ಬೆಂಗಳೂರು: ಅಕ್ರಮವಾಗಿ ಯುವತಿಯೊಬ್ಬರ (Young Woman ) ಮೊಬೈಲ್ ಕರೆಗಳ (Mobile Call Data Record) ಮಾಹಿತಿ ಸಂಗ್ರಹ ಮಾಡಿದ್ದ ಆರೋಪದ ಮೇರೆಗೆ ಇಬ್ಬರು ಪೊಲೀಸ್ ಅಧಿಕಾರಿಗಳು (Police Officers) ಹಾಗೂ ಕೇಂದ್ರ ವಿಭಾಗದ ಸೂಪರಿಂಟೆಂಡೆಂಟ್ (Superintendent ) ಅವರನ್ನು ಅಮಾನತು ಮಾಡಿ ಕಮಿಷನರ್ ಪ್ರತಾಪ್ ರೆಡ್ಡಿ (Commissioner Pratap Reddy ) ಆದೇಶ ನೀಡಿದ್ದಾರೆ. ಕೇಂದ್ರ ವಿಭಾಗದ ಸೂಪರಿಂಟೆಂಡೆಂಟ್ ಸುರೇಶ್, ಪೂರ್ವ ವಿಭಾಗದ ತಾಂತ್ರಿಕ ಘಟಕದ ಹೆಡ್ ಕಾನ್ಸೌಟೆಬಲ್ ಸೋಮಶೇಖರ್ ಹಾಗೂ ಕಾನ್ಸ್ಟೇಬಲ್ ನಾಗರಾಜ್ ಅಮಾನತು (Suspension) ಆದ ಪೊಲೀಸ್ ಸಿಬ್ಬಂದಿಯಾಗಿದ್ದಾರೆ.
ಅಮಾನತು ಆಗಿರುವ ಸೂಪರಿಂಟೆಂಡೆಂಟ್ ಸುರೇಶ್ ಸ್ನೇಹಿತ ಯುವತಿಯೊಬ್ಬಳ ಸಿಡಿಆರ್- ಕಾಲ್ ಡೀಟೇಲ್ಸ್ ರೆಕಾರ್ಡ್ ಬೇಕು ಎಂದು ಕೇಳಿದ್ದನಂತೆ. ಸುರೇಶ್ ತನ್ನ ಆಪ್ತರಾದ ಸೋಮಶೇಖರ್ ಮತ್ತು ನಾಗರಾಜ್ ಗೆ ಸಿಡಿಆರ್ ಕೊಡಿಸುವಂತೆ ಸಹಾಯ ಕೇಳಿದ್ದನಂತೆ. ಇದರಂತೆ ಇಬ್ಬರೂ ಅಕ್ರಮವಾಗಿ ಸಿಡಿಆರ್ ಮಾಹಿತಿಯನ್ನು ತೆಗೆದು ಸುರೇಶ್ಗೆ ನೀಡಿದ್ದರಂತೆ.
ಇದನ್ನೂ ಓದಿ: Bengaluru: ಅತ್ತೆಯ ಕತ್ತು ಕೊಯ್ದು ಬರ್ಬರವಾಗಿ ಕೊಲೆಗೈದ ಅಳಿಯ; ಲಿಫ್ಟ್ ಗುಂಡಿಗೆ ಬಿದ್ದು 6 ವರ್ಷದ ಮಗು ಸಾವು
ಈ ಸಿಡಿಆರ್ ಮಾಹಿತಿಯನ್ನು ಖಾಸಗಿ ವ್ಯಕ್ತಿಗೆ ಸುರೇಶ್ ನೀಡಿದ್ದರಂತೆ. ಈ ವಿಚಾರ ಯುವತಿಗೆ ಗೊತ್ತಾಗಿ ಯುವತಿ ಹಿರಿಯ ಪೊಲೀಸ್ ಅಧಿಕಾರಿಗಳಿಗೆ ದೂರು ನೀಡಿ ಅಕ್ರಮ ಕೈಗೊಳ್ಳಲು ಮನವಿ ಮಾಡಿದ್ದರು. ಈ ಬಗ್ಗೆ ತನಿಖೆ ನಡೆಸಿದ್ದ ಸಿಸಿಬಿ ಅಧಿಕಾರಿಗಳು ಕಮಿಷನರ್ ಅವರಿಗೆ ವರದಿ ಸಲ್ಲಿಕೆ ಮಾಡಿದ್ದರು. ಈ ವರದಿ ಆಧರಿಸಿ ಮೂವರನ್ನು ಅಮಾನತುಗೊಳಿಸಿ ಕಮಿಷನರ್ ಪ್ರತಾಪ್ ರೆಡ್ಡಿ ಆದೇಶ ಹೊರಡಿಸಿದ್ದಾರೆ.
ಅಂತರರಾಜ್ಯ ಡ್ರಗ್ ಪೆಡ್ಲರ್ಗಳ ಬಂಧನ
ಮಾದಕ ವಸ್ತು (Narcotic Drugs) ಮಾರಾಟ ಮಾಡುತ್ತಿದ್ದ ಅಂತರರಾಜ್ಯ ಡ್ರಗ್ (Interstate Drug Pddlers) ಎಂಟು ಮಂದಿ ಪೆಡ್ಲರ್ಗಳನ್ನು ಅಮೃತಹಳ್ಳಿ ಪೊಲೀಸರು ಬಂಧನ ಮಾಡಿದ್ದಾರೆ. ಮಪೀನ್, ಮನ್ಸೂರ್, ಅಭಿಷೇಕ್, ಅಕ್ಷಯ್ ಶಿವನ್, ಅರ್ಜುನ್, ಅಖಿಲ್, ಜೋಯಲ್, ಪೃಥ್ವಿನ್ ಬಂಧಿತ ಆರೋಪಿಗಳಾಗಿದ್ದಾರೆ. ಬಂಧಿತರು ಕೇರಳ (Kerala) ಹಾಗೂ ಬೆಂಗಳೂರು (Bengaluru) ಮೂಲದ ಡ್ರಗ್ ಪೆಡ್ಲರ್ಗಳಾಗಿದ್ದು, ಬಂಧಿತರಿಂದ 50 ಲಕ್ಷ ರೂಪಾಯಿ ಮೌಲ್ಯದ ಮಾದಕವಸ್ತು ವಶಕ್ಕೆ ಪಡೆದುಕೊಂಡಿದ್ದಾರೆ. 740 ಗ್ರಾಂ ಮೆಥಕ್ಯೂಲನ್, 120 ಗ್ರಾಂ ಗಾಂಜಾ ಹಾಗೂ ಚರಸ್, ಎಂಡಿಎಂಎ ಡ್ರಗ್ಸ್ ವಶಕ್ಕೆ ಪಡೆದುಕೊಂಡಿದ್ದು, ಅಮೃತಹಳ್ಳಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲು ಮಾಡಿಕೊಂಡಿದ್ದಾರೆ.
ಬೆಂಗಳೂರು ವಿಶ್ವವಿದ್ಯಾಲಯದ ಅರಣ್ಯಕ್ಕೆ ಬೆಂಕಿ
ಬೆಂಗಳೂರು ವಿಶ್ವವಿದ್ಯಾಲಯದ (Bengaluru University) ಜ್ಞಾನ ಭಾರತಿ ಪೊಲೀಸ್ (Jnanabharathi) ಠಾಣೆಯ ಹಿಂಭಾಗ ಅರಣ್ಯ ಪ್ರದೇಶಕ್ಕೆ (Forest) ಬೆಂಕಿ ಬಿದ್ದಿದ್ದು, ಅರಣ್ಯ ಪ್ರದೇಶ ಧಗಧಗನೇ ಹೊತ್ತಿ ಉರಿದಿದೆ. ಮಧ್ಯಾಹ್ನ 3:30ರ ದುರ್ಘಟನೆ ನಡೆದಿದ್ದು, ಸುಮಾರು 5 ರಿಂದ 6 ಎಕರೆ ಅರಣ್ಯ ಬೆಂಕಿಗೆ ಆಹುತಿಯಾಗಿದೆ. ಬೆಂಗಳೂರು ವಿಶ್ವವಿದ್ಯಾಲಯ ಒಟ್ಟು 1,200 ಎಕರೆ ವಿಸ್ತೀರ್ಣ ಹೊಂದಿದ್ದು, ಘಟನೆಗೆ ನಿಖರ ಕಾರಣ ತಿಳಿದು ಬಂದಿಲ್ಲ. ಘಟನೆ ಕುರಿತು ಮಾಹಿತಿ ಪಡೆದ ಪೊಲೀಸರು ಸ್ಥಳಕ್ಕೆ ಆಗಮಿಸಿ ಅಗ್ನಿಶಾಮಕ ಸಿಬ್ಬಂದಿ (Firefighters) ನೆರವಿನೊಂದಿಗೆ ಬೆಂಕಿ ನಂದಿಸುವ ಕಾರ್ಯ ಮಾಡಿದ್ದಾರೆ.
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ