Bengaluru Building Collapse: ನಗರದಲ್ಲಿ ಇನ್ನೊಂದು ಕಟ್ಟಡ ಕುಸಿತ- ಅಪಾಯದ ಅಂಚಿನಲ್ಲಿದೆ 194 ಕಟ್ಟಡಗಳು

194 Buildings In Crucial Stage: ಇನ್ನು ಕಟ್ಟಡ ವಾಲುತ್ತಿರುವ ಸಂದರ್ಭದಲ್ಲಿ ಮನೆ ಮಾಲೀಕರಾದ ಮಂಜುಳಾ ಮತ್ತು ಸುರೇಶ್​ ದಂಪತಿಗೆ ಕರೆ ಮಾಡಲಾಗಿದೆ. ಆದರೆ, ಅವರು ತಾವು ಕೋರ್ಟ್​ನಲ್ಲಿದ್ದೇವೆ ಎಂದು ಸಬೂಬು ಹೇಳಿ ಕರೆ ಇಟ್ಟಿದ್ದಾರೆ ಎಂದು ಸ್ಥಳೀಯರು ಆರೋಪಿಸಿದ್ದಾರೆ. ಅದೃಷ್ಟವಶಾತ್​ ಕಟ್ಟಡ ಬೆಳಗ್ಗೆ ಕುಸಿದ ಬಿದ್ದ ಪರಿಣಾಮ ಭಾರೀ ಹಾನಿಯೊಂದು ತಪ್ಪಿದೆ. ಒಂದು ವೇಳೆ ರಾತ್ರಿ ಸಮಯದಲ್ಲಿ ಈ ರೀತಿ ಘಟನೆ ನಡೆದಿದ್ದರೆ, ಕಟ್ಟಡದಲ್ಲಿದ್ದ ಸುಮಾರು 30 ರಿಂದ 40 ಮಂದಿ ಪ್ರಾಣಕ್ಕೆ ಕುತ್ತು ಎದುರಾಗುತ್ತಿತ್ತು.

ಸಾಂದರ್ಭಿಕ ಚಿತ್ರ

ಸಾಂದರ್ಭಿಕ ಚಿತ್ರ

  • Share this:
ಮಹಾನಗರಿ ಬೆಂಗಳೂರು(Bengaluru) ನೋಡಲು ಮಾತ್ರ ಸುಂದರವಾಗಿ ಕಾಣುತ್ತದೆ, ಆದರೆ ಅದರ ಒಳಭಾಗದ ಸತ್ಯ ಮಾತ್ರ ನಿಜಕ್ಕೂ ಅಪಾಯಕರವಾಗಿದೆ. ಬೆಂಗಳೂರಿನಲ್ಲಿ ದಿನಕ್ಕೊಂದು ಕಟ್ಟಡಗಳ ನಿರ್ಮಾಣ ಆರಂಭವಾದರೆ , ಕೆಲವೊಂದು ಮುಕ್ತಾಯವಾಗುತ್ತದೆ. ಆದರೆ ಆಘಾತಕಾರಿ ಅಂಶವೆಂದರೆ  ಬೆಂಗಳೂರಿನಲ್ಲಿ 194 ಕಟ್ಟಡಗಳು ಬೀಳುವ ಹಂತದಲ್ಲಿವೆ ಎಂಬ ವಿಚಾರ ಬಹಿರಂಗವಾಗಿದೆ.  ಎರಡು ವರ್ಷದ ಹಿಂದೆಯೇ ಸರ್ವೆ ಮಾಡಿ, ಈ ಕಟ್ಟಡಗಳ ಕುರಿತು ಅಧಿಕಾರಿಗಳು  ರಿಪೋರ್ಟ್​ ನೀಡಿದ್ದಾರೆ. ಆದರೆ  ಕೊರೊನಾ ಕಾರಣದಿಂದ ಕ್ರಮಕೈಗೊಳ್ಳದೇ  ಪಾಲಿಕೆ ಸುಮ್ಮನೆ ಕುಳಿತಿದ್ದು, ಜನರ ಜೀವಗಳ ಜೊತೆ ಚೆಲ್ಲಾಟವಾಡುತ್ತಿದೆ.

ಹೌದು, ಈ ಬಗ್ಗೆ ರಿಪೋರ್ಟ್ ಬಂದಾಗ ಪಾಲಿಕೆ  ಹಲವಾರು ಮಂದಿ ಕಟ್ಟಡ ಮಾಲೀಕರಿಗೆ ನೋಟಿಸ್ ನೀಡಿದೆ. ಆದರೂ ಕೂಡ ಯಾವುದೇ ಕಟ್ಟಡ  ಮಾಲೀಕರು, ಅದನ್ನು ತೆರವು ಮಾಡಿಲ್ಲ. ಇದು ಗೊತ್ತಿದ್ದರೂ ಸಹ ಪಾಲಿಕೆ ಸುಮ್ಮನಿರುವುದು ಅನೇಕ ಅನುಮಾನಗಳಿಗೆ ಕಾರಣವಾಗಿದೆ.

ಯಾವ ವಲಯದಲ್ಲಿ ಎಷ್ಟು ಶಿಥಿಲಾವಸ್ಥೆಯ ಕಟ್ಟಡಗಳಿವೆ? 

ಯಲಹಂಕ ವಲಯದಲ್ಲಿ 67 ಕಟ್ಟಡಗಳು  ಶಿಥಿಲಾವಸ್ಥೆಯಲ್ಲಿದೆ,   ಪೂರ್ವ ವಲಯದಲ್ಲಿ 53 ಕಟ್ಟಡಗಳು ಅಪಾಯದಲ್ಲಿದೆ. ಪಶ್ಚಿಮ ವಲಯದಲ್ಲಿ  53  ಕಟ್ಟಡಗಳು ಬೀಳುವ ಸ್ಥಿತಿಯಲ್ಲಿದೆ.  ದಕ್ಷಿಣ ವಲಯದಲ್ಲಿ 38 ಕಟ್ಟಡಗಳು ಹಾಗೂ ಮಹಾದೇವಪುರ ವಲಯದಲ್ಲಿ  03 ಕಟ್ಟಡಗಳು ಇಂದೋ ನಾಳೆಯೋ ಬೀಳಬಹುದು.

ಇದನ್ನೂ ಓದಿ: ಬೆಂಗಳೂರಿನಲ್ಲಿ ನೋಡ ನೋಡುತ್ತಿದ್ದಂತೆಯೇ ಕುಸಿದ ಬಹುಮಹಡಿ ಕಟ್ಟಡ

2019 ಜುಲೈನಲ್ಲಿ ಬೆಂಗಳೂರಿನ ಕಾಕ್ಸ್ ಟೌನ್ ನಲ್ಲಿ ಕಟ್ಟಡ ಕುಸಿದು 4 ಜನ ಸಾವಿಗೀಡಾಗಿದ್ರು, ನಂತರ ಅದೇ ವರ್ಷದ ಸೆಪ್ಟೆಂಬರ್ ನಲ್ಲಿ ಪುಟ್ಟೇನಹಳ್ಳಿಯಲ್ಲಿ  3ಅಂತಸ್ಥಿನ ಕಟ್ಟಡ ಧರೆಗುರುಳಿತ್ತು. ಆ ಸಂದರ್ಭದಲ್ಲಿ  ಶಿಥಿಲಾವಸ್ಥೆಯ ಕಟ್ಟಡಗಳ ಬಗ್ಗೆ ಪಾಲಿಕೆ ಸರ್ವೆ ನಡೆಸಿತ್ತು.

ಇಂದು ಬೆಳಗ್ಗೆ ಸಹ ಮೂರು  ಅಂತಸ್ತಿನ ಕಟ್ಟಡ ಕುಸಿದು ಬಿದ್ದಿದ್ದು, 5 ಜನಕ್ಕೆ ಸಣ್ಣಪುಟ್ಟ ಗಾಯಗಳಾಗಿವೆ. 16 ಮನೆಗಳು ಇರುವ ಮೂರು ಫ್ಲೋರ್ ಇರುವ ಕಟ್ಟಡ ಇದಾಗಿದ್ದು,ಬೆಳಗ್ಗೆ ಒಂಬತ್ತು ಮೂವತ್ತರ ಸುಮಾರಿಗೆ ಈ  ಘಟನೆ ನಡೆದಿದೆ. ಸ್ಥಳಕ್ಕೆ ಅಗ್ನಿಶಾಮಕ ಹಿರಿಯ ಅಧಿಕಾರಿಗಳು ಸಹ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.

ನಿನ್ನೆಯಷ್ಟೆ ನಗರದ ವಿಲ್ಸನ್​ ಗಾರ್ಡನ್​ನ ಲಕ್ಕಸಂದ್ರದಲ್ಲಿ ಮೂರು ಅಂತಸ್ತಿನ ಮನೆಯೊಂದು ಜನರ ಕಣ್ಣೇದುರಿಗೆ ಕುಸಿದು ಬಿದ್ದಿರುವ ಘಟನೆ ನಡೆದಿದೆ. ಅದೃಷ್ಟವಶಾತ್​ ಯಾವುದೇ ಪ್ರಾಣಹಾನಿಯಾಗಿಲ್ಲ. ಕಳೆದ ಎರಡು ವರ್ಷಗಳ ಹಿಂದೆಯೇ ಈ ಮನೆ ಕೊಂಚ ವಾಲಿತ್ತು. ಇಂದು ಬೆಳಗ್ಗೆ ಮನೆ ನಿಧಾನವಾಗಿ ಮತ್ತಷ್ಟು ವಾಲಲು ಮುಂದಾಗಿದೆ. ಈ  ಘಟನೆ ಅರಿವಿಗೆ ಬರುತ್ತಿದ್ದಂತೆ ತಕ್ಷಣಕ್ಕೆ ಮನೆಯಲ್ಲಿದ್ದವರೆಲ್ಲಾ ಹೊರಗೆ ಓಡಿ ಹೋಗಿದ್ದಾರೆ. ಮನೆಯವರೆಲ್ಲಾ ಹೊರ ಹೋಗುತ್ತಿದ್ದಂತೆ ಮನೆ ಸಂಪೂರ್ಣವಾಗಿ ಕುಸಿದು ಬಿದ್ದಿದೆ.

ಕಟ್ಟಡ ಸಂಪೂರ್ಣವಾಗಿ ಶಿಥಿಲಗೊಂಡಿತ್ತು. ಮನೆ ಕೂಡ ಕೊಂಚ ವಾಲಿದ್ದರಿಂದ ಮನೆಯಲ್ಲಿ ಕಳೆದೆರಡು ವರ್ಷಗಳಿಂದ ಯಾವುದೇ ಕುಟುಂಬ ವಾಸವಾಗಿರಲಿಲ್ಲ. ಈ ಹಿನ್ನಲೆ ಖಾಲಿ ಇದ್ದ ಕಟ್ಟಡದಲ್ಲಿ ಸುಮಾರು 30 ರಿಂದ 40 ಮಂದಿ ಮೆಟ್ರೋ ಕಾರ್ಮಿಕರು ವಾಸಿಸುತ್ತಿದ್ದರು.

ಇನ್ನು ಕಟ್ಟಡ ವಾಲುತ್ತಿರುವ ಸಂದರ್ಭದಲ್ಲಿ ಮನೆ ಮಾಲೀಕರಾದ ಮಂಜುಳಾ ಮತ್ತು ಸುರೇಶ್​ ದಂಪತಿಗೆ ಕರೆ ಮಾಡಲಾಗಿದೆ. ಆದರೆ, ಅವರು ತಾವು ಕೋರ್ಟ್​ನಲ್ಲಿದ್ದೇವೆ ಎಂದು ಸಬೂಬು ಹೇಳಿ ಕರೆ ಇಟ್ಟಿದ್ದಾರೆ ಎಂದು ಸ್ಥಳೀಯರು ಆರೋಪಿಸಿದ್ದಾರೆ. ಅದೃಷ್ಟವಶಾತ್​ ಕಟ್ಟಡ ಬೆಳಗ್ಗೆ ಕುಸಿದ ಬಿದ್ದ ಪರಿಣಾಮ ಭಾರೀ ಹಾನಿಯೊಂದು ತಪ್ಪಿದೆ. ಒಂದು ವೇಳೆ ರಾತ್ರಿ ಸಮಯದಲ್ಲಿ ಈ ರೀತಿ ಘಟನೆ ನಡೆದಿದ್ದರೆ, ಕಟ್ಟಡದಲ್ಲಿದ್ದ ಸುಮಾರು 30 ರಿಂದ 40 ಮಂದಿ ಪ್ರಾಣಕ್ಕೆ ಕುತ್ತು ಎದುರಾಗುತ್ತಿತ್ತು.

ಘಟನೆ ನಡೆದಾಕ್ಷಣಕ್ಕೆ ಅಗ್ನಿಶಾಮಕ ದಳದ ತಂಡ ಮತ್ತು ರಾಷ್ಟ್ರೀಯ ವಿಪತ್ತು ನಿರ್ವಾಹಣ ಎನ್​ಡಿಆರ್​ಎಫ್ ತಂಡದ ಸದಸ್ಯರು ಆಗಮಿಸಿ ಪರಿಶೀಲನೆ ನಡೆಸಿದ್ದಾರೆ. ​ಕುಸಿದ ಮನೆಯೊಳಗೆ ಅಡುಗೆ ಸಿಲಿಂಡರ್ ಇರುವ ಕಾರಣದಿಂದ ಪರಿಶೀಲನೆ ಮಾಡುತ್ತಿದ್ದು, ಯಾವುದೇ ಹಾನಿಯಾಗದಂತೆ ಮುನ್ನೆಚ್ಚರಿಕೆ ನಡೆಸಲಾಗುತ್ತಿದೆ.

ಇದನ್ನೂ ಓದಿ: ಧೀಡಿರ್ ಬೆಲೆ ಕುಸಿತದಿಂದ ಸಂಕಷ್ಟ ಸಿಲುಕಿದ ಸೋಯಾಬಿನ್ ಬೆಳೆಗಾರರು; ಮಾರುಕಟ್ಟೆಯಲ್ಲಿ ಮಧ್ಯವರ್ತಿಗಳ ಕೈವಾಡ ಶಂಕೆ!

ಬೆಂಗಳೂರಿನಲ್ಲಿ ಹೀಗೆ ಕಟ್ಟಡಗಳು ಕುಸಿಯುತ್ತಿದೆ, ಇದು ಜನರ ಜೀವಕ್ಕೆ ಬಹಳ ಅಪಾಯಕರ, ಅಲ್ಲದೇ ಕಟ್ಟಡಗಳ ಬಗ್ಗೆ  ರಿಪೋರ್ಟ್ ಬಂದು ಒಂದು ವರ್ಷವಾಗಿದ್ದರೂ ಸಹ ಪಾಲಿಕೆ ಕ್ರಮ ತೆಗದುಕೊಳ್ಳದಿರುವುದು ಜನರ ಕೋಪಕ್ಕೆ ಕಾರಣವಾಗಿದೆ.
Published by:Sandhya M
First published: