HOME » NEWS » State » BENGALURU TEACHER WHO PUT UP 1947 RE 1 COIN ON OLX DUPED BY RS ONE LAC HG

OLX ಮೂಲಕ ಹಳೆಯ 1 ರೂ. ನಾಣ್ಯ ಮಾರಲು ಹೋದ ಶಿಕ್ಷಕಿ ಕಳೆದುಕೊಂಡದ್ದು ಭಾರೀ ಮೊತ್ತ!

OLX Fraud: ಸರ್ಜಾಪುರದ ರಸ್ತೆ , ವಿಪ್ರೋ ಗೇಟ್​ ಬಳಿ ವಾಸಿಸುವ 38 ವರ್ಷದ ಶಿಕ್ಷಕಿಯೊಬ್ಬರು  1947ರ ಇಸವಿಯ 1 ರೂ. ನಾಣ್ಯವನ್ನು ಓಎಲ್​ಎಕ್ಸ್​ನಲ್ಲಿ ಮಾರಾಟ ಮಾಡಲು ಮುಂದಾದರು. ಜತೆಗೆ ಮೊಬೈಲ್​ ನಂಬರ್​ ಅಪ್​ಲೋಡ್​ ಮಾಡಿದ್ದರು.

news18-kannada
Updated:June 24, 2021, 1:26 PM IST
OLX ಮೂಲಕ ಹಳೆಯ 1 ರೂ. ನಾಣ್ಯ ಮಾರಲು ಹೋದ ಶಿಕ್ಷಕಿ ಕಳೆದುಕೊಂಡದ್ದು ಭಾರೀ ಮೊತ್ತ!
OLX
  • Share this:
ಬೆಂಗಳೂರು (ಜೂ,24): ಹಣ ಮಾಡುವ ಆಸೆ ಯಾರಿಗಿಲ್ಲ ಹೇಳಿ? ಪ್ರತಿಯೊಬ್ಬರಿಗೂ ವೇಗವಾಗಿ ಹಣ ಮಾಡುವ  ಆಸೆಯನ್ನಿಟ್ಟುಕೊಂಡಿರುತ್ತಾರೆ. ಅದಕ್ಕಾಗಿ ಬೇರೆ ಬೇರೆ ದಾರಿ ಕಂಡುಕೊಳ್ಳುತ್ತಾರೆ. ಅದರಂತೆ ಇಲ್ಲೊಬ್ಬಳು ಶಿಕ್ಷಕಿಯೂ ಹಣ ಮಾಡಬೇಕು ಎಂದು ಹಳೆಯ 1 ರೂ. ನಾಣ್ಯವನ್ನು ಓಎಲ್​ಎಕ್ಸ್​ ತಾಣದಲ್ಲಿ ಮಾರಾಟ ಮಾಡಲು ಮುಂದಾಗಿದ್ದಾಳೆ. ಆದರೆ ಆಕೆಯ 1 ರೂ. ನಾಣ್ಯದಿಂದಾಗಿ 1 ಲಕ್ಷವನ್ನು ಕಳೆದುಕೊಳ್ಳುವ ಮೂಲಕ ಪಂಗನಾಮ ಹಾಕಿಸಿಕೊಂಡಿದ್ದಾಳೆ.

ಇತ್ತೀಚೆಗೆ ಹಳೆಯ ನಾಣ್ಯ, ನೋಟಿನಿಂದ ಅಷ್ಟು ಹಣಹಳಿಸಬಹುದು.. ಹಳೆಯ 25 ಪೈಸೆ ನಾಣ್ಯ ಮಾರುವ ಮೂಲಕ ಕೋಟಿ ಸಂಪಾದಿಸಬಹುದು ಎಂಬ ಸುದ್ದಿ ಸಾಮಾಜಿಕ ಜಾಲತಾಣದಲ್ಲಿ ಹರಿದಾಡುತ್ತಿದೆ. ಅದರಂತೆ ಸರ್ಜಾಪುರದ ರಸ್ತೆ , ವಿಪ್ರೋ ಗೇಟ್​ ಬಳಿ ವಾಸಿಸುವ 38 ವರ್ಷದ ಶಿಕ್ಷಕಿಯೊಬ್ಬರು  1947ರ ಇಸವಿಯ 1 ರೂ. ನಾಣ್ಯವನ್ನು ಓಎಲ್​ಎಕ್ಸ್​ನಲ್ಲಿ ಮಾರಾಟ ಮಾಡಲು ಮುಂದಾದರು. ಜತೆಗೆ ಮೊಬೈಲ್​ ನಂಬರ್​ ಅಪ್​ಲೋಡ್​ ಮಾಡಿದ್ದರು.

ಇದನ್ನು ತಿಳಿದ ಅಪರಿತ ವ್ಯಕ್ತಿ ಆಕೆಗೆ ಕರೆ ಮಾಡಿ 1 ಕೋಟಿಗೆ ಖರೀದಿ ಮಾಡುವುದಾಗಿ ನಂಬಿಸಿದ್ದ. ಆನಂತರ ಹಣ ವರ್ಗಾಯಿಸುವುದಾಗಿ ನಕಲಿ ಸ್ಕ್ರೀನ್​ ಶಾಟ್​ ತೆಗೆದು ಶಿಕ್ಷಕಿಯ ವಾಟ್ಸ್ಆ್ಯಪ್ ಖಾತೆಗೆ ಕಳುಹಿಸಿದ್ದ. ಇದನ್ನು ನಂಬಿದ್ದ ಶಿಕ್ಷಕಿಯ ಖಾತೆ ಹಣ ಬಂದಿರಲಿಲ್ಲ. ಆಗ ಶಿಕ್ಷಕಿ ಅಪರಿಚಿತ ವ್ಯಕ್ತಿಗೆ ಕರೆ ಮಾಡಿದ್ದಾಳೆ. ನಂತರ ಹಣ ಬಂದಿಲ್ಲ ಎಂದು ಕೇಳಿದ್ದಾಳೆ.

ಅದಕ್ಕೆ ವಂಚಕನು ದೊಡ್ಡ ಮೊತ್ತದ ಹಣ ವರ್ಗಾಯಿಸಿದರೆ ಮಾತ್ರ ಹಣ ಬರುವುದಾಗಿ ನಂಬಿಸಿದ್ದಾನೆ. ಅದಕ್ಕಾಗಿ ಆಕೆ ಆತನ ಬ್ಯಾಂಕ್​ ಖಾತೆಗೆ ಹಣ ಕಳುಹಿಸಿದ್ದಾಳೆ. ಆದರೂ ಶಿಕ್ಷಕಿಯ ಖಾತೆಗೆ ಹಣ ವರ್ಗಾವಣೆ ಆಗುವುದಿಲ್ಲ. ವಂಚಕ ಮತ್ತೆ ಹಣ ಕಳುಹಿಸುವಂತೆ ಕೇಳಿದ್ದಾನೆ. ಇದರಿಂದ ಅನುಮಾನ ಬಂದ ಶಿಕ್ಷಕಿ ವಂಚಕನ ಮೇಲೆ ದೂರು ನೀಡಿದ್ದಾಳೆ. ಸದ್ಯ ಈ ಪ್ರಕರಣವನ್ನು ಕೈಗೆತ್ತಿಕೊಂಡಿರುವ ಪೊಲೀಸರು ತನಿಖೆ ನಡೆಸುತ್ತಿದ್ದಾರೆ.
Published by: Harshith AS
First published: June 24, 2021, 1:26 PM IST
ಮತ್ತಷ್ಟು ಓದಿರಿ
ಮುಂದಿನ ಸುದ್ದಿ

Top Stories