Bengaluru Traffic: ವೀಕೆಂಡ್​ ಪ್ಲಾನ್​ನಲ್ಲಿದ್ದೀರಾ?; ಇಂದು ಬೆಂಗಳೂರಿನ ಈ ರಸ್ತೆಗಳಲ್ಲಿ ಹೋಗೋ ಮುನ್ನ ಎಚ್ಚರ!

ಈದ್ ಮಿಲಾದ್ ಹಿನ್ನೆಲೆಯಲ್ಲಿ ನಗರದ ಅನೇಕ ಕಡೆಗಳಲ್ಲಿ ಟ್ರಾಫಿಕ್​ ಜಾಮ್​ ಉಂಟಾಗಿದೆ. ಇದು ವಾಹನ ಸಂಚಾರ ಮಾಡುವವರಿಗೆ ಕಿರಿಕಿರಿ ಉಂಟು ಮಾಡಿದೆ. 

news18-kannada
Updated:November 10, 2019, 6:51 PM IST
Bengaluru Traffic: ವೀಕೆಂಡ್​ ಪ್ಲಾನ್​ನಲ್ಲಿದ್ದೀರಾ?; ಇಂದು ಬೆಂಗಳೂರಿನ ಈ ರಸ್ತೆಗಳಲ್ಲಿ ಹೋಗೋ ಮುನ್ನ ಎಚ್ಚರ!
ಸಾಂದರ್ಭಿಕ ಚಿತ್ರ.
news18-kannada
Updated: November 10, 2019, 6:51 PM IST
ಬೆಂಗಳೂರು (ನ.10): ನೀವು ವೀಕೆಂಡ್​ ಮಸ್ತಿಯಲ್ಲಿದ್ದೀರಾ? ಸಂಜೆ ವೇಳೆ ಎಲ್ಲಾದರೂ ಸುತ್ತಾಟ ಮಾಡುವ ಪ್ಲಾನ್​ನಲ್ಲಿದ್ದೀರಾ? ಹಾಗಿದ್ದರೆ ನಗರದ ಈ ರಸ್ತೆಗಳಲ್ಲಿ ಹೋದರೆ ಟ್ರಾಫಿಕ್​ ಜಾಮ್​ನಲ್ಲಿ ಸಿಕ್ಕಿ ಬೀಳೋದು ಪಕ್ಕಾ.

ಇಂದು ಈದ್ ಮಿಲಾದ್. ಈ ಹಿನ್ನಲೆಯಲ್ಲಿ ಮೆರವಣಿಗೆ ನಡೆಯಲಿದೆ. ಹೀಗಾಗಿ, ನೃಪತುಂಗ ರಸ್ತೆ ಬಂದ್ ಮಾಡಲಾಗಿದೆ. ಪರಿಣಾಮ ಕೆಆರ್ ಸರ್ಕಲ್ ಸುತ್ತಮುತ್ತ ಭಾರೀ ಟ್ರಾಫಿಕ್ ಜಾಮ್ ಉಂಟಾಗಿದೆ.  ಕಾರ್ಫೋರೇಷನ್ ಕಡೆಯಿಂದ ಓನ್ ವೇ ನಲ್ಲಿ ಬರುತ್ತಿರುವ ಮೆರವಣೆಗೆ ಬರುತ್ತಿದೆ. ಮೆರವಣಿಗೆಗೆ ಬಂದ ಮುಸ್ಲಿಮರು ನೃಪತುಂಗ ರಸ್ತೆಯ ವೈಎಂಸಿಎ ಮೈದಾನದಲ್ಲಿ ಸೇರುತ್ತಿದ್ದಾರೆ.

ಕೆಆರ್ ಸರ್ಕಲ್​ನಿಂದ ವಿಧಾನಸೌಧ ಕಡೆ ವಾಹನ ಸಂಚಾರಕ್ಕೆ ಅನುವು ಮಾಡಿಕೊಡಲಾಗಿದೆ. ಮೆಜೆಸ್ಟಿಕ್​ಗೆ ಸಂಚಾರ ಮಾಡಲು ವಿಧಾನಸೌಧದ ಬಳಿ ಯು ಟರ್ನ್ ಮಾಡಿಕೊಂಡು ಕೆ ಆರ್ ಸರ್ಕಲ್ ಆಗಮಿಸಿ ಬಳಿಕ ಮೈಸೂರು ಬ್ಯಾಂಕ್ ಸರ್ಕಲ್ ಮೂಲಕ ತೆರಳಬೇಕು. ಕಾರ್ಪೋರೇಷನ್ ಹೋಗುವವರು ವಿಧಾನ ಸೌಧ, ಇಂಡಿಯನ್ ಎಕ್ಸ್ ಪ್ರೆಸ್ ಮೂಲಕ ಚಿನ್ನಸ್ವಾಮಿ ಸ್ಟೇಡಿಯಂ ಬಳಿ ಬಂದು ಕಸ್ತೂರಿ​ಬಾ, ಕಂಠೀರವ ಸ್ಟೇಡಿಯಂ  ಮಾರ್ಗವಾಗಿ ಕಾರ್ಪೋರೇಷನ್​ ಬರಬೇಕು.

ಈದ್ ಮಿಲಾದ್ ಹಿನ್ನೆಲೆಯಲ್ಲಿ ನಗರದ ಅನೇಕ ಕಡೆಗಳಲ್ಲಿ ಟ್ರಾಫಿಕ್​ ಜಾಮ್​ ಉಂಟಾಗಿದೆ. ಇದು ವಾಹನ ಸಂಚಾರ ಮಾಡುವವರಿಗೆ ಕಿರಿಕಿರಿ ಉಂಟು ಮಾಡಿದೆ. ಹೀಗಾಗಿ ಈ ರಸ್ತೆಯಲ್ಲಿ ಹೋಗದಿರುವುದೇ ಉತ್ತಮ.

ಇದನ್ನೂ ಓದಿ: ವಿಚಾರಣೆ ಹೆಸರಲ್ಲಿ ಬೆಂಗಳೂರಿನ ಪೊಲೀಸರಿಂದ ಮಹಿಳೆ ಮೇಲೆ ನಡೆಯಿತು ಮಾರಣಾಂತಿಕ ಹಲ್ಲೆ

First published:November 10, 2019
ಮತ್ತಷ್ಟು ಓದಿರಿ
Loading...
ಮುಂದಿನ ಸುದ್ದಿ
Loading...