• Home
  • »
  • News
  • »
  • state
  • »
  • BBMP Commissioner: ಕಸ ಕ್ಲೀನ್ ಮಾಡ್ತಿಲ್ಲ, ರಸ್ತೆ ಲೈಟ್ ಸರಿಯಾಗಿಲ್ಲ! ಆಯುಕ್ತರ ಮುಂದೆ ಜನರಿಂದ ಸಮಸ್ಯೆಗಳ ಸುರಿಮಳೆ

BBMP Commissioner: ಕಸ ಕ್ಲೀನ್ ಮಾಡ್ತಿಲ್ಲ, ರಸ್ತೆ ಲೈಟ್ ಸರಿಯಾಗಿಲ್ಲ! ಆಯುಕ್ತರ ಮುಂದೆ ಜನರಿಂದ ಸಮಸ್ಯೆಗಳ ಸುರಿಮಳೆ

ಸಾರ್ವಜನಿಕರಿಂದ ಅಹವಾಲು ಸ್ವೀಕರಿಸಿದ ಆಯುಕ್ತರು

ಸಾರ್ವಜನಿಕರಿಂದ ಅಹವಾಲು ಸ್ವೀಕರಿಸಿದ ಆಯುಕ್ತರು

ಬಸವನಗುಡಿ ವಾರ್ಡ್ ಸಂ. 154 ಮನೆ ಪಕ್ಕದಲ್ಲಿ ಕಟ್ಟಡ ತೆರವುಗೊಳಿಸುವ ವೇಳೆ ಮನೆ ಬಿರುಕು ಬಿಟ್ಟಿದ್ದು, ಪಾಲಿಕೆಗೆ ದೂರು ನೀಡಲಾಗಿತ್ತು. ಈ ಪೈಕಿ ಅಧಿಕಾರಿಗಳು ಸ್ಥಳಕ್ಕೆ ಭೇಟಿ ನೀಡಿ ಸಂಬಂಧಪಟ್ಟವರಿಂದ ಮನೆ ಸರಿಪಡಿಸಿಕೊಡಬೇಕು. ಕೆಲಸ ಆಗಿಲ್ಲವೆಂದರೆ 15 ದಿನಗಳ ನಂತರ ವಲಯ ಆಯುಕ್ತರನ್ನು ಭೇಟಿ ಮಾಡಲು ತಿಳಿಸಿದರು.

ಮುಂದೆ ಓದಿ ...
  • Share this:

ಬೆಂಗಳೂರು: ಬೃಹತ್ ಬೆಂಗಳೂರು ಮಹಾನಗರ ಪಾಲಿಕೆ (BBMP) ವ್ಯಾಪ್ತಿಯಲ್ಲಿ ಸಾರ್ವಜನಿಕರಿಗೆ ಅನುಕೂಲಕರವಾಗುವ ನಿಟ್ಟಿನಲ್ಲಿ ಮುಖ್ಯ ಆಯುಕ್ತರಾದ (Commissioner) ತುಷಾರ ಗಿರಿನಾಥ್  ಇಂದು ದಕ್ಷಿಣ ವಲಯ ವ್ಯಾಪ್ತಿಯಲ್ಲಿ (South Zone Limit) ಸಾರ್ವಜನಿಕರ ಅಹವಾಲುಗಳನ್ನು ಸ್ವೀಕರಿಸಿದರು. ಸಾರ್ವಜನಿಕರು ದಕ್ಷಿಣ ವಲಯ ವ್ಯಾಪ್ತಿಯ ಆಯಾ ಕಛೇರಿಗಳಲ್ಲಿ (Office) ಸಾರ್ವಜನಿಕರಿಗೆ ಅಧಿಕಾರಿಗಳು ಸಿಗುವ ಸಮಯದ ನಾಮಫಲಕವನ್ನು ಅಳವಡಿಸಲು ಮನವಿ ಮಾಡಿದರು. ಈ ಪೈಕಿ ಎಲ್ಲಾ ಸಂಬಂಧಪಟ್ಟ ಅಧಿಕಾರಿಗಳು ಮಧ್ಯಾಹ್ನ 3.00 ರಿಂದ ಸಂಜೆ 5.00 ರವರೆಗೆ ಸಾರ್ವಜನಿಕರಿಗೆ ಲಭ್ಯವಿರುವ ಬಗ್ಗೆ ನಾಮಫಲಕ (Board) ಅಳವಡಿಸಿ, ಎಲ್ಲ ಅಧಿಕಾರಿಗಳೂ ಸಮಸ್ಯೆಗಳನ್ನು ಆಲಿಸುವಂತೆ ಕ್ರಮ ಕೈಗೊಳ್ಳಲು ವಲಯ ಜಂಟಿ ಆಯುಕ್ತರಿಗೆ ಮುಖ್ಯ ಆಯುಕ್ತರು ಸೂಚನೆ ನೀಡಿದರು.


ಬಿರುಕು ಬಿಟ್ಟ ಮನೆ ದುರಸ್ತಿಗೆ ಕ್ರಮ


ಬಸವನಗುಡಿ ವಾರ್ಡ್ ಸಂ. 154 ಮನೆ ಪಕ್ಕದಲ್ಲಿ ಕಟ್ಟಡ ತೆರವುಗೊಳಿಸುವ ವೇಳೆ ಮನೆ ಬಿರುಕು ಬಿಟ್ಟಿದ್ದು, ಪಾಲಿಕೆಗೆ ದೂರು ನೀಡಲಾಗಿತ್ತು. ಈ ಪೈಕಿ ಅಧಿಕಾರಿಗಳು ಸ್ಥಳಕ್ಕೆ ಭೇಟಿ ನೀಡಿ ಸಂಬಂಧಪಟ್ಟವರಿಂದ ಮನೆ ಸರಿಪಡಿಸಿಕೊಡಬೇಕು. ಕೆಲಸ ಆಗಿಲ್ಲವೆಂದರೆ 15 ದಿನಗಳ ನಂತರ ವಲಯ ಆಯುಕ್ತರನ್ನು ಭೇಟಿ ಮಾಡಲು ತಿಳಿಸಿದರು.


ಕಸದ ಲಾರಿ ಸ್ಥಳಾಂತರಕ್ಕೆ ಮನವಿ


ಗಿರಿನಗರ ವಾರ್ಡ್ ವ್ಯಾಪ್ತಿಯಲ್ಲಿ ಕಸದ ಲಾರಿ ಪಾಯಿಂಟ್ (ಕಸ ಸಂಗ್ರಹಿಸುವ ಸ್ಥಳ) ನಿಂದ ಸುತ್ತಮುತ್ತಲಿನ ಮನೆಗಳಿಗೆ ವಾಸನೆ ಬರುತ್ತಿದ್ದು, ಅದನ್ನು ಕೂಡಲೆ ಸ್ಥಳಾಂತರಿಸಲು ಮನವಿ. ಈ ಪೈಕಿ ಮುಂದಿನ 10 ದಿನದಲ್ಲಿ ಲಾರಿ ಪಾಯಿಂಟ್ ಅನ್ನು ಸ್ಥಳಾಂತರಿಸಿ ಸಮಸ್ಯೆ ಬಗೆಹರಿಸಲು ಘನತ್ಯಾಜ್ಯ ವಿಭಾಗದ ಅಧಿಕಾರಿಗಳಿಗೆ ಸೂಚಿಸಿದರು.


ಇದನ್ನೂ ಓದಿ: Chamarajpet Bundh: ಯಶಸ್ವಿಯಾಯ್ತು ಚಾಮರಾಜಪೇಟೆ ಬಂದ್; ಕೆಲವೆಡೆ ಹೈಡ್ರಾಮಾ, ಪ್ರತಿಭಟನಾಕಾರರು ವಶಕ್ಕೆ


ಕಸ ಕ್ಲೀನ್ ಮಾಡಿಸಿ ಎಂದ ಸಾರ್ವಜನಿಕರು


ವಿಲ್ಸನ್ ಗಾರ್ಡನ್ ರಸ್ತೆ ಬದಿಗಳಲ್ಲಿ ಹೂವುಗಳು ಮಾರಾಟ ಮಾಡಿ ಅದರಿಂದ ಉತ್ಪತ್ತಿ ಆಗುವ ಕಸವನ್ನು ರಸ್ತೆ ಬದಿ ಎಲ್ಲೆಂದರಲ್ಲಿ ಹಾಕುತ್ತಿದ್ದಾರೆ. ಈ ಸಂಬಂಧ ಹಸಿ ಕಸ ಹಾಗೂ ಒಣ ತ್ಯಾಜ್ಯವನ್ನು ಪ್ರತ್ಯೇಕವಾಗಿ ನೀಡಬೇಕು. ಅದಕ್ಕಾಗಿ ಜಂಟಿ ಆಯುಕ್ತರು, ಘನತ್ಯಾಜ್ಯ ವಿಭಾಗದ ಅಧಿಕಾರಿಗಳು, ಆಟೊ ಟಿಪ್ಪರ್ ಗುತ್ತಿಗೆದಾರರು ಸ್ಥಳಕ್ಕೆ ಭೇಟಿ ನೀಡಿ ಹೂವು ಮಾರಾಟಗಾರರಿಗೆ ಹೂವಿನಿಂದ ಉತ್ಪತ್ತಿಯಾಗುವ ಕಸ ತೆರವುಗೊಳಿಸುವ ಬಗ್ಗೆ ಮಾರಾಟಗಾರರಿಗೆ ಕಟ್ಟುನಿಟ್ಟಿನ ನಿರ್ದೇಶನ ನೀಡಲು ಸೂಚಿಸಿದರು.


ಚಿಕ್ಕನಾಗಮಂಗಲ ಪ್ಲಾಂಟ್ ನಲ್ಲಿ ಗುತ್ತಿಗೆ ಆಧಾರದ ಮೇಲೆ ಕಾರ್ಯನಿರ್ವಹಿಸುತ್ತಿದ್ದ ಹುಚ್ಚಪ್ಪ ಎಂಬುವವರು ದಿ:11.11.2021 ರಂದು ಕಾರ್ಯನಿರ್ವಹಿಸುತ್ತಿದ್ದ ವೇಳೆ ಮೃತಪಟ್ಟಿದ್ದು, ಅವರಿಗೆ ಇದುವರೆಗೂ ಪರಿಹಾರ ಸಿಕ್ಕಿಲ್ಲ. ಈ ಬಗ್ಗೆ ಸಂಬಂಧಪಟ್ಟ ಅಧಿಕಾರಿಗಳು ಪರಿಶೀಲಿಸಿ ಗುತ್ತಿಗೆದಾರರಿಂದ ಪರಿಹಾರ ನೀಡಲು ಅಗತ್ಯ ಕ್ರಮ ಕೈಗೊಳ್ಳಲು ಸೂಚಿಸಿದರು.


ಅನಧಿಕೃತ ಕಟ್ಟಡ ತೆರವು ಗೊಳಿಸಲು ಸೂಚನೆ


ಪದ್ಮನಾಭ ನಗರ ವಾರ್ಡ್ ವ್ಯಾಪ್ತಿಯಲ್ಲಿ ಅನಧಿಕೃತವಾಗಿ ಕಟ್ಟಡ ನಿರ್ಮಾಣ ಮಾಡಲಾಗಿದ್ದು, ಅದನ್ನು ತೆರವುಗೊಳಿಸಲು ಮನವಿ. ಈ ಪೈಕಿ ಸಂಬಂಧಪಟ್ಟ ಅಧಿಕಾರಿಗಳು ಸ್ಥಳಕ್ಕೆ ಭೇಟಿ ನೀಡಿ ಅನಧಿಕೃತವಾಗಿ ನಿರ್ಮಾಣ ಮಾಡಿರುವ ಕಟ್ಟಡವನ್ನು ಕೂಡಲೆ ತೆರವುಗೊಳಿಸಲು ಅಧಿಕಾರಿಗಳಿಗೆ ಸೂಚನೆ ನೀಡಿದರು.


ರಸ್ತೆ ದುರಸ್ತಿ ಮಾಡುವಂತೆ ಆದೇಶ


ಕೋರಮಂಗಲ 100ಅಡಿ ರಸ್ತೆಯ ಈಜೀಪುರ ಸಿಗ್ನಲ್ - ಕೇಂದ್ರಿಯ ಸದನ ಮಡಿವಾಳ ಮೇಲುಸೇತುವೆ ಕಾಮಗಾರಿ ಸ್ಥಳದಲ್ಲಿ ಪಾದಚಾರಿ ಮಾರ್ಗ ದುರಸ್ತಿ, ಚರಂಡಿಗಳ ಸ್ವಚ್ಚತೆ, ರಸ್ತೆ ಮಧ್ಯೆ ಮಣ್ಣು ಹಾಗೂ ಭಗ್ನಾವಶೇಷಗಳನ್ನು ತೆರವುಗೊಳಿಸಲು ಮನವಿ. ಈ ಪೈಕಿ ಕೂಡಲೆ ಸಮಸ್ಯೆ ಬಗೆಹರಿಸಲು ಅಧಿಕಾರಿಗಳಿಗೆ ಸೂಚನೆ ನೀಡಿದರು.
ಇದನ್ನೂ ಓದಿ: Flower Show: ಈ ಬಾರಿ ಲಾಲ್​ಬಾಗ್​ನಲ್ಲಿ ‘ಪವರ್’ ಶೋ; ಹೂಗಳಲ್ಲಿ ಅರಳಲಿದೆ ಗಾಜನೂರಿನ ಗೂಡು


ದಕ್ಷಿಣ ವಲಯ ವ್ಯಾಪ್ತಿಯಲ್ಲಿ ‘ವಲಯದ ಕಡೆ ಮುಖ್ಯ ಆಯುಕ್ತರ ನಡೆ’ಯ ದಿನದಂದು ಆಲಿಸಿದ ಎಲ್ಲಾ ಸಾರ್ವಜನಿಕರ ಅಹವಾಲುಗಳಲ್ಲಿ ತ್ವರಿತವಾಗಿ ಬಗೆಹರಿಯುವಂತಹ ಸಮಸ್ಯೆಗಳನ್ನು ಕೂಡಲೆ ಬಗೆಹರಿಸಲು ಮುಖ್ಯ ಆಯುಕ್ತರು ವಲಯ ಆಯುಕ್ತರಿಗೆ ಸೂಚನೆ ನೀಡಿದರು.

Published by:Annappa Achari
First published: