ಯಡಿಯೂರಪ್ಪ ಕಾರಿಗೆ 100 ರೂ. ದಂಡ; 1 ವರ್ಷ ಕಳೆದರೂ ಫೈನ್ ಕಟ್ಟದ ಸಿಎಂ

2018ರಲ್ಲಿ ನ. 15ರಂದು ಈ ಘಟನೆ ನಡೆದಿದ್ದು, ಬಾಕಿ ಇರುವ ದಂಡವನ್ನು ಇನ್ನೂ ಸಿಎಂ ಯಡಿಯೂರಪ್ಪ ಪಾವತಿಸಿಲ್ಲ. ಸಿಗ್ನಲ್ ಜಂಪ್ ಮಾಡಿದ್ದರಿಂದ ಯಡಿಯೂರಪ್ಪನವರ ಕಾರಿಗೆ 100 ರೂ. ದಂಡ ವಿಧಿಸಲಾಗಿತ್ತು.

news18-kannada
Updated:January 13, 2020, 11:10 AM IST
ಯಡಿಯೂರಪ್ಪ ಕಾರಿಗೆ 100 ರೂ. ದಂಡ; 1 ವರ್ಷ ಕಳೆದರೂ ಫೈನ್ ಕಟ್ಟದ ಸಿಎಂ
ಯಡಿಯೂರಪ್ಪ
  • Share this:
ಬೆಂಗಳೂರು (ಜ. 13): ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಬಳಸುತ್ತಿರುವ ಕಾರು ಸಿಗ್ನಲ್ ಜಂಪ್ ಮಾಡಿದ್ದರಿಂದ 100 ರೂ. ದಂಡ ವಿಧಿಸಲಾಗಿತ್ತು. ಆದರೆ, 14 ತಿಂಗಳು ಕಳೆದರೂ ಆ ಹಣವನ್ನು ಯಡಿಯೂರಪ್ಪ ಇನ್ನೂ ಪಾವತಿ ಮಾಡಿಲ್ಲ.

2018ರಲ್ಲಿ ನ. 15ರಂದು ಈ ಘಟನೆ ನಡೆದಿದ್ದು, ಬಾಕಿ ಇರುವ ದಂಡವನ್ನು ಇನ್ನೂ ಸಿಎಂ ಯಡಿಯೂರಪ್ಪ ಪಾವತಿಸಿಲ್ಲ. ಸಿಗ್ನಲ್ ಜಂಪ್ ಮಾಡಿದ್ದರಿಂದ ಯಡಿಯೂರಪ್ಪನವರ ಕಾರಿಗೆ 100 ರೂ. ದಂಡ ವಿಧಿಸಲಾಗಿತ್ತು. ಯಡಿಯೂರಪ್ಪನವರ KA01G6309 ನಂಬರ್​ನ ಕಾರಿನ ಚಾಲಕ ಎಎಸ್​ಸಿ ಜಂಕ್ಷನ್ ಬಳಿ ಸಿಗ್ನಲ್ ಮಾಡಿದ್ದರು. ಈ ಹಿನ್ನೆಲೆಯಲ್ಲಿ ದಂಡ ಹಾಕಲಾಗಿತ್ತು.

ಇದೀಗ ಆ ಕಾರನ್ನು ಬಿ.ಎಸ್. ಯಡಿಯೂರಪ್ಪ ಬಳಸುತ್ತಿದ್ದಾರೆ. ಘಟನೆ ನಡೆದು 14 ತಿಂಗಳಾದರೂ ಸಿಎಂ ಇನ್ನೂ ದಂಡ ಪಾವತಿ ಮಾಡಿಲ್ಲ. 2019ರ ಸೆಪ್ಟೆಂಬರ್ ತಿಂಗಳಿನಿಂದ ದೇಶಾದ್ಯಂತ ಹೊಸ ಟ್ರಾಫಿಕ್ ನಿಯಮ ಜಾರಿಗೆ ಬಂದಿದ್ದು, ದುಬಾರಿ ದಂಡ ವಿಧಿಸಲಾಗುತ್ತಿದೆ.

ಇದನ್ನೂ ಓದಿ: ಕಾಶಿ ವಿಶ್ವನಾಥನ ಭಕ್ತರಿಗೆ ಡ್ರೆಸ್​ಕೋಡ್; ಪ್ಯಾಂಟ್​ ಧರಿಸಿ ಬಂದರೆ ದೇವರ ದರ್ಶನವಿಲ್ಲ

ಕುಡಿದು ವಾಹನ ಚಲಾಯಿಸುವವರಿಗೆ ಇಂದಿನಿಂದ ಬರೋಬ್ಬರಿ 10 ಸಾವಿರ ರೂ. ದಂಡ ವಿಧಿಸಲಾಗುತ್ತದೆ. ಡ್ರೈವಿಂಗ್ ಮಾಡುವಾಗ ಮೊಬೈಲ್ ಬಳಸಿದರೆ 5 ಸಾವಿರ ರೂ, ಲೈಸೆನ್ಸ್​ ಇಲ್ಲದೆ ಗಾಡಿ ಓಡಿಸಿದರೆ 5 ಸಾವಿರ ರೂ, ಕಾರಿನಲ್ಲಿ ಸೀಟ್ ಬೆಲ್ಟ್​ ಅಥವಾ ಬೈಕ್​ನಲ್ಲಿ ಹೆಲ್ಮೆಟ್ ಇಲ್ಲದೆ ವಾಹನ ಚಲಾಯಿಸಿದರೆ 1 ಸಾವಿರ ರೂ. ದಂಡ ತೆರಬೇಕಾಗುತ್ತದೆ. ಆದರೆ, ಯಡಿಯೂರಪ್ಪನವರ ಕಾರು 2018ರಲ್ಲಿ ಸಿಗ್ನಲ್ ಜಂಪ್ ಮಾಡಿದ್ದರಿಂದ 100 ರೂ. ಮಾತ್ರ ದಂಡ ವಿಧಿಸಲಾಗಿದೆ.
First published:January 13, 2020
ಮತ್ತಷ್ಟು ಓದಿರಿ
ಮುಂದಿನ ಸುದ್ದಿ