ಮೈಸೂರು ರಸ್ತೆಯಲ್ಲಿ ದಿನೇ ದಿನೇ ಟ್ರಾಫಿಕ್ ಜಾಮ್ ಹೆಚ್ಚಳ; ಸಂಚಾರ ದಟ್ಟಣೆ ನಿಯಂತ್ರಿಸಲು ಪೊಲೀಸರಿಂದ ಹೊಸ ಉಪಾಯ!

ಮೈಸೂರು ರಸ್ತೆಯಲ್ಲಿ ಹೆಚ್ಚಿನ ಟ್ರಾಫಿಕ್ ಇರುವುದರಿಂದ ಅಲ್ಲಿಯೇ ಔಟ್ ಪೋಸ್ಟ್ ತೆರೆದಿದ್ದು, ಅದರ ಮೂಲಕ ತಕ್ಕಮಟ್ಟಿನ ಟ್ರಾಫಿಕ್ ನಿವಾರಣೆ ಮಾಡಲು ಸಂಚಾರಿ ಪೊಲೀಸರು ಮುಂದಾಗಿದ್ದಾರೆ. ಜೊತೆಗೆ ಔಟ್ ಪೋಸ್ಟ್​ನಲ್ಲಿ ಎಎಸ್​ಐ ರ್ಯಾಂಕ್ ನ ಆಧಿಕಾರಿ ಯಾವಾಗಲೂ ಇದ್ದು, ಅದರ ಜವಾಬ್ದಾರಿ ನೋಡಿಕೊಳ್ಳುವಂತೆಯೂ ಹಿರಿಯ ಪೊಲೀಸ್ ಅಧಿಕಾರಿಗಳು ಸೂಚನೆ ನೀಡಿದ್ದಾರೆ.

ಬೆಂಗಳೂರಿನ ಮೈಸೂರು ರಸ್ತೆಯಲ್ಲಿ ಉದ್ಘಾಟಿಸಲಾದ ಔಟ್-ಪೋಸ್ಟ್.

ಬೆಂಗಳೂರಿನ ಮೈಸೂರು ರಸ್ತೆಯಲ್ಲಿ ಉದ್ಘಾಟಿಸಲಾದ ಔಟ್-ಪೋಸ್ಟ್.

  • Share this:
ಬೆಂಗಳೂರು: ಬೆಂಗಳೂರಿನಲ್ಲಿ ಲಾಕ್ ಡೌನ್ ಸಡಿಲಿಕೆ ಬಳಿಕ ದಿನೇ ದಿನೇ ಟ್ರಾಫಿಕ್ ಸಮಸ್ಯೆ ಹೆಚ್ಚಾಗುತ್ತಾ ಇದೆ. ಅದರಲ್ಲೂ ಮೈಸೂರು ರಸ್ತೆಯ ಬಗ್ಗೆ ಹೇಳತೀರದು. ಬೆಳಿಗ್ಗೆ 7-8 ಗಂಟೆಯಿಂದಲೇ ಫುಲ್ ಟ್ರಾಫಿಕ್ ಜಾಮ್ ಶುರುವಾಗುತ್ತದೆ.

ಈ ಬಗ್ಗೆ ಆಲೋಚನೆ ಮಾಡಿದ ಸಂಚಾರಿ ಪೊಲೀಸರು ಔಟ್ ಪೋಸ್ಟ್ ಒಂದನ್ನು ತೆರೆದಿದ್ದಾರೆ. ಔಟ್ ಪೋಸ್ಟ್​ನಲ್ಲಿ ಸಿಬ್ಬಂದಿಯನ್ನು ನಿಯೋಜನೆ ಮಾಡಿ ಟ್ರಾಫಿಕ್ ಸಮಸ್ಯೆಯನ್ನು ಕಡಿಮೆ ಮಾಡುವ ಉಪಾಯ ಸಂಚಾರಿ ಪೊಲೀಸರದ್ದಾಗಿದೆ. ಅದರಂತೆ ನಿನ್ನೆ ಸಂಚಾರಿ ವಿಭಾಗದ ಆಯುಕ್ತರಾದ ರವಿ ಕಾಂತೇಗೌಡ, ಪಶ್ಚಿಮ ವಿಭಾಗದ ಸಂಚಾರಿ ಡಿಸಿಪಿ ಸೌಮ್ಯಲತಾ ಹಾಗೂ ಬ್ಯಾಟರಾಯನಪುರ ಸಂಚಾರಿ ಪೊಲೀಸ್ ಠಾಣೆಯ ಇನ್​ಸ್ಪೆಕ್ಟರ್ ಗಿರಿರಾಜ್ ಔಟ್​ ಪೋಸ್ಟ್ ಉದ್ಘಾಟನೆ ಮಾಡಿದ್ದಾರೆ.

ಇದೇ ವೇಳೆ ಔಟ್ ಪೋಸ್ಟ್ ಮೇಲೆಯೇ ಪ್ರತಿಯೊಬ್ಬರು ಹೆಲ್ಮೆಟ್ ಕಡ್ಡಾಯವಾಗಿ ಬಳಸಿ ವಾಹನ ಚಲಾಯಿಸಿ, ಮದ್ಯಪಾನ ಮಾಡಿ ವಾಹನ ಚಲಾಯಿಸಬೇಡಿ, ಡ್ರೈವಿಂಗ್ ವೇಳೆ ಮೊಬೈಲ್ ಬಳಸಬೇಡಿ ಎಂದು ಸುಮಾರು 7ಕ್ಕೂ ಅಧಿಕ ಮಾರ್ಗಸೂಚಿಗಳನ್ನು ಬರೆದು ಸಾರ್ವಜನಿಕರಿಗೆ ಅರಿವು ಮೂಡಿಸುವ ಕಾರ್ಯ ಮಾಡಿದ್ದಾರೆ.

ಔಟ್​ ಪೋಸ್ಟ್ ಉದ್ಘಾಟನೆಯ ಬಳಿಕ ಸಂಚಾರಿ ಕಮೀಷನರ್, ನಗರದ ಟ್ರಾಫಿಕ್ ಪೊಲೀಸರ ಕಾರ್ಯವೈಖರಿಗೆ ಮೆಚ್ಚುಗೆ ಸಹ ವ್ಯಕ್ತ ಮಾಡಿದ್ದಾರೆ. ಜೊತೆಗೆ ಜಾಗ್ರತೆಯಿಂದ ಕೆಲಸ ಮಾಡುವಂತೆ ಸಿಬ್ಬಂದಿಗೆ ಸೂಚನೆ ನೀಡಿದ್ದಾರೆ. ಔಟ್ ಪೋಸ್ಟ್ ಉಸ್ತುವಾರಿ ನೋಡಿಕೊಳ್ಳುವ ಇನ್ಸ್​​ಪೆಕ್ಟರ್ ಗಿರಿರಾಜ್, ಕೊರೋನಾ ಹಾವಳಿ ಜಾಸ್ತಿಯಾಗುತ್ತಾ ಇದ್ದು ಸಿಬ್ಬಂದಿಯವರು ಆದಷ್ಟು ಮಾಸ್ಕ್, ಗ್ಲೌಸ್ ಹಾಗೂ ಸ್ಯಾನಿಟೈಸ್ ಬಳಸುವಂತೆ ಮನವಿ ಮಾಡಿದ್ದಾರೆ. ಜೊತೆಗೆ ಯಾವುದೇ ವಾಹನವನ್ನು ತಡೆದು ತಪಾಸಣೆ ಮಾಡದೆ ಅನುಮಾನ ಬಂದರೆ ದೂರದಿಂದಲೇ ಮಾತನಾಡುವಂತೆಯೂ ತಮ್ಮ ಸಿಬ್ಬಂದಿಗೆ ಹೇಳಿದ್ದಾರೆ.

ಇದನ್ನು ಓದಿ: Bangalore News: ಬೆಂಗಳೂರಿನ ಈ ಏರಿಯಾಗಳಲ್ಲಿ ಇಂದು ಸಂಜೆ 6ರವರೆಗೆ ಕಾವೇರಿ ನೀರು ವ್ಯತ್ಯಯ

ಒಟ್ಟಿನಲ್ಲಿ ಮೈಸೂರು ರಸ್ತೆಯಲ್ಲಿ ಹೆಚ್ಚಿನ ಟ್ರಾಫಿಕ್ ಇರುವುದರಿಂದ ಅಲ್ಲಿಯೇ ಔಟ್ ಪೋಸ್ಟ್ ತೆರೆದಿದ್ದು, ಅದರ ಮೂಲಕ ತಕ್ಕಮಟ್ಟಿನ ಟ್ರಾಫಿಕ್ ನಿವಾರಣೆ ಮಾಡಲು ಸಂಚಾರಿ ಪೊಲೀಸರು ಮುಂದಾಗಿದ್ದಾರೆ. ಜೊತೆಗೆ ಔಟ್ ಪೋಸ್ಟ್​ನಲ್ಲಿ ಎಎಸ್​ಐ ರ್ಯಾಂಕ್ ನ ಆಧಿಕಾರಿ ಯಾವಾಗಲೂ ಇದ್ದು, ಅದರ ಜವಾಬ್ದಾರಿ ನೋಡಿಕೊಳ್ಳುವಂತೆಯೂ ಹಿರಿಯ ಪೊಲೀಸ್ ಅಧಿಕಾರಿಗಳು ಸೂಚನೆ ನೀಡಿದ್ದು, ಅದರಂತೆ ಕಾರ್ಯಾರಂಭ ಶುರು ಆಗಿದೆ.
First published: