ಪ್ರಿಯಕರನ ಜೊತೆ ಸೇರಿ ಗಂಡನಿಗೆ ಮುಹೂರ್ತ ಇಟ್ಟ ಪತ್ನಿ: ಐದು ವರ್ಷದ ಪ್ರೀತಿ ಕೊಲೆಯಲ್ಲಿ ಅಂತ್ಯ

ಪತಿಯ ಕೊಲೆಯ ನಂತರ ಮೊದಲೇ ಮಾಡಿಕೊಂಡಿದ್ದ ಯೋಜನೆಯಂತೆ, ನನ್ನ ಪತಿ ಕಾಣೆಯಾಗಿದ್ದಾನೆ ಎಂದು ಆಗಸ್ಟ್ 1 ರಂದು ಕೆಂಪೇಗೌಡನಗರ ಠಾಣೆಗೆ ಬಂದು ಪತ್ನಿ ರಂಜಿತ ದೂರು ನೀಡಿದ್ದಾಳೆ.

ಕೊಲೆಯಾದ ಕಾರ್ತಿಕ್​ ಜೊತೆ ಪತ್ನಿ ರಂಜಿತಾ

ಕೊಲೆಯಾದ ಕಾರ್ತಿಕ್​ ಜೊತೆ ಪತ್ನಿ ರಂಜಿತಾ

 • Share this:
  ಇಬ್ಬರದು ಅಪರೂಪದ ಜೋಡಿ,  ಪ್ರೀತಿಸಿ ಮದುವೆಯಾದ ಈ ಜೋಡಿ ಅತ್ಯಂತ ಅನ್ಯೂನ್ಯವಾಗಿ ಜೀವನ ನಡೆಸುತ್ತಿತ್ತು. ಆದರೆ ಯಾವ ಗಳಿಗೆಯಲ್ಲಿ ಗಂಡನ ಸ್ನೇಹಿತ ಇವರಿಬ್ಬರ ನಡುವೆ ಎಂಟ್ರಿ ಆದನೋ ಗೊತ್ತಿಲ್ಲ. ಈಗ ಆಶ್ರಯ ಕೊಟ್ಟ ಸ್ನೇಹಿತನೆ ಶವವಾಗಿದ್ದಾನೆ. ಲವ್ ಮ್ಯಾರೆಜ್ ಮಾಡಿಕೊಂಡು ಬಂದವಳ ಎರಡನೇ ಲವ್ ಸ್ಟೋರಿಗೆ ಗಂಡ ಬಲಿಯಾಗಿದ್ದಾನೆ. 

  ಬೆಂಗಳೂರಿನ ಬಂಡಿಮಾಕಾಳಮ್ಮ ದೇವಸ್ಥಾನ ಬಳಿ ವಾಸವಿದ್ದ ಕಾರ್ತಿಕ್ ಮತ್ತು ರಂಜಿತಾ ದಂಪತಿ, ಕಳೆದ ಐದು ವರ್ಷದ ಹಿಂದೆ ಪ್ರೀತಿಸಿ ಮದುವೆಯಾಗಿದ್ದರು. ಕೊಲೆಯಾಗಿರುವ ಕಾರ್ತಿಕ್​ ತನ್ನ ಸ್ನೇಹಿತನಾದ ಸಂಜಿವ್​ ಎಂಬುವನನ್ನು ಕರೆದುಕೊಂಡು ಬಂದು ಮನೆಯಲ್ಲಿ ಆಶ್ರಯ ಕೊಟ್ಟಿದ್ದ. ಈ ವೇಳೆಯಲ್ಲಿ ಕಾರ್ತಿಕ್​ ಪತ್ನಿ ಹಾಗೂ ಸಂಜೀವನ ಜೊತೆ ಸಲುಗೆ ಬೆಳೆದು, ಈ ಸಲುಗೆ ಅಕ್ರಮ ಸಂಬಂಧಕ್ಕೆ ತಿರುಗಿದೆ.

  ಮೃತ ಕಾರ್ತಿಕ್​


  ಇವರಿಬ್ಬರ ಕದ್ದು- ಮುಚ್ಚಾಟದ ಬಗ್ಗೆ ಒಂದು ಚೂರು ಅನುಮಾನ ಬರದಂತೆ ಇಬ್ಬರು ನೋಡಿಕೊಂಡಿದ್ದಾರೆ.  ಸ್ನೇಹಿತನ‌ ನಂಬಿಕೆಗೆ ವಂಚಿಸಿ ಸ್ನೇಹಿತನ ಪತ್ನಿ ಜೊತೆಗೆ ಅಕ್ರಮ‌ ಸಂಬಂಧ ಹೊಂದಿದ್ದ ಸಂಜೀವ್​ ಆಶ್ರಯ ಕೊಟ್ಟ ಸ್ನೇಹಿತನನ್ನೇ ವಂಚಿಸಿ, ಗೆಳೆಯನ ಹೆಂಡತಿಯನ್ನೆ ಬುಟ್ಟಿಗೆ ಹಾಕಿಕೊಂಡಿದ್ದಾನೆ. ಇದೇ ವೇಳೆ ತನ್ನ ಎರಡನೇ ಪ್ರೀತಿಯ ಬಲೆಯ ಅಮಲಿನಲ್ಲಿ ಇದ್ದ ಪತ್ನಿ ರಂಜಿತಾ  ಎರಡನೇ ಪ್ರೀತಿಗಾಗಿ ಕೈಹಿಡಿದ ಗಂಡನನ್ನೆ ಮುಗಿಸೋ ಪ್ಲಾನ್ ಮಾಡಿದ್ದಾಳೆ.

  ತನ್ನ ಎರಡನೇ ಪ್ರಿಯಕರನಿಗೆ ತನ್ನ ಗಂಡನನ್ನು ಮುಗಿಸುವಂತೆ ಉಪಾಯ ಕೊಟ್ಟಿದ್ದಾಳೆ. ಇದೇ ವೇಳೆ ಸಂಜೀವ್ ತನ್ನ ಸ್ನೇಹಿತ ಸುಬ್ರಮಣಿ ಜೊತೆ ಸೇರಿ ಕಾರ್ತಿಕ್ ಕೊಲೆಗೆ ಯೋಜನೆ ಹಾಕಿಕೊಂಡಿದ್ದಾನೆ. ಅದರಂತೆ ತನಗೆ ಆಶ್ರಯ ಕೊಟ್ಟ ಸ್ನೇಹಿತ ಕಾರ್ತಿಕ್​ಗೆ ಕಂಠ ಪೂರ್ತಿ ಮದ್ಯಪಾನ  ಮಾಡಿಸಿ ಚೆನ್ನಪಟ್ಟಣಕ್ಕೆ ಆರೋಪಿಗಳು ಕರೆದೊಯ್ದಿದ್ದಾರೆ.

  ಸ್ನೇಹಿತನನ್ನೇ ಕೊಂದ ಆರೋಪಿ ಸಂಜೀವ್​


  ಪಾರ್ಟಿ‌ ಎಂದು ಚನ್ನಪಟ್ಟಣಕ್ಕೆ ಕರೆದುಕೊಂಡು ಹೋದ ನಂತರ ಕಾರ್ತಿಕ್‌ ಗೆ ಮತ್ತಷ್ಟು ಮದ್ಯವನ್ನು ಕುಡಿಸಿದ‌ ಆರೋಪಿಗಳು ಕಾರ್ತಿಕ್​ ತಲೆಗೆ ದೊಣ್ಣೆಯಿಂದ ಹೊಡೆದು ಕತ್ತು ಬಿಗಿದು ಹತ್ಯೆ ಮಾಡಿದ್ದಾರೆ.  ನಂತರ ಮೃತದೇಹವನ್ನು ಚೀಲದಲ್ಲಿ ಪ್ಯಾಕ್ ಮಾಡಿ ಕುಂಬಳಗೋಡಿನ ಬಳಿ ವೃಷಭಾವತಿ ಮೋರಿಗೆ ಎಸೆದು‌‌‌ ಪರಾರಿಯಾಗಿದ್ದಾರೆ.

  ಜುಲೈ 29 ರಂದು ಕಾರ್ತಿಕ್ ಕೊಲೆ  ಮಾಡಲಾಗಿದೆ ಎಂಬುದು ತನಿಖೆ ವೇಳೆ ಬಯಲಿಗೆ ಬಂದಿದೆ.

  ಪತಿಯ ಕೊಲೆಯ ನಂತರ ಮೊದಲೇ ಮಾಡಿಕೊಂಡಿದ್ದ ಯೋಜನೆಯಂತೆ, ನನ್ನ ಪತಿ ಕಾಣೆಯಾಗಿದ್ದಾನೆ ಎಂದು ಆಗಸ್ಟ್ 1 ರಂದು ಕೆಂಪೇಗೌಡನಗರ ಠಾಣೆಗೆ ಬಂದು ಪತ್ನಿ ರಂಜಿತ ದೂರು ನೀಡಿದ್ದಾಳೆ.

  ಇದನ್ನೂ ಓದಿ: ಸೆಮಿಫೈನಲ್​ನಲ್ಲಿ ಮುಗ್ಗರಿಸಿದ ಮಹಿಳಾ ಹಾಕಿ ತಂಡ; ಅರ್ಜೈಂಟೀನಾ ಎದುರು ಸೋಲು; ಕಂಚಿನ ಆಸೆ ಜೀವಂತ

  ಗಂಡ ಕಾಣೆಯಾಗಿದ್ದಾನೆ ಎಂದು ಪೊಲೀಸರು ಪ್ರಕರಣ ದಾಖಲು ಮಾಡಿಕೊಂಡಿದ್ದಾರೆ.  ಆನಂತರ ಪತ್ನಿಯ ಮೇಲೆ ಅನುಮಾನ ಬಂದು ವಿಚಾರಣೆಗೆ ಒಳಪಡಿಸಿದಾಗ, ಅಕ್ರಮ ಸಂಬಂಧದ ಹಿನ್ನೆಲೆಯಲ್ಲಿ ಕೊಲೆ ರಹಸ್ಯ ಬೆಳಕಿಗೆ.

  ನ್ಯೂಸ್​​​18 ಕನ್ನಡ ಕಳಕಳಿ: ಕೊರೋನಾ ಪಾಸಿಟಿವ್​ ಕೇಸ್​ಗಳ ಸಂಖ್ಯೆ ರಾಜ್ಯದಲ್ಲಿ ತಗ್ಗಿದೆಯಾದರೂ ಸೋಂಕಿನ ಅಪಾಯದಿಂದ ಸಂಪೂರ್ಣವಾಗಿ  ಇನ್ನೂ ಯಾರೂ ಸುರಕ್ಷಿತರಲ್ಲ. ಹೀಗಾಗಿ ಪ್ರತಿಯೊಬ್ಬರು ಕೋವಿಡ್​​ ನಿಯಮಗಳಾದ ಮಾಸ್ಕ್​​ ಧರಿಸುವುದು, ಸಾಮಾಜಿಕ ಅಂತರ ಕಾಯ್ದುಕೊಳ್ಳುವುದನ್ನು ಮರೆಯಬಾರದು. ಆದಷ್ಟು ಶೀಘ್ರವೇ ಲಸಿಕೆ ಪಡೆದು ಸೋಂಕಿನ ವಿರುದ್ಧದ ಯುದ್ಧದಲ್ಲಿ ಪ್ರತಿಯೊಬ್ಬರು ಕೈ ಜೋಡಿಸಬೇಕು.
  Published by:HR Ramesh
  First published: