ಬೆಂಗಳೂರು: ರಾಜಭವನದಲ್ಲಿ (Rajabhavana) ನೂತನ ಸಚಿವರ ಪ್ರಮಾಣ ವಚನ (Minister Oath Taking) ಸ್ವೀಕಾರ ಸಮಾರಂಭದ ಹಿನ್ನೆಲೆ ವಾಹನಗಳ ಸಂಚಾರದಲ್ಲಿ (Route Change) ಮಾರ್ಗ ಬದಲಾವಣೆ ಮಾಡಲಾಗಿದೆ. ಕೆ.ಅರ್ ಸರ್ಕಲ್‌ನಿಂದ ಗೋಪಾಲ ಗೌಡ ವೃತ್ತದವರೆಗೆ ವಾಹನಗಳ ಸಂಚಾರ ನಿರ್ಬಂಧಿಸಲಾಗಿದೆ. ವಾಹನ ಸವಾರರಿಗೆ ನೃಪತುಂಗ ರಸ್ತೆ ಹಾಗೂ ಕಬ್ಬನ್ ಪಾರ್ಕ್ ಒಳಭಾಗದ ರಸ್ತೆಯಲ್ಲಿ ಸಂಚರಿಸಲು ಅವಕಾಶ ಕಲ್ಪಿಸಲಾಗಿದೆ. ಕ್ವೀನ್ಸ್ ರಸ್ತೆಯಿಂದ ಬರುವ ವಾಹನಗಳನ್ನು ಪೊಲೀಸ್ ತಿಮ್ಮಯ್ಯ ವೃತ್ತದ ಕಡೆಗೆ ನಿರ್ಬಂಧಿಸಲಾಗಿದೆ. ಪೊಲೀಸ್ ತಿಮ್ಮಯ್ಯ ಸರ್ಕಲ್‌ನಿಂದ ರಾಜಭವನದ ರಸ್ತೆ ಹಾಗೂ ಬಸವೇಶ್ವರ ವೃತ್ತದವರೆಗೆ ವಾಹನ ಸಂಚಾರಕ್ಕೆ ನಿರ್ಬಂಧ ಹಾಕಲಾಗಿದೆ.
ಶಿವಾಜಿನಗರದಿಂದ ಪೊಲೀಸ್ ತಿಮ್ಮಯ್ಯ ಕಡೆಗೆ ಹೋಗುವ ಬಸ್‌ಗಳನ್ನು ಕ್ವಿನ್ಸ್ ಸರ್ಕಲ್ & ಸಿದ್ದಲಿಂಗಯ್ಯ ವೃತ್ತದ ಕಡೆಗೆ ಡೈವರ್ಟ್ ಮಾಡಲಾಗುತ್ತದೆ. ಬಸ್‌ಗಳು & ಗೂಡ್ಸ್ ವಾಹನಗಳು ಓಲ್ಡ್ ಹೈಗ್ರೌಂಡ್ ಜಂಕ್ಷನ್ನಿಂದ ಕಾಫಿ ಬೋರ್ಡ್ ಕಡೆಗೆ ಹೋಗುವುದನ್ನು ನಿರ್ಬಂಧಿಸಲಾಗಿದೆ.
ಈ ಕೆಳಕಂಡ ರಸ್ತೆಗಳಲ್ಲಿ ಯಾವುದೇ ವಾಹನ ನಿಲುಗಡೆ ಇರುವುದಿಲ್ಲ
*ರಾಜಭವನ ರಸ್ತೆ
*ಡಾ.ಬಿ.ಆರ್. ಅಂಬೇಡ್ಕರ್ ರಸ್ತೆ
*ಕ್ವೀನ್ಸ್ ರಸ್ತೆ
*ಇನ್‌ಪೆಂಟ್ರಿ ರಸ್ತೆ
*ಸ್ಯಾಂಕಿ ರಸ್ತೆ
*ಪ್ಯಾಲೇಸ್ ರಸ್ತೆ
*ಕಬ್ಬನ್ ರಸ್ತೆ.
ಪಾಸ್ ಇರುವ ವಾಹನಗಳು ರಾಜಭವನದ ಗೇಟ್ ಬಳಿ ಬಂದು ಗಣ್ಯರನ್ನು ಇಳಿಸಿ ಎಲ್.ಹೆಚ್. ಗೇಟ್‌ನ ಮೂಲಕ ತೆರಳಿ ಪಾರ್ಕಿಂಗ್ ಲಾಟ್‌ನಲ್ಲಿ ವಾಹನವನ್ನು ನಿಲ್ಲಿಸಿಕೊಳ್ಳಬೇಕು.
ಕಾರ್ಯಕ್ರಮಕ್ಕೆ ಬರುವ ಆಹ್ವಾನಿತರಿಗೆ ವಿಧಾನಸೌಧದ ಸಿಮೆಂಟ್ ಪಾರ್ಕಿಂಗ್, ನೆಹರು ತಾರಾಲಯ, ಎಂ.ಎಸ್. ಬಿಲ್ಡಿಂಗ್ ಒಳ ಭಾಗದಲ್ಲಿ ವಾಹನ ನಿಲುಗಡೆಗೆ ಅವಕಾಶ ನೀಡಲಾಗಿದೆ.
ಇದನ್ನೂ ಓದಿ: Karnataka Cabinet Expansion: ಇಂದು ನೂತನ ಸಚಿವರ ಪದಗ್ರಹಣ, 24 ಶಾಸಕರಿಗೆ 'ಮಂತ್ರಿಭಾಗ್ಯ' ಫಿಕ್ಸ್!
ಗಣ್ಯ ವ್ಯಕ್ತಿಗಳ ವಾಹನಗಳನ್ನು ವಿಧಾನಸೌಧದ ಪಶ್ಚಿಮ ದ್ವಾರ, ಉತ್ತರ ದ್ವಾರದ ಮುಂದಿನ ರಸ್ತೆಯಲ್ಲಿ, ವಿಕಾಸ ಸೌಧದ ಸೆಲ್ಲಾರ್‌ನ ಪಾರ್ಕಿಂಗ್ & ಶಾಸಕರ ಭವನದ ಪಾರ್ಕಿಂಗ್ ಸ್ಥಳಗಳಲ್ಲಿ ವಾಹನ ನಿಲುಗಡೆಗೆ ಅವಕಾಶ ಕಲ್ಪಿಸಲಾಗಿದೆ.
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ