ವಿಡಿಯೋ: ಬೆಂಗಳೂರು ಪೊಲೀಸ​ರಿಂದ ಅಮಾನುಷ ಕೃತ್ಯ; ಆರೋಪಿಗೆ ಮೂರನೇ ದರ್ಜೆ ಟಾರ್ಚರ್​ ನೀಡಿದ ಎಸ್​ಐ

ಕೆಲವು ದಿನಗಳ ಹಿಂದೆ ಕುಮಾರಸ್ವಾಮಿ ಲೇಔಟ್​ ಪೊಲೀಸ್​ ಠಾಣೆಗೆ ದೂರು ಕೊಡಲು ಬಂದ ಮಹಿಳೆ ಮೇಲೆ ಹಲ್ಲೆ ನಡೆಸಿದ್ದರು. ಆಗ ಅಲ್ಲಿನ 72 ಜನ ಪೊಲೀಸ್​ ಕಾನ್ಸ್​ಟೇಬಲ್​ಗಳಲ್ಲಿ 71 ಜನರನ್ನು  ಏಕಾಏಕಿ ವರ್ಗಾವಣೆ ಮಾಡಲಾಗಿತ್ತು. ಇದೀಗ ಅದೇ ರೀತಿಯ ಮತ್ತೊಂದು ಅಮಾನವೀಯ ಘಟನೆ ನಗರದ ಠಾಣೆಯಲ್ಲಿ ನಡೆದಿದೆ

Latha CG | news18-kannada
Updated:September 12, 2019, 2:11 PM IST
ವಿಡಿಯೋ: ಬೆಂಗಳೂರು ಪೊಲೀಸ​ರಿಂದ ಅಮಾನುಷ ಕೃತ್ಯ; ಆರೋಪಿಗೆ ಮೂರನೇ ದರ್ಜೆ ಟಾರ್ಚರ್​ ನೀಡಿದ ಎಸ್​ಐ
ಆರೋಪಿಗೆ ಅಮಾನುಷವಾಗಿ ಥಳಿಸುತ್ತಿರುವ ದೃಶ್ಯ
  • Share this:
ಬೆಂಗಳೂರು(ಸೆ.12): ಜನಸಾಮಾನ್ಯರು ಕಾನೂನನ್ನು ಗಾಳಿಗೆ ತೂರುವುದು ಎಷ್ಟು ತಪ್ಪೋ, ಕಾನೂನು ಪಾಲನೆ ಮಾಡುವ ಪೊಲೀಸರು ಪಾಲಿಸದಿರುವುದೂ ಅಷ್ಟೇ ದೊಡ್ಡ ತಪ್ಪು. ಯಾವುದೇ ಪ್ರಕರಣವಿರಲಿ ಆರೋಪಿಯ ಮೇಲೆ ಮೂರನೆ ದರ್ಜೆಯ ಹಿಂಸಾಚಾರ ಮಾಡುವ ಹಕ್ಕು ಪೊಲೀಸ್​ ಅಧಿಕಾರಿಗಳಿಗೆ ಇರುವುದಿಲ್ಲ. ಮಾನ್ಯ ಸರ್ವೋಚ್ಛ ನ್ಯಾಯಾಲಯ ಪೊಲೀಸರ ಮೂರನೇ ದರ್ಜೆ ಟಾರ್ಚರ್​ ವಿರುದ್ಧ ಹಲವಾರು ಬಾರಿ ಆಕ್ರೋಶ ವ್ಯಕ್ತಪಡಿಸಿದೆ. 

ಈಗ ಬೆಂಗಳೂರು ನಗರದಲ್ಲಿ ಇಂತದ್ದೇ ಒಂದು ಅಮಾನುಷ ಕೃತ್ಯ ಬೆಳಕಿಗೆ ಬಂದಿದ್ದು, ಸುಬ್ರಮಣ್ಯನಗರ ಪೊಲೀಸ್​ ಸಬ್​ ಇನ್ಸ್​ಪೆಕ್ಟರ್​ ಶ್ರೀಕಂಠೇಗೌಡ ಆರೋಪಿ ಒಬ್ಬನಿಗೆ ಕೈಕಾಲು ಕಟ್ಟಿ ಲಾಠಿ, ಹಾಕಿ ಬ್ಯಾಟ್​​ನಿಂದ ಹೊಡೆದಿರುವ ವಿಡಿಯೋ ವೈರಲ್​ ಆಗಿದೆ. ವ್ಯಕ್ತಿಯ ವಿರುದ್ಧ ಆರೋಪ ಕೇಳಿ ಬಂದ ತಕ್ಷಣ, ಸ್ವತಃ ಪೊಲೀಸರೇ ನ್ಯಾಯಾಧೀಶರಂತೆ ತೀರ್ಪು ನೀಡಿ, ಅಮಾನವೀಯವಾಗಿ ಟಾರ್ಚರ್​ ನೀಡಿರುವ ಘಟನೆಗೆ ರಾಜ್ಯದೆಲ್ಲೆಡೆ ಖಂಡನೆ ವ್ಯಕ್ತವಾಗಿದೆ.

ಯುವತಿಗೆ ಲೈಂಗಿಕ ಕಿರುಕುಳ ನೀಡುತ್ತಿದ್ದ ಆರೋಪದ ಮೇಲೆ  ಆರೋಪಿ ಯಶವಂತ ಎಂಬಾತನಿಗೆ ಪೊಲೀಸರು ಎಚ್ಚರಿಕೆ ನೀಡಿದ್ದರು. ಆತನಿಗೆ ಕಾಲಕಾಲಕ್ಕೆ ಪೊಲೀಸ್​ ಠಾಣೆಗೆ ಬರುವಂತೆ ಸುಬ್ರಹ್ಮಣ್ಯ ನಗರ ಪೊಲೀಸರು ಸೂಚನೆ ನೀಡಿದ್ದರು. ಆದರೆ ಆ ಆರೋಪಿ  ಪೊಲೀಸ್​ ಠಾಣೆಗೆ ಬರದೆ ತಲೆತಪ್ಪಿಸಿಕೊಂಡು ತಿರುಗುತ್ತಿದ್ದ. ಯಶವಂತ್​ಗಾಗಿ ಪೊಲೀಸರು ಹುಡುಕಾಟ ನಡೆಸುತ್ತಲೇ ಇದ್ದರು ಎನ್ನಲಾಗಿದೆ.

ಆರೋಪಿ ಯಶವಂತ್​ ಪಾರ್ಕಿಂಗ್​ನಲ್ಲಿ ಕೆಲಸ ಮಾಡುವ ಯುವತಿಗೆ ದಿನನಿತ್ಯ ಲೈಂಗಿಕ ಕಿರುಕುಳ ನೀಡುತ್ತಿದ್ದ ಎನ್ನಲಾಗದೆ. ಇದೇ ಕಾರಣಕ್ಕೆ ಸುಬ್ರಹ್ಮಣ್ಯನಗರ ಪೊಲೀಸರು ಯುವತಿಗೆ ಚುಡಾಯಿಸ್ತಿದ್ದವನಿಗೆ ಹಿನ್ನಲೆ ಸಬ್ ಇನ್ಸಪೆಕ್ಟರ್ ಅಮಾನವೀಯವಾಗಿ ಆರೋಪಿಯ ಜತೆ ನಡೆದುಕೊಂಡಿದ್ದಾರೆ ಎನ್ನಲಾಗುತ್ತಿದೆ. ಆರೋಪ ಕೇಳಿ ಬಂದ ಮಾತ್ರಕ್ಕೆ, ಅಥವಾ ಮೇಲ್ನೋಟಕ್ಕೆ ಸಾಬೀತಾಗಿದ್ದರೂ ಸಹ ಪೊಲೀಸರಿಗೆ ಈ ರೀತಿಯಾಗಿ ವರ್ತಿಸುವ ಹಕ್ಕಿಲ್ಲ ಎಂಬುದನ್ನು ಇಲಾಖೆಗೆ ನೆನಪಿಸುವ ಮತ್ತೊಂದು ಘಟನೆ ಇದು ಎಂದರೆ ತಪ್ಪಾಗಲಾರದು.

ಇಂದು ಸಿಕ್ಕಿಬಿದ್ದ ಆರೋಪಿಯನ್ನು ಹಿಡಿದು ಸುಬ್ರಹ್ಮಣ್ಯನಗರ ಪೊಲೀಸ್​ ಠಾಣೆಗೆ ಕರೆತಂದಿದ್ದರು. ಅಲ್ಲಿನ ಸಬ್​ ಇನ್ಸ್​​ಪೆಕ್ಟರ್​ ಶ್ರೀಕಂಠೇಗೌಡ ಆರೋಪಿಯ ಕಾಲು ಕಟ್ಟಿ ಹಾಕಿ ಸ್ಟಿಕ್​ನಿಂದ ಪಾದಗಳಿಗೆ ಅಮಾನುಷವಾಗಿ ಥಳಿಸಿದ್ದಾರೆ. ಹೊಡೆತದ ಬಿರುಸಿಗೆ ಹಾಕಿ ಸ್ಟಿಕ್​ ತುಂಡಾಗಿದೆ.

ಆರೋಪಿಗೆ ಥಳಿಸುತ್ತಿರುವ ವಿಡಿಯೋ

ಉತ್ತರ ವಲಯ ಡಿಸಿಪಿ ಎನ್.​ ಶಶಿಕುಮಾರ್ ಈ  ಘಟನೆ ಬಗ್ಗೆ ನ್ಯೂಸ್​18ಗೆ ಪ್ರತಿಕ್ರಿಯೆ ನೀಡಿ "ನಾನು ಸಹ ಈಗಷ್ಟೇ ವಿಡಿಯೋ ನೋಡಿದೆ. ಪಿಎಸ್​ಐ ಶ್ರೀಕಂಠೇಗೌಡ ಆರೋಪಿಗೆ ಹೊಡೆಯುತ್ತಿರುವುದು ಮೇಲ್ನೋಟಕ್ಕೆ ಕಾಣಿಸುತ್ತಿದೆ. ಆದರೆ ಆರೋಪಿ ಯಾರೆಂದು ತಿಳಿದುಬಂದಿಲ್ಲ. ಈ ಬಗ್ಗೆ ವರದಿ ನೀಡುವಂತೆ ಎಸಿಪಿಗೆ ಸೂಚನೆ ಕೊಡಲಾಗಿದೆ. ಸದ್ಯಕ್ಕೆ ಎಸ್​ಐರನ್ನು ಅಮಾನತ್ತಿನಲ್ಲಿಡಲಾಗಿದೆ," ಎಂದು ತಿಳಿಸಿದ್ದಾರೆ.

ನಿಂತಿದ್ದ ಲಾರಿಗೆ ಡಿಕ್ಕಿ ಹೊಡೆದ ಬಸ್​; ಸ್ಥಳದಲ್ಲೇ 6 ಮಂದಿ ಸಾವು, 20 ಜನರಿಗೆ ಗಾಯ

ಪಿಎಸ್​ಐ ಶ್ರೀಕಂಠೇಗೌಡ ಅಮಾನತು

ವಿಡಿಯೋದಲ್ಲಿ ಎಸ್​ಐ ಅಮಾನುಷವಾಗಿ ಹೊಡೆದಿರುವುದು ಸ್ಪಷ್ಟವಾದ ಬಳಿಕ ಡಿಸಿಪಿ ಎನ್​. ಶಶಿಕುಮಾರ್ ಕ್ರಮ ಕೈಗೊಂಡಿದ್ದಾರೆ. ಎಸಿಪಿಯಿಂದ ವರದಿ ತರಿಸಿಕೊಂಡ ಡಿಸಿಪಿ , ಎಸ್​ಐ ಶ್ರೀಕಂಠೇಗೌಡ ಅವರನ್ನು ಅಮಾನತು ಮಾಡಿದ್ದಾರೆ. ಮಲ್ಲೇಶ್ವರಂ ಎಸಿಪಿ ಡಿಸಿಪಿ ಎನ್​.ಶಶಿಕುಮಾರ್​ ಅವರಿಗೆ ವರದಿ ನೀಡಿದ್ದಾರೆ. ಸದ್ಯ ವಿಡಿಯೋ ವೈರಲ್​ ಆದ ಬಳಿಕ ಆರೋಪಿ ಯಾರೆಂದು ಪೊಲೀಸರು ಪತ್ತೆ ಮಾಡಲು ಮುಂದಾಗಿದ್ದಾರೆ.

ಕೆಲವು ದಿನಗಳ ಹಿಂದೆ ಕುಮಾರಸ್ವಾಮಿ ಲೇಔಟ್​ ಪೊಲೀಸ್​ ಠಾಣೆಗೆ ದೂರು ಕೊಡಲು ಬಂದ ಮಹಿಳೆ ಮೇಲೆ ಹಲ್ಲೆ ನಡೆಸಿದ್ದರು. ಆಗ ಅಲ್ಲಿನ 72 ಜನ ಪೊಲೀಸ್​ ಕಾನ್ಸ್​ಟೇಬಲ್​ಗಳಲ್ಲಿ 71 ಜನರನ್ನು  ಏಕಾಏಕಿ ವರ್ಗಾವಣೆ ಮಾಡಲಾಗಿತ್ತು. ಆಗ ದಕ್ಷಿಣ ವಲಯ ಡಿಸಿಪಿ ಆಗಿದ್ದವರು ಅಣ್ಣಾಮಲೈ. ಈಗ ಅಣ್ಣಾಮಲೈ ಸ್ವಯಂ ನಿವೃತ್ತಿ ಪಡೆದಿದ್ದಾರೆ.
First published:September 12, 2019
ಮತ್ತಷ್ಟು ಓದಿರಿ
ಮುಂದಿನ ಸುದ್ದಿ