• Home
  • »
  • News
  • »
  • state
  • »
  • Bengaluru Tech Summit: ಬಂಗಾರದಂಥ ಹೃದಯವಂತರು ಇರುವ ಊರು ಬೆಂಗಳೂರು, ರಾಜಧಾನಿಯನ್ನು ಕೊಂಡಾಡಿದ ಸಿಎಂ ಬೊಮ್ಮಾಯಿ

Bengaluru Tech Summit: ಬಂಗಾರದಂಥ ಹೃದಯವಂತರು ಇರುವ ಊರು ಬೆಂಗಳೂರು, ರಾಜಧಾನಿಯನ್ನು ಕೊಂಡಾಡಿದ ಸಿಎಂ ಬೊಮ್ಮಾಯಿ

ಸಿಎಂ ಬಸವರಾಜ ಬೊಮ್ಮಾಯಿ

ಸಿಎಂ ಬಸವರಾಜ ಬೊಮ್ಮಾಯಿ

ಬೆಂಗಳೂರಿನಲ್ಲಿ ಮಹಾ ಸರಸ್ವತಿ ನೆಲೆಸಿದ್ದಳು. ಈಗ ಮಹಾಲಕ್ಷ್ಮಿ‌ ಕೂಡ ನೆಲೆಸಿದ್ದಾಳೆ. ಮುಂದಿನ ಟೆಕ್ ಸಮ್ಮಿಟ್​​ಗೆ ಎಲ್ಲರೂ ಸೇರೋಣ. ಆಗ ಈಗಿನದಕ್ಕಿಂತ ಹೆಚ್ಚು ಯಶಸ್ವಿ ಉದ್ಯಮಿಗಳು ಬರುವಂತಾಗಲಿ ಎಂದು ಸಿಎಂ ಬೊಮ್ಮಾಯಿ ಹೇಳಿದ್ದಾರೆ.

  • Share this:

ಬೆಂಗಳೂರು (ನ.18): ಬೆಂಗಳೂರು ಟೆಕ್ ಶೃಂಗಸಭೆಯಲ್ಲಿ (Bengaluru Tech Summit) ಸಿಲಿಕಾನ್​ ಸಿಟಿಯನ್ನು ಸಿಎಂ ಬಸವರಾಜ ಬೊಮ್ಮಾಯಿ ಹೊಗಳಿದ್ದಾರೆ. ಬಂಗಾರದ ಊರು ಅಂದರೆ ಅದು ಬೆಂಗಳೂರು. ಬಂಗಾರದಂಥ ಹೃದಯವಂತರು ಇರುವ ಊರು ಬೆಂಗಳೂರು. ಬೆಂಗಳೂರು ಉದ್ಯಮದಲ್ಲಿ ನಂಬರ್ ಒನ್ ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ (CM Basavaraj Bommai) ಹೇಳಿದ್ದಾರೆ.


ಟೆಕ್ ಶೃಂಗಸಭೆಗೆ ಇಂದು ತೆರೆ


ಕಳೆದ 3 ದಿನಗಳಿಂದ ಬೆಂಗಳೂರು ಅರಮನೆ ಮೈದಾನದಲ್ಲಿ ನಡೆದ ಟೆಕ್ ಶೃಂಗಸಭೆಗೆ ಇಂದು ತೆರೆ ಬಿದ್ದಿದೆ. ಕೊನೆದಿನದ ಶೃಂಗಸಭೆಯಲ್ಲಿ ಮಾತನಾಡಿದ ಅವರು ನಂಬರ್ ಒನ್ ಪಟ್ಟ ಉಳಿಸಿಕೊಳ್ಳುವುದೇ ನಮ್ಮ ಸರ್ಕಾರಕ್ಕೆ ದೊಡ್ಡ ಸವಾಲು. ಹಿಂದೆ ಬೆಂಗಳೂರಿನಲ್ಲಿ ಮಹಾ ಸರಸ್ವತಿ ನೆಲೆಸಿದ್ದಳು. ಈಗ ಮಹಾಲಕ್ಷ್ಮಿ‌ ಕೂಡ ನೆಲೆಸಿದ್ದಾಳೆ. ಮುಂದಿನ ಟೆಕ್ ಸಮ್ಮಿಟ್​​ಗೆ ಎಲ್ಲರೂ ಸೇರೋಣ. ಆಗ ಈಗಿನದಕ್ಕಿಂತ ಹೆಚ್ಚು ಯಶಸ್ವಿ ಉದ್ಯಮಿಗಳು ಬರುವಂತಾಗಲಿ. ಮುಂದಿನ ಟೆಕ್ ಸಮ್ಮಿಟ್ ಬಿಯಾಂಡ್ ಬೆಂಗಳೂರು ಆಗಲಿದೆ ಎಂದು ಆಶಯ ವ್ಯಕ್ತಪಡಿಸಿದರು.


bengaluru tech summit bengaluru is number one in industry-says
ಸಿಎಂ ಬಸವರಾಜ ಬೊಮ್ಮಾಯಿ


ಟೆಕ್ ಶೃಂಗಸಭೆಯಲ್ಲಿ ಒಟ್ಟು 32 ದೇಶಗಳು ಭಾಗಿಯಾಗಿದ್ದವು


ಬೆಂಗಳೂರಿನ ಟೆಕ್ ಶೃಂಗಸಭೆ ಸಭೆಯಲ್ಲಿ ಒಟ್ಟು 32 ದೇಶಗಳು ಭಾಗಿಯಾಗಿದ್ದವು ಎಂದು ಐಟಿ-ಬಿಟಿ ಸಚಿವ ಅಶ್ವತ್ಥ ನಾರಾಯಣ ತಿಳಿಸಿದ್ದಾರೆ. ಒಟ್ಟು 12 ಒಪ್ಪಂದಗಳಿಗೆ ಸಹಿ ಹಾಕಲಾಗಿದ್ದು, 72 ಸಂವಾದಗಳು ನಡೆದಿವೆ ಎಂದರು. 405 ಭಾಷಣಕಾರರು, 9,356 ಉದ್ಯಮಿ ಪ್ರತಿನಿಧಿಗಳು‌ ಭಾಗಿಯಾಗಿದ್ದು, ಟೆಕ್ ಶೃಂಗಸಭೆಯಲ್ಲಿ 585 ಸ್ಟಾಲ್‌ಗಳನ್ನು ತೆರೆಯಲಾಗಿತ್ತು. 25,728ಕ್ಕೂ ಹೆಚ್ಚು ಜನ ಸ್ಟಾಲ್‌ಗಳಿಗೆ ಭೇಟಿ ಕೊಟ್ಟಿದ್ದಾರೆ ಎಂದು ಮಾಹಿತಿ ನೀಡಿದರು.


ನಂ 1 ಸ್ಥಾನ ತಲುಪಲು ಕಠಿಣ ಪರಿಶ್ರಮ


ಬೆಂಗಳೂರು ಮತ್ತು ಕರ್ನಾಟಕದಲ್ಲಿ ತಯಾರಾಗುವ ಪ್ರತಿಯೊಂದು ಉತ್ಪನ್ನವೂ ಚಿನ್ನದ ಗುಣಮಟ್ಟವನ್ನು ಹೊಂದಿದೆ. ಇದರ ಹಿಂದೆ ಉದ್ಯಮಿಗಳು ಮತ್ತು ಕೌಶಲ್ಯಯುತ ಸಿಬ್ಬಂದಿಯ ಶ್ರದ್ಧೆ ಮತ್ತು ಕಠಿಣ ಪರಿಶ್ರಮವಿದೆ. ಕರ್ನಾಟಕ ಮಾಹಿತಿ ತಂತ್ರಜ್ಞಾನ ಕ್ಷೇತ್ರದಲ್ಲಿ ನಂ 1 ಸ್ಥಾನ ತಲುಪಲು ಕಠಿಣ ಪರಿಶ್ರಮ ಹಾಕಿದೆ. ಆ ಸ್ಥಾನವನ್ನು ಉಳಿಸಿಕೊಂಡು ಹೋಗಲು ಇನ್ನೂ ಹೆಚ್ಚಿನ ಕಠಿಣ ಪರಿಶ್ರಮ ಹಾಕಬೇಕು. ಇದು ಸರ್ಕಾರಕ್ಕೆ ಸವಾಲೂ ಆಗಿದೆ. ಈ ಪಟ್ಟವನ್ನು ಉಳಿಸಿಕೊಂಡು ಹೋಗುತ್ತೇವೆ ಎಂದು ಬೊಮ್ಮಾಯಿ ತಿಳಿಸಿದರು.


ಕರ್ನಾಟಕ ವಿದೇಶಿ ಬಂಡವಾಳ ಹೂಡಿಕೆ ಹಾಗೂ ನವೋದ್ಯಮಗಳಲ್ಲಿ ಉತ್ತಮ ಸ್ಥಾನದಲ್ಲಿದೆ. ಬೆಂಗಳೂರು ಬಿಟ್ಟು ರಾಜ್ಯದ ಇತರ ನಗರಗಳೂ ಅಭಿವೃದ್ಧಿಯಾಗಬೇಕು. ಕೃಷಿ, ತಂತ್ರಜ್ಞಾನ, ಆರ್ಥಿಕತೆ ಹೀಗೆ ಎಲ್ಲ ರಂಗಗಳಲ್ಲಿಯೂ ಕರ್ನಾಟಕ ಹಾಗೂ ಬೆಂಗಳೂರು ಅತ್ಯುತ್ತಮ ಶ್ರೇಯಾಂಕ ಹೊಂದಿದೆ. ಇದರಿಂದಾಗಿ ನಮ್ಮ ಜವಾಬ್ದಾರಿಯೂ ಹೆಚ್ಚಿದೆ ಎಂದು ಹೇಳಿದರು.


ಹಾಸ್ಪಿಟಾಲಿಟಿ ಪ್ರಶಸ್ತಿಗೆ ರಾಮೋಜಿ ಫಿಲ್ಮ್ ಸಿಟಿ ಆಯ್ಕೆ


ಬೆಂಗಳೂರು: ದಕ್ಷಿಣ ಭಾರತದ ಅತ್ಯುತ್ತಮ ಪ್ರವಾಸೋದ್ಯಮ ಮತ್ತು ಹಾಸ್ಪಿಟಾಲಿಟಿ ಪ್ರಶಸ್ತಿಗೆ ರಾಮೋಜಿ ಫಿಲ್ಮ್ ಸಿಟಿ ಭಾಜನವಾಗಿದೆ. ಪ್ರವಾಸೋದ್ಯಮ ಮತ್ತು ಆತಿಥ್ಯ ಕ್ಷೇತ್ರಗಳ ಅಭಿವೃದ್ಧಿಯಲ್ಲಿ ಪ್ರಮುಖ ಪಾತ್ರ ವಹಿಸುತ್ತಿರುವ ರಾಮೋಜಿ ಫಿಲ್ಮ್ ಸಿಟಿಯನ್ನು ಈ ಪ್ರಶಸ್ತಿಗೆ ಆಯ್ಕೆ ಮಾಡಲಾಗಿದೆ ಎಂದು ದಕ್ಷಿಣ ಭಾರತೀಯ ಹೋಟೆಲ್ ಮತ್ತು ರೆಸ್ಟೋರೆಂಟ್‌ಗಳ ಸಂಘ (SIHRA) ಪ್ರಕಟಿಸಿದೆ.


ಬೆಂಗಳೂರಿನ ಶಾಂಗ್ರಿಲಾ ಹೋಟೆಲ್‌ನಲ್ಲಿ ಶುಕ್ರವಾರ ನಡೆದ ಸಂಘದ ವಾರ್ಷಿಕ ಸಭೆಯಲ್ಲಿ ಕರ್ನಾಟಕದ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರು ರಾಮೋಜಿ ಫಿಲಂ ಸಿಟಿ ಎಂಡಿ ಸಿ.ಎಚ್.ವಿಜಯೇಶ್ವರಿ ಅವರಿಗೆ ಪ್ರಶಸ್ತಿ ಪ್ರದಾನ ಮಾಡಿದರು.


ಇದನ್ನೂ ಓದಿ: Karnataka Elections: ಹಳೇ ಗಂಡನ ಪಾದವೇ ಗತಿ: 'ಅನರ್ಹ'ರನ್ನು ಪಕ್ಷಕ್ಕೆ ಆಹ್ವಾನಿಸಿದ ಡಿಕೆಶಿಗೆ ಸಚಿವನ ತಿರುಗೇಟು!


ವಿವಿಧ ವಿಭಾಗಗಳಲ್ಲಿ  19 ಪ್ರಶಸ್ತಿ


ವಿಶಾಖಪಟ್ಟಣದ ನೊವೊಟೆಲ್ ಜತೆಗೆ ದಕ್ಷಿಣದ 19 ಹೊಟೇಲ್ ಮತ್ತು ರೆಸಾರ್ಟ್ ಗಳಿಗೆ ವಿವಿಧ ವಿಭಾಗಗಳಲ್ಲಿ ಪ್ರಶಸ್ತಿ ನೀಡಲಾಗುವುದು ಎಂದು ನಿರ್ವಹಣಾ ಸಂಘದ ಅಧ್ಯಕ್ಷ ಕೆ.ಶ್ಯಾಮರಾಜು ಮಾಹಿತಿ ನೀಡಿದ್ದರು. ಕರ್ನಾಟಕ ಪ್ರವಾಸೋದ್ಯಮ ಸಚಿವ ಆನಂದ್ ಸಿಂಗ್, ತಮಿಳುನಾಡು, ಆಂಧ್ರಪ್ರದೇಶ ಮತ್ತು ತೆಲಂಗಾಣ ರಾಜ್ಯಗಳ ಸಚಿವರು ಈ ಸಂಘದ ಉದ್ಘಾಟನಾ ಸಮಾರಂಭದಲ್ಲಿ ಪಾಲ್ಗೊಂಡಿದ್ದರು.

Published by:ಪಾವನ ಎಚ್ ಎಸ್
First published: