ಬೆಂಗಳೂರಿನ ಶಾಲಾ ಬಸ್​ಗೆ ಮತ್ತೊಂದು ಬಲಿ; ಚಾಲಕನ ನಿರ್ಲಕ್ಷ್ಯದಿಂದ ಎಲ್​ಕೆಜಿ ವಿದ್ಯಾರ್ಥಿ ಸಾವು

ಸೋಮವಾರ ಮಧ್ಯಾಹ್ನ 12.45ಕ್ಕೆ ಶಾಲಾ ಬಸ್​ನಿಂದ ಇಳಿದ ದೀಕ್ಷಿತ್ ತನ್ನ ಮನೆಯ ಗೇಟಿನತ್ತ ಹೋಗುತ್ತಿದ್ದಾಗ ಬಸ್​ ಅನ್ನು ಚಾಲಕ ರಿವರ್ಸ್​ ತೆಗೆದುಕೊಂಡಿದ್ದರಿಂದ ಈ ದುರಂತ ಘಟಿಸಿದೆ.

Sushma Chakre | news18-kannada
Updated:December 17, 2019, 1:06 PM IST
ಬೆಂಗಳೂರಿನ ಶಾಲಾ ಬಸ್​ಗೆ ಮತ್ತೊಂದು ಬಲಿ; ಚಾಲಕನ ನಿರ್ಲಕ್ಷ್ಯದಿಂದ ಎಲ್​ಕೆಜಿ ವಿದ್ಯಾರ್ಥಿ ಸಾವು
ಸಾಂದರ್ಭಿಕ ಚಿತ್ರ
  • Share this:
ಬೆಂಗಳೂರು (ಡಿ. 17): ಶಾಲಾ ಬಸ್​ನಿಂದ ಕೆಳಗೆ ಇಳಿದ ಎಲ್​ಕೆಜಿ ವಿದ್ಯಾರ್ಥಿಯ ಮೇಲೆ ವಾಹನ ಹರಿದು ಬಾಲಕ ಸ್ಥಳದಲ್ಲೇ ಸಾವನ್ನಪ್ಪಿದ ಘಟನೆ ಬೆಂಗಳೂರಿನಲ್ಲಿ ನಡೆದಿದೆ. ಹೆಬ್ಬಗೋಡಿ ಬಳಿ ಸೋಮವಾರ ಮಧ್ಯಾಹ್ನ ಈ ಘಟನೆ ನಡೆದಿದೆ.

4 ವರ್ಷದ ಎಲ್​ಕೆಜಿ ವಿದ್ಯಾರ್ಥಿ ವೈ. ದೀಕ್ಷಿತ್ ಶಾಲಾ ಬಸ್​ಗೆ ಬಲಿಯಾದ ಬಾಲಕ. ಹೆಬ್ಬಗೋಡಿಯ ಸೇಂಟ್ ಪೀಟರ್ ಶಾಲೆಯಲ್ಲಿ ಎಲ್​ಕೆಜಿ ಓದುತ್ತಿದ್ದ ಬಾಲಕ ಸೋಮವಾರ ಮಧ್ಯಾಹ್ನ ಕಮ್ಮಸಂದ್ರದಲ್ಲಿರುವ ತಮ್ಮ ಮನೆಗೆ ಶಾಲಾ ವಾಹನದಲ್ಲಿ ಬಂದಿಳಿದಿದ್ದ. ಆತ ಬಸ್​ನಿಂದ ಇಳಿಯುತ್ತಿದ್ದಂತೆ ಚಾಲಕ ಬಸ್​ ಅನ್ನು ರಿವರ್ಸ್​ ತೆಗೆದಿದ್ದರಿಂದ ವಾಹನದ ಚಕ್ರ ದೀಕ್ಷಿತ್ ಮೈಮೇಲೆ ಹತ್ತಿದೆ. ಬಸ್​ನ ಹಿಂದಿದ್ದ ಬಾಲಕನನ್ನು ಗಮನಿಸದ ಚಾಲಕನ ನಿರ್ಲಕ್ಷ್ಯದಿಂದ ಬಾಲಕ ದೀಕ್ಷಿತ್ ಸ್ಥಳದಲ್ಲೇ ಸಾವನ್ನಪ್ಪಿದ್ದಾನೆ.

ಬೆಂಗಳೂರಿನಲ್ಲಿ ಈ ರೀತಿಯ ಘಟನೆಗಳು ನಡೆಯುತ್ತಿರುವುದು ಇದೇ ಮೊದಲೇನಲ್ಲ. ಶಾಲೆಯಲ್ಲಿ ಮಕ್ಕಳ ಬಗ್ಗೆ ವಹಿಸುವಷ್ಟೇ ಎಚ್ಚರಿಕೆ ಅವರನ್ನು ಸುರಕ್ಷಿತವಾಗಿ ಮನೆಗೆ ಬಿಡುವವರೆಗೂ ಇರಬೇಕೆಂದು ಪೋಷಕರು ಒತ್ತಾಯ ಮಾಡುತ್ತಲೇ ಇದ್ದಾರೆ. ಈ ಹಿಂದೆ ಕೂಡ ಶಾಲಾ ಬಸ್ ಚಾಲಕನ ನಿರ್ಲಕ್ಷ್ಯದಿಂದ ಮಕ್ಕಳು ಪ್ರಾಣ ಕಳೆದುಕೊಂಡ ಘಟನೆಗಳು ನಡೆದಿದ್ದವು.

ರಾತ್ರೋರಾತ್ರಿ ಬೆಂಗಳೂರಿನ ರೌಡಿಶೀಟರ್ ಬರ್ಬರ ಹತ್ಯೆ; ಬಾರ್​ ಎದುರು ಮಾರಕಾಸ್ತ್ರಗಳಿಂದ ಕೊಚ್ಚಿ ಕೊಲೆ

ಸೋಮವಾರ ಮಧ್ಯಾಹ್ನ 12.45ಕ್ಕೆ ಶಾಲಾ ಬಸ್​ನಿಂದ ಇಳಿದ ದೀಕ್ಷಿತ್ ತನ್ನ ಮನೆಯ ಗೇಟಿನತ್ತ ಹೋಗುತ್ತಿದ್ದಾಗ ಬಸ್​ ಅನ್ನು ಚಾಲಕ ರಿವರ್ಸ್​ ತೆಗೆದುಕೊಂಡಿದ್ದರಿಂದ ಈ ದುರಂತ ಘಟಿಸಿದೆ. ಬಾಲಕನ ಸಾವಿಗೆ ಕಾರಣವಾದ ಚಾಲಕನನ್ನು ಪೊಲೀಸರು ಬಂಧಿಸಿದ್ದಾರೆ. ಉದ್ಯಮಿ ಯಮನೂರಪ್ಪ ಅವರ ಮಗ ದೀಕ್ಷಿತ್ ಸೋಮವಾರ ಬಾಕಿ ದಿನಗಳಿಗಿಂತ ಬೇಗನೆ ಮನೆಗೆ ಬಂದಿದ್ದ. ಸಾಮಾನ್ಯವಾಗಿ ದೀಕ್ಷಿತ್ ಶಾಲಾ ಬಸ್ ಬರುವ ವೇಳೆಗೆ ಆತನ ಮನೆಯವರೇ ಬಂದು ಬಸ್​ನಿಂದ ಇಳಿಸಿಕೊಳ್ಳುತ್ತಿದ್ದರು.

ಸೊಸೆಗೆ ಮಕ್ಕಳಾಗದ್ದಕ್ಕೆ ಬೆಂಕಿ ಹಚ್ಚಿ ಕೊಂದ ಚಾಮರಾಜನಗರದ ಮೂವರು ಆರೋಪಿಗಳಿಗೆ ಜೀವಾವಧಿ ಶಿಕ್ಷೆ

ಆದರೆ, ಸೋಮವಾರ ಬಸ್ ಚಾಲಕ ನಿಗದಿತ ಸಮಯಕ್ಕಿಂತ ಅರ್ಧ ಗಂಟೆ ಮೊದಲೇ ಶಾಲೆಯಿಂದ ಮಕ್ಕಳನ್ನು ಕರೆದುಕೊಂಡು ಹೊರಟಿದ್ದರಿಂದ ದೀಕ್ಷಿತ್ ಬೇಗನೆ ಮನೆಗೆ ಬಂದಿದ್ದ. ಹೀಗಾಗಿ, ಮನೆಯವರು ಯಾರೂ ಗೇಟಿನ ಹೊರಗೆ ಇಲ್ಲದ ಕಾರಣ ತಾನೇ ಬಸ್ ಇಳಿದು ಮನೆಯತ್ತ ಹೊರಟಿದ್ದ. ಆ ಶಾಲಾ ಬಸ್​ನಲ್ಲಿ ಆಯಾ ಕೂಡ ಇರದ ಕಾರಣ ಚಾಲಕ ರಿವರ್ಸ್​ ತೆಗೆಯುವಾಗ ಬಸ್​ನ ಹಿಂದೆ ಬಾಲಕ ಇದ್ದಿದ್ದು ಆತನ ಗಮನಕ್ಕೆ ಬಂದಿರಲಿಲ್ಲ. ಈ ರೀತಿಯ ಹಲವು ಘಟನೆಗಳು ನಡೆದಿದ್ದರೂ ಖಾಸಗಿ ಶಾಲೆಗಳ ಆಡಳಿತ ಮಂಡಳಿ ಸೂಕ್ತ ಕ್ರಮ ಕೈಗೊಂಡಿಲ್ಲ, ವಿದ್ಯಾರ್ಥಿಗಳ ಸುರಕ್ಷತೆಗೆ ಆದ್ಯತೆ ನೀಡುತ್ತಿಲ್ಲ ಎಂದು ಪೋಷಕರು ಆಕ್ರೋಶ ಹೊರಹಾಕಿದ್ದಾರೆ. 

 
First published:December 17, 2019
ಮತ್ತಷ್ಟು ಓದಿರಿ
ಮುಂದಿನ ಸುದ್ದಿ