ಬೆಂಗಳೂರು(ಮಾ.09): ಬೆಂಗಳೂರು ಟ್ರಾಫಿಕ್ (Bengaluru Traffic) ಕುರಿತು ಗೊತ್ತಿಲ್ಲದೇ ಇರುವವರು ಯಾರಿದ್ದಾರೆ ಹೇಳಿ? ಸಾಮಾಜಿಕ ತಾಣದಲ್ಲಿ, ಸುದ್ದಿ ಮಾಧ್ಯಮಗಳಲ್ಲಿ ಬೆಂಗಳೂರು ಟ್ರಾಫಿಕ್ ಎಂಬುದು ಹೆಚ್ಚು ಸುದ್ದಿಯಾದ ವಿಷಯವೂ ಹೌದು ಅಂತೆಯೇ ಸಾಕಷ್ಟು ಮೀಮ್‌ಗಳು, ಚರ್ಚೆಗಳು ಈ ಟ್ರಾಫಿಕ್ ಕುರಿತು ಹರಿದಾಡಿದ್ದೂ ಇದ್ದೇ ಇದೆ. ಈಗ ಇದೇ ಟ್ರಾಫಿಕ್‌ನಲ್ಲಿ ನಡೆದ ಘಟನೆಯೊಂದು ಸ್ವಾರಸ್ಯಕರ ಸುದ್ದಿಯಾಗಿ ಮಾರ್ಪಟ್ಟಿದ್ದು, ವಿವಾಹಿತ ವರನು (Groom) ಟ್ರಾಫಿಕ್ ಜಾಮ್‌ನಲ್ಲಿ ಪರಾರಿಯಾಗಿದ್ದಾನೆ. ಆತನ ಪಾಲಿಗೆ ಇಲ್ಲಿ ಟ್ರಾಫಿಕ್ ಜಾಮ್ ವರವಾಗಿ ಪರಿಣಮಿಸಿದೆ.
ಟ್ರಾಫಿಕ್ ಜಾಮ್‌ನಲ್ಲಿ ಕಣ್ಮರೆಯಾದ ಪತಿ
ಮನಸ್ಸಿಲ್ಲದ ಮನಸ್ಸಿನಿಂದ ವಿವಾಹಿತನಾದ ವರನೊಬ್ಬ ತನ್ನ ಮದುವೆಯ ಮರುದಿನವೇ ಮಹದೇವಪುರದ ಟ್ರಾಫಿಕ್ ಜಾಮ್‌ನಲ್ಲಿ ನಿಂತಿದ್ದ ತನ್ನ ಕಾರಿನಿಂದ ಓಡಿ ಕಣ್ಮರೆಯಾಗಿದ್ದಾರೆ. ಈತನನ್ನು ಹಿಂಬಾಲಿಸಿ ಓಡಿದ ಈತನ ಪತ್ನಿ ಪತಿಯನ್ನು ಹಿಂಬಾಲಿಸಲಾಗದೆ ಹೈರಾಣಾಗಿ ಪೋಲೀಸರ ಮೊರೆ ಹೋಗಿದ್ದು ದೂರು ನೀಡಿದ್ದಾರೆ.
ಇದನ್ನೂ ಓದಿ:Crime News: 16 ಬಾರಿ ಚುಚ್ಚಿ ಚುಚ್ಚಿ ಯುವತಿಯ ಕೊಲೆ; ಇದು ದಿನಕರ್-ಲೀಲಾ ಪ್ರೇಮ್ ಕಹಾನಿ
ಪತಿಯನ್ನು ಹಿಂಬಾಲಿಸಿದ ಪತ್ನಿ
ಫೆಬ್ರವರಿ 15 ರಂದು ವಿವಾಹಿತರಾಗಿದ್ದ ವಿಜಯ್ ಜಾರ್ಜ್ ಹಾಗೂ ಆತನ ಪತ್ನಿ ಮರುದಿನ ಚರ್ಚ್‌ಗೆ ಭೇಟಿ ನೀಡಿದ ಮರಳುತ್ತಿರುವಾಗ ಅವರಿದ್ದ ವಾಹನ ಪೈ ಲೇಔಟ್ ಬಳಿ 10 ನಿಮಿಷಗಳ ಕಾಲ ಟ್ರಾಫಿಕ್ ಜಾಮ್‌ನಲ್ಲಿ ನಿಂತಿತ್ತು.
ಕಾರಿನ ಮುಂಭಾಗದ ಸೀಟಿನಲ್ಲಿ ಕುಳಿತಿದ್ದ ಜಾರ್ಜ್, ಕಾರಿನ ಬಾಗಿಲನ್ನು ತೆರೆದು ಓಡಿ ಹೋಗಿದ್ದಾರೆ. ಈ ಆಘಾತಕಾರಿ ಘಟನೆಯಿಂದ ಮೂಕವಿಸ್ಮಿತಳಾದ ಆತನ ಪತ್ನಿ ಕೂಡ ಕಾರಿನಿಂದ ಇಳಿದು ಪತಿಯನ್ನು ಹಿಂಬಾಲಿಸಿದ್ದಾರೆ. ಆದರೆ ಪತಿಯನ್ನು ಬೆನ್ನಟ್ಟಲು ಸಾಧ್ಯವಾಗದೇ ಬಳಲಿದ ಪತ್ನಿ ಹತಾಶಳಾಗಿ ಇದೀಗ ಪತಿ ಮರಳಿ ಬರುತ್ತಾರೆ ಎಂಬ ನಿರೀಕ್ಷೆಯಲ್ಲಿದ್ದಾರೆ.
ವಿವಾಹಿತ ಸ್ತ್ರೀಯೊಂದಿಗೆ ಸಂಬಂಧ ಹೊಂದಿದ್ದ ವರ
ಚಿಕ್ಕಾಬಳ್ಳಾಪುರ ಜಿಲ್ಲೆಯ ಚಿಂತಾಮಣಿಯವರಾದ ವಿಜಯ್ ಜಾರ್ಜ್ ಕರ್ನಾಟಕ ಹಾಗೂ ಗೋವಾದಲ್ಲಿದ್ದ ತನ್ನ ಮಾವನ (ಪತ್ನಿಯ ತಂದೆ) ಮ್ಯಾನ್‌ಪವರ್ ಏಜೆನ್ಸಿಯನ್ನು ನೋಡಿಕೊಳ್ಳುತ್ತಿದ್ದರು. ಇದೇ ಸಮಯದಲ್ಲಿ ಗೋವಾದ ಏಜೆನ್ಸಿಯಲ್ಲಿ ಕಾರ್ಯನಿರ್ವಹಿಸುತ್ತಿದ್ದ ಎರಡು ಮಕ್ಕಳ ತಾಯಿಯಾದ ಚಾಲಕನ ಪತ್ನಿಯೊಂದಿಗೆ ವಿಜಯ್ ಸಂಬಂಧ ಹೊಂದಿದ್ದು ಅದೇ ಕಂಪನಿಯಲ್ಲಿ ಕ್ಲರ್ಕ್ ಆಗಿ ಕೆಲಸ ಮಾಡುತ್ತಿದ್ದರು.
ಬೇರೆ ಕಡೆ ಮದುವೆ ನಿಶ್ಚಯಿಸಿದ್ದ ವರನ ಕುಟುಂಬ
ಈ ವಿಷಯವನ್ನರಿತ ಜಾರ್ಜ್ ತಾಯಿ ಮಗನನ್ನು ತರಾಟೆಗೆ ತೆಗೆದುಕೊಂಡಿದ್ದರು ಅಂತೆಯೇ ಜಾರ್ಜ್ ಈ ಸಂಬಂಧವನ್ನು ಕೊನೆಗಾಣಿಸುವುದಾಗಿ ತಾಯಿಗೆ ಭರವಸೆ ನೀಡಿದ್ದರು. ಅದಾಗ್ಯೂ ಆತ ಕದ್ದುಮುಚ್ಚಿ ಆಕೆಯೊಂದಿಗೆ ಸಂಬಂಧ ಹೊಂದಿದ್ದ ಇದನ್ನು ಇಲ್ಲಿಗೇ ಮುಕ್ತಾಗೊಳಿಸಬೇಕೆಂಬ ನಿಟ್ಟಿನಲ್ಲಿ ಜಾರ್ಜ್ ಕುಟುಂಬಸ್ಥರು ಬೇರೆ ಕಡೆ ಆತನಿಗೆ ವಿವಾಹ ನಿಶ್ಚಯಿಸಿದರು ಎಂದು ಜಾರ್ಜ್ ಪತ್ನಿ ದೂರಿನಲ್ಲಿ ತಿಳಿಸಿದ್ದಾರೆ.
ಆದರೆ ಜಾರ್ಜ್‌ನ ವಿವಾಹದ ವಿಷಯ ತಿಳಿಯುತ್ತಿದ್ದಂತೆ ಆತನ ಮಾಜಿ ಪ್ರಿಯತಮೆ ಜಾರ್ಜ್ ಅನ್ನು ಬ್ಲಾಕ್‌ಮೇಲ್ ಮಾಡಿದ್ದು ತಮ್ಮ ಖಾಸಗಿ ಫೋಟೋಗಳನ್ನು ಕುಟುಂಬದ ಮುಂದೆ ಪ್ರಸ್ತುತಪಡಿಸುವುದಾಗಿ ಬೆದರಿಸಿದ್ದರು. ಹೀಗಾಗಿ ಜಾರ್ಜ್ ತುಂಬಾ ಮಂಕಾಗಿದ್ದರು ಹಾಗೂ ಆತ್ಮಹತ್ಯೆಗೂ ಯತ್ನಿಸಿದ್ದರು ಎಂದು ಜಾರ್ಜ್ ಪತ್ನಿ ತಿಳಿಸಿದ್ದಾರೆ.
ಇದನ್ನೂ ಓದಿ: ಪತ್ನಿಯನ್ನು ಕೊಲೆಗೈದು ಪೀಸ್ ಪೀಸ್ ಮಾಡಿ ವಾಟರ್ ಟ್ಯಾಂಕ್ಗೆ ಹಾಕಿದ್ದ ಪತಿ; ಶಾಕಿಂಗ್ ಕೃತ್ಯ ಬಯಲಾಗಿದ್ದೆ ರೋಚಕ!
ಮಾಜಿ ಪ್ರಿಯತಮೆಯ ಬ್ಲಾಕ್‌ಮೇಲ್
ವಿವಾಹಕ್ಕೂ ಮುನ್ನ ಜಾರ್ಜ್ ಪತ್ನಿಗೆ ತನ್ನ ಪತಿಯ ಅಕ್ರಮ ಸಂಬಂಧದ ಬಗ್ಗೆ ತಿಳಿದಿತ್ತು ಆದರೆ ಜಾರ್ಜ್ ತಮ್ಮ ಸಂಬಂಧವನ್ನು ಕೊನೆಗಾಣಿಸುವುದಾಗಿ ಪತ್ನಿಗೆ ಮಾತುಕೊಟ್ಟಿದ್ದರು. ಹೀಗಾಗಿ ವಿವಾಹಕ್ಕೆ ಸಮ್ಮತಿಸಿದೆ ಎಂದು ಪತ್ನಿ ಪೊಲೀಸರಿಗೆ ತಿಳಿಸಿದ್ದಾರೆ
ಮದುವೆಯ ನಂತರ ಜಾರ್ಜ್ ಮಾಜಿ ಪ್ರಿಯತಮೆಯ ಬ್ಲಾಕ್‌ಮೇಲ್ ಬಗ್ಗೆ ಪತ್ನಿಗೆ ತಿಳಿಸಿದ್ದರು ಎಂಬುದಾಗಿ ಹತಾಶ ಪತ್ನಿ ತಿಳಿಸಿದ್ದಾರೆ. ಇಂತಹ ಸಮಯದಲ್ಲಿ ತಾನು ಹಾಗೂ ತನ್ನ ಕುಟುಂಬ ಆತನ ಜೊತೆಗಿರುವುದಾಗಿ ಜಾರ್ಜ್ ಪತ್ನಿ ಆಶ್ವಾಸನೆಯನ್ನು ನೀಡಿದ್ದರು ಎಂಬುದಾಗಿ ತಮ್ಮ ದೂರಿನಲ್ಲಿ ಪತ್ನಿ ತಿಳಿಸಿದ್ದಾರೆ.
ಪತಿ ಮರಳುತ್ತಾರೆಂಬ ನಿರೀಕ್ಷೆಯಲ್ಲಿರುವ ಪತ್ನಿ
ವಿಜಯ್ ಜಾರ್ಜ್ ಏಕೆ ಇಂತಹ ನಿರ್ಧಾರ ಕೈಗೊಂಡರು ಎಂಬುದು ತಿಳಿಯುತ್ತಿಲ್ಲ ಎಂದು ಆತನ ಪತ್ನಿ ತಿಳಿಸಿದ್ದು ಆತ ಸುರಕ್ಷಿತರಾಗಿದ್ದಾರೆ ಮತ್ತು ಮರಳಿ ಬರುತ್ತಾರೆ ಎಂಬ ನಿರೀಕ್ಷೆಯಲ್ಲಿ ಹೆಂಡತಿ ಕಾಯುತ್ತಿದ್ದಾಳೆ.
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ