HOME » NEWS » State » BENGALURU TREE PARK BDA TO DEVELOP TREE PARKS IN BANGALORE UNDER BENGALURU VISION 2022 SCT

Bengaluru Tree Park: ಬೆಂಗಳೂರಿನ ಅಂದ ಹೆಚ್ಚಿಸಲು ತಲೆಯೆತ್ತಲಿದೆ ಟ್ರೀ ಪಾರ್ಕ್

Bangalore: ಬೆಂಗಳೂರಿನಲ್ಲಿ ಪ್ರಾಯೋಗಿಕವಾಗಿ ಅರ್ಕಾವತಿ ಬಡಾವಣೆ ಹಾಗೂ ಕೆಂಪೇಗೌಡ ಬಡಾವಣೆಯಲ್ಲಿ ಮೊದಲ ಟ್ರೀ ಪಾರ್ಕ್ ತಲೆ ಎತ್ತಲಿದೆ. ಕಡಿಮೆ ವೆಚ್ಚದಲ್ಲಿ ದೀರ್ಘಕಾಲಿಕವಾಗಿ ಉಳಿಯುವ ಮರಗಳನ್ನು ನೆಟ್ಟು ಬಿಡಿಎ ಟ್ರೀ ಪಾರ್ಕ್ ನಿರ್ಮಾಣ ಮಾಡಲಿದೆ.

news18-kannada
Updated:January 12, 2021, 3:52 PM IST
Bengaluru Tree Park: ಬೆಂಗಳೂರಿನ ಅಂದ ಹೆಚ್ಚಿಸಲು ತಲೆಯೆತ್ತಲಿದೆ ಟ್ರೀ ಪಾರ್ಕ್
ಸಾಂದರ್ಭಿಕ ಚಿತ್ರ
  • Share this:
ಬೆಂಗಳೂರು (ಜ. 12): ಗಾರ್ಡನ್ ಸಿಟಿ ಬೆಂಗಳೂರಿನ ಗಲ್ಲಿಗಲ್ಲಿಗಳಲ್ಲೂ ಪಾರ್ಕ್​ಗಳಿವೆ. ವಾಯು ವಿಹಾರಕ್ಕೆ, ವ್ಯಾಯಾಮಕ್ಕೆ ಎಲ್ಲದಕ್ಕೂ ಅಲ್ಲಿ ವ್ಯವಸ್ಥೆ ಕಲ್ಪಿಸಲಾಗಿದೆ. ಸಂಜೆ ಹಾಗೂ ಬೆಳ್ಳಂಬೆಳಗ್ಗೆ ಬೆಂಗಳೂರು ಮಂದಿ ಅಂಥಾ ಪಾರ್ಕ್ ನಲ್ಲಿ ಕಾಲ ಕಳೆಯುತ್ತಿರುವುದು ಬೆಂಗಳೂರಿನಲ್ಲಿ ಸಾಮಾನ್ಯ ದೃಶ್ಯ. ಈಗ ಬೆಂಗಳೂರಿನ ಅಂದ ಹೆಚ್ಚಿಸಲು ಮತ್ತೊಂದು ಹೈಟೆಕ್ ಪಾರ್ಕ್ ಕೂಡ ಬರಲಿದೆ. ಬಿಡಿಎ ಅಡಿಯಲ್ಲಿ ಬೆಂಗಳೂರಿನಲ್ಲಿ ಸದ್ಯದಲ್ಲೇ ಟ್ರೀ ಪಾರ್ಕ್ ನಿರ್ಮಾಣವಾಗಲಿದೆ.

ಇದು ಸ್ವಚ್ಛ ಹಾಗೂ ಸುಂದರ ಬೆಂಗಳೂರಿಗಾಗಿ ಬಿಡಿಎಯಿಂದ ಐತಿಹಾಸಿಕ ಹೆಜ್ಜೆಯಾಗಿದೆ. ಬೆಂಗಳೂರು ಅಭಿವೃದ್ದಿ ಪ್ರಾಧಿಕಾರದಿಂದ ಬೆಂಗಳೂರಿನಲ್ಲಿ ಟ್ರೀ ಪಾರ್ಕ್  ನಿರ್ಮಾಣ ಆಗಲಿದೆ. ಆರಂಭಿಕ ಹಂತದಲ್ಲಿ ಬಿಡಿಎ ವ್ಯಾಪ್ತಿಗೆ ಬರುವ ಎಲ್ಲಾ ಬಡಾವಣೆಯಲ್ಲಿ Tree Park ನಿರ್ಮಾಣ ಮಾಡಲು ನಿರ್ಧಾರ ಮಾಡಲಾಗಿದೆ. ಬೆಂಗಳೂರು ವಿಷನ್ -2022 ಅಡಿಯಲ್ಲಿ ಬಿಡಿಎ ಈ ಪಾರ್ಕ್ ಅನ್ನು ನಿರ್ಮಾಣ ಮಾಡಲಾಗುತ್ತಿದೆ. ಬೆಂಗಳೂರಿನಾದ್ಯಂತ ಸದ್ಯ ಇರುವ ಪಾರ್ಕ್ ಗಳಿಗಿಂತಲೂ ವಿಭಿನ್ನವಾಗಿರಲಿದೆ ಈ ಟ್ರೀ ಪಾರ್ಕ್. ಪ್ರಾಯೋಗಿಕವಾಗಿ ಅರ್ಕಾವತಿ ಬಡಾವಣೆ ಹಾಗೂ ಕೆಂಪೇಗೌಡ ಬಡಾವಣೆಯಲ್ಲಿ ಮೊದಲ ಟ್ರೀ ಪಾರ್ಕ್ ತಲೆ ಎತ್ತಲಿದೆ. ಕಡಿಮೆ ವೆಚ್ಚದಲ್ಲಿ ದೀರ್ಘಕಾಲಿಕವಾಗಿ ಉಳಿಯುವ ಮರಗಳನ್ನು ನೆಟ್ಟು ಬಿಡಿಎ ಟ್ರೀ ಪಾರ್ಕ್ ನಿರ್ಮಾಣ ಮಾಡಲಿದೆ.

ಸಾಮಾನ್ಯ ಪಾರ್ಕ್ ಗಳಿಗೆ ಈಗಾಗಲೇ ಕೋಟಿ ಕೋಟಿ ಲೆಕ್ಕದಲ್ಲಿ ನಿರ್ವಹಣಾ ವೆಚ್ಚ ಭರಿಸಲಾಗ್ತಿದೆ. ಆದರೆ ಆರಂಭದ ಒಂದು ವರ್ಷ ಮಾತ್ರ ನಿರ್ವಹಣೆ ಮಾಡಿ ನಂತರ ಅದರಷ್ಟಕ್ಕೇ ಮರಗಳು ಬೆಳೆಯುವಂತೆ ಮಾಡುವುದು ಈ ಟ್ರೀ ಪಾರ್ಕ್ ನ ಉದ್ದೇಶ. ನೀರಿನ ಬಳಕೆ, ಕೆಲಸಗಾರರು ಹಾಗೂ ವಿದ್ಯುಚ್ಛಕ್ತಿ ಅತಿ ಕಡಿಮೆ ರೀತಿಯಲ್ಲಿ ಟ್ರೀ ಪಾರ್ಕ್ ಗೆ ಬಳಕೆಯಾಗಲಿದೆ ಎಂಬುವುದು ಮತ್ತೊಂದು ವಿಶೇಷ. ನಗರದ ತಾಪಮಾನ ಈಗಾಗಲೇ ಕುಸಿದು ಹೋಗುತ್ತಿದೆ. ನಿಸರ್ಗದ ಜೊತೆ ಹೊಂದಿಕೊಳ್ಳುವ ಹಾಗೂ ಮನುಷ್ಯ‌ನ ದೇಹಕ್ಕೆ ಹೊಂದಿಕೊಳ್ಳುವ ಮರಗಳನ್ನು ಹೆಚ್ಚಿನ ಸಂಖ್ಯೆಯಲ್ಲಿ ನೆಡಲು ಚಿಂತಿಸಲಾಗಿದೆ.

ಇದನ್ನೂ ಓದಿ: Veerappan Web Series: ಕಾಡುಗಳ್ಳ ವೀರಪ್ಪನ್ ಕುರಿತ ವೆಬ್ ಸೀರೀಸ್​ಗೆ ಕೋರ್ಟ್​ ತಡೆಯಾಜ್ಞೆ

ಈಗಾಗಲೇ ಇದಕ್ಕೆ ಬೇಕಾಗಿರುವ ಎಲ್ಲಾ ರೀತಿಯ ಸಿದ್ಧತೆಗಳನ್ನು ಮಾಡಿಕೊಂಡಿರುವ BDA, ಬಡಾವಣೆಗಳ ಸುತ್ತ ಮರಗಳನ್ನು ನೆಟ್ಟು ಹೊರ ವೀಕ್ಷಣೆಗೆ ಮಿನಿ ಫಾರೆಸ್ಟ್ ರೀತಿಯಲ್ಲಿ ರೂಪಿಸುವುದೇ ಟ್ರೀ ಪಾರ್ಕ್ ನ ಮುಖ್ಯ ಉದ್ದೇಶ. ಬಿಡಿಎ ಅಧ್ಯಕ್ಷ ವಿಶ್ವನಾಥ್ ಅವರ ನೇತೃತ್ವದಲ್ಲಿ ರೂಪಿಸಿದ ತಂಡದಿಂದ ಹೊರ ಬಂದ ವಿನೂತ‌ನ ಪ್ಲ್ಯಾ‌ನ್ ಇದು. ಈಗಾಗಲೇ ಟ್ರೀ ಪಾರ್ಕ್ ಯೋಜನೆಯನ್ನು ಕೇಳಿ ಮುಂದಿನ ದಿನಗಳಲ್ಲಿ ರಾಜ್ಯದಲ್ಲೂ ಈ ಯೋಜನೆ ತರೋಣ ಅಂತ ಸಿಎಂ ಬಿಎಸ್​ ಯಡಿಯೂರಪ್ಪ ಹೇಳಿದ್ದಾರಂತೆ. ರಾಜ್ಯದ ಎಲ್ಲಾ ಪ್ರಾಧಿಕಾರ, ಕಾರ್ಪೋರೇಷನ್ ವ್ಯಾಪ್ತಿಯಲ್ಲಿ ಬರುವ ಬಡಾವಣೆಗಳಲ್ಲಿ ಮುಂದಿನ ದಿನಗಳಲ್ಲಿ ಟ್ರೀ ಪಾರ್ಕ್ ತಲೆ ಎತ್ತಲಿವೆಯಂತೆ.

ಸಾಮಾನ್ಯವಾಗಿ ಪಾರ್ಕ್ ನಲ್ಲಿ ಇರುವಂತೆ ವಾಕಿಂಗ್ ರೂಟ್, ಸಿಟ್ಟಿಂಗ್ ಏರಿಯಾ ಸೇರಿದ ಎಲ್ಲವನ್ನೂ Tree Park ಒಳಗೊಳ್ಳಲಿದೆ. ಬಿಡಿಎ ಅಧೀನದಲ್ಲಿರುವ ಬಡಾವಣೆ ಹಾಗೂ ಬಿಡಿಎ ಅನುಮೋದಿತ ಖಾಸಗಿ ಬಡಾವಣೆಗಳಲ್ಲೂ ಟ್ರೀ ಪಾರ್ಕ್ ನಿರ್ಮಾಣಗೊಳ್ಳಲಿದೆ. ಬಿಡಿಎಯ ಈ ಟ್ರೀ ಪಾರ್ಕ್ ಯೋಜನೆ ಯಶಸ್ವಿಯಾದರೆ, ಮುಂದಿನ ದಿನಗಳಲ್ಲಿ BMRDA, BBMPಯೂ ಬೆಂಗಳೂರಿ‌ನಾದ್ಯಂತ ಟ್ರೀ ಪಾರ್ಕ್ ನಿರ್ಮಿಸುವ ಲೆಕ್ಕಾಚಾರ ಇಟ್ಟುಕೊಂಡಿದೆ.(ವರದಿ: ಆಶಿಕ್ ಮುಲ್ಕಿ)
Published by: Sushma Chakre
First published: January 12, 2021, 3:52 PM IST
ಮತ್ತಷ್ಟು ಓದಿರಿ
ಮುಂದಿನ ಸುದ್ದಿ

Top Stories