Power Cut: ಬೆಂಗಳೂರಿನ ಹಲವೆಡೆ ಇಂದು ವಿದ್ಯುತ್ ವ್ಯತ್ಯಯ.. ನಿಮ್ಮ ಏರಿಯಾ ಕೂಡ ಇದ್ಯಾ ಒಮ್ಮೆ ನೋಡಿ

Bescom: ಪೂರ್ವ ವಲಯದ ಕಸ್ತೂರಿ ನಗರ, ಸದಾನಂದ ನಗರ ಮತ್ತು ಕೆಜಿ ಪುರ ಮುಖ್ಯ ರಸ್ತೆ ಸೇರಿ ಹಲವು ಕಡೆ ಬೆಳಗ್ಗೆ 10ರಿಂದ ಸಂಜೆ 4ರವರೆಗೆ ವಿದ್ಯುತ್‌ ಕಡಿತಗೊಳಿಸಲಾಗುವುದು..

ಸಾಂದರ್ಭಿಕ ಚಿತ್ರ

ಸಾಂದರ್ಭಿಕ ಚಿತ್ರ

 • Share this:
  ಕೊರೋನಾ(Corona) ಮಹಾಮಾರಿ ಓಮಿಕ್ರಾನ್(Omicron) ಹೆಸರಲ್ಲಿ ತನ್ನ ಆರ್ಭಟವನ್ನ ಮತ್ತೆ ಶುರು ಮಾಡಿದೆ. ರಾಜ್ಯದಲ್ಲಿ(State) ಪ್ರತಿನಿತ್ಯ ಸಾವಿರಾರು ಸಂಖ್ಯೆಯಲ್ಲಿ ಪ್ರಕರಣಗಳು(Case) ಪತ್ತೆಯಾಗುತ್ತಿವೆ. ಜನರು ಮನೆಯಿಂದ(Home) ಆಚೆ ಹೋಗಲು ಭಯ(Fear) ಪಡುವ ವಾತವಾರಣ ನಿರ್ಮಾಣವಾಗಿದೆ. ಅದ್ರಲ್ಲೂ ರಾಜಧಾನಿ (Capital)ಬೆಂಗಳೂರಿನ(Bengaluru) ಪರಿಸ್ಥಿತಿ ನಿಜಕ್ಕೂ ಬೆಚ್ಚಿ ಬೀಳುವಂತಿದ್ದು ಜನ ಮನೆಯಿಂದ ಕಾಲಿಡಲು ಹಿಂದೆ-ಮುಂದೆ ನೋಡಬೇಕಾದ ಪರಿಸ್ಥಿತಿ ಇದೆ. ಹೀಗಾಗಿ ಮನೆಯಲ್ಲಿ ನೆಮ್ಮದಿಯಾಗಿ ಕಾಲ ಕಳೆಯೋಣಾ ಎಂದು ಬೆಂಗಳೂರಿನ ಜನರು ಅಂದುಕೊಳ್ಳುತ್ತಿರುವ ಸಮಯದಲ್ಲಿ ಬೆಸ್ಕಾಂ ಎಂದಿನಂತೆ ಶಾಕ್ ನೀಡಿದ್ದು, ಇಂದು ಬೆಂಗಳೂರಿನ ಹಲವೆಡೆ ತುರ್ತು ನಿರ್ವಹಣಾ ಕಾಮಗಾರಿ ಹಿನ್ನೆಲೆ ವಿದ್ಯುತ್ ಕಡಿತಗೊಳಿಸುತ್ತಿದೆ. ಹಾಗಿದ್ರೆ ಬೆಂಗಳೂರಿನ ಯಾವ ಯಾವ ಪ್ರದೇಶದಲ್ಲಿ ಇಂದು ಕಾಲ ವಿದ್ಯುತ್ ವ್ಯತ್ಯಯವಾಗಲಿದೆ ಎಂಬ ಮಾಹಿತಿ ಇಲ್ಲಿದೆ.

  ಜನವರಿ 29ರಂದು ಈ ಪ್ರದೇಶದಲ್ಲಿ ವಿದ್ಯುತ್ ವ್ಯತ್ಯಯ

  ದಕ್ಷಿಣ ವಲಯ: ಬೆಳಗ್ಗೆ 10ರಿಂದ ಸಂಜೆ 5ರವರೆಗೆ ವಕ್ಕಲಿಗರ ಸಂಘ, ಜೆಸಿ ಇಂಡಸ್ಟ್ರಿಯಲ್ ಲೇಔಟ್, ಇಸ್ರೋ ಲೇಔಟ್, ಕುಮಾರಸ್ವಾಮಿ ಲೇಔಟ್, ಸಿದ್ದಾಪುರ, ಸೋಮೇಶ್ವರನಗರ, ಅಶ್ವಥ್ ನಗರ ಮತ್ತು ಶ್ರೀನಗರ ಸೇರಿ ಹಲವು ಕಡೆ ವಿದ್ಯುತ್ ವ್ಯತ್ಯಯ ಉಂಟಾಗಲಿದೆ

  ಇದನ್ನೂ ಓದಿ: Dakshina Kannada ಜಿಲ್ಲೆಗೆ ಸುರಂಗ ನೀರಾವರಿ ಪರಿಚಯಿಸಿದ ಕುಟುಂಬ ಯಾವುದು ಗೊತ್ತೆ?

  ಪೂರ್ವ ವಲಯ: ಕಸ್ತೂರಿ ನಗರ, ಸದಾನಂದ ನಗರ ಮತ್ತು ಕೆಜಿ ಪುರ ಮುಖ್ಯ ರಸ್ತೆ ಸೇರಿ ಹಲವು ಕಡೆ ಬೆಳಗ್ಗೆ 10ರಿಂದ ಸಂಜೆ 4ರವರೆಗೆ ವಿದ್ಯುತ್‌ ಕಡಿತಗೊಳಿಸಲಾಗುವುದು..

  ಉತ್ತರ ವಲಯ: ಪೀಣ್ಯ ಕೈಗಾರಿಕಾ ಪ್ರದೇಶದ ಕೆಲವು ಭಾಗಗಳು, ಪೀಣ್ಯದ ಭಾಗಗಳು, ಕಂಠೀರವ ಸ್ಟುಡಿಯೋ ಬಳಿ ಮತ್ತು ಲಗ್ಗೆರೆ ಭಾಗಗಳಲ್ಲಿ ಬೆಳಗ್ಗೆ 10ರಿಂದ ಸಂಜೆ 5.30ರವರೆಗೆ ವಿದ್ಯುತ್ ವ್ಯತ್ಯಯ ಉಂಟಾಗಲಿದೆ

  ಪಶ್ಚಿಮ ವಲಯ: ಬೆಳಗ್ಗೆ 10ರಿಂದ ಸಂಜೆ 5ರವರೆಗೆ ಭೈರವೇಶ್ವರ ಕೈಗಾರಿಕಾ ರಸ್ತೆ, ತಿಮ್ಮಪ್ಪ ರಸ್ತೆ, ಡಿ ಗ್ರೂಪ್ ಲೇಔಟ್ ಮತ್ತು ವೀರಭದ್ರೇಶ್ವರ ನಗರ ಸೇರಿ ಹಲವು ಕಡೆ ವಿದ್ಯುತ್‌ ಕಡಿತವಾಗಲಿದೆ..

  ಜನವರಿ 30ರಂದು ಈ ಪ್ರದೇಶದಲ್ಲಿ ವಿದ್ಯುತ್ ವ್ಯತ್ಯಯ

  ದಕ್ಷಿಣ ವಲಯ: ಲಕ್ಷ್ಮಿ ರಸ್ತೆ, ಬಿಕಿಸಿಪುರ, ಪ್ರತಿಮಾ ಇಂಡಸ್ಟ್ರಿಯಲ್ ಲೇಔಟ್, ಇಸ್ರೋ ಲೇಔಟ್, ಕುಮಾರಸ್ವಾಮಿ ಲೇಔಟ್, ಸಿದ್ದಾಪುರ, ಸೋಮೇಶ್ವರನಗರ, ಜೆಪಿ ನಗರ 1 ನೇ ಹಂತ, ಶಾಕಾಂಬರಿ ನಗರ, ಸಾರಕ್ಕಿ ಮಾರುಕಟ್ಟೆ, ತ್ಯಾಗರಾಜ ನಗರ ಮುಖ್ಯ ರಸ್ತೆ, ಪಾಪಯ್ಯ ಗಾರ್ಡನ್, ಬನಶಂಕರಿ 3 ನೇ ಹಂತ, ಪದ್ಮನಾಭನಗರ 5, ಪದ್ಮನಾಭನಗರ 5 ಹಂತ, ದೊರೆಸಾನಿ ಪಾಳ್ಯ, ಅಶ್ವಥ್ ನಗರ, ಪಾಣತ್ತೂರು ಮುಖ್ಯರಸ್ತೆ, ಬಿಡಿಎ 9ನೇ ಹಂತ, ಬಿಡಿಎ 8ನೇ ಹಂತ, ಎಂಎಸ್ ರಾಮಹೈ ನಗರ, ಸೌತ್ ಅವೆನ್ಯೂ ಮತ್ತು ದೊಡ್ಡಕನ್ನೆಲ್ಲಿಯಲ್ಲಿ ಬೆಳಗ್ಗೆ 10 ರಿಂದ ಸಂಜೆ 6 ರವರೆಗೆ ವಿದ್ಯುತ್ ಕಡಿತವಾಗಲಿದೆ.

  ಪೂರ್ವ ವಲಯ: ಬೆಳಗ್ಗೆ 10ರಿಂದ 12ರವರೆಗೆ ಅಂಧರ ಕಾಲೋನಿ, ಕೆಜಿ ಪುರ ಮುಖ್ಯರಸ್ತೆ, ಸುದ್ದಗುಂಟೆ ಪಾಳ್ಯ, ಉತ್ತರ ಅವೆನ್ಯೂ ರಸ್ತೆ, ಗೋವಿಂದಪುರ ಮುಖ್ಯರಸ್ತೆ, ರಶಾದ್ ನಗರ, ಕೊತ್ತನೂರು ಮತ್ತು ನಾಗೇನಹಳ್ಳಿ ಮುಖ್ಯರಸ್ತೆಯಲ್ಲಿ ವಿದ್ಯುತ್ ವ್ಯತ್ಯಯ ಉಂಟಾಗಲಿದೆ.

  ಉತ್ತರ ವಲಯ: ನ್ಯೂ ಬಿಇಎಲ್ ರಸ್ತೆ, ಡಾಲರ್ಸ್ ಕಾಲೋನಿ, ಮುತ್ಯಾಲನಗರ, ಮಾರುತಿ ನಗರ, ಟಾಟಾನಗರ, ದೇವಿ ನಗರ, ಲೊಟ್ಟೆಗೊಲ್ಲಹಳ್ಳಿ, ಅಕ್ಷಯನಗರ, ತಿರುಮಲ ನಗರ, ಆದಿತ್ಯ ನಗರ, ಶಬರಿನಗರ, ಹೆಗಡೆ ನಗರ, ಸಂಪಿಗೆಹಳ್ಳಿ, ಹೆಸರಘಟ್ಟ ಮುಖ್ಯರಸ್ತೆ, ಭುವನೇಶ್ವರಿ ನಗರ ಮತ್ತು ಟಿ ದಾಸರಹಳ್ಳಿ ಪ್ರದೇಶಗಳಲ್ಲಿ ಬೆಳಗ್ಗೆ 10ರಿಂದ ಸಂಜೆ 5ರವರೆಗೆ ವಿದ್ಯುತ್ ವ್ಯತ್ಯಯ ಉಂಟಾಗಲಿದೆ

  ಇದನ್ನೂ ಓದಿ: Bangalore ಸುತ್ತಮುತ್ತ ಈ ಸ್ಥಳಗಳ ಅಭಿವೃದ್ಧಿಗೆ ಮುಂದಾದ ಸರ್ಕಾರ!

  ಪಶ್ಚಿಮ ವಲಯ: ಬೆಳಗ್ಗೆ 9ರಿಂದ ಸಂಜೆ 5ರವರೆಗೆ ಬಿಎಚ್‌ಇಎಲ್ ಲೇಔಟ್, ವಿದ್ಯಾಪೀಠ ರಸ್ತೆ, ಟಿಜಿ ಪಾಳ್ಯ ಮುಖ್ಯರಸ್ತೆ, ಹೊಸಹಳ್ಳಿಯ ಕೆಲವು ಭಾಗಗಳು, ವಿದ್ಯಾಮಾನನಗರ, ಗಾಂಧಿ ನಗರ, ದುಬಾಸಿಪಾಳ್ಯ, ಉತ್ತರಹಳ್ಳಿ ರಸ್ತೆ, ಕೊಂಚಂದ್ರ ರಸ್ತೆ, ಕೋಡಿಪಾಳ್ಯ, ಅನ್ನಪೂರ್ಣೇಶ್ವರಿ ಲೇಔಟ್, ಕುವೆಂಪು ಮುಖ್ಯರಸ್ತೆ, ಗಂಗಾನಗರ, ಮಲ್ಲತ್ತಳ್ಳಿ ಲೇಔಟ್, ಪೂರ್ವ ಪಶ್ಚಿಮ ಕಾಲೇಜು. ರಸ್ತೆ, ದ್ವಾರಕಾಬಸ ರಸ್ತೆ, ಅಂಬೇಡ್ಕರ್ ನಗರ, ಉಳ್ಳಾಲ ಬಸ್ ನಿಲ್ದಾಣ ಮತ್ತು ಬಿಡಿಎ ಕಾಲೋನಿಯಲ್ಲಿ ವಿದ್ಯುತ್ ವ್ಯತ್ಯಯ ಉಂಟಾಗಲಿದೆ.
  Published by:ranjumbkgowda1 ranjumbkgowda1
  First published: