ಬೆಂಗಳೂರು ಟ್ರಾಫಿಕ್ ಪೊಲೀಸರಿಗೆ ಫೇಸ್ಬುಕ್ ಪ್ರಶಸ್ತಿಯ ಗರಿ; ಗೃಹ ಸಚಿವರಿಂದಲೂ ಪ್ರಶಂಸೆ


Updated:July 24, 2018, 8:52 PM IST
ಬೆಂಗಳೂರು ಟ್ರಾಫಿಕ್ ಪೊಲೀಸರಿಗೆ ಫೇಸ್ಬುಕ್ ಪ್ರಶಸ್ತಿಯ ಗರಿ; ಗೃಹ ಸಚಿವರಿಂದಲೂ ಪ್ರಶಂಸೆ
ಬೆಂಗಳೂರು ಟ್ರಾಫಿಕ್ ಪೊಲೀಸರ ಫೇಸ್ಬುಕ್ ಪೇಜ್

Updated: July 24, 2018, 8:52 PM IST
- ನ್ಯೂಸ್18 ಕನ್ನಡ

ಬೆಂಗಳೂರು(ಜು. 24): ಸಮಕಾಲೀನ ಜಾಗೃತ ಮಾಧ್ಯಮಗಳಲ್ಲಿ ಸೋಷಿಯಲ್ ಮೀಡಿಯಾ ಕೂಡ ಒಂದು. ಸೋಷಿಯಲ್ ಮೀಡಿಯಾದಲ್ಲಿ ಫೇಸ್ಬುಕ್ ಸದ್ಯ ಅತ್ಯಂತ ಪ್ರಬಲ ಮಾಧ್ಯಮ. ಈ ಫೇಸ್ಬುಕನ್ನು ಸದ್ಬಳಕೆ ಮಾಡಿಕೊಳ್ಳುತ್ತಿರುವ ಸರಕಾರ ಸಂಸ್ಥೆಗಳ ಸಂಖ್ಯೆ ಈಗೀಗ ಹೆಚ್ಚಾಗುತ್ತಿದೆ. ಈ ಪೈಕಿ ಬೆಂಗಳೂರಿನ ಪೊಲೀಸರು ಅಗ್ರಗಣ್ಯರೆಂದೇ ಹೇಳಬಹುದು. ಯಾವುದೇ ಸಾರ್ವಜನಿಕ ವ್ಯಕ್ತಿ ಫೇಸ್ಬುಕ್​ನಲ್ಲಿ ನೀಡುವ ದೂರಿಗೆ ಇವರು ತತ್​ಕ್ಷಣವೇ ಸ್ಪಂದಿಸುತ್ತಾರೆ. ಅಂತಹ ಹಲವು ನಿದರ್ಶನಗಳನ್ನು ನೀವು ಬೆಂಗಳೂರು ಟ್ರಾಫಿಕ್ ಪೊಲೀಸರ ಫೇಸ್ಬುಕ್ ಮತ್ತು ಟ್ವಿಟ್ಟರ್ ಹ್ಯಾಂಡಲ್​ಗಳಲ್ಲಿ ನೋಡಬಹುದು. ಇದಕ್ಕೆ ಪುಷ್ಟಿ ನೀಡುವಂತೆ ಸ್ವತಃ ಫೇಸ್ಬುಕ್ ಸಂಸ್ಥೆಯೇ ಬೆಂಗಳೂರು ಟ್ರಾಫಿಕ್ ಪೊಲೀಸರಿಗೆ ಪ್ರಶಂಸೆ ನೀಡಿದೆ. ಫೇಸ್ಬುಕ್​ನಲ್ಲಿ ಅತ್ಯಂತ ಸಕ್ರಿಯರಾಗಿರುವ ಹಾಗೂ ಜನಪ್ರಿಯತೆ ಹೊಂದಿರುವ ಸರಕಾರಿ ಸಂಸ್ಥೆ, ಸಚಿವಾಲಯಗಳು, ರಾಜಕೀಯ ಪಕ್ಷಗಳ ಟಾಪ್ ಪೇಜ್​ಗಳ ಪಟ್ಟಿಯಲ್ಲಿ ಬೆಂಗಳೂರಿನ ಟ್ರಾಫಿಕ್ ಪೊಲೀಸ್ ಕೂಡ ಸೇರಿದೆ. ಭಾರತದ ಟ್ರಾಫಿಕ್ ಪೊಲೀಸರ ಫೇಸ್ಬುಕ್ ಅಕೌಂಟ್​ಗಳ ಪೈಕಿ ಬೆಂಗಳೂರು ಟ್ರಾಫಿಕ್ ಪೊಲೀಸರ ಪುಟವು ಟಾಪ್-3 ಪಟ್ಟಿಯಲ್ಲಿ ಸ್ಥಾನ ಪಡೆದಿದೆ. 2017ರ ಜ.1ರಿಂದ ಡಿ.31ರವರೆಗಿನ ಅವಧಿಯಲ್ಲಿ ಫೇಸ್ಬುಕ್ ಪೇಜ್​ನಲ್ಲಿ ಆದ ಚಟುವಟಿಕೆಗಳ ಆಧಾರದ ಮೇಲೆ ಫೇಸ್ಬುಕ್ ಈ ರ್ಯಾಂಕಿಂಗ್ ನೀಡಿದೆ.

Loading...


ಫೇಸ್ಬುಕ್​ನಿಂದ ಪ್ರಶಂಸೆ ಪಡೆದ ಬೆಂಗಳೂರು ಟ್ರಾಫಿಕ್ ಪೊಲೀಸ್ ವಿಭಾಗಕ್ಕೆ ಗೃಹ ಸಚಿವ ಜಿ. ಪರಮೇಶ್ವರ್ ಕೂಡ ಶಹಬ್ಬಾಸ್ ಹೇಳಿ ಟ್ವೀಟ್ ಮಾಡಿದ್ದಾರೆ. ಬೆಂಗಳೂರು ಸಿಟಿ ಪೊಲೀಸ್ ಮತ್ತು ಟ್ರಾಫಿಕ್ ಪೊಲೀಸ್ ಎರಡೂ ವಿಭಾಗಗಳು ಸೋಷಿಯಲ್ ಮೀಡಿಯಾದಲ್ಲಿ ಸಕ್ರಿಯವಾಗಿವೆ. ಈ ಮೂಲಕ ಜನತೆಯೊಂದಿಗೆ ಪೊಲೀಸರು ನಿರಂತರ ಸಂಪರ್ಕದಲ್ಲಿದ್ದಾರೆ. ಫೇಸ್ಬುಕ್​ನ ಈ ಪ್ರಶಸ್ತಿಯು ಇದಕ್ಕೆ ದ್ಯೋತಕವಾಗಿದೆ ಎಂದು ಜಿ. ಪರಮೇಶ್ವರ್ ಅಭಿಪ್ರಾಯಪಟ್ಟಿದ್ದಾರೆ.
First published:July 24, 2018
ಮತ್ತಷ್ಟು ಓದಿರಿ
Loading...
ಮುಂದಿನ ಸುದ್ದಿ
Loading...