ಬೆಂಗಳೂರು: ಹಗಲು ರಾತ್ರಿ ಎನ್ನದೆ ಕಷ್ಟ ಪಟ್ಟು ಓದಿ ಪರೀಕ್ಷೆ (Exam) ಬರೆದು, ಉತ್ತಮ ಫಲಿತಾಂಶದ (Result) ನಿರೀಕ್ಷೆಯಲ್ಲಿದ್ದ ವಿದ್ಯಾರ್ಥಿಗಳಿಗೆ ಬೆಂಗಳೂರು ನಗರ ವಿಶ್ವವಿದ್ಯಾಲಯ (Bangalore University) ಶಾಕ್ ಕೊಟ್ಟಿದೆ. ಬೆಂಗಳೂರು ನಗರ ವಿಶ್ವವಿದ್ಯಾಲಯ ಇತ್ತೀಚೆಗೆ ಎಡವಟ್ಟು ಮೇಲೆ ಎಡವಟ್ಟು ಮಾಡುತ್ತಿದೆ. ವಿದ್ಯಾರ್ಥಿಗಳ (Students) ಪರೀಕ್ಷೆ ಫಲಿತಾಂಶವನ್ನೇ ಬುಡಮೇಲು ಮಾಡಿರುವುದು ವಿದ್ಯಾರ್ಥಿಗಳ ಆಕ್ರೋಶಕ್ಕೆ ಕಾರಣವಾಗಿದೆ. ಬೇಕಾಬಿಟ್ಟಿಯಾಗಿ ಮೌಲ್ಯಮಾಪನ (Evaluation) ನಡೆಸಿರುವ ವಿಶ್ವವಿದ್ಯಾಲಯದ ವಿರುದ್ಧ ವಿದ್ಯಾರ್ಥಿಗಳು ಆಕ್ರೋಶ ಹೊರಹಾಕಿದ್ದಾರೆ. ವಿವಿ ವ್ಯಾಪ್ತಿಗೆ ಒಳಪಡುವ ನೂರಾರು ಕಾಲೇಜು (College) ವಿದ್ಯಾರ್ಥಿಗಳ ಫಲಿತಾಂಶ ಅತಂತ್ರವಾಗಿದೆ.
ವಿಶ್ವವಿದ್ಯಾಲಯದ ವಿರುದ್ಧ ಸಿಡಿದೆದ್ದ ವಿದ್ಯಾರ್ಥಿಗಳು
ಅಂತಿಮ ವರ್ಷದ ಬಿಕಾಂ ವಿದ್ಯಾರ್ಥಿ ಒಬ್ಬರಿಗೆ UUCMS (Unified University And College Management System) ಹಾಗೂ ರಿಸಲ್ಟ್ ಶೀಟ್ನಲ್ಲಿ ಕೇವಲ 4 ಅಂಕ ಬಂದಿದೆ. ಅನುಮಾನಗೊಂಡ ಬಳಿಕ ವಿದ್ಯಾರ್ಥಿ ಉತ್ತರ ಪತ್ರಿಕೆಯ ನಕಲು ಪಡೆದು ನೋಡಿದರೆ, 49 ಅಂಕ ಬಂದಿದೆ.
ಇದನ್ನೂ ಓದಿ: Kodagu: ಮಕ್ಕಳಿಗೆ ಉಂಗುರ ಕೊಡುವ ಮುನ್ನ ಹುಷಾರ್; ರಿಂಗ್ ನುಂಗಿ 8 ತಿಂಗಳ ಕಂದಮ್ಮ ಸಾವು
ಮುಂದೆ ಸ್ನಾತಕೋತ್ತರ ಪದವಿಗೆ ಪ್ರವೇಶ ಪಡೆಯುವ ನೂರಾರು ವಿದ್ಯಾರ್ಥಿಗಳ ಈ ರೀತಿಯ ಅತಂತ್ರ ಫಲಿತಾಂಶ ಮಾರಕ ಎಂದು ಬೆಂಗಳೂರು ನಗರ ವಿಶ್ವವಿದ್ಯಾಲಯದ ವಿರುದ್ಧ ವಿದ್ಯಾರ್ಥಿಗಳು ಸಿಡಿದೆದ್ದಿದ್ದಾರೆ.
ಶೀಘ್ರವೇ ವಿದ್ಯಾರ್ಥಿಗಳ ಸಮಸ್ಯೆ ಬಗೆಹರಿಸಲಾಗುತ್ತೆ
ಬೆಂಗಳೂರು ನಗರ ವಿಶ್ವವಿದ್ಯಾಲಯದ ವ್ಯಾಪ್ತಿಗೆ 240ಕ್ಕೂ ಅಧಿಕ ಕಾಲೇಜುಗಳು ಸೇರಿವೆ. ಸಾವಿರಾರು ವಿದ್ಯಾರ್ಥಿಗಳು ವ್ಯಾಸಾಂಗ ಮಾಡುತ್ತಿದ್ದಾರೆ. ಮೌಲ್ಯಮಾಪಕರು ಕಣ್ಣು ಮುಚ್ಚಿಕೊಂಡು ಮೌಲ್ಯಮಾಪನ ಮಾಡುತ್ತಿದ್ದಾರೆ. ವಿದ್ಯಾರ್ಥಿಗಳ ಭವಿಷ್ಯದ ಜೊತೆ ಚೆಲ್ಲಾಟ ಆಡುತ್ತಿದ್ದಾರೆ ಅಂತ ವಿದ್ಯಾರ್ಥಿಗಳು ಸಿಡಿಮಿಡಿಗೊಂಡಿದ್ದಾರೆ.
ವಿದ್ಯಾರ್ಥಿಗಳ ಸಮಸ್ಯೆ ದೂರ ಮಾಡುವ ಕೆಲಸ ಮಾಡಿದ್ದೇವೆ
ಇನ್ನೂ ಈ ಬಗ್ಗೆ ಬೆಂಗಳೂರು ನಗರ ವಿಶ್ವವಿದ್ಯಾಲಯದ ಮೌಲ್ಯಮಾಪನ ಕುಲಸಚಿವರನ್ನ ಕೇಳಿದರೆ, ಸಿಸ್ಟಂನಲ್ಲಿ ಫಲಿತಾಂಶ ಅಪ್ಲೋಡ್ ಮಾಡುವ ವೇಳೆ ಈ ರೀತಿಯ ಅಚಾತುರ್ಯ ಸಂಭವಿಸಿರಬಹುದು. ಶೀಘ್ರವೇ ವಿದ್ಯಾರ್ಥಿಗಳ ಸಮಸ್ಯೆ ಬಗೆಹರಿಸಲಾಗುತ್ತೆ ಎಂದಿದ್ದಾರೆ.
ಆದರೆ ಈ ಬಗ್ಗೆ ಸ್ಪಷ್ಟನೆ ನೀಡಿರುವ ಬೆಂಗಳೂರು ನಗರ ವಿಶ್ವ ವಿದ್ಯಾಲಯದ ಮೌಲ್ಯಮಾಪನ ಕುಲಸಚಿವ ಲೋಕೇಶ್ ಅವರು, ಎರಡು ಕಡೆ ಸಮಸ್ಯೆ ಆಗಿರಬಹುದು, ಕಂಪ್ಯೂಟರ್ ಆಪ್ಲೋಡ್ ಮಾಡುವ ಸಂದರ್ಭ ಅಥವಾ ಶಿಕ್ಷಕರ ಮಾರ್ಕ್ಸ್ ಕೌಂಟ್ ಮಾಡುವ ಸಂದರ್ಭದಲ್ಲಿ ಇಂತಹ ಸಮಸ್ಯೆಗಳು ಆಗುತ್ತವೆ. ಈಗಾಗಲೇ ವಿದ್ಯಾರ್ಥಿಗಳ ಸಮಸ್ಯೆಯನ್ನು ದೂರ ಮಾಡುವ ಕೆಲಸ ಮಾಡಿದ್ದೇವೆ ಎಂದು ಹೇಳಿದರು.
ಇದನ್ನೂ ಓದಿ: Crime News: ಮೆಜೆಸ್ಟಿಕ್ನಲ್ಲಿ ಚಾಕು ಇರಿತದಿಂದ ಓರ್ವ ಸಾವು, ಅತ್ತ ಗಲಾಟೆಯಲ್ಲಿ ಯುವಕನ ಕೈ ಕಟ್!
ವಿಶ್ವ ವಿದ್ಯಾಲಯ ಮಾಡಿದ ಎಡವಟ್ಟಿಗೆ ವಿದ್ಯಾರ್ಥಿಗಳ ಭವಿಷ್ಯ ಅತಂತ್ರ ಆಗುವ ಆತಂಕ ಸೃಷ್ಟಿಸಿದೆ. ಇನ್ನಾದರೂ ವಿದ್ಯಾರ್ಥಿಗಳ ಭವಿಷ್ಯವನ್ನ ಗಮದಲ್ಲಿಟ್ಟುಕೊಂಡು ಸಮರ್ಪಕವಾಗಿ ಮೌಲ್ಯಮಾಪನ ನಡೆಸಿ, ಫಲಿತಾಂಶ ನೀಡಿದರೆ ವಿದ್ಯಾರ್ಥಿಗಳಿಗೆ ಸಂಕಷ್ಟ ತಪ್ಪಲಿದೆ.
ಲಕ್ಷಾಂತರ ರೂಪಾಯಿ ಮೌಲ್ಯದ ಸೀರೆ ಜಪ್ತಿ
ಚಿಕ್ಕಮಗಳೂರಿನ ಜಯನಗರದಲ್ಲಿರೋ VRL ಲಾಜಿಸ್ಟಿಕ್ಸ್ ಗೋದಾಮಿನ ಮೇಲೆ ಪೊಲೀಸರ ದಾಳಿ ಮಾಡಿದ್ದಾರೆ. ಮತದಾರರಿಗೆ ಹಂಚಲು VRL ಟ್ರಾನ್ಸ್‌ಪೋರ್ಟ್ ಮೂಲಕ ಸೀರೇ ತರಿಸಲಾಗಿತ್ತು. ನಕಲಿ ವಿಳಾಸ, ಮೊಬೈಲ್ ನಂಬರ್ ನೀಡಿ ತರಿಸಿದ್ದ ಲಕ್ಷಾಂತರ ಮೌಲ್ಯದ ಸಾವಿರಾರು ಸೀರೆಗಳನ್ನು ಪೊಲೀಸರು ಜಪ್ತಿ ಮಾಡಿದ್ದಾರೆ. ಸೂರತ್‌ನ ಸ್ಯಾರಿ ಫ್ಯಾಕ್ಟರಿಯಿಂದ ಚಂದನ್ ಕುಮಾರ್ ಜೈನ್ ಹೆಸರಿನಲ್ಲಿ ಸೀರೆಗಳು ಚಿಕ್ಕಮಳೂರಿಗೆ ಬಂದಿದ್ವು. ಈ ಕುರಿತು ನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ