ದ.ಆಫ್ರಿಕಾದಿಂದ ಬಂದ 10 ಮಂದಿ ನಾಪತ್ತೆ: ಬೆಂಗಳೂರಿನಲ್ಲಿ ಹೆಚ್ಚಾಯ್ತು ಓಮಿಕ್ರಾನ್​ ಟೆನ್ಶನ್​!

Omicron : 10 ದಕ್ಷಿಣ ಆಫ್ರಿಕಾದ ಪ್ರಜೆಗಳು ಬೆಂಗಳೂರಿನಲ್ಲಿ ಪತ್ತೆಯಾಗದಿರುವುದು ರಾಜ್ಯ ಆರೋಗ್ಯ ಇಲಾಖೆಯನ್ನು ಚಿಂತೆಗೀಡು ಮಾಡಿದೆ.ಈ ದಕ್ಷಿಣ ಆಫ್ರಿಕಾದ ಪ್ರಜೆಗಳು ನವೆಂಬರ್ 12 ಮತ್ತು 22 ರ ನಡುವೆ ಬೆಂಗಳೂರಿಗೆ ಬಂದಿದ್ದಾರೆ.

ಸಾಂದರ್ಭಿಕ ಚಿತ್ರ

ಸಾಂದರ್ಭಿಕ ಚಿತ್ರ

  • Share this:

ದೇಶದಲ್ಲಿ ಕೊರೊನಾ(Corona) ವೈರಸ್‌ನ ಹೊಸ ತಳಿ ಓಮಿಕ್ರಾನ್‌ನ ಮೊದಲ ಎರಡು ಪ್ರಕರಣಗಳು ರಾಜ್ಯ ರಾಜಧಾನಿ ಬೆಂಗಳೂರಿ(Bengaluru)ನಲ್ಲೇ ಪತ್ತೆಯಾದವು. ಈ ಹಿನ್ನೆಲೆ ರಾಜ್ಯ ಸರ್ಕಾರ ಹೈ ಅಲರ್ಟ್‌(High Alert)ನಲ್ಲಿದೆ. ಈ ನಡುವೆ ದಕ್ಷಿಣ ಆಫ್ರಿಕಾ(South Africa)ದ 10 ಪ್ರಜೆಗಳು ಬೆಂಗಳೂರಿನಲ್ಲಿ ಕಾಣೆಯಾಗಿರುವ ಆತಂಕಕಾರಿ ಘಟನೆ ನಡೆದಿದ್ದು, ಈ ಹಿನ್ನೆಲೆ ಆ 10 ದಕ್ಷಿಣ ಆಫ್ರಿಕಾದ ಪ್ರಜೆಗಳನ್ನು ಶೀಘ್ರದಲ್ಲೆ ಪತ್ತೆಹಚ್ಚಲಾಗುವುದು ಎಂದು ರಾಜ್ಯ ಕಂದಾಯ ಸಚಿವ ಆರ್.ಅಶೋಕ್(R. Ashok) ಹೇಳಿದ್ದಾರೆ.ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ(Basavaraj Bommai) ಅಧ್ಯಕ್ಷತೆಯಲ್ಲಿ ನಡೆದ ಉನ್ನತ ಮಟ್ಟದ ಸಭೆಯ ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿದ ಸಚಿವರು, ಆ 10 ದಕ್ಷಿಣ ಆಫ್ರಿಕಾದ ಪ್ರಜೆಗಳನ್ನು ಪತ್ತೆ ಹಚ್ಚಿ ಪರೀಕ್ಷೆ ನಡೆಸಲಾಗುವುದು. ಈ ನಿಟ್ಟಿನಲ್ಲಿ ಅಧಿಕಾರಿಗಳಿಗೆ ನಿರ್ದೇಶನ ನೀಡಲಾಗಿದೆ ಎಂದು ಆರ್. ಅಶೋಕ್‌ ಒತ್ತಿ ಹೇಳಿದರು.


ದಕ್ಷಿಣ ಆಫ್ರಿಕಾದಿಂದ ಬಂದ 10 ಮಂದಿ ನಾಪತ್ತೆ

ಬೆಂಗಳೂರಿನಲ್ಲಿ ಓಮಿಕ್ರಾನ್‌ ಸೋಂಕಿನ ಎರಡು ಪ್ರಕರಣಗಳು ಪತ್ತೆಯಾದ ನಂತರ, ಹಾಗೂ ಮತ್ತಷ್ಟು ಸೋಂಕು ಪತ್ತೆಯಾಗಲಿದೆ ಎಂಬ ಶಂಕೆಯ ನಡುವೆಯೇ 10 ದಕ್ಷಿಣ ಆಫ್ರಿಕಾದ ಪ್ರಜೆಗಳು ಬೆಂಗಳೂರಿನಲ್ಲಿ ಪತ್ತೆಯಾಗದಿರುವುದು ರಾಜ್ಯ ಆರೋಗ್ಯ ಇಲಾಖೆಯನ್ನು ಚಿಂತೆಗೀಡು ಮಾಡಿದೆ.ಈ ದಕ್ಷಿಣ ಆಫ್ರಿಕಾದ ಪ್ರಜೆಗಳು ನವೆಂಬರ್ 12 ಮತ್ತು 22 ರ ನಡುವೆ ಬೆಂಗಳೂರಿಗೆ ಬಂದಿದ್ದಾರೆ. ಓಮಿಕ್ರಾನ್ ಪ್ರಕರಣಗಳ ಪತ್ತೆಯ ನಂತರ ಹೆಚ್ಚಿನ ಅಲರ್ಟ್‌ನಲ್ಲಿರುವ ಆರೋಗ್ಯ ಇಲಾಖೆ ಈ ವ್ಯಕ್ತಿಗಳನ್ನು ಪರೀಕ್ಷಿಸಲು ಬಯಸಿತ್ತು, ಆದರೆ ಅವರು ನಾಪತ್ತೆಯಾಗಿದ್ದಾರೆ ಎಂದು ತಿಳಿದುಬಂದಿದೆ.

ಎಲ್ಲರ ಫೋನ್​​​ ಸ್ವಿಚ್ಡ್​ ಆಫ್​!

ಬೆಂಗಳೂರು ವಿಮಾನ ನಿಲ್ದಾಣದಲ್ಲಿ ಆ ಆಫ್ರಿಕಾ ಮೂಲದವರು ನೀಡಿದ್ದ ವಿಳಾಸದಲ್ಲಿ ಅವರು ಪತ್ತೆಯಾಗಿಲ್ಲ. ಅಲ್ಲದೆ, ಅವರ ಮೊಬೈಲ್‌ ಫೋನ್‌ಗಳು ಸಹ ಸ್ವಿಚ್‌ ಆಫ್‌ ಆಗಿದ್ದವು. ಈ 10 ಮಂದಿ ದಕ್ಷಿಣ ಆಫ್ರಿಕಾದವರು ಸೇರಿದಂತೆ ಹೆಚ್ಚಿನ ಅಪಾಯದ ದೇಶಗಳಿಂದ 57 ಜನರು ಆಗಮಿಸಿದ್ದಾರೆ ಎಂದೂ ತಿಳಿದುಬಂದಿದೆ. ಈ ವ್ಯಕ್ತಿಗಳನ್ನು ಟ್ರ್ಯಾಕ್‌ ಮಾಡಿ ಟ್ರೇಸ್‌ ಮಾಡಲು ರಾಜ್ಯ ಆರೋಗ್ಯ ಇಲಾಖೆ ಈಗಾಗಲೇ ಪೊಲೀಸರನ್ನು ಸಂಪರ್ಕಿಸಿದೆ. ಓಮಿಕ್ರಾನ್ ವೈರಸ್ ಇರುವಿಕೆಯ ಬಗ್ಗೆ ಸ್ಪಷ್ಟತೆ ಪಡೆಯಲು ಎಲ್ಲಾ ಮಾದರಿಗಳನ್ನು ಜೀನೋಮಿಕ್ ಸೀಕ್ವೆನ್ಸಿಂಗ್ ಪರೀಕ್ಷೆಗಳಿಗೆ ಕಳುಹಿಸಲು ಯೋಜಿಸಿರುವ ಹಿನ್ನೆಲೆ ಇವರನ್ನು ಪತ್ತೆಹಚ್ಚಲಾಗುತ್ತಿದೆ ಎನ್ನಲಾಗಿದೆ.

ಇದನ್ನು ಓದಿ: Omicron ಬಂತು, ಈ ವಯೋಮಾನದವರು ಎಕ್ಸ್​ಟ್ರಾ ಡೋಸ್ ತಗೋಬೇಕು ಅಂತಿದಾರೆ ವಿಜ್ಞಾನಿಗಳು

ಯಾವುದೇ ಮಾಹಿತಿ ಇಲ್ಲ ಎಂದ ಗೌರವ್​ ಗುಪ್ತಾ

ಈ ಬಗ್ಗೆ ಪ್ರಶ್ನಿಸಿದ ಬಿಬಿಎಂಪಿ ಮುಖ್ಯ ಆಯುಕ್ತ ಗೌರವ್ ಗುಪ್ತಾ, ಈ ವಿಷಯದ ಬಗ್ಗೆ ನನಗೆ ಯಾವುದೇ ನೇರ ಮಾಹಿತಿ ಇಲ್ಲ. ಸಂಪರ್ಕ ಟ್ರೇಸಿಂಗ್ ನಿರಂತರ ಪ್ರಕ್ರಿಯೆ ಎಂದು ನಾನು ಹೇಳಬಲ್ಲೆ ಮತ್ತು ಅವು ಕಂಡುಬಂದಿಲ್ಲವಾದರೆ, ಪರಿಸ್ಥಿತಿಯನ್ನು ಎದುರಿಸಲು ಪ್ರಮಾಣಿತ ಪ್ರೋಟೋಕಾಲ್‌ಗಳಿವೆ. ಯಾವುದೇ ಪರಿಸ್ಥಿತಿಯನ್ನು ಎದುರಿಸಲು ನಾವು ಸಿದ್ಧರಿದ್ದೇವೆ ಎಂದು ಪ್ರತಿಕ್ರಿಯೆ ನೀಡಿದರು.


ಇದನ್ನು ಓದಿ : Omicron in Bengaluru: ಓಮಿಕ್ರಾನ್ ಪತ್ತೆಯಾಗಿದ್ದು ಹೇಗೆ? ಅದರ ಲಕ್ಷಣಗಳೇನು?


ನವೆಂಬರ್ 22ರಿಂದ ಬೆಂಗಳೂರಿನ ದೇವನಹಳ್ಳಿಯಲ್ಲಿರುವ ಕೆಂಪೇಗೌಡ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ಓಮಿಕ್ರಾನ್‌ ವೈರಸ್‌ ಸಂಬಂಧ ಕಟ್ಟುನಿಟ್ಟಿನ ಕ್ರಮಗಳನ್ನು ಪ್ರಾರಂಭಿಸಲಾಯಿತು. ಆದರೆ ಈ ವ್ಯಕ್ತಿಗಳು ಅದಕ್ಕೂ ಮೊದಲು ಬೆಂಗಳೂರಿಗೆ ಬಂದಿದ್ದಾರೆ ಎಂದು ಸರ್ಕಾರ ಮಾಹಿತಿ ನೀಡಿದೆ. ಮೊದಲೇ ಓಮಿಕ್ರಾನ ಅಬ್ಬರ ಜೋರಾಗಿದೆ. ಈ ರೂಪಾಂತರಿ ವೈರಸ್​ ಅತಿ ವೇಗವಾಗಿ ಒಬ್ಬರಿಂದ ಮತ್ತೊಬ್ಬರಿಗೆ ಹರಡುತ್ತೆ. ಹೀಗಿರುವಾಗ ದಕ್ಷಿಣ ಆಫ್ರಿಕಾದಿಂದ ಬೆಂಗಳೂರಿಗೆ ಬಂದ 10 ಮಂದಿ ನಾಪತ್ತೆಯಾಗಿದ್ದಾರೆ. ಈ ವಿಚಾರ ತಿಳಿದು ರಾಜ್ಯ ರಾಜಧಾನಿ ಜನ ಬೆಚ್ಚಿ ಬಿದ್ದಿದ್ದಾರೆ.
First published: