Bangalore Crime: ಶೂಟ್​ ಮಾಡುವುದಾಗಿ ಬೆದರಿಸಿ ಕಾರು, ಹಣ ದೋಚಿದ ದುಷ್ಕರ್ಮಿಗಳು

Bengaluru Latest News: ಬಳಿಕ ಗಾಯಾಳು ಗಿರೀಶ್​ ಸ್ಥಳೀಯರ ಸಹಾಯದಿಂದ ಪೊಲೀಸರಿಗೆ ಕರೆ ಮಾಡಿದ್ದಾರೆ. ವಿಷಯ ತಿಳಿದ ಪೀಣ್ಯ ಮತ್ತು ರಾಜಗೋಪಾಲನಗರ ಪೊಲೀಸರು ಆರೋಪಿಗಳಿಗಾಗಿ ಬಲೆ ಬೀಸಿದ್ದಾರೆ. ಕಳ್ಳತನ ಮಾಡಿದ್ದ ಕಾರನ್ನು ಹಿಂಬಾಲಿಸಿಕೊಂಡು ಹೋಗಿದ್ದಾರೆ. 

news18-kannada
Updated:January 21, 2020, 11:31 AM IST
Bangalore Crime: ಶೂಟ್​ ಮಾಡುವುದಾಗಿ ಬೆದರಿಸಿ ಕಾರು, ಹಣ  ದೋಚಿದ ದುಷ್ಕರ್ಮಿಗಳು
ಕಾರು ಚಾಲಕ ಗಿರೀಶ್
  • Share this:
ಬೆಂಗಳೂರು(ಜ.21): ದುಷ್ಕರ್ಮಿಗಳು ಕಾರಿನಲ್ಲಿ ಹೋಗುತ್ತಿದ್ದ ವ್ಯಕ್ತಿಯನ್ನು ಅಡ್ಡಗಟ್ಟಿ ಶೂಟ್​ ಮಾಡುವುದಾಗಿ ಬೆದರಿಸಿ ಹಣದ ದೋಚಿರುವ ಘಟನೆ ಬೆಂಗಳೂರಿನಲ್ಲಿ ತಡರಾತ್ರಿ ನಡೆದಿದೆ. 

ಅಮೆಜಾನ್​ ಕಂಪನಿಯಲ್ಲಿ ಕೆಲಸ ಮಾಡುತ್ತಿದ್ದ ಗಿರೀಶ್​ ಎಂಬಾತ ರಾತ್ರಿ ಪಾಳಿ ಮುಗಿಸಿಕೊಂಡು ಮನೆಗೆ ಹೋಗುತ್ತಿದ್ದ. ಈ ವೇಳೆ ಇಟಿಯೋಸ್​ ಕಾರ್​ನಲ್ಲಿ ಬಂದ ದುಷ್ಕರ್ಮಿಗಳು ಗಿರೀಶ್​​ ಕಾರನ್ನು ಅಡ್ಡಗಟ್ಟಿದ್ದಾರೆ.  ಬಳಿಕ ವ್ಯಕ್ತಿಯನ್ನು ಕಾರಿನಿಂದ ಕೆಳಗಿಳಿಸಿ, ಆತನ ಹಣೆಗೆ ಗನ್​ ಇಟ್ಟು ಶೂಟ್​ ಮಾಡುವುದಾಗಿ ಬೆದರಿಸಿದ್ದಾರೆ. ಜತೆಗೆ ಹಲ್ಲೆ ಕೂಡ ನಡೆಸಿದ್ದಾರೆ. ಆತನ ಬಳಿಯಿದ್ದ ಕಾರು, ಹಣ, ಮೊಬೈಲ್​ ಎಲ್ಲವನ್ನೂ ಕದ್ದು ಎಸ್ಕೇಪ್​ ಆಗಿದ್ದಾರೆ.

ಮುತ್ತಪ್ಪ ರೈಗೆ ಕ್ಯಾನ್ಸರ್ ಇರೋದು ನಿಜವಾ? ನ್ಯೂಸ್18 ಜೊತೆ ಅವರು ಹೇಳಿದ್ದೇನು?

ಬಳಿಕ ಗಾಯಾಳು ಗಿರೀಶ್​ ಸ್ಥಳೀಯರ ಸಹಾಯದಿಂದ ಪೊಲೀಸರಿಗೆ ಕರೆ ಮಾಡಿದ್ದಾರೆ. ವಿಷಯ ತಿಳಿದ ಪೀಣ್ಯ ಮತ್ತು ರಾಜಗೋಪಾಲನಗರ ಪೊಲೀಸರು ಆರೋಪಿಗಳಿಗಾಗಿ ಬಲೆ ಬೀಸಿದ್ದಾರೆ. ಕಳ್ಳತನ ಮಾಡಿದ್ದ ಕಾರನ್ನು ಹಿಂಬಾಲಿಸಿಕೊಂಡು ಹೋಗಿದ್ದಾರೆ. ಕಾರು ಚೇಸ್ ಮಾಡುವ ವೇಳೆ ಶ್ರೀನಿವಾಸ್ ಮತ್ತು ಸಿದ್ಧಲಿಂಗಮೂರ್ತಿ ಎಂಬ ಇಬ್ಬರು ಪೇದೆಗಳಿಗೆ ಗಾಯವಾಗಿದೆ ಎಂದು ತಿಳಿದು ಬಂದಿದೆ. ಕಳ್ಳರ ಗ್ಯಾಂಗ್​ ಸೋಲದೇವನಹಳ್ಳಿ ಬಳಿ ಕಾರು ಬಿಟ್ಟು ಪರಾರಿಯಾಗಿದ್ದು, ಪೊಲೀಸರು ಕಾರನ್ನು ವಶಕ್ಕೆ ಪಡೆದಿದ್ದಾರೆ.

ಈ ಘಟನೆ ಬೆಂಗಳೂರಿನ ಪೀಣ್ಯ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ತಡರಾತ್ರಿ 12.30ಕ್ಕೆ ನಡೆದಿದೆ. ಪೀಣ್ಯ ಪೊಲೀಸ್ ಠಾಣೆಯಲ್ಲಿ ಕೇಸ್ ದಾಖಲಾಗಿದೆ.

  
First published: January 21, 2020, 11:31 AM IST
ಮತ್ತಷ್ಟು ಓದಿರಿ
ಮುಂದಿನ ಸುದ್ದಿ

Top Stories

corona virus btn
corona virus btn
Loading