ಬೆಂಗಳೂರು: ರಾಜಧಾನಿಯಲ್ಲಿ ಮುಂದಿನ ನಾಲ್ಕು ದಿನ ಮಳೆಯ (Bengaluru Rain Alert) ಮುನ್ಸೂಚನೆ ಬೆನ್ನಲ್ಲೇ ಬೆಂಗಳೂರು ಸಂಚಾರಿ ಪೊಲೀಸರು (Bengaluru Traffic Police) ಅಲರ್ಟ್ ಆಗಿದ್ದಾರೆ. ಬೆಂಗಳೂರಿನಲ್ಲಿ ಭಾನವಾರ ಸುರಿದ ಮಳೆ ಎರಡು ಜೀವಗಳನ್ನು ಬಲಿ ಪಡೆದುಕೊಂಡಿದೆ. ಈ ಹಿನ್ನೆಲೆ ಪೊಲೀಸರು ಅಲರ್ಟ್ ಆಗಿದ್ದು, ಸಿಬ್ಬಂದಿಗೆ ಇಲಾಖೆ ಹೊಸ ಹೊಸ ಟಾಸ್ಕ್ಗಳನ್ನು ನೀಡಿದೆ. ಸ್ಪೆಷಲ್ ಟ್ರಾಫಿಕ್ ಕಮಿಷನರ್ ಸಲೀಂ ಇಲಾಖೆಯ ಎಲ್ಲಾ ಅಧಿಕಾರಿ ವರ್ಗ ಹಾಗೂ ಸಿಬ್ಬಂದಿಗೆ ಟಾಸ್ಕ್ ನೀಡಿದ್ದು, ಕಾರ್ಯ ನಿರ್ವಹಣೆಯ ಸ್ಥಳದ ವ್ಯವಸ್ಥೆ ಬಗ್ಗೆ ಮ್ಯಾಪಿಂಗ್ ಮಾಡಲು ಸೂಚನೆ ನೀಡಿದ್ದಾರೆ. ತಗ್ಗು ಪ್ರದೇಶ, ರಸ್ತೆ ಬದಿ ನೀರು ನಿಲ್ಲುವ ಸ್ಥಳ, ಅಂಡರ್ ಪಾಸ್, ಬೀಳುವ ಹಂತದಲ್ಲಿರೋ ಮರಗಳು, ರಸ್ತೆ ಗುಂಡಿಗಳು, ಮೇಲ್ಸೇತುವೆಗಳ ನೀರು ಹೋಗುವ ಪೈಪ್ ಸಿಸ್ಟಮ್, ರಸ್ತೆ ಬದಿಯಲ್ಲಿ ನೀರು ಇಂಗಲು ಹಾಕಿರೋ ಪೈಪ್ ಗಳ ಪರಿಸ್ಥಿತಿಯ ಚಿತ್ರಣದ ಸಂಪೂರ್ಣ ಮಾಹಿತಿ ಸಂಗ್ರಹಿಸಲು ಸೂಚನೆ ನೀಡಿದ್ದಾರೆ.
ನಗರದ ಎಲ್ಲಾ ಠಾಣಾಧಿಕಾರಿಗಳಿಗೆ ಸೂಚನೆ ಕಳುಹಿಸಲಾಗಿದೆ. ಅವ್ಯವಸ್ಥೆಯ ಫೋಟೋಗಳನ್ನ ಗ್ರೂಪ್ನಲ್ಲಿ ಲೊಕೇಷನ್ ಸಮೇತ ಕಳುಹಿಸಬೇಕು.
ಅದಲ್ಲದೇ ಸ್ಥಳೀಯ ಬಿಬಿಎಂಪಿ ಅಧಿಕಾರಿಗಳ ಗಮನಕ್ಕೆ ತಂದು ಸಮಸ್ಯೆಯನ್ನು ಜಂಟಿಯಾಗಿ ಬಗೆಹರಿಸಲು ಸೂಚನೆ ನೀಡಲಾಗಿದೆ.
Filling of potholes at Madivala Police station junction and 29th Main junction (BTM) by Madivala traffic Police for smoth going of traffic. pic.twitter.com/VFv7XLHrG4
— MADIVALA TRAFFIC BTP (@madivalatrfps) May 22, 2023
ಇದನ್ನೂ ಓದಿ: Bengaluru Rains: ಸಿಲಿಕಾನ್ ಸಿಟಿಯಲ್ಲಿ ಭಾರೀ ಮಳೆ ಬೆನ್ನಲ್ಲೇ ರಸ್ತೆ ಗುಂಡಿ ದರ್ಶನ; ವಾಹನ ಸವಾರರಿಗೆ ಟೆನ್ಶನ್ ಶುರು!
ಠಾಣಾ ವ್ಯಾಪ್ತಿಯ ಎಲ್ಲಾ ಕಡೆ ಪ್ರಮುಖ ಜಂಕ್ಷನ್ ಏರಿಯಾಗಳಲ್ಲಿ ರೌಂಡ್ಸ್ ಮಾಡಿ ಸ್ಥಳೀಯ ಬಿಬಿಎಂಪಿ ಅಧಿಕಾರಿಗಳ ಜೊತೆ ಕಾರ್ಯ ನಿರ್ವಹಿಸಲು ಇನ್ಸ್ಪೆಕ್ಟರ್ಗಳಿಗೆ ಸೂಚನೆ ನೀಡಲಾಗಿದೆ.
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ