‘ಪ್ಯೂರ್​ ಬ್ರಾಹ್ಮಿಣ್​ ಲಂಚ್​ ಬಾಕ್ಸ್​ ಸರ್ವೀಸ್​’ ಪ್ರಚಾರ​: ಕ್ಯಾಟರಿಂಗ್​ ವಿರುದ್ಧ ಜಾತಿ ಇಲ್ಲಿದೆ? ಎಂದು ಹಲವರ ಆಕ್ರೋಶ

 • Share this:
  ರಾಕಿ ಬೋಸ್​, ನ್ಯೂಸ್​-18 ಕನ್ನಡ

  ಬೆಂಗಳೂರು (ಆಗಸ್ಟ್​.09): ಪ್ಯೂರ್​ ಜೈನ್​ ಕ್ಯಾಟರಿಂಗ್​ನಂತೆಯೇ ಶುದ್ದ ಬ್ರಾಹ್ಮಣ ಲಚ್ ಬಾಕ್ಸ್​ ಸರ್ವೀಸ್​ ಎಂಬ ಕ್ಯಾಟರಿಂಗ್​ ಶುರುವಾಗುತ್ತಿದ್ದು, ಬ್ರಾಹ್ಮಣೇತರ ಸಮುದಾಯದ ಒಂದು ವರ್ಗದ ಆಕ್ರೋಶಕ್ಕೆ ಕಾರಣವಾಗಿದೆ ಎನ್ನಲಾಗಿದೆ.

  ಇದೇ ತಿಂಗಳು ಆಗಸ್ಟ್​ 15 ರಂದು ಸ್ವಾತಂತ್ರ ದಿನಾಚರಣೆಯಂದು ಪ್ಯೂರ್​ ಬ್ರಾಹ್ಮಿಣ್​​ ಕ್ಯಾಟರಿಂಗ್ ಶುರುವಾಗುತ್ತಿದ್ದು, ಈ ಕುರಿತು ನಗರದಲ್ಲಿ ಜಾಹಿರಾತು ನೀಡುವ ಮೂಲಕ ಪ್ರಚಾರ ಮಾಡಲಾಗುತ್ತಿದೆ.

  ಸಾಮಾಜಿಕ ಕಾರ್ಯಕರ್ತ ಮತ್ತು ವಕೀಲ ಡಾ. ಬಿ ಕಾರ್ತೀಕ್​ ನಾರಯಣ್​ ಎಂಬಾತ ಬ್ರಾಹ್ಮಣ ಕ್ಯಾಟರಿಂಗ್​ ಪ್ರಚಾರದ ಬ್ಯಾನರ್​ ಟ್ವೀಟ್​ನಲ್ಲಿ ಪೋಸ್ಟ್​ ಮಾಡಿ ದೇಶದಲ್ಲಿ ಜಾತಿ ಎಲ್ಲಿದೆ ಎಂದು ಕೇಳುತ್ತಿದ್ದರು. ನೀವು ಹೇಳಿದ ಹಾಗೇ ಜಾತಿಯೇ ಇಲ್ಲ ಎನ್ನುವ ಮೂಲಕ ಬ್ರಾಹ್ಮಣ ಸಮುದಾಯವನ್ನು ಟೀಕಿಸಿದ್ಧಾರೆ.  ​ಬ್ಯಾನರ್​ನಲ್ಲಿ ಪ್ಯೂರ್​ ಬ್ರಾಹ್ಮಿಣ್​ ಲಂಚ್​ ಸರ್ವೀಸ್​ ಕ್ಯಾಟರಿಂಗ್​ನಿಂದ ಮನೆ ಮನೆಗೂ ಊಟ ತಲುಪಿಸುತ್ತೇವೆ. ಯಾರಿಗೆ ನಮ್ಮ ತಿಂಡಿ ತಿನಿಸುಗಳ ಇಷ್ಟವಿದೆಯೋ ಅಂತಹ ಗ್ರಾಹಕರಿಗೆ ಬ್ರಾಹ್ಮಣ ಕ್ಯಾಟರಿಂಗ್​ ಶುದ್ದ ಸಸ್ಯಹಾರ ಆಹಾರವನ್ನು ನೀಡುತ್ತದೆ. ಬೆಂಗಳೂರಿನ ಜೆ.ಪಿ ನಗರ, ಬಿಟಿಎಂ ಲೇಔಟ್​ ಸೇರಿದಂತೆ ಪುಟ್ಟೇನಹಳ್ಳಿ ಭಾಗದಲ್ಲಿ ದೊರೆಯಲಿದೆ ಎಂದು ಪ್ರಚಾರ ಮಾಡಲಾಗುತ್ತಿದೆ.

   

  ಇನ್ನು ಹಲವು ವರ್ಷಗಳಿಂದ ಜೈನ ಸಮುದಾಯದವರಿಗಾಗಿಯೇ ಪ್ಯೂರ್​ ಜೈನ್​ ಕ್ಯಾಟರಿಂಗ್​ ತೆರೆಯಲಾಗಿದೆ. ಅದೇ ಮಾದರಿಯಲ್ಲಿಯೂ ಬ್ರಾಹ್ಮಣ ಕ್ಯಾಟರಿಂಗ್​ ತೆರೆಯುತ್ತಿದ್ದು, ಅದಕ್ಕೆ ವ್ಯಕ್ತವಾಗದ ಆಕ್ರೋಶ ನಮಗ್ಯಾಕೆ ಎಂದು ಹಲವು ಚರ್ಚೆಗಳು ನಡೆಯುತ್ತವೆ.  ಕೆಲವರು ಬ್ರಾಹ್ಮಿಣ್​ ಕ್ಯಾಟರಿಂಗ್​ ಸೇವೆಯನ್ನು ಬಹಿರಂಗವಾಗಿ ಬೆಂಬಲಿಸಿದರೆ, ಮತ್ತೊಂದು ಗುಂಪು ಟೀಕಿಸುತ್ತಿದೆ. ಅಲ್ಲದೇ ಜೈನರಿಗಾಗಿಯೇ ಪ್ರತ್ಯೇಕ ಕ್ಯಾಟರಿಂಗ್​ ಇರಬೇಕಾದರೆ, ವೈ ಡೋಂಟ್​ ಬ್ರಾಹ್ಮಣ ಕ್ಯಾಟರಿಂಗ್​ ಎಂದು ಪ್ರಶ್ನಿಸಿದ್ದಾರೆ.
  First published: