Bengaluru Schoolಗಳಿಗೆ ಹುಸಿ ಬಾಂಬ್ ಮೇಲ್ ಪ್ರಕರಣದ ಹಿಂದೆ 17 ವರ್ಷದ ಬಾಲಕ: ಹೇಗೆ? ಎಲ್ಲಿಂದ ಬಂದಿದ್ದು ಆ ಮೇಲ್?

17 ವರ್ಷದ ಸಲೀಂ  ಬೋಟ್ ಸಾಫ್ಟ್‌ವೇರ್ ಪ್ರೊಗ್ರಾಮ್ ಡೆವೆಲಪ್ ಮಾಡಿದ್ದನು. ಇದೊಂದು ಮಲ್ಟಿಪಲ್ ಮೇಲ್ ಕಳಿಸುವ ಸಾಫ್ಟ್‌ವೇರ್ ಬೋಟ್ ಆಗಿದೆ. ಇದನ್ನು ಟೆಲಿಗ್ರಾಂ ಆಪ್ ಮೂಲಕ ವಿದೇಶಿಯರಿಗೆ ಸಲೀಂ ಕಳುಹಿಸಿದ್ದನು.

ಸಾಂದರ್ಭಿಕ ಚಿತ್ರ

ಸಾಂದರ್ಭಿಕ ಚಿತ್ರ

  • Share this:
Bomb Threatening Mail: ಏಪ್ರಿಲ್ ನಲ್ಲಿ ಬೆಂಗಳೂರಿನ ಹತ್ತಕ್ಕೂ ಅಧಿಕ ಶಾಲೆಗಳಿಗೆ (Bengaluru Schools) ಹುಸಿ ಬಾಂಬ್ ಕರೆ ಬಂದಿತ್ತು. ಮೇಲ್ ಮಾಡಿದ್ದ ದುಷ್ಕರ್ಮಿಗಳು ಪವರ್ ಫುಲ್ ಬಾಂಬ್ ಇರಿಸಲಾಗಿದ್ದು, ನೂರಾರು ಜೀವಗಳನ್ನು (Life) ಉಳಿಸಿಕೊಳ್ಳಿ ಎಂದು ಹೇಳಿದ್ದರು. ಈ ಪ್ರಕರಣದ ತನಿಖೆ ನಡೆಸುತ್ತಿದ್ದ ಪೊಲೀಸರಿಗೆ (Police Investigation) ಮಹತ್ವದ ಸುಳಿವು ಸಿಕ್ಕಿದೆ. ಈ ಹುಸಿ ಬಾಂಬ್ ಮೇಲ್ ಕಳುಹಿಸಲು 17 ವರ್ಷದ ಬಾಲಕ ಎಂದು ತಿಳಿದು ಬಂದಿದೆ. ಬಾಲಕನನ್ನು (17 Year Old Boy) ಪೊಲೀಸರು ಪತ್ತೆ ಮಾಡಿದ್ದು, ತನಿಖೆ ಮುಂದುವರಿಸಿದ್ದಾರೆ. ತಮಿಳುನಾಡು (Tamilnadu) ಮೂಲದ ಸಲೀಂ‌ ಅನ್ನೋನೇ ಈ ಮೇಲ್ ಗಳ ಮಾಸ್ಟರ್ ಮೈಂಡ್ ಎಂಬುವುದು ತನಿಖೆಯಲ್ಲಿ ತಿಳಿದು ಬಂದಿದೆ. 

ಸಾಫ್ಟ್ ವೇರ್ ಕಂಪನಿ ಮಾಡುವ ಆಶಯ ಹೊಂದಿದ್ದ ಬಾಲಕ ಸಲೀಂ ತಾನು ಸಿದ್ಧಪಡಿಸಿದ್ದ ಕಂಪ್ಯೂಟರ್ ಪ್ರೋಗ್ರಾಂನ್ನು ವಿದೇಶಿಯರಿಗೆ ಮಾರಾಟ ಮಾಡಿದ್ದನು. ಇದೇ ಸಾಫ್ಟ್​ ವೇರ್ ನಿಂದ ದುಷ್ಕರ್ಮಿಗಳು ಬೆಂಗಳೂರು ಮತ್ತು ಭೋಪಾಲ್ ಶಾಲೆಗಳಿಗೆ ಬೆದರಿಕೆಯ ಮೇಲ್ ಕಳುಹಿಸಿದ್ದರು.

ಬೋಟ್ ಸಾಪ್ಟ್ ವೇರ್ ಪ್ರೋಗ್ರಾಂ ಡೆವಲಪ್

17 ವರ್ಷದ ಸಲೀಂ  ಬೋಟ್ ಸಾಫ್ಟ್‌ವೇರ್ ಪ್ರೊಗ್ರಾಮ್ ಡೆವೆಲಪ್ ಮಾಡಿದ್ದನು. ಇದೊಂದು ಮಲ್ಟಿಪಲ್ ಮೇಲ್ ಕಳಿಸುವ ಸಾಫ್ಟ್‌ವೇರ್ ಬೋಟ್ ಆಗಿದೆ. ಇದನ್ನು ಟೆಲಿಗ್ರಾಂ ಆಪ್ ಮೂಲಕ ವಿದೇಶಿಯರಿಗೆ ಸಲೀಂ ಕಳುಹಿಸಿದ್ದನು. 200 ಡಾಲರ್ ಬಿಟ್ ಕಾಯಿನ್ ಮೂಲಕ ಸಾಫ್ಟ್‌ವೇರ್ ಮಾರಾಟ ಮಾಡಿರುವ ಮಾಹಿತಿ ಲಭ್ಯವಾಗಿದೆ.

IP ಅಡ್ರೆಸ್ ಮೂಲಕ ಪತ್ತೆ

ಇನ್ನೂ ಸಲೀಂ ತಂದೆ ಲೈಬ್ರಿರಿಯನ್ ಆಗಿ ಕೆಲಸ ಮಾಡುತ್ತಿದ್ದಾರೆ. ಮೇಲ್ ಬಂದಿರುವ IP ಅಡ್ರೆಸ್ ಮೂಲಕ ಪೊಲೀಸರು ಸಲೀಂನನ್ನು ಪತ್ತೆ ಮಾಡಿದ್ದಾರೆ. ಸಲೀಂ‌ ಮೂಲಕ ಹುಸಿ ಮೇಲ್ ಕಳಿಸಿದ ದುಷ್ಕರ್ಮಿಗಳನ್ನು ಪತ್ತೆಹಚ್ಚಲು ಪೊಲೀಸರು ಮುಂದಾಗಿದ್ದಾರೆ.

ಇದನ್ನೂ ಓದಿ:  ಆನೇಕಲ್​ ಬಳಿ ಖಾಸಗಿ ಶಾಲೆಗೆ Bomb ಬೆದರಿಕೆ; ಆತಂಕದ ವಾತಾವರಣ ನಿರ್ಮಾಣ

ಬೆದರಿಕೆ ಮೇಲ್ ನಲ್ಲಿ ಏನಿತ್ತು?

A Very power full bomb has been planted in your school, attention is not a joke. this is not a joke, a very powerfull bomb has been planted in your school, immediatly call the police and sappers hundreds of lives may suffer, including yours , do not deleay. now every thing is only in your hands !

ನಿಮ್ಮ ಶಾಲೆಯಲ್ಲಿ ಅತ್ಯಂತ ಶಕ್ತಿಶಾಲಿಯುತ ಬಾಂಬ್ ಅಳವಡಿಸಲಾಗಿದೆ. ಇದು ಜೋಕ್ ಅಲ್ಲ. ಈ ಕೂಡಲೇ ಪೊಲೀಸರಿಗೆ ವಿಷಯ ತಿಳಿಸಿ, ನೂರಾರು ಜೀವಗಳನ್ನು ಉಳಿಸಿ. ದಯವಿಟ್ಟು ತಡ ಮಾಡಬೇಡಿ. ಸದ್ಯ ಎಲ್ಲರ ಜೀವ ನಿಮ್ಮ ಕೈಯಲ್ಲಿದೆ ಎಂದು ಮೇಲ್ ನಲ್ಲಿ ಬರೆಯಲಾಗಿತ್ತು.

ಇದನ್ನೂ ಓದಿ:  Bomb Threat Call: ಕೆಂಪೇಗೌಡ ಏರ್‌ಪೋರ್ಟ್‌ಗೆ ಬಾಂಬ್ ಬೆದರಿಕೆ ಕರೆ! "ಏನ್ ಮಾಡ್ಕೋತೀರಿ" ಎಂದ ಅಪರಿಚಿತ ಯಾರು?

ಯಾವ ಶಾಲೆಗಳಿಗೆ ಬೆದರಿಕೆ?

ಗೋಪಾಲನ್ ಇಂಟರ್‌ ನ್ಯಾಶನಲ್ ಸ್ಕೂಲ್, ಡೆಲ್ಲಿ ಪಬ್ಲಿಕ್ ಸ್ಕೂಲ್ (ಡಿಪಿಎಸ್) ಬೆಂಗಳೂರು ಪೂರ್ವ, ನ್ಯೂ ಅಕಾಡೆಮಿ ಸ್ಕೂಲ್, ವಿನ್ಸೆಂಟ್ ಪಲೋಟ್ಟಿ ಸ್ಕೂಲ್, ಇಂಡಿಯನ್ ಪಬ್ಲಿಕ್ ಸ್ಕೂಲ್, ಸೋಫಿಯಾ ಹೈಸ್ಕೂಲ್, ಸ್ಟೋನ್ ಹಿಲ್ ಇಂಟರ್‌ ನ್ಯಾಶನಲ್ ಸ್ಕೂಲ್, ಟ್ರೀಯೋ ಇಂಟರ್‌ ನ್ಯಾಶನಲ್ ಸ್ಕೂಲ್, ವ್ಯಾಸ ಇಂಟರ್‌ ನ್ಯಾಶನಲ್ ಸ್ಕೂಲ್, ಕುನ್ಸ್ಕಾಪ್ಸ್ಕೊಲನ್ ಇಂಟರ್ ನ್ಯಾಷನಲ್ ಸ್ಕೂಲ್, ಎಬೆನೆಜರ್ ಇಂಟರ್ ನ್ಯಾಷನಲ್ ಸ್ಕೂಲ್, ಕ್ಯಾಂಡರ್ ಇಂಟರ್ ನ್ಯಷನಲ್ ಸ್ಕೂಲ್, ರಾಡ್ಕ್ಲಿಫ್ ಇಂಟರ್ ನ್ಯಾಷನಲ್ ಸ್ಕೂಲ್, ಮತ್ತು ಇನ್ವೆಂಚರ್ ಅಕಾಡೆಮಿ. ಈ ಶಾಲೆಗಳು ಬೆಂಗಳೂರು ನಗರ ಮತ್ತು ಬೆಂಗಳೂರು ಗ್ರಾಮಾಂತರ ವ್ಯಾಪ್ತಿಯಲ್ಲಿವೆ.
Published by:Mahmadrafik K
First published: