Bengaluru To Mysuru: ಅಕ್ಟೋಬರ್ ‌ನಿಂದ ಕೇವಲ 75 ನಿಮಿಷಗಳಲ್ಲಿ ಬೆಂಗಳೂರಿಂದ ಮೈಸೂರಿಗೆ ತಲುಪಬಹುದು..!

ಈ ಅತ್ಯಾಧುನಿಕ ಯೋಜನೆಯು 8 ಕಿಲೋ ಮೀಟರ್ ಉದ್ದದ ಎಲಿವೇಟೆಡ್ ಕಾರಿಡಾರ್, 9 ಪ್ರಮುಖ ಸೇತುವೆಗಳು, 42 ಸಣ್ಣ ಸೇತುವೆಗಳು, 64 ಅಂಡರ್‌ಪಾಸ್‌ಗಳು, 11 ಓವರ್ ಪಾಸ್ ಗಳು, ನಾಲ್ಕು ರಸ್ತೆ ಮೇಲ್ಸೇತುವೆಗಳು ಮತ್ತು ಐದು ಬೈಪಾಸ್ ಗಳಂತಹ ಅನೇಕ ರಚನೆಗಳನ್ನು ಹೊಂದಿದೆ.

ರಾಷ್ಟ್ರೀಯ ಹೆದ್ದಾರಿ

ರಾಷ್ಟ್ರೀಯ ಹೆದ್ದಾರಿ

  • Share this:
ನೀವು ಈಗ ರಸ್ತೆಯ ಮೂಲಕ ಬೆಂಗಳೂರಿನಿಂದ (Bengaluru) ಹೊರಟು ನಿಡಘಟ್ಟ (Nidaghatta) ಮಾರ್ಗವಾಗಿ ಮೈಸೂರು (Mysuru) ತಲುಪಬೇಕೆಂದರೆ ಏನಿಲ್ಲಾ ಎಂದರೂ 2 ಗಂಟೆ 30 ನಿಮಿಷದಿಂದ ಮೂರು ಗಂಟೆಯಾದರೂ ಬೇಕೇ ಬೇಕು. ಆದರೆ ಇನ್ಮುಂದೆ ಅರ್ಧ ಸಮಯ ಸಾಕು. ಕೆಲಸವು ಯೋಜನೆಯ ಪ್ರಕಾರ ಮುಗಿದರೆ ನೀವು ಈ ಮಾರ್ಗವನ್ನು ಕೇವಲ 75 ನಿಮಿಷ(75 Minutes)ಗಳಲ್ಲಿ ಕ್ರಮಿಸಬಹುದಂತೆ ಎಂದು ಹೇಳಲಾಗುತ್ತಿದೆ. ಇದನ್ನು ಕೇಳಿ ನಿಮಗೆ ಆಶ್ಚರ್ಯವಾಗುತ್ತಿರಬೇಕಲ್ಲವೇ..? ಹೌದು.. ಬೆಂಗಳೂರಿನಿಂದ ಮೈಸೂರಿಗೆ (Bengaluru To Mysuru) ಪ್ರಯಾಣದ ಸಮಯವನ್ನು ಕೇವಲ 75 ನಿಮಿಷಗಳಿಗೆ ಇಳಿಸುವ ಎಂದರೆ 117 ಕಿಲೋ ಮೀಟರ್ ಉದ್ದದ ರಾಷ್ಟ್ರೀಯ ಹೆದ್ದಾರಿಯ (National Highway) ವಿಸ್ತರಣೆಯನ್ನು ಅಕ್ಟೋಬರ್ ತಿಂಗಳಿನಲ್ಲಿ ಪೂರ್ಣಗೊಳಿಸಲಾಗುವುದು ಎಂದು ಕೇಂದ್ರ ರಸ್ತೆ ಸಾರಿಗೆ ಮತ್ತು ಹೆದ್ದಾರಿ ಸಚಿವ ನಿತಿನ್ ಗಡ್ಕರಿ (Minister of Road Transport and Highways of India, Nitin Gadkari) ಅವರು ಸೋಮವಾರ ತಿಳಿಸಿದ್ದಾರೆ.

ರಾಷ್ಟ್ರೀಯ ಹೆದ್ದಾರಿ 275ರ ಬೆಂಗಳೂರು-ನಿಡಘಟ್ಟ-ಮೈಸೂರು ವಿಭಾಗದ ವಿಸ್ತರಣೆಯನ್ನು 8,350 ಕೋಟಿ ರೂಪಾಯಿಗಳ ವೆಚ್ಚದಲ್ಲಿ ಈಗಾಗಲೇ ಅಭಿವೃದ್ಧಿಪಡಿಸಲಾಗುತ್ತಿದ್ದು, ಈ ಎರಡು ನಗರಗಳನ್ನು ಸಂಪರ್ಕಿಸುವ ಈ ರಾಷ್ಟೀಯ ಹೆದ್ದಾರಿಯು ಪ್ರಯಾಣದ ಸಮಯವನ್ನು ಮೂರು ಗಂಟೆಗಳಿಂದ 75 ನಿಮಿಷಗಳಿಗೆ ಇಳಿಸುವ ನಿರೀಕ್ಷೆಯಿದೆ ಎಂದು ಅವರು ಹೇಳಿದರು.

ಇದು ಎರಡು ಪ್ರಮುಖ ನಗರಗಳ ನಡುವಿನ ಸಂಪರ್ಕವನ್ನು ಹೆಚ್ಚಿಸುತ್ತದೆ ಮತ್ತು ಈ ಪ್ರದೇಶದಲ್ಲಿರುವ ಪ್ರವಾಸೋದ್ಯಮ ಮತ್ತು ಆರ್ಥಿಕತೆಗೆ ಉತ್ತೇಜನವನ್ನು ನೀಡುತ್ತದೆ ಎಂದು ಗಡ್ಕರಿ ಅವರು ಹೇಳಿದರು.

ಇದನ್ನೂ ಓದಿ:  School Text Book: ಟಿಪ್ಪು ಸುಲ್ತಾನ್ ವೈಭವೀಕರಿಸಿರೋ ಅಂಶಗಳನ್ನ ತೆಗೆದುಹಾಕಬಹುದು, ಪಠ್ಯ ಪುಸ್ತಕ ಪರಿಷ್ಕರಣಾ ಸಮಿತಿಯ ಶಿಫಾರಸು

ದಶಪಥದ 117 ಕಿ.ಮೀ. ಉದ್ದದ ಮಾರ್ಗ

"ರಾಷ್ಟ್ರೀಯ ಹೆದ್ದಾರಿ 275 ರ ಬೆಂಗಳೂರು-ನಿಡಘಟ್ಟ-ಮೈಸೂರು ವಿಭಾಗವು ಕರ್ನಾಟಕ ರಾಜ್ಯದಲ್ಲಿ 10 ಪಥದ, 117 ಕಿ.ಮೀ ಉದ್ದದ ಮಾರ್ಗವಾಗಿದೆ. ಇದನ್ನು 8,350 ಕೋಟಿ ರೂಪಾಯಿಗಳ ವೆಚ್ಚದಲ್ಲಿ ಅಭಿವೃದ್ಧಿಪಡಿಸಲಾಗುತ್ತಿದೆ. ನಿರ್ಮಾಣ ಕಾರ್ಯವು ಪೂರ್ಣಗೊಳ್ಳುವ ಹಂತದಲ್ಲಿದೆ ಮತ್ತು ಅಕ್ಟೋಬರ್ 2022 ರೊಳಗೆ ಪೂರ್ಣಗೊಳ್ಳಲಿದೆ" ಎಂದು ಗಡ್ಕರಿ ಅವರು ಸರಣಿ ಟ್ವೀಟ್ ಗಳಲ್ಲಿ ತಿಳಿಸಿದ್ದಾರೆ.



"ಪ್ರಧಾನಿ ನರೇಂದ್ರ ಮೋದಿ ಅವರ ಕ್ರಿಯಾತ್ಮಕ ನಾಯಕತ್ವದಲ್ಲಿ, ಅಂತಹ ವಿವಿಧ ಮೂಲಸೌಕರ್ಯ ಯೋಜನೆಗಳನ್ನು ದೊಡ್ಡ ಜವಾಬ್ದಾರಿಯೊಂದಿಗೆ ಘೋಷಿಸಲಾಗಿದೆ ಮತ್ತು ಅವುಗಳನ್ನು ಭ್ರಷ್ಟಾಚಾರ ಮುಕ್ತ, ಪಾರದರ್ಶಕ ಮತ್ತು ಕಾಲ ಮಿತಿಯಲ್ಲಿ ಪೂರ್ಣಗೊಳಿಸುವುದು ನಮ್ಮ ಅಚಲ ಬದ್ಧತೆಯಾಗಿದೆ" ಎಂದು ಗಡ್ಕರಿ ಅವರು ಹೇಳಿದರು.

ಹೇಗಿದೆ ಈ ಯೋಜನೆ..?

"ಈ ಅತ್ಯಾಧುನಿಕ ಯೋಜನೆಯು 8 ಕಿಲೋ ಮೀಟರ್ ಉದ್ದದ ಎಲಿವೇಟೆಡ್ ಕಾರಿಡಾರ್, 9 ಪ್ರಮುಖ ಸೇತುವೆಗಳು, 42 ಸಣ್ಣ ಸೇತುವೆಗಳು, 64 ಅಂಡರ್‌ಪಾಸ್‌ಗಳು, 11 ಓವರ್ ಪಾಸ್ ಗಳು, ನಾಲ್ಕು ರಸ್ತೆ ಮೇಲ್ಸೇತುವೆಗಳು ಮತ್ತು ಐದು ಬೈಪಾಸ್ ಗಳಂತಹ ಅನೇಕ ರಚನೆಗಳನ್ನು ಹೊಂದಿದೆ. ಇದು ಈ ರಸ್ತೆಯಲ್ಲಿರುವ ಸಂಚಾರ ದಟ್ಟಣೆಯನ್ನು ಕಡಿಮೆ ಮಾಡುತ್ತದೆ ಮತ್ತು ವಾಯು ಮಾಲಿನ್ಯವನ್ನು ಗಮನಾರ್ಹವಾಗಿ ಕಡಿಮೆ ಮಾಡುತ್ತದೆ" ಎಂದು ಅವರು ಹೇಳಿದರು.



ದಶ ಪಥದ ಈ ಯೋಜನೆಯು ಸಂಚಾರಕ್ಕಾಗಿ 6 ಪಥಗಳ ಪ್ರವೇಶ ನಿಯಂತ್ರಿತ ಕ್ಯಾರೇಜ್ ವೇ ಮತ್ತು ಎರಡೂ ಬದಿಗಳಲ್ಲಿ ಎರಡು ಪಥದ ಸರ್ವೀಸ್ ರಸ್ತೆಯನ್ನು ಒಳಗೊಂಡಿದೆ, ಇದನ್ನು ವಾಹನ ಚಾಲಕರು ಮತ್ತು ಜನರು ಸ್ಥಳೀಯ ಸಂಚಾರಕ್ಕೆ ಬಳಸಬಹುದು.

ಇದನ್ನೂ ಓದಿ:  IT Notice: ಮಾಜಿ ಪ್ರಧಾನಿ ದೇವೇಗೌಡರ ಪತ್ನಿಗೆ ಐಟಿ ನೋಟಿಸ್; ನಮ್ಮ ಗದ್ದೆಗೆ ಬಂದು ನೋಡಿ ಎಂದು ರೇವಣ್ಣ ಗರಂ

ಎರಡು ಪ್ರತ್ಯೇಕ ಯೋಜನೆ

117 ಕಿ.ಮೀ ಉದ್ದದ ಈ ಬೃಹತ್ ಯೋಜನೆಯನ್ನು ಕ್ರಮವಾಗಿ ಬೆಂಗಳೂರು ಮತ್ತು ನಿಡಘಟ್ಟ ಹಾಗೂ ನಿಡಘಟ್ಟ ಮತ್ತು ಮೈಸೂರು ನಡುವೆ ಎರಡು ಪ್ರತ್ಯೇಕ ಯೋಜನೆಗಳನ್ನಾಗಿ ವಿಂಗಡಿಸಲಾಗಿದೆ. ಮೇಲ್ದರ್ಜೆಗೇರಿದ ಹೆದ್ದಾರಿಯು ಮೈಸೂರು ಮತ್ತು ಬೆಂಗಳೂರು ನಡುವೆ ಬರುವ ಬಿಡದಿ, ರಾಮನಗರ, ಚನ್ನಪಟ್ಟಣ, ಮಂಡ್ಯ ಮತ್ತು ಮದ್ದೂರು ಪಟ್ಟಣಗಳನ್ನು ಬೈಪಾಸ್ ಮಾಡುತ್ತದೆ.



ಈ ಯೋಜನೆಯನ್ನು 2019 ರಲ್ಲಿ ಮಂಜೂರು ಮಾಡಲಾಯಿತು ಮತ್ತು ಸೆಪ್ಟೆಂಬರ್ 2022 ರೊಳಗೆ ಇದನ್ನು ಪೂರ್ಣಗೊಳಿಸಲಾಗುವುದು ಎಂದು ಸರ್ಕಾರ ಆ ಸಮಯದಲ್ಲಿ ಘೋಷಿಸಿತ್ತು. ಈಗ ಈ ಯೋಜನೆ ಅಕ್ಟೋಬರ್‌ನಲ್ಲಿ ಪೂರ್ಣಗೊಳ್ಳಲಿದೆ ಎಂದು ಹೇಳಿದ್ದಾರೆ.
Published by:Mahmadrafik K
First published: