ಬೆಂಗಳೂರು: ಟ್ರಾಫಿಕ್ ದಟ್ಟನೆ, ಜನಜಂಗಳಿಯಿಂದ ಕಂಗೆಟ್ಟಿದ್ದ ಬೆಂಗಳೂರಿನ (Bengaluru) ಜನರಿಗೆ ಸದ್ಯದಲ್ಲೇ ಸಂಕಷ್ಟ ಬಗೆಹರಿಯುವಂತೆ ಕಾಣುತ್ತೆ ಎನ್ನಲಾಗಿತ್ತು. ಆದರೆ ರಾಜಧಾನಿಯ ಚೊಚ್ಚಲ ಡಬಲ್ ಡೆಕ್ಕರ್ ಫ್ಲೈ ಓವರ್ ಕಾಮಗಾರಿ (Double-Decker Flyover) ದಿನದಿಂದ ದಿನಕ್ಕೆ ವಿಳಂಬವಾಗುತ್ತಿದೆ. ಬೆಂಗಳೂರಿನ ರಾಗಿಗುಡ್ಡದಿಂದ ಸಿಲ್ಕ್ ಬೋರ್ಡ್ (Central Silk Board) ತನಕ 3.3 ಕಿ.ಮೀ ಡಬಲ್ ಡೆಕ್ಕರ್ ಮೇಲ್ಸೇತುವೆ ನಿರ್ಮಾಣ ಆಗ್ತಿದೆ. ಆದರೆ ಕಾಮಗಾರಿ ವಿಳಂಬ ಆಗಿರೋದರಿಂದ ಜನರ ಸಂಚಾರಕ್ಕೆ ಮುಕ್ತ ಆಗುವುದು ತಡವಾಗುತ್ತಿದೆ. ಮುಂದಿನ ನಾಲ್ಕೈದು ತಿಂಗಳು ಕಾಮಗಾರಿ ನಡೆದ ಬಳಿಕ BMRCL ನಿರ್ಮಿಸುತ್ತಿರುವ ರಾಜಧಾನಿಯ ಚೊಚ್ಚಲ ಡಬಲ್ ಡೆಕ್ಕರ್ ಫ್ಲೈ ಓವರ್ ಲೋಕಾರ್ಪಣೆ ಆಗಲಿದೆ.
ಕೋವಿಡ್ ಕಾರಣದಿಂದ ಕಾಮಗಾರಿ ವಿಳಂಬ
ದಿನದಿಂದ ಕಾಮಗಾರಿ ವಿಳಂಬವಾಗುತ್ತಿದೆ. ಇದರಿಂದ ಲೋಕಾಪರ್ಣೆ ಕೂಡ ತಡವಾಗುತ್ತಿದೆ. ಆದರೆ ಕಾಮಗಾರಿಯಲ್ಲಿ ತಡ ಎಲ್ಲಿಯೂ ಆಗಿಲ್ಲ. ಫೇಸ್ ಟು ಕಾಮಗಾರಿ ನೋಡಿದರೆ ಕೋವಿಡ್ ಕಾರಣದಿಂದ ಒಂದೂವರೆ ವರ್ಷ ತಡವಾಗಿದೆ. ಇದರಿಂದ ನಮಗೆ ನಷ್ಟ ಆಯ್ತು. ಆ ಬಳಿಕ ಕೆಲ ದಿನಗಳಿಂದ ಕಾಮಗಾರಿ ವೇಳೆ ನಿರಂತರ ಮಳೆ ಬಂದ ಕಾರಣ ಕೆಲ ದಿನಗಳು ನಷ್ಟ ಆಯ್ತು. ಬಿಬಿಎಂಪಿ ಕೆಲಸ ಏನಿದೆ ಅದು ಅಷ್ಟು ಪೂರ್ಣಗೊಂಡಿದೆ. ಅದಕ್ಕೆ ಈ ಲೈನ್ಗೆ ಆಗಸ್ಟ್-ಸೆಪ್ಟೆಂಬರ್ನಲ್ಲಿ ಆರಂಭ ಮಾಡುವ ಯೋಜನೆ ಇದೆ ಎಂದು ನಮ್ಮ ಮೆಟ್ರೋ ಅಧಿಕಾರಿಗಳು ತಿಳಿಸಿದ್ದಾರೆ.
ಇದನ್ನೂ ಓದಿ: Bengaluru Namma Metro: ಹೊಸ ವರ್ಷದ ಮೊದಲ ದಿನವೇ ನಮ್ಮ ಮೆಟ್ರೋಗೆ ಭರ್ಜರಿ ಆದಾಯ!
ಅಧಿಕಾರಿಗಳು ಹೇಳುವುದೇನು?
ಕೆಳಗಿನ ಮೇಲ್ಸೇತುವೆ ಮೇಲೆ ವಾಹನ ಓಡಾಟ. ಅದರ ಮೇಮಿನ ಮೇಲ್ಸೇತುವೆ ಮೇಲೆ ಮೆಟ್ರೋ ಸಂಚಾರ ಮಾಡುವ ಮೇಲ್ಸೇತುವೆ ಇದಾಗಿದೆ. 2016ರಲ್ಲಿ ಶುರುವಾದ ಕಾಮಗಾರಿ 2020ಕ್ಕೆ ಸಂಪೂರ್ಣ ಆಗ್ಬೇಕಿತ್ತು. ಕೊರೊನಾ ಸೋಂಕಿನಿಂದ ತಡ ಅಂತಿದ್ದಾರೆ ಅಧಿಕಾರಿಗಳು.
ಕೊರೊನಾ ನಿಯಂತ್ರಣಕ್ಕೆ ಬಂದು ವರ್ಷ ಆಗಿದೆ. ಆದರೂ ಕಾಮಗಾರಿ ಮಾತ್ರ ನಿಧಾನಗತಿಯಲ್ಲಿ ಸಾಗುತ್ತಿದೆ. ಈ ಡಬಲ್ ಡೆಕ್ಕರ್ ಮೇಲ್ಸೇತುವೆ ಜನರ ಓಡಾಟಕ್ಕೆ ಮುಕ್ತ ಆದ್ರೆ ಜಯನಗರದಿಂದ ಹೊಸೂರು ರಸ್ತೆ ಕಡೆಗೆ ಓಡಾಡಲು ಆರಾಮದಾಯಕ ಆಗಲಿದೆ. 16 ಮೀಟರ್ ಅಂತರದಲ್ಲಿ ಎರಡು ಮೇಲ್ಸೇತುವೆ ಹಾದು ಹೋಗಲಿವೆ. 7 ಸಿಗ್ನಲ್ ದಾಟುವ ಈ ರಸ್ತೆ ಆದಷ್ಟು ಬೇಗ ಆಗಲಿ ಅಂತಿದ್ದಾರೆ ಜನ.
ಇದನ್ನೂ ಓದಿ: Abhishek Ambareesh: ಮೆಟ್ರೋ ಏರಿದ ಅಭಿಷೇಕ್ ಅಂಬರೀಶ್, ಹೇಗಿತ್ತು ಜೂನಿಯರ್ ರೆಬಲ್ ನಮ್ಮ ಮೆಟ್ರೋ ಸವಾರಿ!?
ಐದಾರು ವರ್ಷದಿಂದ ಕಾಮಗಾರಿ ನಡೆಯುತ್ತಿದೆ. ಆದರೂ ಕೂಡ ಕಾಮಗಾರಿ ಪೂರ್ಣಗೊಳಿಸಲು ನಮ್ಮ ಮೆಟ್ರೋಗೆ ಆಗಲಿಲ್ಲ. ಕಾಮಗಾರಿ ಪ್ರಗತಿಯಲ್ಲಿ ಇರುವುದರಿಂದ ರಸ್ತೆಯೂ ಕಿರಿದಾಗಿದ್ದು, ಟ್ರಾಫಿಕ್ ಹೆಚ್ಚಿರುವ ಸಂದರ್ಭದಲ್ಲಿ ಜನರು ಸಂಚರಿಸಲು ಹೈರಾಣಾಗುತ್ತಿದ್ದಾರೆ. ಸಂಚಾರ ದಟ್ಟಣೆ ಹೆಚ್ಚಾಗುತ್ತಿದೆ ಎಂದು ಸ್ಥಳೀಯರು ಹೇಳುತ್ತಿದ್ದಾರೆ.
ಬೆಂಗಳೂರಿನ ಸಂಚಾರ ದಟ್ಟಣೆ ಕಡಿಮೆ ಮಾಡಲು ಪ್ಲೈ ಓವರ್ ಮಾಡಲು ತೀರ್ಮಾನ
ಇನ್ನೂ. ಇಂದು ರಾಜ್ಯಕ್ಕೆ ಆಗಮಿಸಿದ್ದ ಕೇಂದ್ರ ಸಾರಿಗೆ ಸಚಿವ ನಿತಿನ್ ಗಡ್ಕರಿ ಸಭೆ ಬಳಿಕ ಮಾಧ್ಯಮಗಳೊಂದಿಗೆ ಮಾತನಾಡಿದ ಸಿಎಂ ಬಸವರಾಜ ಬೊಮ್ಮಾಯಿ, ಇಂದು ಕೇಂದ್ರ ಭೂ ಸಾರಿಗೆ ಸಚಿವರೊಂದಿಗೆ ಮಹತ್ವದ ಸಭೆ ನಡೆಸಿದ್ದೇವೆ. ಎಲ್ಲಾ ಕಡೆ ಪರಿಶೀಲನೆ ನಡೆಸಿದ್ದಾರೆ. ಸುಮಾರು 46,800 ಕೋಟಿ ರೂಪಾಯಿ ರಾಷ್ಟ್ರೀಯ ಹೆದ್ದಾರಿಯ ಕಾಮಗಾರಿಗಳು ನಡೆಯುತ್ತಿದೆ. ಇನ್ನೂ 1 ಲಕ್ಷ ಕೋಟಿ ರೂಪಾಯಿ ಕಾಮಗಾರಿ ನಡೆಯಬೇಕು. ಫಾಸ್ಟ್ ಟ್ರಾಕ್ ನಲ್ಲಿ ಪೂರೈಸಲು ಚರ್ಚೆ ಮಾಡಿದ್ದೇವೆ. ಬನ್ನೇರುಘಟ್ಟ ಪ್ರದೇಶದಲ್ಲಿ ಹೆದ್ದಾರಿ ಬರುವುದು ಬೇಡ ಎಂದು ಹೇಳಿದ್ದೇವೆ, ಅದನ್ನ ಸಚಿವರು ಒಪ್ಪಿದ್ದಾರೆ.
Chaired a review meeting of Karnataka's NH projects with Chief Minister Shri @BSBommai Ji, PWD minister Shri @CCPatilBJP ji, MP Shri @Tejasvi_Surya ji and Senior Officials in Bengaluru. pic.twitter.com/4ztzDFmJjF
— Nitin Gadkari (@nitin_gadkari) January 5, 2023
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ