ಬೆಂಗಳೂರು: ಇಷ್ಟು ದಿನ ಬೇಸಿಗೆಕಾಲ (Summer) ಇತ್ತು, ಆದರೆ ಈಗ ರಾಜ್ಯಕ್ಕೆ ಪೂರ್ವ ಮುಂಗಾರು (Pre-monsoon) ಎಂಟ್ರಿ ಕೊಟ್ಟಿದೆ. ಇದರ ಬೆನ್ನಲ್ಲೇ ಜನರಿಗೆ ಚರ್ಮದ ಸಮಸ್ಯೆಗಳು (Skin Problems) ಎದುರಾಗಿವೆ. ಹೀಗಾಗಿ ಮಳೆಯಲ್ಲಿ (Rain) ಮೈನೆನೆಸುವ ಮುನ್ನಾ ಬೀ ಕೇರ್ ಫುಲ್. ಇಷ್ಟು ದಿನ ಬಿಸಿಲ ಬೇಗೆಯಲ್ಲಿ ಬೆಂದಿದ್ದ ಜನರಿಗೆ ಇದೀಗ ಮಳೆಯ ಸಿಂಚನವಾಗುತ್ತಿದೆ. ಹೀಗಾಗಿ ಏಕಾಏಕಿ ಹವಾಮಾನವು (Weather) ಬದಲಾಗಿದೆ. ಬದಲಾದ ಈ ಹವಾಮಾನದಿಂದ ಜನರ ಆರೋಗ್ಯದ (Health) ಮೇಲೆ ಪರಿಣಾಮ ಬೀರಿದೆ. ಜೊತೆಗೆ ಚರ್ಮ ಕಾಯಿಲೆಗಳು ಹೆಚ್ಚಾಗಿದ್ದು, ಜನರು ಆಸ್ಪತ್ರೆ ಕಡೆಗೆ ಮುಖ ಮಾಡಿದ್ದಾರೆ.
ಆಸ್ಪತ್ರೆಗಳಲ್ಲಿ ಚರ್ಮದ ಸಮಸ್ಯೆಯಿಂದ ಬರುವವರ ಸಂಖ್ಯೆ ಹೆಚ್ಚಳ
ಮಳೆಗಾಲ ಆಗಿರುವುದರಿಂದ ಇತ್ತಿಚೆಗೆ ಡ್ರೈ ಸ್ಕಿನ್ ಹಾಗೂ ಸೋರಿಯಾಸಿಸ್ ಸಮಸ್ಯೆಯಿಂದ ಬಳಲುತ್ತಿರುವವರ ಸಂಖ್ಯೆ ಹೆಚ್ಚಾಗಿದೆ. ಪ್ರತಿನಿತ್ಯ ಆಸ್ಪತ್ರೆಗಳಲ್ಲಿ ಚರ್ಮದ ಸಮಸ್ಯೆಯಿಂದ ಬರುವವರ ಸಂಖ್ಯೆ 20 ಕ್ಕೂ ಹೆಚ್ಚಾಗಿದೆ. ಚರ್ಮದ ಸಮಸ್ಯೆಯಿಂದ ಬಳಲಿಕೆ ತಪ್ಪಿಸಲು ಚರ್ಮವನ್ನು ಸ್ವಚ್ಛವಾಗಿಡುವುದರ ಜೊತೆಗೆ ಮಾಯಿಶ್ಚರೈಸರ್ ಬಳಸಿ ಅಂತಿದ್ದಾರೆ ವೈದ್ಯರು.
ಏಕಾಏಕಿ ಬೇಸಿಗೆಯಿಂದ ಮಳೆಗಾಲಕ್ಕೆ ಎಂಟ್ರಿ ಕೊಡುತ್ತಿದ್ದಂತೆ ನಾವು ಸನ್ ಕ್ರೀಂ ಬೇಡ ಎಂದುಕೊಳ್ಳುತ್ತೇವೆ. ಆದರೆ ಅದು ತಪ್ಪು, ಸ್ಕ್ರೀನ್ ಡ್ರೈ ಆಗುವ ಕಾರಣ ಮಾಯಿಶ್ಚರೈಸರ್ ಬಳಕೆ ಮಾಡುವುದು ಉತ್ತಮ ಎಂದು ಆರ್.ಆರ್ ಮೆಡಿಕಲ್ ಆಸ್ಪತ್ರೆ ಚರ್ಮರೋಗ ತಜ್ಞೆ ಡಾ.ಪ್ರಿಯಾ ತಿಳಿಸಿದ್ದಾರೆ.
ಹೆಚ್ಚು ಬಿಸಿ ನೀರಿನ ಸ್ನಾನ ಕೂಡಾ ಸರಿಯಲ್ಲ!
ಇದಿಷ್ಟೇ ಅಲ್ಲ ಮಳೆ ಇರುವುದರಿಂದ ಜನರು ಹೆಚ್ಚಾಗಿ ಚಳಿ ಅಂತ ತುಂಬಾ ಬಿಸಿ ನೀರಿನ ಸ್ನಾನವನ್ನು ಮಾಡುತ್ತಾರೆ. ಹೀಗೆ ಬಿಸಿ ನೀರು ಸ್ನಾನ ಮಾಡುವುದು ಕೂಡಾ ಸರಿಯಲ್ಲ ಅನ್ನೋದು ವೈದ್ಯರ ಮಾತು. ಬಿಸಿನೀರು ಸ್ನಾನದಿಂದ ಡ್ರೈ ಸ್ಕಿನ್ ಸಮಸ್ಯೆ ಉಲ್ಬಣವಾಗುತ್ತೆ ಎಂದಿದ್ದಾರೆ.
ಒಟ್ಟಿನಲ್ಲಿ ಜನರು ತಮ್ಮ ತ್ವಚೆಯ ಬಗ್ಗೆ ಹೆಚ್ಚು ಗಮನ ಕೊಡಬೇಕಿದೆ. ನೆಗ್ಲೆಟ್ ಮಾಡಿದರೆ ನಿಮ್ಮ ಸ್ಕಿನ್ ಕೂಡ ಸಾಕಷ್ಟು ಸಮಸ್ಯೆಗೆ ತುತ್ತಾಗಲಿದೆ. ಯಾವುದಕ್ಕೂ ಮಳೆಯಿಂದ ನೆನೆಯುವುದರಿಂದ ಸ್ವಲ್ಪ ದೂರ ಇರಿ. ಒದ್ದೆಯಾದ ಬಟ್ಟೆ ಹಾಕಿಕೊಳ್ಳನ್ನು ತಪ್ಪಿಸಿ. ಇಲ್ಲದಿದ್ದರೆ ಸಮಸ್ಯೆ ಗ್ಯಾರಂಟಿ.
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ