BPL ಕುಟುಂಬಗಳಲ್ಲಿ ಯಾರೇ ಕೊರೊನಾದಿಂದ ಮೃತಪಟ್ಟಿದ್ದರೂ ₹1 ಲಕ್ಷ ಪರಿಹಾರ: ಸರ್ಕಾರದ ಹೊಸ ಆದೇಶ

ದುಡಿಯುತ್ತಿದ್ದ ವ್ಯಕ್ತಿಯ ಸಾವಿಗೆ ಮಾತ್ರ ಪರಿಹಾರ ಎಂಬ ನಿಬಂಧನೆಯನ್ನು ತೆಗೆದು ಹಾಕಲಾಗಿದೆ. ಇದೀಗ ಬಿಪಿಎಲ್ ಕುಟುಂಬದ ಯಾವುದೇ ಸದಸ್ಯ ಕೊರೊನಾದಿಂದ ಮೃತರಾಗಿದ್ದರೂ 1 ಲಕ್ಷ ರೂ. ಪರಿಹಾರ ನೀಡಲಾಗುವುದು.

ಸಾಂದರ್ಭಿಕ ಚಿತ್ರ

ಸಾಂದರ್ಭಿಕ ಚಿತ್ರ

  • Share this:
ಬೆಂಗಳೂರು: ಕೊರೊನಾ (Corona) ಎರಡೂ ಅಲೆಗಳಲ್ಲೂ ಸಾವಿರಾರು ಮಂದಿ ಸೋಂಕಿಗೆ ಬಲಿಯಾಗಿದ್ದರು. ಕೊರೊನಾದಿಂದ ಮೃತಪಟ್ಟ (Corona Death) ಬಡವರ ಕುಟುಂಬಗಳಿಗೆ ಪರಿಹಾರ (Compensation) ನೀಡುವ ನಿಟ್ಟಿನಲ್ಲಿ ರಾಜ್ಯ ಸರ್ಕಾರ (Karnataka Govt) 1 ಲಕ್ಷ ರೂ. ಪರಿಹಾರ ಘೋಷಿಸಿತ್ತು. ಬಿಪಿಎಲ್  ಕಾರ್ಡ್​​ ಹೊಂದಿರುವ ಕುಟುಂಬದ ದುಡಿಯುವ ವ್ಯಕ್ತಿ ಕೊರೊನಾ ಸೋಂಕಿನಿಂದ ಮೃತಪಟ್ಟಿದ್ದರೆ, ಒಂದು ಕುಟುಂಬದಲ್ಲಿ ಆ ರೀತಿಯ ಒಬ್ಬರಿಗೆ ಮಾತ್ರ ಪರಿಹಾರ ನೀಡುವುದಾಗಿ ಈ ಮೊದಲು ತಿಳಿಸಿತ್ತು. ಈಗ ಆ ನಿಯಮಕ್ಕೆ ಬದಲಾವಣೆ ತರಲಾಗಿದೆ. ಬಿಪಿಎಲ್ ಕುಟುಂಬದ ಯಾವುದೇ ವ್ಯಕ್ತಿ ಕೊರೊನಾದಿಂದ ಮೃತರಾಗಿದ್ದರೆ, ಅವರ ಕುಟುಂಬಕ್ಕೆ 1 ಲಕ್ಷ ಪರಿಹಾರ ನೀಡುವುದಾಗಿ ಘೋಷಿಸಲಾಗಿದೆ. ದುಡಿಯುತ್ತಿದ್ದ ವ್ಯಕ್ತಿಯ ಸಾವಿಗೆ ಮಾತ್ರ ಪರಿಹಾರ ಎಂಬ ನಿಬಂಧನೆಯನ್ನು ತೆಗೆದು ಹಾಕಲಾಗಿದೆ. ಇದೀಗ ಬಿಪಿಎಲ್ ಕುಟುಂಬದ ಯಾವುದೇ ಸದಸ್ಯ ಕೊರೊನಾದಿಂದ ಮೃತರಾಗಿದ್ದರೂ 1 ಲಕ್ಷ ರೂ. ಪರಿಹಾರ ನೀಡಲಾಗುವುದು. ಪರಿಹಾರ ನೀಡಲು ಕೊವಿಡ್‌ನಿಂದ ಮೃತ ಪಟ್ಟ ವ್ಯಕ್ತಿಯ ವಯಸ್ಸಿನ ನಿಬಂಧನೆಯೂ ಇಲ್ಲ. ಹೊಸದಾಗಿ ತಿದ್ದುಪಡಿ ಆದೇಶವನ್ನು ಸರ್ಕಾರ ಹೊರಡಿಸಿದೆ.

ಸರ್ಕಾರದ ಆದೇಶದ ಪ್ರತಿ


ನಾಳೆ ಸಿಎಂ ತುರ್ತು ಸಭೆ  

ಇನ್ನು ರಾಜ್ಯದಲ್ಲಿ ಓಮಿಕ್ರಾನ್​​ ಸೋಂಕು ಪತ್ತೆಯಾಗಿರುವ ಹಿನ್ನೆಲೆಯಲ್ಲಿ ನಾಳೆ (ಡಿ.3) ಮಧ್ಯಾಹ್ನ 1ಗಂಟೆಗೆ ಸಿಎಂ ತುರ್ತು ಸಭೆ ಕರೆದಿದ್ದಾರೆ. ಗೃಹ ಕಚೇರಿ ಕೃಷ್ಣಾದಲ್ಲಿ ಒಮಿಕ್ರಾನ್ ನಿಯಂತ್ರಣ ಹಾಗೂ ಹಲವು ಕಠಿಣ ಕ್ರಮ ಸಂಬಂಧ ಸಭೆ ನಡೆಯಲಿದೆ. ನಾಳೆ ಸಿಎಂ ಬಸವರಾಜ್ ಬೊಮ್ಮಾಯಿ, ಆರೋಗ್ಯ ಸಚಿವ ಸುಧಾಕರ ನೇತೃತ್ವದ ಸಭೆ ನಡೆಯಲಿದೆ. ಸಭೆಯಲ್ಲಿ ಹಲವಾರು ವಿಚಾರಗಳನ್ನು ಚರ್ಚೆ ಮಾಡಲಿದ್ದಾರೆ. ಓಮಿಕ್ರಾನ್ ನಿಯಂತ್ರಣವನ್ನು ಹೇಗೆ ಮಾಡಬೇಕು ಎಂಬುವ ಬಗ್ಗೆ ಬಹು ಮುಖ್ಯವಾಗಿ ಚರ್ಚೆಯಾಗಲಿದೆ.

ಇದನ್ನೂ ಓದಿ: ಭಾರತಕ್ಕೆ ಕಾಲಿಟ್ಟೇ ಬಿಡ್ತು ಓಮಿಕ್ರಾನ್ ವೈರಸ್: ಬೆಂಗಳೂರಲ್ಲಿ 2 Omicron ಕೇಸ್​ ದೃಢ

ಪ್ರಮುಖವಾಗಿ ಚರ್ಚೆ ಆಗಲಿರುವ ವಿಚಾರಗಳು

* ಏರ್ ಪೋರ್ಟ್ ಗಳಲ್ಲಿ ಯಾವೆಲ್ಲಾ ಕಠಿಣ ಕ್ರಮಗಳನ್ನು ಕೈಗೊಳ್ಳಬೇಕು?

* ಓಮಿಕ್ರಾನ್ ಬಂದವರನ್ನು ಇನ್ಮುಂದೆ ಯಾವ ರೀತಿಯಲ್ಲಿ ನೋಡಿಕೊಳ್ಳಬೇಕು?

* ಸದ್ಯಕ್ಕೆ ನಮ್ಮ ಬಳಿ ಇರುವ ಆಸ್ಪತ್ರೆ, ವೈದ್ಯಕೀಯ ಸೌಲಭ್ಯಗಳು, ವೈದ್ಯರ ಸೌಲಭ್ಯ ಎಷ್ಟರಮಟ್ಟಿಗೆ ಇದೆ?

* ವ್ಯಾಕ್ಸಿನ್ ಎಷ್ಟರ ಮಟ್ಟಿಗೆ ಹೆಚ್ಚಿಗೆ ಮಾಡಬೇಕು. ಟೆಸ್ಟ್ ಗಳನ್ನು ಎಷ್ಟು ಹೆಚ್ಚಿಸಬೇಕು. ರ್ಯಾಂಡಮ್ ಟೆಸ್ಟ್ ಅವಶ್ಯಕತೆ ಇದೆಯಾ?

* ಹೊಸ ವರ್ಷದ ಆಚರಣೆ, ಕ್ರಿಸ್ ಮಸ್ ಹಿನ್ನೆಲೆ ದೊಡ್ಡ ಮಟ್ಟದಲ್ಲಿ ಆಚರಣೆ ಮಾಡುವ ಸಾಧ್ಯತೆ ಇದೆ. ಇವುಗಳಿಗೆ ಯಾವ ರೀತಿಯಲ್ಲಿ ರೂಲ್ಸ್ ತರಬೇಕು?

* ಬೆಳಗಾವಿ ಚಳಿಗಾಲದ ಅಧಿವೇಶನ ಅಲ್ಲೇ ಮಾಡಬೇಕಾ? ಅಥವಾ ಬೆಂಗಳೂರಿನಲ್ಲಿ ಮಾಡಬೇಕಾ?

* ಈ ಹಿಂದೆ ಕೊರೊನಾ ಮೊದಲ ಹಂತದಲ್ಲಿ ಹಾಗೂ ಎರಡನೇ ಹಂತದಲ್ಲಿ ತಂತ ಟಫ್ ರೂಲ್ಸ್ ಗಳನ್ನು ತರಬೇಕಾ?

* ಸಭೆ, ಸಮಾರಂಭಗಳಿಗೆ ಬ್ರೇಕ್ ಹಾಕಬೇಕಾ?

* ಮದುವೆ, ನಾಮಕರಣ, ಗೃಹ ಪ್ರವೇಶಕ್ಕೆ ಎಷ್ಟು ಜನ ಸೇರಬೇಕು?

* ಸ್ವಿಮಿಂಗ್ ಫೂಲ್, ಜಿಮ್, ಸ್ಪೋರ್ಟ್ಸ್ ಕ್ಲಬ್ ಗಳಲ್ಲಿ ಎಷ್ಟು ಜನರಿಗೆ ಮಿತಿ ಮಾಡಬೇಕು?

* ರಾಜಕೀಯ ಸಮಾವೇಶ, ಜಾತ್ರೆಗಳು, ಹಬ್ಬಗಳು, ದೇವರ ಉತ್ಸವಗಳು, ಪ್ರತಿಭಟನೆಗಳಿಗೆ ಯಾವ ಮಟ್ಟದಲ್ಲಿ ನಿಯಂತ್ರಣ ತರಬೇಕು?

* ಸಿನಿಮಾ ಮಂದಿರಗಳು, ಮನರಂಜನಾ ಕಾರ್ಯಕ್ರಮಗಳು, ಮಾಲ್ಗಳು, ಪಬ್ಗಳು , ರೆಸ್ಟೋರೆಂಟ್ಗಳು, ಬಾರ್ಗಳು,  ಆರ್ಕೆಸ್ಟ್ರಾಗಳ ಕಾರ್ಯಕ್ರಮಗಳಲ್ಲಿ ನಿಯಂತ್ರಣ ಎಷ್ಟರಮಟ್ಟಿಗೆ ಇರಬೇಕು?

* ಫ್ಯಾಕ್ಟರಿ, ಗಾರ್ಮೆಂಟ್ಸ್, ಐಟಿ-ಬಿಟಿ ಕಂಪನಿಗಳು, ಸರ್ಕಾರಿ ಕಚೇರಿಗಳಲ್ಲಿ ಉದ್ಯೋಗಿಗಳನ್ನು ಎಷ್ಟು ಪ್ರಮಾಣದಲ್ಲಿ ಬಳಸಿಕೊಳ್ಳಬೇಕು?

* ಶಾಲೆ, ಕಾಲೇಜು, ವಿಶ್ವವಿದ್ಯಾಲಯಗಳಲ್ಲಿ ಪಾಠಗಳು ಯಾವ ಮಟ್ಟದಲ್ಲಿ ನಡೆಸಬೇಕು?

ಹೀಗೆ ಹಲವಾರು ವಿಚಾರಗಳು ನಾಳೆಯ ಸಭೆಯಲ್ಲಿ ಚರ್ಚೆಯಾಗಲಿವೆ.
Published by:Kavya V
First published: