ಕೊರೋನಾ(Corona) ಮಹಾಮಾರಿಯ ಕಾಟ ಅಧಿಕವಾಗಿದೆ. ಮನೆಯಿಂದ(Home) ಆಚೆ ಬರಲು ಭಯ ಪಡುವ ವಾತಾವಾರಣ ನಿರ್ಮಾಣವಾಗಿದೆ. ಇತ್ತ ಕಚೇರಿಗಳಿಗೆ(Office) ಹೋಗಿ ಕೆಲಸ ಮಾಡುವವರು ಕೊರೋನಾ ಹಾಗೂ ಓಮಿಕ್ರಾನ್(Omicron) ಮಹಾಮಾರಿಯಿಂದ ವರ್ಕ್ ಫ್ರಮ್ ಹೋಮ್(Work From Home) ಕೆಲಸವೇ ಬೆಸ್ಟ್ ಎಂದು ಮನೆಯಲ್ಲಿಯೇ ಕೆಲಸ ನಿರ್ವಹಣೆ ಮಾಡುತ್ತಿದ್ದಾರೆ. ಮಕ್ಕಳು ಸಹ ಶಾಲೆಗೆ ಹೋಗೋದಕ್ಕಿಂತ ಆನ್ ಲೈನ್ ಕ್ಲಾಸ್(Online Class) ಉತ್ತಮ ಎಂದು ಕೊಂಡು ಮನೆಯಲ್ಲಿಯೇ ಆನ್ ಲೈನ್ ಕ್ಲಾಸ್ ಕೇಳಲು ಸಿದ್ದರಾಗಿದ್ದಾರೆ.. ಕೊರೋನಾ ಇರೋದ್ರಿಂದ್ದ ಹೇಗಿದ್ರು ಮನೆಯಿಂದ ಹೊರಗೆ ಹೋಗೋದಕ್ಕೆ ಆಗೋದಿಲ್ಲ ಹೀಗಾಗಿ ಬೆಳಗ್ಗೆ 10 ಗಂಟೆಯೊಳಗೆ ಮನೆ ಕೆಲಸ ಮುಗಿಸಿ ಸೀರಿಯಲ್(Serial) ನೋಡ್ಬೆಕು ಅಂತ ಅಂದುಕೊಂಡು ನಾನಾ ಪ್ಲಾನ್ ಮಾಡಿರೋ ಜನಗಳಿಗೆ ಎಂದಿನಂತೆ ಬೆಸ್ಕಾಂ(Bescom) ಶಾಕ್ ನೀಡಲು ಮುಂದಾಗಿದೆ. ವಿವಿಧ ಪ್ರದೇಶಗಳಲ್ಲಿ ತುರ್ತು ನಿರ್ವಹಣಾ ಕಾಮಗಾರಿ ಇರುವುದರಿಂದ ಬೆಂಗಳೂರಿನ(Bengaluru) ನಾಲ್ಕು ಕಡೆಗಳಲ್ಲಿ ಬೆಸ್ಕಾಂ ಇಂದಿನಿಂದ 3 ದಿನಗಳ ಕಾಲ ವಿದ್ಯುತ್ ಪೂರೈಕೆಯಲ್ಲಿ ವ್ಯತ್ಯಯ(Power Cut) ಮಾಡಲಿದೆ.
ಜನವರಿ 12 ರಂದು ಈ ಪ್ರದೇಶದಲ್ಲಿ ವಿದ್ಯುತ್ ವ್ಯತ್ಯಯ
ಆವಲಹಳ್ಳಿ, ಜೆಪಿ ನಗರ 8ನೇ ಹಂತ, ರಾಘವನಪಾಳ್ಯ, ಗೌರವ ನಗರ,ಶ್ರೇಯಸ್ ಕಾಲೋನಿ ,ಅನ್ನಪೂರ್ಣೇಶ್ವರಿ ಲೇಔಟ್, ನವೋದಯ ನಗರ, ಕೊತ್ತನೂರು, ಕೃಷ್ಣ ನಗರ, ಕೆಸಿಎ ಲೇಔಟ್, ಆರ್ಎಲ್ಎಫ್ ಹಂತ 1 ಮತ್ತು 2, ಕೆಎಲ್ವಿ ಲೇಔಟ್, ಕೊತ್ತನೂರು ಗ್ರಾಮ, ಹುಳಿಮಾವು, ಬಿಡಿಎ ಹಂತ 8 ಮತ್ತು 9, ಗೊಟ್ಟಿಗೆರೆ ಲೇಔಟ್, ಎಕೆ ಕಾಲೋನಿ, ಪರಪ್ಪನ ಅಗ್ರಹಾರ,
ಶ್ರೀರಾಂಪುರ, ಯಶವಂತಪುರ, ಗುರುಮೂರ್ತಿ ರೆಡ್ಡಿ ಕಾಲೋನಿ, ಅಂಬೇಡ್ಕರ್ ನಗರ, ಜೆಪಿ ಪಾರ್ಕ್, ಎಚ್ಎಂಟಿ ಲೇಔಟ್, ಜಾಲಹಳ್ಳಿ ಗ್ರಾಮ, ಅಬ್ಬಿಗೆರೆ ಕೈಗಾರಿಕಾ ಪ್ರದೇಶ, ಸಿಂಗಾಪುರ, ಹೆಗಡೆ ನಗರ, ಶಿವನಹಳ್ಳಿ, ಚೊಕ್ಕನಹಳ್ಳಿ, ಪಾಲನಹಳ್ಳಿ, ಪುಟ್ಟೇನಹಳ್ಳಿ, ಹಳೇಹಳ್ಳಿ,ಮತ್ತು ಹತ್ತಿರದ ಪ್ರದೇಶಗಳಲ್ಲಿ ಬೆಳಗ್ಗೆ 10ರಿಂದ ಸಂಜೆ 5ರವರೆಗೆ ವಿದ್ಯುತ್ ವ್ಯತ್ಯಯ ಉಂಟಾಗಲಿದೆ.
ಇದನ್ನೂ ಓದಿ: ರಾಜ್ಯದಲ್ಲಿ ಮತ್ತೆ ಹೆಚ್ಚಾದ ಚಳಿ: ನಿಮ್ಮೂರಿನ ಹವಾಮಾನ ವರದಿ ಇಲ್ಲಿದೆ
ಜನವರಿ 13 ರಂದು ಈ ಪ್ರದೇಶದಲ್ಲಿ ವಿದ್ಯುತ್ ವ್ಯತ್ಯಯ
ಬಾಲಾಜಿ ಲೇಔಟ್, ಹೊಂಗಸಂದ್ರ, ಬೇಗೂರು ಮುಖ್ಯರಸ್ತೆ, ಶಾಸಕರ ಬಡಾವಣೆ, ಕಾವೇರಿ ನಗರ, ಬಿಡಿಎ 1ನೇ ಹಂತ, ಕೆಎಚ್ಡಿ ಎಂಯುಎಸ್ಎಸ್ ಬಳಿ, ಸಾಯಿ ಎನ್ಕ್ಲೇವ್, ಆರಾಧನಾ ಲೇಔಟ್, ರಾಘವೇಂದ್ರ ಬಡಾವಣೆ, ಗ್ರೀನ್ ಪಾರ್ಕ್ ಮತ್ತು ಸುತ್ತಮುತ್ತಲಿನ ಪ್ರದೇಶಗಳು, ನ್ಯಾನಪ್ಪನಹಳ್ಳಿ, ಎಲೆಕ್ಟ್ರಾನಿಕ್ಸ್ ಸಿಟಿ ಮತ್ತು ಸುತ್ತಮುತ್ತಲಿನ ಪ್ರದೇಶಗಳಲ್ಲಿ ಬೆಳಗ್ಗೆ 10ರಿಂದ ಸಂಜೆ 5ರವರೆಗೆ ವಿದ್ಯುತ್ ವ್ಯತ್ಯಯ ಉಂಟಾಗಲಿದೆ
ಇದನ್ನೂ ಓದಿ: ಸಾಲ ಕೊಡಲಿಲ್ಲ ಅಂತ ಬ್ಯಾಂಕ್ಗೇ ಬೆಂಕಿ ಹಚ್ಚಿದ ಹಾವೇರಿಯ ಭೂಪ!
ಜನವರಿ 14 ರಂದು ಈ ಪ್ರದೇಶದಲ್ಲಿ ವಿದ್ಯುತ್ ವ್ಯತ್ಯಯ
ಎಲೆಕ್ಟ್ರಾನಿಕ್ಸ್ ಸಿಟಿ, ಕೋನಪ್ಪನ ಅಗ್ರಹಾರ, ಆನಂದರೆಡ್ಡಿ ಲೇಔಟ್, ಗ್ರೀನ್ ಪಾರ್ಕ್ ಮತ್ತು ಸುತ್ತಮುತ್ತಲಿನ ಪ್ರದೇಶಗಳು,ಮಾರುತಿ ನಗರ, ಶೋಬಾ ಟೆಂಟ್ ರಸ್ತೆ, ಸ್ಯಾಟಲೈಟ್ ಬಸ್ ನಿಲ್ದಾಣ, ಕೆಎಸ್ಎಫ್ಐಸಿ ರಸ್ತೆ, ಬಲಶಾಪಲ್ಲಿಯ ರಸ್ತೆ, ಉತ್ತರಹಳ್ಳಿ ರಸ್ತೆ, ಕೊಂಚಂದ್ರ ರಸ್ತೆ, ಕೋಡಿಪಾಳ್ಯ, ಅನ್ನಪೂರ್ಣೇಶ್ವರಿ ಲೇಔಟ್, ಬಿಎಚ್ಇಎಲ್ ಲೇಔಟ್, ಡಿ ಗ್ರೂಪ್ 4ನೇ ಬ್ಲಾಕ್,
ಬಸಪ್ಪನಪಾಳ್ಯ, ತಿಮ್ಮೇಗೌಡನಪಾಳ್ಯ, ಬಿ.ಡಿ. , ಅಪೂರ್ವ ಲೇಔಟ್, ಕೆಂಗೇರಿ ಮುಖ್ಯ ರಸ್ತೆ, ಬಿಡಿಎ ಏರಿಯಾ ಬ್ಲಾಕ್ -1, ಭುವನೇಶ್ವರ ನಗರ, ದೊಡ್ಡ ಬಸ್ತಿ ಮುಖ್ಯ ರಸ್ತೆ, ಕಲ್ಯಾಣಿ ಲೇಔಟ್, ಆರ್ಆರ್ ಲೇಔಟ್, ಕುವೆಂಪು ಮುಖ್ಯ ರಸ್ತೆ, ಜಿಕೆ ಗಲ್ಲಿ ರಸ್ತೆ ಮತ್ತು ಗಂಗಾನಗರ,ಯೂನಿಯನ್ ಬ್ಯಾಂಕ್ ಕಲ್ಕೆರೆ, ಕೋಲಿಫಾರ್ಮ್ ಗೇಟ್, ಗೊಲ್ಲಹಳ್ಳಿ ನಿಲ್ದಾಣದಲ್ಲಿ ಬೆಳಗ್ಗೆ 10ರಿಂದ ಸಂಜೆ 5ರವರೆಗೆ ವಿದ್ಯುತ್ ವ್ಯತ್ಯಯ ಉಂಟಾಗಲಿದೆ.
ನಿಮ್ಮ ಜಿಲ್ಲೆಯಿಂದ (ಬೆಂಗಳೂರು ನಗರ)
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ