Foreign wildlife: ಬೆಂಗಳೂರಿನಲ್ಲಿ ವಿದೇಶಿ ವನ್ಯಜೀವಿಗಳ ಮಾರಾಟ: ಅಸಹಾಯಕರಾದ ಅರಣ್ಯ ಇಲಾಖೆ

ಬೆಂಗಳೂರಿನಲ್ಲಿರುವ ಅಕ್ವೇರಿಯಂಗಳು ಹಾಗೂ ಸಾಕುಪ್ರಾಣಿ ಅಂಗಡಿಗಳು ವಿದೇಶಿ ಸಾಕುಪ್ರಾಣಿಗಳ ವ್ಯಾಪಾರ ನಡೆಸುತ್ತಿದ್ದು, ಮೀನು, ಸರೀಸೃಪಗಳು ಹಾಗೂ ಪಕ್ಷಿಗಳ ಮಾರಾಟ ನಡೆಯುತ್ತವೆ. ಬಾಲ್ ಪೈಥಾನ್, ಅಲ್ಬಿನೊ ಸ್ಪೈಡರ್, ಒಡಿ ಸ್ಪಾರ್ಕ್ ಕ್ಲೌನ್, ಎಸ್‌ಎಲ್ ಕ್ಲೌನ್ ಪೇಸ್ಟಲ್ (ಹೆಬ್ಬಾವು) ಮೊದಲಾದವುಗಳನ್ನು 75000 ರೂ. ಹಾಗೂ 90,000 ರೂ.ಗಳಿಗೆ ಮಾರಾಟ ಮಾಡುತ್ತಿವೆ. 1.5 ರಿಂದ 2 ಫೀಟ್ ಉದ್ದದ ಕೆಂಪು ಇಗುವಾನಾವನ್ನು ಜೆಪಿ ನಗರದಲ್ಲಿರುವ ಅಂಗಡಿಯು 25,000 ರೂ.ಗಳಿಗೆ ಮಾರಾಟ ಮಾಡುತ್ತಿದೆ.

ಸಾಂಧರ್ಬಿಕ ಚಿತ್ರ

ಸಾಂಧರ್ಬಿಕ ಚಿತ್ರ

 • Share this:

  ಬೆಂಗಳೂರಿನಲ್ಲಿ ವಿದೇಶಿ ಸಾಕುಪ್ರಾಣಿಗಳ ವ್ಯಾಪಾರ ಅವ್ಯಾಹತವಾಗಿ ನಡೆಯುತ್ತಿದ್ದು ಯಾವುದೇ ಕ್ರಮ ಕೈಗೊಳ್ಳುವಲ್ಲಿ ನಾವು ಅಸಹಾಯಕರಾಗಿದ್ದೇವೆ ಎಂದು ಅರಣ್ಯ ಅಧಿಕಾರಿಗಳು ಬೆಂಗಳೂರು ಮಿರರ್ ಸುದ್ದಿಪತ್ರಿಕೆಗೆ ತಿಳಿಸಿದ್ದಾರೆ.


  ವಿದೇಶಿ ಪ್ರಾಣಿಗಳು, ಪಕ್ಷಿಗಳು, ಸರೀಸೃಪಗಳು ಸಸ್ತನಿಗಳ ಮೇಲೆ ಅರಣ್ಯ ಇಲಾಖೆಯು ಯಾವುದೇ ಅಧಿಕಾರ ಹೊಂದಿಲ್ಲದೇ ಇರುವುದರಿಂದ ಇಲಾಖೆಯು ಮಧ್ಯಪ್ರವೇಶಿಸಲು ಸಾಧ್ಯವಿಲ್ಲವೆಂದು ತಿಳಿಸಿದೆ.ವನ್ಯಜೀವಿ ಸಂರಕ್ಷಣಾ ಕಾಯ್ದೆ 1972ರ ಪ್ರಕಾರ ಇಂತಹ ಪ್ರಾಣಿಗಳು ವಿದೇಶದ್ದಾಗಿದ್ದು, ಭಾರತೀಯ ವನ್ಯಜೀವಿಗಳನ್ನು ಮಾತ್ರವೇ ರಕ್ಷಿಸುವ ಭಾರತೀಯ ವನ್ಯಜೀವಿ ಸಂರಕ್ಷಣಾ ವ್ಯಾಪ್ತಿಗೆ ಬರುವುದಿಲ್ಲ ಎಂದು ತಿಳಿಸಿದೆ. ಪ್ರಾಣಿಗಳನ್ನು ಅರಣ್ಯ ಇಲಾಖೆ ಗುರುತು ಹಿಡಿಯಲಾಗದಷ್ಟು ಮುಟ್ಟುಗೋಲು ಹಾಕಲಾಗಿದ್ದು ಅವುಗಳ ಮೇಲೆ ಹಿಂಸೆ ನಡೆಯುತ್ತಿದ್ದರೂ ಮಾಲೀಕರಿಗೆ ಅವುಗಳನ್ನು ಹಿಂತಿರುಗಿಸಬೇಕಾಗಿತ್ತು ಎಂದು ವನ್ಯಜೀವಿ ತಜ್ಞರಾದ ಟಿ.ಶರತ್‌ಬಾಬು ತಿಳಿಸಿದ್ದಾರೆ.


  ವಿದೇಶಿ ಸಾಕುಪ್ರಾಣಿಗಳು ಮನೆಯಿಂದ ತಪ್ಪಿಸಿಕೊಂಡಲ್ಲಿ ಅರಣ್ಯ ಇಲಾಖೆ ಅಥವಾ ವನ್ಯಜೀವಿ ರಕ್ಷಕರು ಸ್ವಲ್ಪಮಟ್ಟಿಗಿನ ಸಹಾಯ ಮಾಡಬಹುದಾಗಿದೆ. ಇತ್ತೀಚೆಗೆ ಬೆಂಗಳೂರಿನ ಇಂದಿರಾನಗರದ ಸ್ಕೂಟರ್ ಒಂದರಲ್ಲಿ ಬಾಲ್ ಪೈಥಾನ್ ಕಂಡುಬಂದಿತ್ತು. ಪ್ರಸ್ತುತ ಹಾವು ಏವಿಯನ್ ಹಾಗೂ ಸರೀಸೃಪ ಪುನರ್ವಸತಿ ಕೇಂದ್ರ (ARRC) ದಲ್ಲಿದೆ. ಬನ್ನೇರುಘಟ್ಟ ರಾಷ್ಟ್ರೀಯ ಪಾರ್ಕ್ ಸಂರಕ್ಷಣೆ ಕೇಂದ್ರಕ್ಕೆ ಕಳುಹಿಸಬಹುದೇ ಎಂದು ARRC ಅರಣ್ಯ ಇಲಾಖೆಯನ್ನು ಕೇಳುತ್ತಿದೆ ಎಂದು ಬಾಬು ತಿಳಿಸುತ್ತಾರೆ. ಮಾಲೀಕರು ಸಾಕುಪ್ರಾಣಿಯನ್ನು ಕೇಂದ್ರ ಸರಕಾರದ ಪರಿವೇಶ್ ಪೋರ್ಟಲ್‌ನಲ್ಲಿ ನೋಂದಾಯಿಸಬೇಕು ಹಾಗೂ ಪಾಲನೆಯ ಹಕ್ಕನ್ನು ಹೊಂದಬೇಕು ಎಂದು ಬಾಬು ತಿಳಿಸುತ್ತಾರೆ.


  Also read: Congress: ಸಿದ್ದರಾಮಯ್ಯ ಅವರನ್ನು ಹೊಗಳುತ್ತಾರೆ; ನಿಮ್ಮನ್ನು ಕುಡುಕ ಅಂತಾರೆ: ಡಿಕೆಶಿ ಕಾಲೆಳೆದ ತೇಜಸ್ವಿನಿ ಗೌಡ

  ಪ್ರತಿಯೊಂದು ವನ್ಯ ಪ್ರಾಣಿ ಹಾಗೂ ಪಕ್ಷಿಗಳ ರಕ್ಷಣೆಯಲ್ಲಿ ಅರಣ್ಯ ಇಲಾಖೆಯು ಕ್ರಮ ಕೈಗೊಳ್ಳಬೇಕು. ಅದರಲ್ಲೂ ಪ್ರಮುಖವಾಗಿ ಕಳ್ಳಸಾಗಾಣಿಕೆದಾರರಿಂದ ಅವುಗಳ ಅಸಮರ್ಥತೆ, ಸೋಮಾರಿತನ, ತೊಡಕುಗಳನ್ನು ಮರೆಮಾಚಬೇಕು. ಆದರೆ, ವಿದೇಶಿ ವನ್ಯಜೀವಿಗಳೆಂದು ತಾತ್ಸಾರ ತೋರುತ್ತಿದ್ದಾರೆ ಎಂದು ಪಾರ್ಲಿಮೆಂಟ್ ಸದಸ್ಯರು ಹಾಗೂ ಪ್ರಾಣಿ ಹಕ್ಕುಗಳ ಕಾರ್ಯಕರ್ತೆಯಾದ ಮನೇಕಾ ಗಾಂಧಿ ತಿಳಿಸಿದ್ದಾರೆ.


  ಬೆಂಗಳೂರಿನಲ್ಲಿರುವ ಅಕ್ವೇರಿಯಂಗಳು ಹಾಗೂ ಸಾಕುಪ್ರಾಣಿ ಅಂಗಡಿಗಳು ವಿದೇಶಿ ಸಾಕುಪ್ರಾಣಿಗಳ ವ್ಯಾಪಾರ ನಡೆಸುತ್ತಿದ್ದು, ಮೀನು, ಸರೀಸೃಪಗಳು ಹಾಗೂ ಪಕ್ಷಿಗಳ ಮಾರಾಟ ನಡೆಯುತ್ತವೆ. ಬಾಲ್ ಪೈಥಾನ್, ಅಲ್ಬಿನೊ ಸ್ಪೈಡರ್, ಒಡಿ ಸ್ಪಾರ್ಕ್ ಕ್ಲೌನ್, ಎಸ್‌ಎಲ್ ಕ್ಲೌನ್ ಪೇಸ್ಟಲ್ (ಹೆಬ್ಬಾವು) ಮೊದಲಾದವುಗಳನ್ನು 75000 ರೂ. ಹಾಗೂ 90,000 ರೂ.ಗಳಿಗೆ ಮಾರಾಟ ಮಾಡುತ್ತಿವೆ. 1.5 ರಿಂದ 2 ಫೀಟ್ ಉದ್ದದ ಕೆಂಪು ಇಗುವಾನಾವನ್ನು ಜೆಪಿ ನಗರದಲ್ಲಿರುವ ಅಂಗಡಿಯು 25,000 ರೂ.ಗಳಿಗೆ ಮಾರಾಟ ಮಾಡುತ್ತಿದೆ.


  ಅನಕೊಂಡಾ ಒಳಗೊಂಡಂತೆ ಎಲ್ಲಾ ರೀತಿಯ ವಿದೇಶಿ ವನ್ಯಜೀವಿಗಳು ನಗರದಲ್ಲಿ ಮಾರಾಟಕ್ಕಿವೆ ಎಂದು ಅರಣ್ಯ ಇಲಾಖೆಯ ಅಧಿಕಾರಿಗಳು ತಿಳಿಸಿದ್ದಾರೆ. ಎರಡು ದಿನಗಳ ಹಿಂದೆಯಷ್ಟೇ ಮಹಿಳೆಯೊಬ್ಬರು ಸಂರಕ್ಷಣಾ ತಂಡಕ್ಕೆ ಫೋನ್ ಮಾಡಿ ಆಕೆ 2 ಲಕ್ಷ ರೂ. ಗಳಿಗೆ ಖರೀದಿಸಿದ ಮಕಾವ್ ಅನ್ನು ಸಂರಕ್ಷಿಸಬೇಕಾಗಿ ವಿನಂತಿಸಿಕೊಂಡಿದ್ದರು. ಅವರ ಮನೆಯ ಪಂಜರದಿಂದ ತಪ್ಪಿಸಿಕೊಂಡ ಪಕ್ಷಿಯು ಆರ್ಮಿ ಕ್ಯಾಂಪಸ್‌ನಲ್ಲಿರುವ ಮರದಲ್ಲಿ ಕುಳಿತಿತ್ತು ಎಂದು ಮಹಿಳೆ ಸಂರಕ್ಷಣಾ ದಳಕ್ಕೆ ತಿಳಿಸಿದ್ದರು. ಆದರೆ ಸಂರಕ್ಷಣಾ ತಂಡವು ಮಹಿಳೆಗೆ ಪಕ್ಷಿಯು ದುರ್ಬಲಗೊಂಡು ಕೆಳಕ್ಕೆ ಬೀಳುವವರೆಗೆ ನಿರೀಕ್ಷಿಸಲು ತಿಳಿಸಿದ್ದರು.


  ಸಂರಕ್ಷಣಾ ತಂಡ ಹೇಳುವಂತೆ ಮಕಾವ್ ದೊಡ್ಡ ಗಿಳಿಜಾತಿಗೆ ಸೇರಿದ ಪಕ್ಷಿಯಾಗಿದೆ. ಇಂತಹ ಪ್ರಾಣಿಗಳನ್ನು ಭಾರತಕ್ಕೆ ಕಳ್ಳಸಾಗಣೆ ಮಾಡಲಾಗುತ್ತದೆ. ಹೆಚ್ಚಿನವುಗಳನ್ನು ತುಂಬಾ ಕೀಳುಮಟ್ಟದಲ್ಲಿ ನೋಡಿಕೊಳ್ಳಲಾಗುತ್ತದೆ. ಅರಣ್ಯ ಇಲಾಖೆಯವರು ಸೂಕ್ತ ಕ್ರಮ ಕೈಗೊಳ್ಳಬಹುದು. 2018ರಿಂದ ಸಾಕುಪ್ರಾಣಿ ಅಂಗಡಿಗಳು ಕಾನೂನು ಬಾಹಿರವಾಗಿ ವಿದೇಶಿ ಪ್ರಾಣಿಗಳ ಮಾರಾಟ ನಡೆಸುತ್ತಿದ್ದು ಇಲಾಖೆಯು ಕ್ರಮ ಕೈಗೊಳ್ಳಬಹುದಾಗಿದೆ. ಆದರೆ ಅವರು ಯಾವುದೇ ಕ್ರಮ ಕೈಗೊಳ್ಳುತ್ತಿಲ್ಲ.


  ಅಳಿವಿನಂಚಿನಲ್ಲಿರುವ ಪ್ರಾಣಿಗಳ ಅಂತರಾಷ್ಟ್ರೀಯ ವ್ಯಾಪಾರ (CITES) ಪ್ರಮಾಣ ಪತ್ರದ ಒಪ್ಪಂದವಿಲ್ಲದೆ ವಿದೇಶಿ ಪ್ರಾಣಿಗಳನ್ನು ಭಾರತದಲ್ಲಿ ಅನುಮತಿಸುವಂತಿಲ್ಲ. ಅರಣ್ಯ ಇಲಾಖೆಯು ಈ ಪ್ರಮಾಣ ಪತ್ರ ಕೇಳದೇ ಇರುವುದರಿಂದ ಅವರಿಗೆ ಇದು ಏನೆಂದು ತಿಳಿದಿಲ್ಲ. ಇಂತಹ ಪ್ರಾಣಿಗಳ ಸಂರಕ್ಷಣೆಗೆ ಸಂರಕ್ಷಣಾ ಕೇಂದ್ರವನ್ನೂ ಹೊಂದಿಲ್ಲ ಎಂಬುದಾಗಿ ಮನೇಕಾ ಗಾಂಧಿ ಆಕ್ಷೇಪಿಸಿದ್ದಾರೆ.


  ನಗರದ ಯಲಹಂಕದಲ್ಲಿ ಒಬ್ಬ ಸಾಕುಪ್ರಾಣಿ ಅಂಗಡಿಯಾತ ಆಸ್ಟ್ರೇಲಿಯಾದಿಂದ ಆಮದು ಮಾಡಿಕೊಂಡ ವಲ್ಲಭಿಯನ್ನು ಪಂಜರದಲ್ಲಿಟ್ಟಿದ್ದ. ಸೆರೆಯಿಂದ ತಪ್ಪಿಸಿಕೊಳ್ಳಲು ಅದು ಪ್ರಯತ್ನಿಸುತ್ತಿರುವಂತೆ ಕಾಣುತ್ತಿತ್ತು. ಏಕೆಂದರೆ ಆಸ್ಟ್ರೇಲಿಯಾದ ಹವಾಮಾನ ಹಾಗೂ ಭಾರತದ ಹವಾಮಾನ ವಿಭಿನ್ನವಾದ್ದರಿಂದ ಬದುಕು ಅಸಹನೀಯವಾಗಿರುತ್ತದೆ ಎಂದು ಶರತ್‌ ಬಾಬು ಹೇಳುತ್ತಾರೆ.


  ಇನ್ನು ನಗರದ ಕೆಲವೆಡೆಗಳಲ್ಲಿ ಆಸ್ಟ್ರಿಚ್‌ಗಳನ್ನು ಅವುಗಳ ಮೊಟ್ಟೆಗಳಿಗಾಗಿ ಈ ಪಕ್ಷಿಗಳನ್ನು ಸಾಕುತ್ತಾರೆ ಹಾಗೂ ಮಾರಾಟ ಮಾಡುತ್ತಾರೆ. ಹೀಗೆ ಎಮು, ಇಗುವಾನಾ, ಬಣ್ಣ ಬಣ್ಣದ ಹಲ್ಲಿಗಳು, ಮುಳ್ಳುಹಂದಿಗಳು ಮೊದಲಾದ ವಿದೇಶಿ ಪ್ರಾಣಿಗಳನ್ನು ಮಾರಾಟ ಮಾಡುತ್ತಿದ್ದಾರೆ.


  Also resd: Chhath Puja: ಛತ್​ ಪೂಜೆಯಲ್ಲಿ ಆಮ್​ ಆದ್ಮಿ ಪಕ್ಷ ರಾಜಕೀಯ ಮಾಡುವುದು ಒಳ್ಳೆಯದಲ್ಲ: ಕೇಂದ್ರ ಆರೋಗ್ಯ ಸಚಿವಾಲಯ

  ವನ್ಯಜೀವಿ ಸಂರಕ್ಷಣಾ ಕಾಯ್ದೆ 1972 ಜಾರಿಗೆ ಬಂದ ನಂತರ, ಕಳೆದ ವರ್ಷವಷ್ಟೇ ಕೇಂದ್ರ ಸರಕಾರ ಪರಿವೇಶ್ ಹೆಸರಿನ ಆನ್‌ಲೈನ್ ಪೋರ್ಟಲ್ ಜಾರಿಗೆ ತಂದಿದ್ದು, ವಿದೇಶಿ ಪ್ರಾಣಿಗಳನ್ನು ತಮ್ಮಲ್ಲಿ ಇರಿಸಿಕೊಳ್ಳುವ ಮಾಲೀಕರು ಪೋರ್ಟಲ್‌ನಲ್ಲಿ ನೋಂದಣಿ ಮಾಡಿಕೊಂಡು ಇಂತಹ ಪ್ರಾಣಿ, ಪಕ್ಷಿಗಳನ್ನು ತಮ್ಮ ಬಳಿ ಇರಿಸಿಕೊಳ್ಳಬಹುದೆಂದು ಪ್ರಕಟಿಸಬೇಕಾಗುತ್ತದೆ. ಇದಕ್ಕೂ ಮುನ್ನ 1972ಕ್ಕಿಂತ ಮುನ್ನವೇ ಬ್ರಿಟಿಷರು ಈ ಪ್ರಾಣಿಗಳನ್ನು ಕರೆತಂದಿದ್ದರು ಹಾಗೂ ಭಾರತದಲ್ಲಿ ಸಾಕುತ್ತಿದ್ದರು ಎಂದು ಸಾಕು ಪ್ರಾಣಿ ಮಾಲೀಕರು ತಿಳಿಸಿದ್ದರು. CITES ಅನ್ವಯವಾಗದೇ ಇರುವಲ್ಲಿ ಯಾವುದೇ ಪ್ರಾಣಿಯನ್ನು ಆಮದು ಮಾಡಿಕೊಳ್ಳುವಂತಿಲ್ಲ. ಇಂತಹ ಪ್ರಾಣಿಗಳ ತಳಿಗಳನ್ನು ಹೊಂದಿರುವ ಕೋಲ್ಕತ್ತಾದಂತಹ ನಗರಗಳಿಂದ ಶಿಫ್ಟ್ ಮಾಡಲಾಗಿದೆ ಎಂಬುದಾಗಿಯೂ ಮಾಲೀಕರು ತಿಳಿಸುತ್ತಾರೆ.

  ನ್ಯೂಸ್​​​18 ಕನ್ನಡ ಕಳಕಳಿ: ಕೊರೋನಾ ಪಾಸಿಟಿವ್ಕೇಸ್ಗಳ ಸಂಖ್ಯೆ ರಾಜ್ಯದಲ್ಲಿ ತಗ್ಗಿದೆಯಾದರೂ ಸೋಂಕಿನ ಅಪಾಯದಿಂದ ಸಂಪೂರ್ಣವಾಗಿ  ಇನ್ನೂ ಯಾರೂ ಸುರಕ್ಷಿತರಲ್ಲ. ಹೀಗಾಗಿ ಪ್ರತಿಯೊಬ್ಬರು ಕೋವಿಡ್​​ ನಿಯಮಗಳಾದ ಮಾಸ್ಕ್​​ ಧರಿಸುವುದು, ಸಾಮಾಜಿಕ ಅಂತರ ಕಾಯ್ದುಕೊಳ್ಳುವುದನ್ನು ಮರೆಯಬಾರದು. ಆದಷ್ಟು ಶೀಘ್ರವೇ ಲಸಿಕೆ ಪಡೆದು ಸೋಂಕಿನ ವಿರುದ್ಧದ ಯುದ್ಧದಲ್ಲಿ ಪ್ರತಿಯೊಬ್ಬರು ಕೈ ಜೋಡಿಸಬೇಕು. ಅನಗತ್ಯವಾಗಿ ಯಾರೂ ಮನೆಯಿಂದ ಹೊರಗೆ ಬಾರದೆ ಅಗತ್ಯ ಮುನ್ನೆಚ್ಚರಿಕೆ ವಹಿಸಬೇಕಿದೆ. ಹಾಗೂ ಗುಂಪುಗೂಡುವುದನ್ನು ಆದಷ್ಟು ನಿಯಂತ್ರಿಸಬೇಕಿದೆ. ಸರ್ಕಾರ ಕಾಲಕಾಲಕ್ಕೆ ಹೊರಡಿಸುತ್ತಿರುವ ಕೊರೋನಾ ಮಾರ್ಗಸೂಚಿಗಳನ್ನು ಪ್ರತಿಯೊಬ್ಬರೂ ಕಡ್ಡಾಯವಾಗಿ ಪಾಲಿಸಬೇಕಿದೆ.
  Published by:HR Ramesh
  First published: