಶ ಭೂಮಿಯನ್ನು   ಬಿಟ್ಟು ಬೆಂಗಳೂರಿಗೆ ಬಂದು ನೆಲೆಸಿದ್ದಾರೆ.


ಭಾರತಕ್ಕೆ ಅದರಲ್ಲೂ ಬೆಂಗಳೂರಿಗೆ ಬಂದು ನೆಲೆಸಿರುವ ಅಫ್ಘಾನ್ ಕುಟುಂಬ ತಾಲಿಬಾನಿಗಳ ಕರಾಳ ಮುಖವನ್ನು ನ್ಯೂಸ್ 18 ಕನ್ನಡದಲ್ಲಿ ಎಳೆ, ಎಳೆಯಾಗಿ  ಬಿಚ್ಚಿಟ್ದಾರೆ.   ಎರಡು ವಾರದ ಹಿಂದೆ ಬೆಂಗಳೂರಿಗೆ ಬಂದ ಸಂತ್ರಸ್ತ ಅಫ್ಘಾನ್ ಕುಟುಂಬ ಹಿಯಾತ್​ಉಲ್ಲಾ ಮತ್ತು ಅವರ ಕುಟುಂಬದ ಸದಸ್ಯರು ’’ತಾಲಿಬಾನ್ ಗಳ ಹಿಂಸೆ ತಾಳಲಾರದೆ ದೇಶ ಬಿಟ್ಟು ಬಂದಿದ್ದೇವೆ’’ ಎಂದಿದ್ದಾರೆ.


’’ತಾಲಿಬಾನ್ ಗುಂಡೇಟಿಗೆ ನಮ್ಮ ಕುಟುಂಬಸ್ಥರೂ ಬಲಿಯಾದರೂ’’ ಎನ್ನುತ್ತಾ ಕಣ್ಣೀರಾಗುವ ಹಿಯಾತ್​ಉಲ್ಲಾ ತಾಲಿಬಾನ್ ಗಳ ಕ್ರೌರ್ಯ, ರಕ್ತಪಾತವನ್ನು ಕಣ್ಣಿಗೆ ಕಟ್ಟುವಂತೆ ಬಿಚ್ಚಿಟ್ಟಿದ್ದಾರೆ.


ನಮ್ಮ ಮನೆ ಪಕ್ಕದಲ್ಲೇ ಒಂದು ಸೆಲೂನ್ ಶಾಪ್ ಇತ್ತು, ಇಲ್ಲಿಗೆ ಪ್ರತಿ ದಿನ ಬಾರೀ ಸಂಖ್ಯೆಯಲ್ಲಿ ಜನ ಬಂದು ಸೇರುತ್ತಿದ್ದರು. ಇದ್ದಕ್ಕಿದ್ದ ಹಾಗೆ, ನೋಡ ನೋಡುತ್ತಿದ್ದಂತೆ ಅಲ್ಲಿ ಒಂದು ದಿನ ಬಾಂಬ್ ಸಿಡಿದು 30 ಜನ ಕಣ್ಣೆದುರೇ ಸಾವನ್ನಪ್ಪಿದ್ದರು


ತಾಲಿಬಾನಿಗಳು ಕಂಡ ಕಂಡವರನ್ನು ಗುಂಡಿಟ್ಟು ಕೊಂದಿದ್ದಾರೆ. ನಮ್ಮ ಪರಿಚಯಸ್ಥ ಪೊಲೀಸರೊಬ್ಬರನ್ನು ಅತ್ಯಂತ ಬರ್ಬರವಾಗಿ ಮತ್ತು ಹೀನಾಯವಾಗಿ ಕೊಂದು ಹಾಕಿದರು. ಅತ್ಯಂತ ಜೀವ ಹಿಂಡುವ ಸಂಗತಿ ಎಂದರೇ ಅವರ ಸ್ವೇಹಿತನನ್ನು  ತಾಲಿಬಾನಿಗಳು ಹಿಡಿದು ಜೀವಂತವಾಗಿ ಬೆಂಕಿ ಹಚ್ಚಿ ಸಾಯಿಸಿದರು. ಈ ಎಲ್ಲಾ ಘಟನೆಗಳನ್ನು ನೋಡಿ, ಅಕ್ಷರಶಃ ನಮ್ಮೆಲ್ಲರ ಧೈರ್ಯವೇ ಹುಡುಗಿ ಹುಡುಗಿ ಹೋಯಿತು.


ಇದನ್ನೆಲ್ಲಾ ನೋಡುತ್ತಿದ್ದ ನಾನು ಗಟ್ಟಿ ಇರುವ ಕಾರಣಕ್ಕೆ  ಬದುಕುಳಿದೆ. ನನ್ನ ಬಳಿ ಇದ್ದಂತಹ ಎಲ್ಲಾ ಹಣವೆಲ್ಲಾ ಒಟ್ಟು ಹಣ ಗೂಡಿಸಿ ಇಲ್ಲಿಗೆ ಬಂದು ಬಿಟ್ಟೆವು. ಇಲ್ಲಿನ ಸರ್ಕಾರ ನಮಗೊಂದು ಸೂರು ಕೊಡಬೇಕು ಎಂದು ಸಂತ್ರಸ್ತ ಅಪ್ಘಾನ್ ಕುಟುಂಬದವರು ಮನವಿ ಮಾಡಿಕೊಂಡರು.


ಮಕ್ಕಳು ಸೇರಿದಂತೆ ಒಟ್ಟು 15 ಜನರ ಕುಟುಂಬ ಬೆಂಗಳೂರಿಗೆ ಬಂದಿದ್ದೇವೆ.  ಏಳು ತಿಂಗಳ ಹಿಂದೆ ನಮ್ಮ ಕುಟುಂಬದವರಲ್ಲಿ ಒಬ್ಬರು  ಕೆಲಸ ಹರಸಿ ಬೆಂಗಳೂರಿಗೆ ಬಂದಿದ್ದರ ಪರಿಣಾಮ ನಾವು ಇಲ್ಲಿಗೆ ಬರಲು ಸುಲಭವಾಯಿತು. ಬದುಕಲು ಯೋಗ್ಯ ಜಾಗ ನೀಡಬೇಕು ಎಂದು ಮನವಿ ಮಾಡಿದರು.


ಇದನ್ನೂ ಓದಿ: ರಕ್ಷಾ ಬಂಧನ ಹಬ್ಬ: ಕೋವಿಡ್​ ಲಸಿಕೆ ನೀಡುವುದಕ್ಕೆ ಒಂದು ದಿನ ರಜೆ ನೀಡಿದ ಗುಜರಾತ್​ ಸರ್ಕಾರ


ನಮ್ಮದು ಅಲ್ಲಿ ಶ್ರೀಮಂತ ಕುಟುಂಬ, ಆದರೆ ತಾಲಿಬಾನ್ ಗಳ ಹಿಂಸೆ ತಾಳಿಕೊಳ್ಳಲು ಸಾಧ್ಯವಾಗಿಲ್ಲ,  ನಮ್ಮ ಜಮೀನು ಆಸ್ತಿಯೆಲ್ಲಾ ತಾಲಿಬಾನಿಗಳು ವಶ ಪಡಿಸಿಕೊಂಡಿದ್ದಾರೆ. ಶರಿಯತ್ ಹೆಸರಿನಲ್ಲಿ ಎಲ್ಲರನ್ನೂ ಸಾಯಿಸಲಾಗುತ್ತಿದೆ. ಆದರೆ ಅವರು ಇದ್ಯಾವುದನ್ನೂ ಅಂದರೆ ಕಾನೂನನ್ನು ಪಾಲಿಸಲ್ಲ ಉಗ್ರರ ಗುಲಾಮರಾಗಿ ನಾವು ಬದುಕಬೇಕಾಗುತ್ತದೆ, ನಮ್ಮಂತೆ ಸಾವಿರಾರು ಕುಟುಂಬ ಹೀಗೆ ಪಲಾಯನ ಮಾಡಿದೆ. ನಮಗಿಲ್ಲಿ ಒಂದು ಸೂರು ಕೊಟ್ಟರೆ ಬದುಕು ಕಟ್ಟಿಕೊಳ್ಳುತ್ತೇವೆ ಎಂದು ಮತ್ತೊಮ್ಮೆ ಹೇಳಿದರು.


ನ್ಯೂಸ್​​​18 ಕನ್ನಡ ಕಳಕಳಿ: ಕೊರೋನಾ ಪಾಸಿಟಿವ್​ ಕೇಸ್​ಗಳ ಸಂಖ್ಯೆ ರಾಜ್ಯದಲ್ಲಿ ತಗ್ಗಿದೆಯಾದರೂ ಸೋಂಕಿನ ಅಪಾಯದಿಂದ ಸಂಪೂರ್ಣವಾಗಿ  ಇನ್ನೂ ಯಾರೂ ಸುರಕ್ಷಿತರಲ್ಲ. ಹೀಗಾಗಿ ಪ್ರತಿಯೊಬ್ಬರು ಕೋವಿಡ್​​ ನಿಯಮಗಳಾದ ಮಾಸ್ಕ್​​ ಧರಿಸುವುದು, ಸಾಮಾಜಿಕ ಅಂತರ ಕಾಯ್ದುಕೊಳ್ಳುವುದನ್ನು ಮರೆಯಬಾರದು. ಆದಷ್ಟು ಶೀಘ್ರವೇ ಲಸಿಕೆ ಪಡೆದು ಸೋಂಕಿನ ವಿರುದ್ಧದ ಯುದ್ಧದಲ್ಲಿ ಪ್ರತಿಯೊಬ್ಬರು ಕೈ ಜೋಡಿಸಬೇಕು.

First published: