ಕೋಲಾರ ತಾಲೂಕಿನ ಕೆಂದಟ್ಟಿ ಕೆರೆಯ (Kendatti Lake, Kolar) ಬಳಿ ಸಂಜೆ ಮಗುವೊಂದರ ಶವ ಸಿಕ್ಕಿತ್ತು. ಕೂಡಲೇ ಸ್ಥಳಕ್ಕೆ ಭೇಟಿ ನೀಡಿದ ಗ್ರಾಮಾಂತರ ಪೊಲೀಸರು (Police) ಪಕ್ಕದಲ್ಲೇ ನಿಂತಿದ್ದ ಕಾರ್ ಪರಿಶೀಲನೆ ನಡೆಸಿ ಮಾಹಿತಿ ಕಲೆಹಾಕಿ ಮನೆಯವರಿಗೆ ವಿಷಯ ತಿಳಿಸಿದ್ದರು. ಸ್ಥಳಕ್ಕೆ ಬಂದ ಬೆಂಗಳೂರಿನ ಬಾಗಲೂರು (Bagaluru, Bengaluru) ನಿವಾಸಿ ಭವ್ಯ ಎಂಬವರು ಮಗು ನನ್ನದೇ, ತಂದೆ ರಾಹುಲ್ ಜೊತೆಗೆ ಇಂದು ಶಾಲೆಗೆ ಹೋಗಿದ್ದಳು ಎಂದು ಮಾಹಿತಿ ನೀಡಿದ್ದರು. ಬೆಳಗ್ಗೆ ಅಗ್ನಿಶಾಮಕದಳ ಸಿಬ್ಬಂದಿ ಸಹಾಯದೊಂದಿಗೆ ತಂದೆಯೂ ಕೆರೆಯಲ್ಲಿ ಮುಳುಗಿ ಸಾವನ್ನಪ್ಪಿರಬಹುದು ಎಂಬ ಶಂಕೆಯಿಂದ ಪೊಲೀಸರು ಹುಡುಕಾಟ (Searching) ನಡೆಸಿದ್ದರು. ಆದರೆ ದಿನವಿಡೀ ಹುಡುಕಿದರೂ ರಾಹುಲ್ ಮೃತದೇಹ ಸಿಕ್ಕಿರಲಿಲ್ಲ. ತನಿಖೆಯ (Investigation) ಆರಂಭದಲ್ಲಿ ಗುಜರಾತ್ ಮೂಲದ ಸಾಫ್ಟ್ವೇರ್ ಟೆಕ್ಕಿ (Techie) ರಾಹುಲ್ ಮಗಳನ್ನು ಕೊಂದು (Daughter Murder) ಆತ್ಮಹತ್ಯೆ ಮಾಡಿಕೊಂಡಿದ್ದಾನೆ ಎಂದು ಪೊಲೀಸರು ಅನುಮಾನ ವ್ಯಕ್ತಪಡಿಸಿದ್ದರು. ಈಗ ಪ್ರಕರಣಕ್ಕೆ ಟ್ವಿಸ್ಟ್ ಸಿಕ್ಕಿದೆ.
ಗುಜರಾತ್ ಮೂಲದ ರಾಹುಲ್ ಸಾಫ್ಟ್ವೇರ್ ಎಂಜಿನಿಯರ್. ಬೆಂಗಳೂರಿನ ಬಾಗಲೂರಿನಲ್ಲಿ ಪ್ರೀತಿಸಿ ಮದುವೆಯಾಗಿದ್ದ ಭವ್ಯ ಜೊತೆಗೆ ರಾಗಾ ಅಪಾರ್ಟ್ಮೆಂಟ್ನಲ್ಲಿ ವಾಸವಿದ್ದನು. ರಾಹುಲ್-ಭವ್ಯ ದಂಪತಿಗೆ ಜಿಯಾ ಹೆಸರಿನ ಮೂರು ವರ್ಷದ ಹೆಣ್ಣು ಮಗು ಸಹ ಇತ್ತು.
ಕೆಲಸವಿಲ್ಲದೇ ಕುಳಿತಿದ್ದ ರಾಹುಲ್
ಒಂದೂವರೆ ವರ್ಷದಿಂದ ಕೆಲಸವಿಲ್ಲದೇ ಕುಳಿತಿದ್ದ ರಾಹುಲ್, 2016 ರಿಂದ ಬಿಟ್ಕಾಯಿನ್ ಮೇಲೆ ಹೂಡಿಕೆ ಮಾಡಿ ಸಾಕಷ್ಟು ನಷ್ಟ ಅನುಭವಿಸಿದ್ದನು. ಮನೆಯಲ್ಲಿ ಚಿನ್ನಾಭರಣ ಕಳ್ಳತನವಾಗಿದೆ (Gold Theft Case) ಎಂದು ಬಾಗಲೂರು ಪೊಲೀಸ್ ಠಾಣೆಯಲ್ಲಿ (Bagaluru Police Station) ರಾಹುಲ್ ದೂರು ದಾಖಲಿಸಿದ್ದನು.
ಪೊಲೀಸರಿಗೆ ತನಿಖೆಯನ್ನು ಚಿನ್ನವನ್ನ ರಾಹುಲ್ ಅಡವಿಟ್ಟ ಮಾಹಿತಿ ಲಭ್ಯವಾಗಿತ್ತು. ಈ ಹಿನ್ನೆಲೆ ಪೊಲೀಸರು ರಾಹುಲ್ ಮತ್ತು ಭವ್ಯಾಗೆ ಠಾಣೆಗೆ ಬರಲು ಹೇಳಿದ್ದರು. ಇತ್ತ ಸಾಲಗಾರರು ಸಹ ರಾಹುಲ್ ಮನೆ ಮುಂದೆ ಬಂದು ನಿಂತಿದ್ದರು.
ಆತ್ಮಹತ್ಯೆಗೆ ನಿರ್ಧರಿಸಿದ್ದ ಟೆಕ್ಕಿ
ನವೆಂಬರ್ 15ರಂದು ಮಗಳ ಜೊತೆ ಮನೆಯಿಂದ ಬಂದ ರಾಹುಲ್, ಆತ್ಮಹತ್ಯೆ ಮಾಡಿಕೊಳ್ಳಲು ಮುಂದಾಗಿದ್ದನು. ಶಾಲೆಗೆ ಹೋಗದೇ ಮಗಳ ಜೊತೆ ನೇರವಾಗಿ ಹೊಸಕೋಟೆ ಮಾರ್ಗವಾಗಿ ಕೋಲಾರ ತಾಲೂಕಿನ ಕೆಂದಟ್ಟಿ ಗ್ರಾಮದ ಕೆರೆಯ ಬಳಿ ಬಂದಿದ್ದಾನೆ.
ಬಂಗಾರಪೇಟೆಯಿಂದ ಅಲೆದಾಟ
ಮಗುವನ್ನು ಕೊಂದು ಎದೆಗಪ್ಪಿಕೊಂಡು ಕೆರೆಗೆ ಹಾರಿದ್ದಾನೆ. ಆದ್ರೆ ಆಳವಿಲ್ಲದ ಕಾರಣ ರಾಹುಲ್ ಬದುಕಿ ಉಳಿದಿದ್ದಾನೆ. ಆದ್ರೆ ಹಸುಳೆ ಕಂದಮ್ಮ ಉಸಿರು ಚೆಲ್ಲಿತ್ತು. ಕೊನೆಗೆ ಭಯಗೊಂಡ ರಾಹುಲ್, ಕಾರ್ನಲ್ಲಿಯೇ ಮೊಬೈಲ್, ಪರ್ಸ್ ಎಲ್ಲವೂ ಬಿಟ್ಟು ಅಪರಿಚಿತರ ಬಳಿ ಬೈಕ್ನಲ್ಲಿ ಡ್ರಾಪ್ ತೆಗೆದುಕೊಂಡು ಬಂಗಾರಪೇಟೆ ರೈಲ್ವೇ ಸ್ಟೇಶನ್ ತಲುಪಿದ್ದಾನೆ.
ಇದನ್ನೂ ಓದಿ: Non Hindu Traders: ವಿವಿ ಪುರಂ ಸುಬ್ರಮಣ್ಯ ಜಾತ್ರೆಗೆ ಹಿಂದೂಯೇತರ ವ್ಯಾಪಾರಿಗಳಿಗೆ ಅನುಮತಿ ನೀಡದಂತೆ ಒತ್ತಡ
ರೈಲು ಹತ್ತಿ ಹೊರಟ ರಾಹುಲ್ ತಮಿಳುನಾಡು, ಆಂಧ್ರ ಪ್ರದೇಶ, ಮಹಾರಾಷ್ಟ್ರ, ದೆಹಲಿ ಸೇರಿದಂತೆ ಹಲವು ರಾಜ್ಯಗಳನ್ನು ಸುತ್ತಿದ್ದಾನೆ. ಪ್ರಯಾಣದ ವೇಳೆಯೂ ರೈಲಿನಿಂದ ಜಿಗಿದು ಸಾಯಲು ಪ್ರಯತ್ನಿಸಿದ್ದಾನೆ. ಆದ್ರೆ ಸಾಧ್ಯವಾಗಿಲ್ಲ.
ಕಿಡ್ನ್ಯಾಪ್ ಕಥೆ ಹೇಳಿದ್ದ ರಾಹುಲ್
ಕೆಲ ದಿನಗಳ ಬಳಿಕ ಪತ್ನಿಗ ಭವ್ಯಾಗೆ ಫೋನ್ ಮಾಡಿದ ರಾಹುಲ್ ತನ್ನನ್ನು ಮತ್ತು ಮಗಳನ್ನು ಅಪಹರಣ ಮಾಡಿದ್ದಾರೆ ಎಂದು ಹೇಳಿದ್ದಾನೆ. ಕೂಡಲೇ ಭವ್ಯಾ ಈ ವಿಷಯವನ್ನು ಪೊಲೀಸರಿಗೆ ನೀಡಿದ್ದಾರೆ.
ಇದನ್ನೂ ಓದಿ: Mangaluru Blast: ಶಾರೀಕ್ಗೆ ಬೆಂಗಳೂರಿನಲ್ಲಿ ಗರ್ಲ್ ಫ್ರೆಂಡ್; ಬಂದಾಗೆಲ್ಲ ಆಕೆಯ ಜೊತೆ ಸುತ್ತಾಟ
ಬೆಂಗಳೂರಿನಲ್ಲಿ ಅರೆಸ್ಟ್
ಫೋನ್ ಕರೆಯ ಬೆನ್ನತ್ತಿದ್ದ ಪೊಲೀಸರಿಗೆ ರಾಹುಲ್ ಬೆಂಗಳೂರಿಗೆ ಆಗಮಿಸುತ್ತಿರುವ ವಿಷಯ ತಿಳಿದಿದೆ. ಬೆಂಗಳೂರಿನಲ್ಲಿ ರಾಹುಲ್ನನ್ನು ಬಂಧಿಸಿ ವಿಚಾರಣೆ ನಡೆಸಿದಾಗ ಮಗಳನ್ನು ಕೊಲೆ ಮಾಡಿರುವ ವಿಷಯವನ್ನು ಬಾಯಿ ಬಿಟ್ಟಿದ್ದಾನೆ.
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ