Power Cut: ಬೆಂಗಳೂರಿನ ಹಲವು ಪ್ರದೇಶಗಳಲ್ಲಿ ವಿದ್ಯುತ್ ಪೂರೈಕೆಯಲ್ಲಿ ವ್ಯತ್ಯಯ

Bescom: ಬೆಳಗ್ಗೆ 9.30ರಿಂದ ಸಂಜೆ 6ರವರೆಗೆ ರಾಜಾಜಿನಗರ, ನೀಲಗಿರಿ ಪಾಪಣ್ಣ ಬ್ಲಾಕ್, ಬಿಇಎಲ್ ಸೌತ್ ಕಾಲೋನಿ, ಬಿಇಎಲ್ ನಾರ್ತ್ ಕಾಲೋನಿ, ಕೆನರಾ ಬ್ಯಾಂಕ್ ಲೇಔಟ್ ಭಾಗ, ಕೆಂಪೇಗೌಡ ನಗರ, ಯಲಹಂಕ ಓಲ್ಡ್ ಟೌನ್, ಶೇಟಿಹಳ್ಳಿ, ಮಲ್ಲಸಂದ್ರ, ಟಿ ದಾಸರಹಳ್ಳಿ, ನೃಪತುಂಗ ರಸ್ತೆ, ಮಲ್ಲಸಂದ್ರ, ಕಲ್ಯಾಣ ನಗರ ಸುತ್ತಮುತ್ತ, ಮಹಾಲಕ್ಷ್ಮಿ ಪುರಂ ನಂದಿನಿ ಲೇಔಟ್ ನಲ್ಲಿ ವಿದ್ಯುತ್ ಕಡಿತವಾಗಲಿದೆ.

ಸಾಂಧರ್ಬಿಕ ಚಿತ್ರ

ಸಾಂಧರ್ಬಿಕ ಚಿತ್ರ

 • Share this:
  ಕೊರೋನಾ(Corona) ಮಹಾಮಾರಿಯ ಕಾಟ ಅಧಿಕವಾಗಿದೆ. ಮನೆಯಿಂದ(Home) ಆಚೆ ಬರಲು ಭಯ ಪಡುವ ವಾತಾವಾರಣ ನಿರ್ಮಾಣವಾಗಿದೆ. ಇತ್ತ ಕಚೇರಿಗಳಿಗೆ(Office) ಹೋಗಿ ಕೆಲಸ ಮಾಡುವವರು ಕೊರೋನಾ ಹಾಗೂ ಓಮೈಕ್ರಾನ್(Omicron) ಮಹಾಮಾರಿಯಿಂದ ವರ್ಕ್ ಫ್ರಮ್ ಹೋಮ್(Work From Home) ಕೆಲಸವೇ ಬೆಸ್ಟ್ ಎಂದು ಮನೆಯಲ್ಲಿಯೇ ಕೆಲಸ ನಿರ್ವಹಣೆ ಮಾಡುತ್ತಿದ್ದಾರೆ. ಮಕ್ಕಳು ಸಹ ಶಾಲೆಗೆ ಹೋಗೋದಕ್ಕಿಂತ ಆನ್ ಲೈನ್ ಕ್ಲಾಸ್(Online Class) ಉತ್ತಮ ಎಂದು ಕೊಂಡು ಮನೆಯಲ್ಲಿಯೇ ಆನ್ ಲೈನ್ ಕ್ಲಾಸ್ ಕೇಳಲು ಸಿದ್ದರಾಗಿದ್ದಾರೆ.. ಕೊರೋನಾ ಇರೋದ್ರಿಂದ್ದ ಹೇಗಿದ್ರು ಮನೆಯಿಂದ ಹೊರಗೆ ಹೋಗೋದಕ್ಕೆ ಆಗೋದಿಲ್ಲ ಹೀಗಾಗಿ ಬೆಳಗ್ಗೆ 10 ಗಂಟೆಯೊಳಗೆ ಮನೆ ಕೆಲಸ ಮುಗಿಸಿ ಸೀರಿಯಲ್(Serial) ನೋಡ್ಬೆಕು ಅಂತ ಅಂದುಕೊಂಡು ನಾನಾ ಪ್ಲಾನ್ ಮಾಡಿರೋ ಜನಗಳಿಗೆ ಎಂದಿನಂತೆ ಬೆಸ್ಕಾಂ(Bescom) ಶಾಕ್ ನೀಡಲು ಮುಂದಾಗಿದೆ. ವಿವಿಧ ಪ್ರದೇಶಗಳಲ್ಲಿ ತುರ್ತು ನಿರ್ವಹಣಾ ಕಾಮಗಾರಿ ಇರುವುದರಿಂದ ಬೆಂಗಳೂರಿನ(Bengaluru) ನಾಲ್ಕು ಪ್ರದೇಶಗಳಲ್ಲಿ ಇಂದು ಬೆಸ್ಕಾಂ ವಿದ್ಯುತ್ ಪೂರೈಕೆಯಲ್ಲಿ ವ್ಯತ್ಯಯ(Power Cut) ಮಾಡಲಿದೆ.

  ಇಂದು ಬೆಂಗಳೂರಿನ ಈ ಪ್ರದೇಶದಲ್ಲಿ ವಿದ್ಯುತ್ ವ್ಯತ್ಯಯ

  ದಕ್ಷಿಣ ವಲಯ: ಬೆಳಗ್ಗೆ 10 ರಿಂದ ಸಂಜೆ 6 ಗಂಟೆವರೆಗೆ ಪೊಲೀಸ್ ಕ್ವಾರ್ಟರ್ಸ್, ಯೂನಿಟಿ ಬಿಲ್ಡಿಂಗ್, ಟೌನ್ ಹಾಲ್, ರವೀಂದ್ರ ಕಲಾಕ್ಷೇತ್ರ, ಜರಗನಹಳ್ಳಿ, ಕೃಷ್ಣ ದೇವರಾಯ ನಗರ, ಬಿಕಿಸಿಪುರ, ಇಸ್ರೋ ಲೇಔಟ್, ಕುಮಾರಸ್ವಾಮಿ ಲೇಔಟ್, ಟೀಚರ್ಸ್ ಕಾಲೋನಿ, ಕನಕ ಲೇಔಟ್, ಗೌಡನಪಾಳ್ಯ, ಸಮೃದ್ಧಿ ಲೇಔಟ್, ವಿಟ್ಲ ನಗರ, ವಸಂತ ನಗರ, ಸಾರಾ ವಲ್ಲಬ ನಗರ ಸೇರಿವೆ.

  ವಸಂತಪುರ ಮುಖ್ಯ ರಸ್ತೆ, ಜೆಪಿ ನಗರ 6ನೇ ಹಂತ, ಪುಟ್ಟೇನಹಳ್ಳಿ, ಕಿಮ್ಸ್ ಕಾಲೇಜು ಸುತ್ತಮುತ್ತ, ಬನಶಂಕರಿ 2ನೇ ಹಂತ, ಚನ್ನಮನಕೆರೆ ಅಚ್ಚುಕಟ್ಟು, ಜೆಪಿ ನಗರ 2ನೇ ಹಂತ, ಜೆಪಿ ನಗರ 3ನೇ ಹಂತ, ಜೆಪಿ ನಗರ 4ನೇ ಹಂತ, ಜೆಪಿ ನಗರ 5ನೇ ಹಂತ, ಡಾಲರ್ಸ್ ಲೇಔಟ್, ದೊರೆಸಾನಿ ಪಾಳ್ಯ, ಮಾ. ರಸ್ತೆ, ಕತ್ರಿಗುಪ್ಪೆ ಗ್ರಾಮ, ಐಟಿಪಿಎಲ್ ಮುಖ್ಯ ರಸ್ತೆ,

  ಬೇಗೂರು ಮುಖ್ಯ ರಸ್ತೆ, ಬಿಟಿಎಂ 4ನೇ ಹಂತ, ಬಿಡಿಎ ಮೊದಲ ಹಂತ, ಬಿಡಿಎ 8ನೇ ಹಂತ, ಎಂಎಸ್ ರಾಮಯ್ ನಗರ, ಸುರಭಿ ನಗರ, ಸಿಂಗಸಂದ್ರ, ಕಸವನಹಳ್ಳಿ ಮುಖ್ಯ ರಸ್ತೆಯಲ್ಲಿ ವಿದ್ಯುತ್ ವ್ಯತ್ಯಯ ಉಂಟಾಗಲಿದೆ.

  ಇದನ್ನೂ ಓದಿ: ಜೂನ್‌ಗೆ ಬೆಂಗಳೂರಿನ ಮೊದಲ ಡಬ್ಬಲ್ ಡೆಕ್ಕರ್ ಮೇಲ್ಸೇತುವೆ ರೆಡಿಯಾಗುತ್ತಂತೆ, ಇಲ್ಲಿದೆ ವಿವರ

  ಪೂರ್ವ ವಲಯ: ಉದಯ್ ನಗರ, ಕಸ್ತೂರಿ ನಗರ, ಎ ನಾರಾಯಣಪುರ, ಕೆಜಿ ಪುರ ಮುಖ್ಯ ರಸ್ತೆ, ಎಚ್‌ಆರ್‌ಬಿಆರ್ ಲೇಔಟ್ 2 ನೇ ಬ್ಲಾಕ್, ಗೋವಿಂದಪುರ, ಬೈರಪ್ಪ ಲೇಔಟ್, ಗೋವಿಂದಪುರ ಗ್ರಾಮ, ವಿಎಚ್‌ಬಿಸಿಎಸ್ ಲೇಔಟ್, ಬೈರತಿ, ಬೈರತಿ ಗ್ರಾಮ ಕನಕಶ್ರೀ ಲೇಔಟ್,

  ನಾಗನಹಳ್ಳಿ, ನಾಗನಹಳ್ಳಿ ಮುಖ್ಯರಸ್ತೆ, ನಾಗನಹಳ್ಳಿ ಮುಖ್ಯರಸ್ತೆ, ನಾಗನಹಳ್ಳಿ, ನಾಗನಹಳ್ಳಿ ಮುಖ್ಯರಸ್ತೆ. ಮತ್ತು ಭಟ್ಟರಹಳ್ಳಿಯಲ್ಲಿ ಬೆಳಗ್ಗೆ 10ರಿಂದ ಸಂಜೆ 5ರವರೆಗೆ ವಿದ್ಯುತ್ ವ್ಯತ್ಯಯ ಉಂಟಾಗಲಿದೆ.

  ಉತ್ತರ ವಲಯ: ಬೆಳಗ್ಗೆ 9.30ರಿಂದ ಸಂಜೆ 6ರವರೆಗೆ ರಾಜಾಜಿನಗರ, ನೀಲಗಿರಿ ಪಾಪಣ್ಣ ಬ್ಲಾಕ್, ಬಿಇಎಲ್ ಸೌತ್ ಕಾಲೋನಿ, ಬಿಇಎಲ್ ನಾರ್ತ್ ಕಾಲೋನಿ, ಕೆನರಾ ಬ್ಯಾಂಕ್ ಲೇಔಟ್ ಭಾಗ, ಕೆಂಪೇಗೌಡ ನಗರ, ಯಲಹಂಕ ಓಲ್ಡ್ ಟೌನ್,

  ಶಟ್ಟಿಹಳ್ಳಿ, ಮಲ್ಲಸಂದ್ರ, ಟಿ ದಾಸರಹಳ್ಳಿ, ನೃಪತುಂಗ ರಸ್ತೆ, ಮಲ್ಲಸಂದ್ರ, ಕಲ್ಯಾಣ ನಗರ ಸುತ್ತಮುತ್ತ, ಮಹಾಲಕ್ಷ್ಮಿ ಪುರಂ ನಂದಿನಿ ಲೇಔಟ್ ನಲ್ಲಿ ವಿದ್ಯುತ್ ಕಡಿತವಾಗಲಿದೆ.

  ಇದನ್ನೂ ಓದಿ: ಹೆಬ್ಬಾಳ ಜಂಕ್ಷನ್‌ನಲ್ಲಿ Traffic ಕಡಿಮೆ ಮಾಡಲು ಸಿದ್ಧವಾಗ್ತಿದೆ ಹೊಸ Plan‌

  ಪಶ್ಚಿಮ ವಲಯ: ಹನುಮಂತನಗರ, ಚನ್ನಸಂದ್ರ, ಗಂಗೊಂಡನ ಹಳ್ಳಿ, ಉತ್ತರಹಳ್ಳಿ ರಸ್ತೆ, ಕೊಂಚಂದ್ರ ರಸ್ತೆ, ಕೋಡಿಪಾಳ್ಯ, ಅನ್ನಪೂರ್ಣೇಶ್ವರಿ ಲೇಔಟ್, ಭೂಮಿಕಾ ಲೇಔಟ್, ಬಿಎಚ್‌ಇಎಲ್ ಲೇಔಟ್, ಹರ್ಷಾ ಲೇಔಟ್,

  ವಿದ್ಯಾಪೀಠ ರಸ್ತೆ, ಡಿ ಗ್ರೂಪ್ ಲೇಔಟ್, ಅಂದ್ರಹಳ್ಳಿ ಮುಖ್ಯರಸ್ತೆ, ಗಾಂಧಿ ನಗರದಲ್ಲಿ ಬೆಳಗ್ಗೆ 9ರಿಂದ ಸಂಜೆ 5ರವರೆಗೆ ವಿದ್ಯುತ್ ಕಡಿತವಾಗಲಿದೆ..
  Published by:ranjumbkgowda1 ranjumbkgowda1
  First published: