ಬೆಂಗಳೂರಿನಲ್ಲಿ ದೇಶದ ಮೊದಲ ಇ-ತ್ಯಾಜ್ಯ ಮರುಸಂಸ್ಕರಣಾ ಘಟಕ


Updated:July 3, 2018, 4:06 PM IST
ಬೆಂಗಳೂರಿನಲ್ಲಿ ದೇಶದ ಮೊದಲ ಇ-ತ್ಯಾಜ್ಯ ಮರುಸಂಸ್ಕರಣಾ ಘಟಕ

Updated: July 3, 2018, 4:06 PM IST
- ನ್ಯೂಸ್18 ಕನ್ನಡ

ಬೆಂಗಳೂರು(ಜು. 03): ಮೊಬೈಲ್, ಕಂಪ್ಯೂಟರ್, ಟಿವಿ ಇತ್ಯಾದಿ ಎಲೆಕ್ಟ್ರಾನಿಕ್ ವಸ್ತುಗಳ ತ್ಯಾಜ್ಯದ ಸಮಸ್ಯೆ ಇಡೀ ವಿಶ್ವದ ತಲೆನೋವಾಗಿದೆ. ಅಮೆರಿಕ ಸೇರಿದಂತೆ ಕೆಲವಾರು ರಾಷ್ಟ್ರಗಳು ಎಚ್ಚೆತ್ತುಕೊಂಡು ಇ-ತ್ಯಾಜ್ಯಗಳಿಗೆ ಪರಿಹಾರ ಕಂಡುಕೊಳ್ಳುವ ಪ್ರಯತ್ನ ಮಾಡುತ್ತಿವೆ. ಈ ನಿಟ್ಟಿನಲ್ಲಿ ಭಾರತವೂ ಹೆಜ್ಜೆ ಮುಂದಿಟ್ಟಿದ್ದು, ಇ-ತ್ಯಾಜ್ಯ ಮರುಸಂಸ್ಕರಣೆಗೆ ಕೇಂದ್ರ ಮಹತ್ವದ ಯೋಜನೆ ಆರಂಭಿಸಿದೆ. ಅದರಂತೆ ಬೆಂಗಳೂರಿನಲ್ಲಿ ದೇಶದ ಮೊದಲ ಇ-ತ್ಯಾಜ್ಯ ರೀಸೈಕ್ಲಿಂಗ್ ಘಟಕ ಪ್ರಾರಂಭವಾಗಲಿದೆ. ಕೇಂದ್ರ ರಾಸಾಯನಿಕ ಮತ್ತು ರಸಗೊಬ್ಬರ ಖಾತೆ ಸಚಿವ ಅನಂತಕುಮಾರ್ ಅವರು ಈ ವಿಷಯವನ್ನು ಪ್ರಕಟಿಸಿದ್ದಾರೆಂದು ಟೈಮ್ಸ್ ಆಫ್ ಇಂಡಿಯಾ ವರದಿ ಮಾಡಿದೆ.

ಭಾರತದ ಸಿಲಿಕಾನ್ ವ್ಯಾಲಿ ಎಂದೇ ಕರೆಯಲಾಗುವ ಬೆಂಗಳೂರಿನಲ್ಲಿ ಬಹಳಷ್ಟು ಐಟಿ ಕಂಪನಿಗಳಿವೆ. 7 ಸಾವಿರ ನವೋದ್ಯಮಗಳು ನೆಲೆಗೊಂಡಿವೆ. ಭಾರತದ ಮೂರನೇ ಒಂದು ಭಾಗದಷ್ಟು ಸಾಫ್ಟ್​ವೇರ್ ರಫ್ತು ಬೆಂಗಳೂರಿನಿಂದಲೇ ಆಗುತ್ತವೆ. ಇಲ್ಲಿ ವರ್ಷಕ್ಕೆ 1 ಲಕ್ಷ ಟನ್​ಗಳಷ್ಟು ಎಲೆಕ್ಟ್ರಾನಿಕ್ ತ್ಯಾಜ್ಯಗಳು ಹೊರಬೀಳುತ್ತವೆ. ಒಂದು ದಿನಕ್ಕೆ 4 ಲಕ್ಷ ಮೊಬೈಲ್ ಹ್ಯಾಂಡ್​ಸೆಟ್​ಗಲು, ಒಂದೂವರೆ ಲಕ್ಷದಷ್ಟು ಕಂಪ್ಯೂಟರ್​ಗಳು ತ್ಯಾಜ್ಯಗಳಾಗಿ ಬಿಸಾಡಲಾಗುತ್ತಿದೆ. ಇಂತಹ ಇ-ತ್ಯಾಜ್ಯಗಳ ವಿಲೇವಾರಿಗೆ ನೈಸರ್ಗಿಕ ಪರಿಹಾರವಂತೂ ಇಲ್ಲ. ಮರುಸಂಸ್ಕರಣೆಯೊಂದೇ ದಾರಿಯಾಗಿದೆ. ಕೇಂದ್ರ ಸರಕಾರ ತಡವಾಗಿಯಾದರೂ ಎಚ್ಚೆತ್ತುಕೊಂಡು ದೇಶಾದ್ಯಂತ ಇ-ತ್ಯಾಜ್ಯ ಮರುಸಂಸ್ಕರಣಾ ಘಟಕ ಪ್ರಾರಂಭಿಸುತ್ತಿದೆ. ಬೆಂಗಳೂರಿನಲ್ಲಿ ಇನ್ನು 4 ತಿಂಗಳಲ್ಲಿ ಮೊದಲ ಘಟಕ ಶುರುವಾಗಲಿದೆ. ದೇಶದ ಉಳಿದ ಕಡೆ ನಂತರದಲ್ಲಿ ಪ್ರಾರಂಭವಾಗಲಿವೆ.

ಬೆಂಗಳೂರಿನ ಎಲೆಕ್ಟ್ರಾನಿಕ್ ಸಿಟಿಯಲ್ಲಿ ಈ ಘಟಕ ಆರಂಭಿಸುವ ಪ್ರಸ್ತಾವವಿದೆ. ಎಲೆಕ್ಟ್ರಾನಿಕ್ ವಸ್ತುಗಳಲ್ಲಿರುವ ಲೋಹ ಮತ್ತು ಪ್ಲಾಸ್ಟಿಕನ್ನು ಬೇರ್ಪಡಿಸಿ, ನಂತರ ಅವುಗಳನ್ನ ಪ್ರತ್ಯೇಕವಾಗಿ ರೀಸೈಕಲ್ ಮಾಡುವುದು ಈ ಘಟಕದ ಕಾರ್ಯಾಚರಣೆಯಾಗಿರಲಿದೆ.
First published:July 3, 2018
ಮತ್ತಷ್ಟು ಓದಿರಿ
Loading...
ಮುಂದಿನ ಸುದ್ದಿ
Loading...