ಬೆಂಗಳೂರು: ಬೆಡ್ ಬ್ಲಾಕ್ ದಂಧೆ ಅರೋಪ ಮಾಡಿದ ಬಳಿಕ ಸಂಸದ ತೇಜಸ್ವಿ ಸೂರ್ಯ ಮೊದಲ ಬಾರಿಗೆ ಸುದ್ದಿಗೋಷ್ಠಿ ನಡೆಸಿದರು. ಬೆಡ್ ಬ್ಲಾಕ್ ದಂಧೆ ಆರೋಪದ ಬಳಿಕ ನಡೆದ ವಿದ್ಯಮಾನಗಳ ಬಗ್ಗೆ ಸ್ಪಷ್ಟನೆ ನೀಡಿದರು. ಮೇ 6 ರಂದು ಬೆಡ್ ಹಂಚಿಕೆಯಲ್ಲಿ ಆಗುತ್ತಿದ್ದ ಕುಂದುಕೊರತೆಗಳನ್ನು ಬಯಲು ಮಾಡಿದೆವು. ಸರ್ಕಾರದ ಗಮನಕ್ಕೆ ಪ್ರಕರಣ ತಂದೆವು. ಬಿಬಿಎಂಪಿ ವಾರ್ ರೂಂನಲ್ಲಿ ಪಾರದರ್ಶಕತೆ ಇರಲಿಲ್ಲ. ಒಬ್ಬ ವ್ಯಕ್ತಿಗೆ 20 ಕಡೆ ಬೆಡ್ ಬ್ಲಾಕ್ ಆಗಿತ್ತು. 4000 ಕ್ಕೂ ಹೆಚ್ಚು ಬೆಡ್ ಗಳು ಬ್ಲಾಕ್ ಆಗಿದ್ದವು ಎಂದು ಹೇಳಿದರು.
ಒಂದು ಬೆಡ್ ಗೆ 50-60 ಸಾವಿರ ವಸೂಲು ಮಾಡಲಾಗುತ್ತಿತ್ತು. ಇದು ದೊಡ್ಡ ರಾಕೆಟ್. ನಾವು ಅಂಕಿ- ಅಂಶ ಸಮೇತ ಬಯಲು ಮಾಡಿದೆವು. ಅವತ್ತೇ ಸಿಎಂ ಗಮನಕ್ಕೂ ತಂದೆವು. ಈ ಬೆಡ್ ಬ್ಲಾಕ್ ದಂಧೆಯ ತನಿಖೆಗೆ ಸಿಎಂ ಆದೇಶಿಸಿದರು. ಸಿಸಿಬಿಯಿಂದ ತನಿಖೆ ಆರಂಭವಾಯ್ತು, ಕೆಲವರನ್ನು ಬಂಧಿಸಲಾಯಿತು. ಈ ಪ್ರಕರಣ ಸಂಬಂಧ ಹೈಕೋರ್ಟ್ ತನಿಖೆಯ ವರದಿಯನ್ನೂ ಕೇಳಿದೆ ಎಂದರು.
ಬೆಡ್ ಬ್ಲಾಕ್ ದಂಧೆ ನಿಲ್ಲಿಸಲು ಬೇರೆ ಸಾಫ್ಟ್ ವೇರ್ ವ್ಯವಸ್ಥೆ ಇದೆ. ನಂದನ್ ನಿಲೇಕಣಿ ಅವರು ಸಾಫ್ಟ್ ವೇರ್ ಒದಗಿಸಲು ಒಪ್ಪಿಕೊಂಡರು. ನಾವು ಎತ್ತಿ ಹಿಡಿದ ದೋಷಗಳಿಗೆ ಪ್ರಮುಖ ಪರಿಹಾರ ಹುಡುಕಲಾಗಿದೆ. ಹಿಂದೆ ಯಾರು, ಯಾರಿಗೆ, ಯಾವ ಕಂಪ್ಯೂಟರ್ನಲ್ಲಿ ಬೆಡ್ ಬುಕ್ ಮಾಡುತ್ತಿದ್ದರು ಅನ್ನೋದಕ್ಕೆ ದಾಖಲೆ ಇರುತ್ತಿರಲಿಲ್ಲ. ಈಗ ಇದಕ್ಕೆ ಪರ್ಯಾಯ ವ್ಯವಸ್ಥೆ ತರಲಾಗಿದೆ. ಇನ್ಮುಂದೆ ಬೆಡ್ ಬುಕ್ ಮಾಡುವವರ ಹೆಸರು ತೋರಿಸುವ ವ್ಯವಸ್ಥೆ ಬಂದಿದೆ. ಬೆಡ್ ಬುಕ್ ಮಾಡುವ ವೈದ್ಯರ ಹೆಸರು, ರೋಗಿಯ ವಿವರ ಈಗ ತೋರಿಸುತ್ತೆ. ಇದರಿಂದ ಅಕ್ರಮ ತಡೆಯಲು ಸಹಕಾರಿಯಾಗಿದೆ. ಮುಂಚೆ ಬೆಡ್ ಅಲಾಟ್ ಆದರೆ ಅದರ ಬಗ್ಗೆ ರೋಗಿಗೆ ಗೊತ್ತಿರುತ್ತಿರಲಿಲ್ಲ. ನನ್ನ ಹೆಸರಲ್ಲಿ ಬೆಡ್ ಬುಕ್ ಆಗಿದೆ ಅಂತ ರೋಗಿಗೆ ಗೊತ್ತಾಗುತ್ತಿರಲಿಲ್ಲ. ಈಗ ಬೆಡ್ ಬುಕ್ ಆದ ರೋಗಿಯ ಮೊಬೈಲಿಗೆ ಮೇಸೆಜ್ ಹೋಗುತ್ತೆ. ಅದರಲ್ಲಿ ರೋಗಿಯ ಹೆಸರು, ಬೆಡ್ ಇರುವ ಆಸ್ಪತ್ತೆ ವಿವರ ಇರುತ್ತೆ. ಈ ಎಸ್ಎಂಎಸ್ ತೋರಿಸಿದರೆ ಆಸ್ಪತ್ರೆಯವರು ಬೆಡ್ ಕೊಡ್ತಾರೆ. ಇದೇ ಎಸ್ಸೆಮ್ಮೆಸ್ ನೋಡಲ್ ಅಧಿಕಾರಿಗೂ ಹೋಗುತ್ತೆ ಎಂದು ಮಾಹಿತಿ ನೀಡಿದರು.
ಇದನ್ನು ಓದಿ: ಕೊರೋನಾ ನಿರ್ವಹಣೆಯಲ್ಲಿ ಸರ್ಕಾರ ವಿಫಲ ಆರೋಪ; ಸಿಎಂ ಭೇಟಿಯಾದ ಬಿಜೆಪಿ ರಾಜ್ಯಾಧ್ಯಕ್ಷ ಕಟೀಲ್
ರಾಜ್ಯದ ಹೈಕೋರ್ಟ್ ಮತ್ತು ಲೋಕಾಯುಕ್ತ ಸಂಸ್ಥೆಯೂ ಸಹ ಸುಮೋಟೋ ಅಡಿ ಪ್ರಕರಣ ಕೈಗೆತ್ತಿಕೊಂಡು, ತನಿಖೆ ಮಾಡ್ತಾಯಿದೆ. ದೇಶದ ಅತ್ಯುನ್ನತ ಸಾಫ್ಟ್ವೇರ್ ಟೆಕ್ನಾಲಜಿ ಬಳಸಿಕೊಳ್ಳಲು, ಇನ್ಫೊಸಿಸ್ ಸೇರಿದಂತೆ ಕೆಲ ಸಂಸ್ಥೆಗಳ ಸಹಯೋಗದೊಂದಿಗೆ ರಿಫಾರ್ಮ್ ಆರಂಭಿಸಿದ್ದೇವೆ. ಅರವಿಂದ ಲಿಂಬಾವಳಿ ಅವರು 100 ಗಂಟೆಗಳ ಸಮಯಾವಕಾಶ ನೀಡಿದ್ದು, ಆ ಬದಲಾವಣೆಗಳನ್ನು ಬಿಬಿಎಂಪಿ ಬೆಡ್ ಬುಕ್ಕಿಂಗ್ ವ್ಯವಸ್ಥೆ ಜಾರಿಗೆ ತಂದಿದ್ದೇವೆ ಎಂದರು.
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ