ಪ್ರೇಮಿಯ ಸುಳ್ಳು ಕರೆಯಿಂದ ನೊಂದು, ಅವನಿಲ್ಲದೇ ನಾನು ಬದುಕಿರಲಾರೆ ಎಂದು ನೇಣಿಗೆ ಕೊರಳೊಡ್ಡಿದ ಯುವತಿ

ಅರುಣ್ ಜೊತೆಗಿನ ನನ್ನ ಮದುವೆಗೆ ನಮ್ಮ ಎರಡೂ ಕುಟುಂಬಗಳ ವಿರೋಧದಿಂದ ನನಗೆ ನೋವಾಗಿದೆ. ಅವನಿಲ್ಲದೆ ನಾನು ಬದುಕಲಾರೆ’ ಎಂದು ಆತ್ಮಹತ್ಯಾ ಪತ್ರದಲ್ಲಿ ಬರೆದಿದ್ದಾಳೆ.

ಮೃತ ಯುವತಿ ಮತ್ತು ಪ್ರೇಮಿ

ಮೃತ ಯುವತಿ ಮತ್ತು ಪ್ರೇಮಿ

  • Share this:
ಕೆಲವೊಮ್ಮೆ ಪಾಗಲ್ ಪ್ರೇಮಿಗಳ ಕಾಟದಿಂದ ಯುವತಿಯರು ಪ್ರಾಣ ಕಳೆದುಕೊಂಡಿರುವ ಪ್ರಕರಣಗಳು ವರದಿ ಆಗುತ್ತಿರುತ್ತವೆ. ಇದೀಗ ಅಂತಹವುದೇ ಒಂದು ಪ್ರಕರಣ ಬೆಂಗಳೂರಿನಲ್ಲಿ (Bengaluru) ವರದಿಯಾಗಿದೆ. ಪಾಗಲ್ ಪ್ರೇಮಿಯ ಸುಳ್ಳು ಕರೆ(Fake Call)ಯಿಂದ ಹೆದರಿದ ಯುವತಿ ಅಕ್ಕನ ಮನೆಯಲ್ಲಿ ನೇಣಿಗೆ ಶರಣಾಗಿದ್ದಾಳೆ. ಸದ್ಯ ಪೊಲೀಸರು ಆರೋಪಿ ಪಾಗಲ್ ಪ್ರೇಮಿ ಮತ್ತು ಆತನ ಗೆಳೆಯನನ್ನು ಬಂಧಿಸಿದ್ದಾರೆ. ಹಾಸನ ಜಿಲ್ಲೆಯ ಚನ್ನರಾಯಪಟ್ಟಣದ (Channarayapattana, Hassan) 24 ವರ್ಷದ ಸಾಕ್ಷಿ (ಸಾಕಮ್ಮ) ಬೆಂಗಳೂರಿನ ಯಶವಂತಪುರದಲ್ಲಿರುವ ಸೂಪರ್ ಮಾರ್ಕೆಟ್ (Super Market) ನಲ್ಲಿ ಕೆಲಸ ಮಾಡಿಕೊಂಡಿದ್ದಳು. ಉತ್ತರ ಬೆಂಗಳೂರು ದೊಡ್ಡಬಿದರಕಲ್ಲು ಬಳಿಯ ಮುನೇಶ್ವರ ಲೇಔಟ್‌ನಲ್ಲಿರುವ ಅಕ್ಕನ ಮನೆಯಲ್ಲಿಯೇ ಸಾಕ್ಷಿ ಉಳಿದುಕೊಂಡಿದ್ದರು,

ಕೆಲಸ ಮಾಡುವ ಸ್ಥಳದಲ್ಲಿ ಸಾಕ್ಷಿಗೆ ಪರಿಚಯವಾದವೇ ಈ ಅರುಣ್. ಸಾಕ್ಷಿ ಚೆನ್ನಾಗಿ ಮಾತನಾಡೋದರಿಂದ ಅರುಣ್ ಆಕೆಯನ್ನು ಪ್ರೀತಿಸತೊಡಗಿದ್ದನು. ತನ್ನನ್ನು ಮದುವೆ ಆಗುವಂತೆಯೂ ಸಾಕ್ಷಿ ಮುಂದೆ ಪ್ರಪೋಸಲ್ ಇರಿಸಿದ್ದನು ಎನ್ನಲಾಗಿದೆ. ಅರುಣ್ ತನ್ನನ್ನು ಮದುವೆ ಆಗುವಂತೆ ಪೀಡಿಸುತ್ತಿರುವ ವಿಷಯವನ್ನು ಸಾಕ್ಷಿ ಮನೆಯಲ್ಲಿ ಹೇಳಿಕೊಂಡಿದ್ದಳು.

ಇದನ್ನೂ ಓದಿ:  ಪೋಷಕರೇ ಮಕ್ಕಳಿಗೆ ಸ್ನಾನ ಮಾಡಿಸುವಾಗ ಇರಲಿ ಎಚ್ಚರ.. ಮೈಸೂರಲ್ಲಿ ಬಿಸಿ ನೀರಿಗೆ ಮಗು ಬಲಿ!

ಇನ್ನೂ ಈ  ವಿಷಯ ತಿಳಿಯುತ್ತಿದ್ದಂತೆ ಕುಟುಂಬಸ್ಥರು ಸಾಕ್ಷಿಗೆ ಮದುವೆ ಮಾಡಲು ಮುಂದಾಗಿದ್ದಾರೆ. ಸಾಕ್ಷಿಗೆ ಗಂಡು ಹುಡುಕುತ್ತಿರುವ ವಿಷಯ ಅರುಣ್ ಗೆ ತಿಳಿದಿದೆ. ಮದುವೆ ತಡೆಯಲು ಅರುಣ್ ಗೆಳೆಯ ಗೋಪಾಲ್ ಎಂಬವನ ಸಹಾಯ ಪಡೆದುಕೊಂಡಿದ್ದಾರೆ, ಗೋಪಾಲ್ ಮೂಲಕ ಸಾಕ್ಷಿ ಭಾವನಿಗೆ ಕರೆ ಮಾಡಿಸಿ ಸುಳ್ಳು ಹೇಳಿಸಿದ್ದಾನೆ.

ಫೋನ್ ಮಾಡಿದ್ದ ಗೋಪಾಲ್ ಹೇಳಿದ್ದಾದ್ರೂ ಏನು?

ಫೋನ್ ಮಾಡಿದ ಗೋಪಾಲ್ ತನ್ನನ್ನು ಬಸವೇಶ್ವರನಗರದ ಪೊಲೀಸ್ ಎಂದು ಪರಿಚಯಿಸಿಕೊಂಡಿದ್ದಾನೆ. ಅರುಣ್ ಆತ್ಮಹತ್ಯೆಗೆ ಯತ್ನಿಸಿದ್ದು, ಆಸ್ಪತ್ರೆಯಲ್ಲಿದ್ದಾರೆ ಎಂದು ಗೋಪಾಲ್ ಪ್ರಜ್ವಲ್ ಗೆ ಮಾಹಿತಿ ನೀಡಿದ್ದಾನೆ. ಅರುಣ್ ಮತ್ತು ಸಾಕ್ಷಿ ಮದುವೆಗೆ ವ್ಯವಸ್ಥೆ ಮಾಡುವಂತೆ ಪ್ರಜ್ವಲ್‌ಗೆ ಹೇಳಿದ್ದಾನೆ.

ಮಗಳನ್ನು ಚನ್ನಪಟ್ಟಣಕ್ಕೆ ಕರೆತರುವಂತೆ ತಾಯಿಯ ಸೂಚನೆ

ಒಂದು ವೇಳೆ ಮದುವೆ ಮಾಡದಿದ್ದರೆ ಕ್ರಿಮಿನಲ್ ಮೊಕದ್ದಮೆ ಹೂಡುವುದಾಗಿ ಬೆದರಿಕೆ ಹಾಕಿ, ಸಾಕ್ಷಿಯನ್ನು  ಠಾಣೆಗೆ ಕರೆತರುವಂತೆ ಪ್ರಜ್ವಲ್‌ಗೆ ಗೋಪಾಲ್‌ ಹೇಳಿದ್ದಾನೆ. ಪ್ರಜ್ವಲ್ ಸಾಕ್ಷಿ ತಾಯಿ ಲಕ್ಷ್ಮಮ್ಮ ಅವರಿಗೆ ಬೆಳವಣಿಗೆಯ ಬಗ್ಗೆ ತಿಳಿಸಿದ್ದಾರೆ, ಮಗಳನ್ನು ಠಾಣೆಗೆ ಕರೆದುಕೊಂಡ ಹೋಗದೇ ಚನ್ನರಾಯಪಟ್ಟಣ್ಣಕ್ಕೆ ಕರೆದುಕೊಂಡು ಬರುವಂತೆ ಸೂಚಿಸಿದ್ದಾರೆ.

ಇದನ್ನೂ ಓದಿ:  ಮೂವರ ಕಾಟದಿಂದ ಬೇಸತ್ತು ಆತ್ಮಹತ್ಯೆ!; ಕಿರುತೆರೆ ಸುಂದರಿಯ ಸೂಸೈಡ್​​ಗೆ ಹೊಸ ಟ್ವಿಸ್ಟ್!

ಇತ್ತ ಸಾಕ್ಷಿಗೆ ಫೋನ್ ಮಾಡಿದ ಪ್ರಜ್ವಲ್ ತನಗೆ ಪೊಲೀಸ್ ಠಾಣೆಯಿಂದ ಕರೆ ಬಂದಿರುವ ವಿಷಯ ತಿಳಿಸಿ, ಕೂಡಲೇ ಚನ್ನಪಟ್ಟಣಕ್ಕೆ ಹೊರಡಲು ಸಿದ್ಧಳಾಗುವಂತೆ ಹೇಳಿದ್ದಾರೆ. ಅರುಣ್ ಸಾವನ್ನಪ್ಪಿದ್ದಾನೆಂದು ತಿಳಿದು ಮನೆಗೆ ಬಂದ ಸಾಕ್ಷಿ ನೇಣು ಬಿಗಿದುಕೊಂಡು ಆತ್ಮಹತ್ಯೆಗೆ ಶರಣಾಗಿದ್ದಾಳೆ. ಸಾಕ್ಷಿ ಆತ್ಮಹತ್ಯೆಗೂ ಮುನ್ನ ಡೆತ್​ ನೋಟ್ ಸಹ ಬರೆದಿಟ್ಟಿದ್ದಾಳೆ.

ಅವನಿಲ್ಲದೇ ನಾನು ಬದುಕಲಾರೆ

ಅರುಣ್ ಜೊತೆಗಿನ ನನ್ನ ಮದುವೆಗೆ ನಮ್ಮ ಎರಡೂ ಕುಟುಂಬಗಳ ವಿರೋಧದಿಂದ ನನಗೆ ನೋವಾಗಿದೆ. ಅವನಿಲ್ಲದೆ ನಾನು ಬದುಕಲಾರೆ’ ಎಂದು ಆತ್ಮಹತ್ಯಾ ಪತ್ರದಲ್ಲಿ ಬರೆದಿದ್ದಾಳೆ. ತನ್ನ ಮಗಳ ಸಾವಿಗೆ ಅರುಣ್ ಮತ್ತು ಗೋಪಾಲ್ ಮಾಡಿದ ನಕಲಿ ಕರೆಯೇ ಪ್ರಮುಖ ಕಾರಣ ಎಂದು ಲಕ್ಷ್ಮಮ್ಮ ಆರೋಪಿಸಿದ್ದಾರೆ. ಅವರ ವಿರುದ್ಧ ದೂರು ದಾಖಲಿಸಿದ್ದಾರೆ.

ಪೀಣ್ಯ ಪೊಲೀಸರು ಐಪಿಸಿ ಸೆಕ್ಷನ್ 306ರ ಅಡಿಯಲ್ಲಿ ಆತ್ಮಹತ್ಯೆಗೆ ಪ್ರಚೋದನೆ ಪ್ರಕರಣ ದಾಖಲಿಸಿಕೊಂಡು ಅರುಣ್ ಮತ್ತು ಗೋಪಾಲ್ ನನ್ನು ಬಂಧಿಸಿದ್ದಾರೆ. ಹೆಚ್ಚಿನ ತನಿಖೆ ನಡೆಯುತ್ತಿದೆ.

ಬೆಂಗಳೂರಿನಲ್ಲಿ ಲೈವ್ ಸೂಸೈಡ್

ಬೆಂಗಳೂರಿನಲ್ಲಿ ಕಟ್ಟಡದ ಮೇಲಿಂದ ವಿದ್ಯುತ್ ತಂತಿ ಹಿಡಿದು ಲೈವ್ ಸೂಸೈಡ್ ನಡೆದಿತ್ತು. ತಮಿಳುನಾಡು ಮೂಲದ ಟಿ. ರಾಜು  ಎಂಬಾತ ಬೊಮ್ಮನಹಳ್ಳಿಯ ಬಾಲಾಜಿ ಲೇಔಟ್ ನಲ್ಲಿ ವೈವ್​ ಸೂಸೈಡ್​ ಮಾಡಿಕೊಂಡಿದ್ದರು. ಮಧ್ಯಾಹ್ನ ೨ ಗಂಟೆಗೆ ಸುಮಾರಿಗೆ ಈ ಘಟನೆ ನಡೆದಿದ್ದು, ಪ್ರೇಮ್ ಟೆಕ್ಸ್ ವಾಷಿಂಗ್ ಯೂನಿಟ್ ಫ್ಯಕ್ಟರಿ ಮೇಲಿಂದ ತಂತಿ ಹಿಡಿದು ರಾಜು ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಕಟ್ಟಡದ ಸೆಕ್ಯೂರಿಟಿ ಕಣ್ಣು ತಪ್ಪಿಸಿ ಒಳ ಪ್ರವೇಶಿಸಿದ ವ್ಯಕ್ತಿ ಸಾವನ್ನಪ್ಪಿದ್ದಾರೆ. ಆತ್ಮಹತ್ಯೆಗೆ ನಿಕರ ಕಾರಣ ತಿಳಿದು ಬಂದಿಲ್ಲ. ಸದ್ಯ ಬೊಮ್ಮನಹಳ್ಳಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು.
Published by:Mahmadrafik K
First published: