Crime News: ಊಟ ತರಲು ಹೋದ ಮಗ ವಾಪಸ್ ಮನೆಗೆ ಬರಲೇ ಇಲ್ಲ; ಬೆಳಗ್ಗೆ ಬಾಗಿಲಲ್ಲಿ ಶವವಾಗಿ ಪತ್ತೆ

ತಲೆಯ ಹಿಂಬಾಗಕ್ಕೆ ಬಲವಾದ ಆಯುಧದಿಂದ ಹೊಡೆದಿರುವ ಸಾಧ್ಯತೆ ಇದೆ. ಜೊತೆಗೆ ಪಕ್ಕದ ಮನೆಯ ಮೂರನೇ ಮಹಡಿಯಿಂದಲೂ ಆಯತಪ್ಪಿ, ಅಥವಾ ಯಾರಾದರೂ ತಳ್ಳಿರುವ ಸಾಧ್ಯತೆಯನ್ನು ಅಲ್ಲಗಳೆಯುವಂತಿಲ್ಲ.

ಮೃತ ಯುವಕ

ಮೃತ ಯುವಕ

  • Share this:
    ಆನೇಕಲ್ : ಆತ ಅಪ್ಪ ನೀನು ಮನೆಯಲ್ಲಿಯೇ ಇರು ಊಟ (Food) ತರುತ್ತೇನೆ ಎಂದು ಮನೆಯಿಂದ ಹೊರ ಹೋದವನು ತಡರಾತ್ರಿಯಾದರೂ (Mid Night) ವಾಪಸ್ ಆಗಿರಲಿಲ್ಲ. ಮಗನ ಬರುವಿಕೆಯಲ್ಲಿಯೇ ಕಾದು ಕಾದು ಅಪ್ಪ(Father)  ನಿದ್ರೆಗೆ ಜಾರಿದ್ದಾನೆ. ಆದ್ರೆ ಮುಂಜಾನೆ ಹೊತ್ತಿಗೆ ಅಪ್ಪನಿಗೆ ಶಾಕ್ ಕಾದಿತ್ತು. ಮನೆಯ ಮುಂಭಾಗದಲ್ಲಿಯೇ ರಕ್ತದ ಮಡುವಿನಲ್ಲಿ ಮಗನ ಶವ (Dead Body) ಪತ್ತೆಯಾಗಿದ್ದು, ಕೊಲೆ ಶಂಕೆ ವ್ಯಕ್ತವಾಗಿದೆ.  ಬೆಂಗಳೂರು ಹೊರವಲಯ ಆನೇಕಲ್ ತಾಲ್ಲೂಕಿನ (Anekal Taluk) ದಾಸನಪುರ ವಾಸಿ ಸುರೇಶ್ ತನ್ನ ಮನೆಯ ಮುಂಭಾಗದಲ್ಲಿಯೇ ನವೆಂಬರ್ 6 ನೇ ತಾರೀಖು ಅನುಮಾನಾಸ್ಪದವಾಗಿ ಸಾವನ್ನಪ್ಪಿದ್ದಾನೆ. ಕೇವಲ 22 ವರ್ಷ ವಯಸ್ಸಿನ ಯುವಕ  ಶ್ರೀನಿವಾಸ್ ಎಂಬ ಹೂವಿನ ವ್ಯಪಾರಿ ಬಳಿ ಕೆಲಸ ಮಾಡಿಕೊಂಡಿದ್ದ. ಆದ್ರೆ ಶನಿವಾರ ಮುಂಜಾನೆ ಮನೆಯ ಮುಂಭಾಗದಲ್ಲಿ ಅನುಮಾನಾಸ್ಪದ ರೀತಿಯಲ್ಲಿ ಶವವಾಗಿ ಪತ್ತೆಯಾಗಿದ್ದಾನೆ.

    ಮನೆ ಬರದ ಮಗ, ಮನೆ ಮುಂದೆ ಶವ 

    ನಿನ್ನೆ ಸಹ ತನ್ನ ತಾಯಿ ಮತ್ತು ಅಕ್ಕನನ್ನು ಚಿಕ್ಕಮ್ಮನ ಮನೆಗೆ ಹಬ್ಬಕ್ಕೆ ಕಳಿಸಿ ಕೆಲಸಕ್ಕೆ ಹೋಗಿದ್ದ. ಕೆಲಸ ಮುಗಿಸಿ ರಾತ್ರಿ 8 ಗಂಟೆ ಸುಮಾರಿಗೆ ಮನೆಗೆ ಬಂದವನು ತನ್ನ ತಂದೆಗೆ ಊಟ ತರುವುದಾಗಿ ಮನೆಯ ಬಳಿಯೇ ಚಪ್ಪಲಿ ಬಿಟ್ಟು ಮನೆಯಿಂದ ಹೊರ ಹೋಗಿದ್ದಾನೆ. ಆದ್ರೆ ತಡರಾತ್ರಿಯಾದರೂ ವಾಪಸ್ಸು ಮನೆಗೆ ಬಂದಿರಲಿಲ್ಲ. ಆದ್ರೆ ಬೆಳಗಾಗುವುದರೊಳಗೆ ಮನೆಯ ಮುಂಭಾಗದಲ್ಲಿ ಶವವಾಗಿ ಪತ್ತೆಯಾಗಿದ್ದಾನೆ. ತಲೆಯ ಹಿಂಭಾಗಕ್ಕೆ ಗಾಯವಾಗಿ ತೀವ್ರ ರಕ್ತಸ್ರಾವದಿಂದ ಸಾವನ್ನಪ್ಪಿದ್ದಾನೆ. ಮಗನ ಸಾವು ಹೇಗಾಯಿತು ನಮಗೆ ಗೊತ್ತಿಲ್ಲ ಎಂದು ತಂದೆ ವೆಂಕಟೇಶ್ ತಿಳಿಸಿದ್ದಾರೆ.

    ಮಗನ ಸಾವಿನ ಸುತ್ತ ಅನುಮಾನಗಳ ಹುತ್ತ 

    ಇನ್ನೂ ನನ್ನ ಮಗ ಯಾರ ಜೊತೆಯು ಹೆಚ್ಚು ಒಡನಾಡವಿಟ್ಟುಕೊಂಡಿರಲಿಲ್ಲ. ತಾನಾಯಿತು ತನ್ನ ಕೆಲಸ ಆಯಿತು ಎಂದುಕೊಂಡಿದ್ದ. ಮೊನ್ನೆ ಸಹ ಹಣ ನೀಡಿ ಚಿಕ್ಕಮ್ಮನ ಮನೆಗೆ ಹಬ್ಬಕ್ಕೆ ಹೋಗಿ ಬಾ ಅಮ್ಮ, ಅಕ್ಕ ಅಮ್ಮನಿಗೆ ಆರೋಗ್ಯ ಸರಿಯಿಲ್ಲ ಸ್ವಲ್ಪ ದಿನ ಅಮ್ಮನನ್ನು ಅಲ್ಲಿಯೇ ಸುಧಾರಿಸಿ ಕರೆದುಕೊಂಡು ಬಾ ಎಂದಿದ್ದ. ಆದ್ರೆ ಇಂದು ಮಗನು ಜೀವಂತವಾಗಿ ಇಲ್ಲ. ಒಬ್ಬ ಮಗನಿಗೆ ಯಾರೂ ಏನು ಮಾಡಿದರೋ ಗೊತ್ತಿಲ್ಲ ಎಂದು ಮೃತ ಸುರೇಶನ ತಾಯಿ ಗೋಳಾಡಿದ್ದಾಳೆ. ಅಂದಹಾಗೆ ತಲೆಯ ಹಿಂಬಾಗಕ್ಕೆ ಬಲವಾದ ಆಯುಧದಿಂದ ಹೊಡೆದಿರುವ ಸಾಧ್ಯತೆ ಇದೆ. ಜೊತೆಗೆ ಪಕ್ಕದ ಮನೆಯ ಮೂರನೇ ಮಹಡಿಯಿಂದಲೂ ಆಯತಪ್ಪಿ, ಅಥವಾ ಯಾರಾದರೂ ತಳ್ಳಿರುವ ಸಾಧ್ಯತೆಯನ್ನು ಅಲ್ಲಗಳೆಯುವಂತಿಲ್ಲ. ಹಾಗಾಗಿ ಮೃತ ಸುರೇಶ್ ತಾಯಿ ಗೌರಮ್ಮ ಮಗನ ಸಾವಿನ ಬಗ್ಗೆ ಅನುಮಾನ ವ್ಯಕ್ತಪಡಿಸಿದ್ದಾರೆ.

    ಇದನ್ನೂ ಓದಿ: Bengaluru Crime: ಇಬ್ಬರು ಮಕ್ಕಳ ತಾಯಿಗೆ ಬಾಯ್​​ಫ್ರೆಂಡ್​​ ಮೋಹ; ಕಾಟ ತಾಳಲಾರದೆ ಕೊಂದೇ ಬಿಟ್ಟ ಪ್ರಿಯಕರ!

    ಒಟ್ನಲ್ಲಿ ಮೃತ ಯುವಕನ ಬಗ್ಗೆ ಊರಿನಲ್ಲಿಯು ಒಳ್ಳೆಯ ಅಭಿಪ್ರಾಯವಿದೆ. ಸದ್ಯ ಘಟನೆ ಸಂಬಂಧ ಅತ್ತಿಬೆಲೆ ಪೊಲೀಸರು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.  ಪ್ರಕರಣ ದಾಖಲಿಸಿಕೊಂಡು ತನಿಖೆ ಮುಂದುವರಿಸಿದ್ದು, ಪೊಲೀಸರ ತನಿಖೆಯಿಂದಂಷ್ಟೆ ಯುವಕನ ಸಾವು ಕೊಲೆಯೋ ಅಥವಾ ಆತ್ಮಹತ್ಯೆಯೋ ಎಂಬುದರ ಸತ್ಯಾಸತ್ಯತೆ ಹೊರ ಬರಬೇಕಿದೆ.

    ವರದಿ : ಆದೂರು ಚಂದ್ರು  
    Published by:Kavya V
    First published: