Bengaluru: ಗಂಡನ ಡಾಬಾಗೆ ಬೆಂಕಿ ಹಚ್ಚಲು ಸುಪಾರಿ ನೀಡಿ ಅಮಾಯಕ ಜೀವ ಬಲಿ ಪಡೆದ ಪತ್ನಿ

ಗಂಡ ಅರ್ಪಿತ್ ಸಹ ಒಡೆತನದ ಡಾಬಾಗೆ ಬೆಂಕಿ ಹಚ್ಚಲು ಆತನ ಪತ್ನಿ ಶೀತಲ್ ಸುಪಾರಿ ನೀಡಿರುವ ವಿಷಯ ತನಿಖೆಯಲ್ಲಿ  ಬೆಳಕಿಗೆ ಬಂದಿದೆ. ಸೋಲದೇವನಹಳ್ಳಿಯಲ್ಲಿ ದೀಪಕ್, ಸಚಿನ್ ಹಾಗೂ ಅರ್ಪಿತ್ ಮೂವರು ಪಾಲುದಾರಿಕೆಯಲ್ಲಿ ಡಾಬಾ ನಡೆಸುತ್ತಿದ್ದರು.

ಡಾಬಾಗೆ ಬೆಂಕಿ ಹಚ್ಚಲು ಸುಪಾರಿ ನೀಡಿದ ಪತ್ನಿ

ಡಾಬಾಗೆ ಬೆಂಕಿ ಹಚ್ಚಲು ಸುಪಾರಿ ನೀಡಿದ ಪತ್ನಿ

  • Share this:
ಬೆಂಗಳೂರು ಹೊರವಲಯದಲ್ಲಿರುವ ಸೋಲದೇವನಹಳ್ಳಿಯ (Soladevana halli, Bengalurru) ಡಾಬಾಗೆ ಬೆಂಕಿ ಹೆಚ್ಚಿದ ಪ್ರಕರಣಕ್ಕೆ ರೋಚಕ ತಿರುವು ಸಿಕ್ಕಿದ್ದು, ಈ ಸಂಬಂಧ ಪೊಲೀಸರು ಮೂವರನ್ನು ಬಂಧಿಸಿದ್ದಾರೆ. ಡಿಸೆಂಬರ್ 24, 2021ರಂದು ಸೋಲದೇವನಹಳ್ಳಿ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿರುವ ಅರ್ಪಿತ್ ಎಂಬವರಿಗೆ ಸೇರಿದ ಯು ಟರ್ನ್ ಹೆಸರಿನ ಡಾಬಾಗೆ (Daba) ಬೆಂಕಿ ಹಚ್ಚಲಾಗಿತ್ತು. ಈ ವೇಳೆ ಡಾಬಾದಲ್ಲಿದ್ದ ಕೆಲಸಗಾರನ ಮೇಲೆಯೂ ಪೆಟ್ರೋಲ್ (Petrol) ಸುರಿದು ಬೆಂಕಿ (Fire) ಹಚ್ಚಲಾಗಿತ್ತು. ಆದ್ರೆ ಚಿಕಿತ್ಸೆ ಫಲಕಾರಿಯಾಗದೇ ಕೆಲಸಗಾರ ಸಹ ಸಾವನ್ನಪ್ಪಿದ್ದನು. ಇಂದು ಈ ಪ್ರಕರಣಕ್ಕೆ ಸಂಬಂಧಿಸಿದ ಮಾಹಿತಿಯನ್ನು ಉತ್ತರ ವಿಭಾಗದ  ಡಿಸಿಪಿ ವಿನಾಯಕ್ ಪಾಟೀಲ್‌ (DCP Vinayak Patil) ಮಾಧ್ಯಮಗಳಿಗೆ ನೀಡಿದ್ದಾರೆ,

ಬೆಂಕಿ ಹಚ್ಚಲು ಪತ್ನಿಯಿಂದಲೇ ಸುಪಾರಿ

ಹೌದು, ಗಂಡ ಅರ್ಪಿತ್ ಸಹ ಒಡೆತನದ ಡಾಬಾಗೆ ಬೆಂಕಿ ಹಚ್ಚಲು ಆತನ ಪತ್ನಿ ಶೀತಲ್ ಸುಪಾರಿ ನೀಡಿರುವ ವಿಷಯ ತನಿಖೆಯಲ್ಲಿ  ಬೆಳಕಿಗೆ ಬಂದಿದೆ. ಸೋಲದೇವನಹಳ್ಳಿಯಲ್ಲಿ ದೀಪಕ್, ಸಚಿನ್ ಹಾಗೂ ಅರ್ಪಿತ್ ಮೂವರು ಪಾಲುದಾರಿಕೆಯಲ್ಲಿ ಡಾಬಾ ನಡೆಸುತ್ತಿದ್ದರು.

ಇದನ್ನೂ ಓದಿ:  ಅಪಘಾತಕ್ಕೀಡಾದ ಧಾರವಾಹಿ ನಟಿ Amrutha Naiduರ ವಾಹನ: 6 ವರ್ಷದ ಮಗಳ ದುರ್ಮರಣ!

ಅರ್ಪಿತ್ ಗೆ ಶೀತಲ್ ಮ್ಯಾಟ್ರಿಮೋನಿಯಲ್ಲಿ ಪರಿಚಯವಾಗಿದ್ದಳು. ಆದ್ರೆ ಮದುವೆಯಾದ ನಾಲ್ಕೇ ತಿಂಗಳಲ್ಲಿ ಇಬ್ಬರ ಸಂಸಾರ ಹಳಸಿತ್ತು. ಪ್ರತಿನಿತ್ಯ ಇಬ್ಬರ ಮಧ್ಯೆ ಸಣ್ಣ ಸಣ್ಣ ವಿಷಯಕ್ಕೂ ಜಗಳ ನಡೆಯುತ್ತಿತ್ತು. ಹೀಗಾಗಿ ಅರ್ಪಿತ್ ಪತ್ನಿಯನ್ನು ತವರಿಗೆ ಕಳುಹಿಸಿದ್ದನು. ಪತ್ನಿ ತವರಿಗೆ ಹೋದ ಬಳಿಕ ಅರ್ಪಿತ್ ಡಾಬಾ ಕೆಲಸದಲ್ಲಿ ಬ್ಯುಸಿಯಾಗಿದ್ದನು.

ನೋಡಲು ಬರದ್ದಕ್ಕೆ 20 ಸಾವಿರಕ್ಕೆ ಸುಪಾರಿ ನೀಡಿದ್ಳು

ಇನ್ನು ತವರಿಗೆ ಹೋದ ಪತ್ನಿಯನ್ನು ನೋಡಲು ಅರ್ಪಿತ್ ಹೋಗಿರಲಿಲ್ಲ. ಇದರಿಂದ ಕೋಪಗೊಂಡ ಶೀತಲ್ ಡಾಬಾಗೆ ಬೆಂಕಿ ಹಚ್ಚಲು ತನಗೆ ಪರಿಚಯನಿದ್ದ ರೌಡಿಶೀಟರ್ ಮನು ಕುಮಾರ್ ಎಂಬಾತನಿಗೆ 20 ಸಾವಿರ ರೂಪಾಯಿಗೆ ಸುಪಾರಿ ನೀಡಿದ್ದಳು. ಸುಪಾರಿ ಪಡೆದ ಮನುಕುಮಾರ್ ಡಿಸೆಂಬರ್ 24ರಂದು ತನ್ನಿಬ್ಬರ ಸಹಚರರಾದ ಮಂಜುನಾಥ್ ಮತ್ತು ಹೇಮಂತ್ ಜೊತೆ ಡಾಬಾಗೆ ಬೆಂಕಿ ಹಚ್ಚಲು ತೆರಳಿದ್ದನು.

ಪತ್ನಿ ಶೀತಲ್ ಜೂಟ್

ಡಾಬಾಗೆ ಪೆಟ್ರೋಲ್ ಸುರಿದು ಬೆಂಕಿ ಹಚ್ಚುತ್ತಿದ್ದ ವೇಳೆ ಅಲ್ಲಿಯ ಕೆಲಸಗಾರ ಮನೋಜ್ ಬಂದು ಪ್ರಶ್ನೆ ಮಾಡಿದ್ದಾನೆ. ಗಾಬರಿಗೊಂಡ ಆರೋಪಿಗಳು ಡಾಬಾ ಜೊತೆ ಕೆಲಸಗಾರನ ಮೇಲೆ ಪೆಟ್ರೋಲ್ ಸುರಿದು ಬೆಂಕಿ ಹಚ್ಚಿ ಎಸ್ಕೇಪ್ ಆಗಿದ್ದರು. ಸದ್ಯ ಪೊಲೀಸರು ಮನು ಕುಮಾರ್, ಮಂಜುನಾಥ್ ಮತ್ತು ಹೇಮಂತ್ ಮೂವರನ್ನು ಬಂಧಿಸಿದ್ದಾರೆ, ಇತ್ತ ಶೀತಲ್ ನಾಪತ್ತೆಯಾಗಿದ್ದು, ಆಕೆಯ ಬಂಧನಕ್ಕಾಗಿ ಪೊಲೀಸರು ಬಲೆ ಬೀಸಿದ್ದಾರೆ.

ಉತ್ತರ ವಿಭಾಗದ  ಡಿಸಿಪಿ ವಿನಾಯಕ್ ಪಾಟೀಲ್‌ ಹೇಳಿಕೆ

ಡಿಸೆಂಬರ್ 24ರಂದು ಸೋಲದೇವನಹಳ್ಳಿ ಠಾಣೆಯಲ್ಲಿ 436, 307 ಪ್ರಕರಣ ದಾಖಲಾಗಿತ್ತು.  ಯೂಟರ್ನ್ ಅನ್ನೋ ಡಾಭಾಗೆ ಬಂದು ಪೆಟ್ರೋಲ್ ಸುರಿದು ಬೆಂಕಿ ಹಚ್ಚಿದ್ದರು. ಈ ಟೈಮಲ್ಲಿ ಸಪ್ಲೈಯರ್ ಬಂದು ಕೇಳಿದಾಗ  ಆತನ ಮೇಲೂ ಪೆಟ್ರೋಲ್ ಸುರಿದು ಬೆಂಕಿ ಹಚ್ಚಿದ್ದರು. ಈ ವೇಳೆ ಸಪ್ಲೈಯರ್  ಗಾಯಗೊಂಡು ಆಸ್ಪತ್ರೆ ಸೇರಿದ್ದ. ನಂತರ ಆತ ಚಿಕಿತ್ಸೆ ಫಲಕಾರಿಯಾಗದೆ ಸಾವನ್ನಪ್ಪಿದ್ದಾನೆ. ಈ ಸಂಬಂಧ ಸೋಲದೇವನಹಳ್ಳಿಯಲ್ಲಿ 302 ಪ್ರಕರಣ ದಾಖಲು ಮಾಡಲಾಗಿತ್ತು ಎಂದು ಉತ್ತರ ವಿಭಾಗದ  ಡಿಸಿಪಿ ವಿನಾಯಕ್ ಪಾಟೀಲ್‌ ಹೇಳಿದ್ದಾರೆ.

ಇದನ್ನೂ ಓದಿ:  Bengaluru Crime: ಖಾರದಪುಡಿ ಎರಚಿ ₹4 ಲಕ್ಷ ದೋಚಿದ್ರು ಅಂತ ದೂರು ಕೊಟ್ಟವನೇ ಅರೆಸ್ಟ್..!

ಈ ಸಂಬಂಧ ಒಟ್ಟು ಮೂರು ಜನ ಆರೋಪಿಗಳನ್ನ ಬಂಧಿಸಲಾಗಿದೆ. ಮೂವರು ಆರೋಪಿಗಳಲ್ಲಿ ಒಬ್ಬ ಡಕಾಯತಿ, ಸುಲುಗೆ ಪ್ರಕರಣಗಳಲ್ಲಿ ಭಾಗಿಯಾಗಿದ್ದಾನೆ. ಮೂವರಲ್ಲಿ ಒಬ್ಬ ಆರೋಪಿ ಪ್ಲಾನ್ ನಂತೆ ದಾಬಾ ಬಳಿ ಬೆಂಕಿ ಹಚ್ಚಿದ್ದಾರೆ. ಮುಖ್ಯ ಆರೋಪಿ ರಾಬರಿ, ಅಪಹರಣ, ಡಕಾಯಿತಿ ಯತ್ನ ಸೇರಿದಂತೆ ಹಲವು ಪ್ರಕರಣಗಳಲ್ಲಿ ಭಾಗಿಯಾಗಿದ್ದಾನೆ. ಸದ್ಯ ಮೂವರನ್ನೂ ಬಂಧಿಸಿ ಹೆಚ್ಚಿನ ವಿಚಾರಣೆಗೆ ಒಳಪಡಿಸಲಾಗಿದೆ ಎಂದು ವಿನಾಯಕ್ ಪಾಟೀಲ್ ಹೇಳಿದರು.
Published by:Mahmadrafik K
First published: