Bengaluru Rain: ಮಳೆಯ ಆರ್ಭಟಕ್ಕೆ ಬೆಂಗಳೂರಿನಲ್ಲಿ 150 ಮನೆಗಳು ಜಲಾವೃತ; ಇಂದು ಹವಾಮಾನ ಹೇಗಿರಲಿದೆ?

ಭವಾನಿ ನಗರದಲ್ಲಿ ಮನೆಯ ಮುಂದೆ ಪಾರ್ಕ್ ಮಾಡಿದ್ದ ವಾಹನಗಳು ಸಂಪೂರ್ಣ ಜಲಾವೃತಗೊಂಡಿದ್ದವು. ಮಳೆಯ ನೀರನ್ನ ಹೊರಹಾಕಲು ಸ್ಥಳೀಯರು ಹರಸಾಹಸ ಪಟ್ಟರು.

Rajesh Duggumane | news18-kannada
Updated:October 10, 2019, 7:43 AM IST
Bengaluru Rain: ಮಳೆಯ ಆರ್ಭಟಕ್ಕೆ ಬೆಂಗಳೂರಿನಲ್ಲಿ 150 ಮನೆಗಳು ಜಲಾವೃತ; ಇಂದು ಹವಾಮಾನ ಹೇಗಿರಲಿದೆ?
ಸಾಂದರ್ಭಿಕ ಚಿತ್ರ
  • Share this:
ಬೆಂಗಳೂರು (ಅ.10): ಬುಧವಾರ ರಾತ್ರಿ ಸುರಿದ ಭಾರೀ ಮಳೆಗೆ ಬೆಂಗಳೂರು ಅಕ್ಷರಶಃ ತತ್ತರಿಸಿದೆ. ಇಷ್ಟು ದಿನ ಮಳೆ ಬಂದಾಗ ಚರಂಡಿ ಹಾಗೂ ರಸ್ತೆಗಳ ಮೇಲೆ ನದಿಯಂತೆ ಹರಿಯುತ್ತಿದ್ದ ನೀರು ಈಗ ಮನೆಗಳಿಗೆ ನುಗ್ಗಿದೆ. ಪರಿಣಾಮ ಚೆನ್ನನಾಯಕನಹಳ್ಳಿ ಸಮೀಪದ ಭವಾನಿನಗರದಲ್ಲಿ 150ಕ್ಕೂ ಹೆಚ್ಚು ಮನೆಗಳು ಜಲಾವೃತಗೊಂಡಿವೆ.

ಬುಧವಾರ ರಾತ್ರಿ 10 ಗಂಟೆ ಸುಮಾರಿಗೆ ನಗರಾದ್ಯಂತ ಗುಡುಗು ಮಿಂಚು ಸಹಿತ ಮಳೆ ಆಗಿತ್ತು. ಚರಂಡಿಗಳು ತುಂಬಿ ಹರಿದ ಪರಿಣಾಮ ರಸ್ತೆಯ ಮೇಲೆ ನೀರು ನಿಂತು ವಾಹನ ಸವಾರರು ಪರದಾಡುವ ಪರಿಸ್ಥಿತಿ ನಿರ್ಮಾಣವಾಗಿತ್ತು.

ಭವಾನಿ ನಗರದಲ್ಲಿ ಮನೆಯ ಮುಂದೆ ಪಾರ್ಕ್ ಮಾಡಿದ್ದ ವಾಹನಗಳು ಸಂಪೂರ್ಣ ಜಲಾವೃತಗೊಂಡಿದ್ದವು. ಮಳೆಯ ನೀರನ್ನ ಹೊರಹಾಕಲು ಸ್ಥಳೀಯರು ಹರಸಾಹಸ ಪಟ್ಟರು. ಬೆಂಗಳೂರು ನಗರ ಪೊಲೀಸ್ ಆಯುಕ್ತ ಭಾಸ್ಕರ್ ರಾವ್ ಭೇಟಿ ಪರಿಶೀಲನೆ ಕೂಡ ನಡೆಸಿದರು.

“ಮಳೆಯಿಂದ ತೊಂದರೆ ಉಂಟಾದವರಿಗೆ ಕಲ್ಯಾಣ ಮಂಟಪ ಬುಕ್ ಮಾಡಲಾಗಿದೆ. ಸಾಕಷ್ಟು ಮನೆಗಳು ಜಲಾವೃತ ಗೊಂಡಿದ್ದು, ಯಾರೂ ಆತಂಕ ಪಡಬೇಕಿಲ್ಲ. ಈಗಾಗಲೇ ಘಟನಾ ಸ್ಥಳದಲ್ಲಿ ಅಗ್ನಿಶಾಮಕ ಸಿಬ್ಬಂದಿ ಇದ್ದಾರೆ. ಕೆಲವು ಮನೆಗಳ ಒಳಗೆ ನೀರು ಇನ್ನು ತೆಗೆಯುತ್ತಲೇ ಇದ್ದಾರೆ. ನಮ್ಮ ಪೊಲೀಸರಿಗೂ ಸಹ ಸಹಾಯ ಮಾಡುವಂತೆ ಹೇಳಿದ್ದೇನೆ,” ಎಂದರು ಭಾಸ್ಕರ್​ ರಾವ್​.

ಇದನ್ನೂ ಓದಿ: ಬೆಂಗಳೂರಲ್ಲಿ ಇಂದು 2 ಬೃಹತ್ ಪ್ರತಿಭಟನಾ ಮೆರವಣಿಗೆ; ಮೆಜೆಸ್ಟಿಕ್ ಸುತ್ತಮುತ್ತ ಟ್ರಾಫಿಕ್ ಜಾಮ್ ಭೀತಿ

ನಿನ್ನೆ ರಾತ್ರಿ ಮೆಜೆಸ್ಟಿಕ್, ಮೈಸೂರು ಬ್ಯಾಂಕ್ ಸರ್ಕಲ್, ಸಂಜಯ್ ನಗರ, ಹೆಬ್ಬಾಳ, ಶಾಂತಿ ನಗರ, ಯಶವಂತಪುರ, ಕೋರಮಂಗಲ, ಶ್ರೀನಿವಾಸ ನಗರ, ಗಿರಿ ನಗರ ಸೇರಿ ಹಲವು ಸ್ಥಳಗಳಲ್ಲಿ ನಿರಂತರವಾಗಿ ಮಳೆಯಾಗಿತ್ತು.

ಇಂದಿನ ಹವಾಮಾನ ಹೇಗಿರಲಿದೆ?ಇಂದು ಕೂಡ ಬೆಂಗಳೂರಿನಲ್ಲಿ ಮಳೆ ಮುಂದುವರಿಯಲಿದೆ. ಸಂಜೆ ವೇಳೆ ಮಳೆ ಸುರಿಯಲಿದೆ. ಅಲ್ಲದೆ, ರಾತ್ರಿ ಕೂಡ ವರುಣ ಆರ್ಭಟಿಸಲಿದ್ದಾನೆ ಎಂದು ಹವಾಮಾನ ಇಲಾಖೆ ಎಚ್ಚರಿಕೆ ನೀಡಿದೆ.

First published: October 10, 2019, 7:43 AM IST
ಮತ್ತಷ್ಟು ಓದಿರಿ
ಮುಂದಿನ ಸುದ್ದಿ

Top Stories

corona virus btn
corona virus btn
Loading