Rave Party: ರೆಸಾರ್ಟ್​​​ನಲ್ಲಿ ನಡೆಯುತ್ತಿದ್ದ ರೇವ್ ಪಾರ್ಟಿ ಮೇಲೆ ದಾಳಿ; 37 ಮಂದಿ ವಶಕ್ಕೆ

ಬಂಧಿತರಲ್ಲಿ ಸಾಪ್ಟ್ ವೇರ್ ಎಂಜಿನಿಯರ್ಸ್, ವಿದ್ಯಾರ್ಥಿಗಳು ಮತ್ತು ಮಾರ್ಕೆಟಿಂಗ್ ಕ್ಷೇತ್ರದಲ್ಲಿ ಕೆಲಸ ಮಾಡುವವರು ಇದ್ದಾರೆ. ಪಾರ್ಟಿಯಲ್ಲಿ ಭಾಗವಹಿಸಲು ಒಬ್ಬರಿಗೆ 1,200 ರೂ ನಿಗದಿಪಡಿಸಿರುವುದು ತಿಳಿದು ಬಂದಿದೆ.

ರೇವ್​ ಪಾರ್ಟಿ ಮಾಡುತ್ತಿದ್ದವರ ಸೆರೆ

ರೇವ್​ ಪಾರ್ಟಿ ಮಾಡುತ್ತಿದ್ದವರ ಸೆರೆ

  • Share this:
ಆನೇಕಲ್:  ಅದು ಹೆಸರಿಗೆ ತಕ್ಕಂತೆ ಹಸಿರನ್ನೆ ಅಪ್ಪಿಕೊಂಡಿರುವ ಪ್ರದೇಶ.  ತಮಿಳುನಾಡು ಗಡಿಗೆ ಹೊಂದಿಕೊಂಡಂತೆ ಕಾಡಂಚಿನ ಜಾಗ.  ವನಸಿರಿಯ ಸೊಬಗನ್ನು ಸವಿಯುವಂತಹರಿಗೆ ಹೇಳಿ ಮಾಡಿಸಿದ ಸ್ಥಳ. ಆದ್ರೆ ಅಂತಹ ಜಾಗದಲ್ಲಿ ಅಕ್ರಮವಾಗಿ ರೇವ್ ಪಾರ್ಟಿ ನಡೆಸಿದ್ದು ಖಚಿತ ಮಾಹಿತಿ ಮೇರೆಗೆ ಪೊಲೀಸರು ದಾಳಿ ನಡೆಸಿ 37 ಮಂದಿ ಯುವಕ ಯುವತಿಯರನ್ನು ವಶಕ್ಕೆ ಪಡೆದಿದ್ದಾರೆ. ಬೆಂಗಳೂರು ಹೊರವಲಯ ಆನೇಕಲ್ ತಾಲ್ಲೂಕಿನ ತಮ್ಮನಾಯಕನಹಳ್ಳಿ ಸಮೀಪದ ಹಸಿರು ವ್ಯಾಲಿಯಲ್ಲಿ ಯುವಕ ಯುವತಿಯರು ತಡರಾತ್ರಿ ರೇವ್ ಪಾರ್ಟಿ ನಡೆಸುತ್ತಿದ್ದು, ಬೆಟ್ಟ ಗುಡ್ಡಗಳ ತಪ್ಪಲು ಹಸಿರಿನಿಂದ ಕಂಗೊಳಿಸುತ್ತಿರುವ ಮರಗಿಡಗಳ ನಡುವೆ ಇರುವ ಹಸಿರು ವ್ಯಾಲಿಯಲ್ಲಿ ಸುಮಾರು ನಲವತ್ತಕ್ಕೂ ಅಧಿಕ ಯುವಕ ಯುವತಿಯರು ನಶೆಯಲ್ಲಿ ಮೈಮರೆತು ನೃತ್ಯ ಮಾಡುತ್ತಿರುವ ಬಗ್ಗೆ ಖಚಿತ ಮಾಹಿತಿ ಪಡೆದ ಆನೇಕಲ್ ಪೊಲೀಸರು ರಾತ್ರಿ 12:30 ರ ಸುಮಾರಿಗೆ  ದಾಳಿ ನಡೆಸಿದ್ದಾರೆ.

ಕಾರು-ಬೈಕ್​​ಗಳ ಜಪ್ತಿ 

ದಾಳಿ ವೇಳೆ 30 ಕ್ಕೂ ಅಧಿಕ ಮಂದಿ ಯುವಕ ಯುವತಿಯರು ನಶೆಯಲ್ಲಿ  ಡ್ಯಾನ್ಸ್ ಮಾಡುತ್ತಿದ್ದರು. ಪೊಲೀಸರನ್ನು ಕಂಡು ಕೆಲವರು ಅಲ್ಲಿಂದ ಪರಾರಿಯಾದರು. ಸ್ಥಳದಲ್ಲಿ ಓರ್ವ ಯುವತಿ ಸೇರಿದಂತೆ ಹನ್ನೊಂದು ಮಂದಿಯನ್ನು ವಶಕ್ಕೆ ಪಡೆದಿದ್ದು,, ನಾಲ್ಕು ಕಾರು ಮತ್ತು ಹದಿನೈದು ಬೈಕ್ಗಳನ್ನು ಜಫ್ತಿ ಮಾಡಲಾಗಿದೆ ಎಂದು ಆನೇಕಲ್ ಉಪವಿಭಾಗದ ಡಿವೈಎಸ್ಪಿ ಮಲ್ಲೇಶ್ ತಿಳಿಸಿದ್ದಾರೆ. ಇನ್ನೂ ರಾತ್ರಿ ಪರಾರಿಯಾದವರಿಗಾಗಿ ಬೆಳಗ್ಗೆ ಶೋಧ ಮುಂದುವರಿಸಿದ್ದ ಪೊಲೀಸರು, ರೇವ್ ಪಾರ್ಟಿಯಲ್ಲಿ ಭಾಗಿಯಾಗಿದ್ದವರಲ್ಲಿ ನಾಲ್ವರು ಯುವತಿ ಸೇರಿದಂತೆ 37 ಮಂದಿಯನ್ನು ಬಂಧಿಸಲಾಗಿದೆ.

ಇದನ್ನೂ ಓದಿ: ನಮ್ಮೂರಿಗೆ ಬಾರ್ ಬೇಡವೇ ಬೇಡ.. ಬಾರ್ ಮಾಲೀಕನ ವಿರುದ್ಧ ಮುಸ್ಲಾಪುರ ಮಹಿಳೆಯರು ಕೆಂಡಾಮಂಡಲ!

ಎಲ್ಲರಿಗೂ ಡ್ರಗ್​ ಟೆಸ್ಟ್​​

ಬಂಧಿತರಲ್ಲಿ ಸಾಪ್ಟ್ ವೇರ್ ಎಂಜಿನಿಯರ್ಸ್, ವಿದ್ಯಾರ್ಥಿಗಳು ಮತ್ತು ಮಾರ್ಕೆಟಿಂಗ್ ಕ್ಷೇತ್ರದಲ್ಲಿ ಕೆಲಸ ಮಾಡುವವರು ಇದ್ದಾರೆ. ಆಶಿಕ್ ಗೌಡ, ಅಶುತೋಶ್ ಮತ್ತು ಪ್ರವಣ್ ಸೇರಿ ನಾಲ್ವರು ಪಾರ್ಟಿ ಆಯೋಜನೆ ಮಾಡಿದ್ದಾರೆ. ಪಾರ್ಟಿಯಲ್ಲಿ ಭಾಗವಹಿಸಲು ಒಬ್ಬರಿಗೆ 1200 ರೂ ನಿಗದಿಪಡಿಸಿರುವುದು ತಿಳಿದು ಬಂದಿದೆ. ಯುವಕ ಯುವತಿಯರು ಹೈ ಆ್ಯಪ್ ಮೂಲಕ ರಿಜಿಸ್ಟರ್ ಮಾಡ್ಕೊಂಡು ಪಾರ್ಟಿಗೆ ಬಂದಿದ್ದಾರೆ. ಪ್ರಾಥಮಿಕ ತನಿಖೆ ವೇಳೆ ಗಾಂಜಾ ಅಫೀಮು ರೆಸಾರ್ಟ್ ನಲ್ಲಿ ಸಿಕ್ಕಿಲ್ಲ. ಆದರೂ ಎಲ್ಲರಿಗೂ ಡ್ರಗ್ ಟೆಸ್ಟ್ ಮಾಡಲಾಗುತ್ತೆ.

ಕಠಿಣ ಕ್ರಮದ ಎಚ್ಚರಿಕೆ 

ನಗರದ ನಾನಾ ಭಾಗಗಳಿಂದ ಯುವಕ ಯುವತಿಯರು ಪಾರ್ಟಿ ಮಾಡಲು ಬಂದಿದ್ದಾರೆ . ಎಲ್ಲರಿಗೂ ಕೋವಿಡ್ ಟೆಸ್ಟ್ ಮಾಡಲಾಗಿದ್ದು, ನ್ಯಾಯಾಧೀಶರ ಮುಂದೆ ಹಾಜರುಪಡಿಸುವ ಕೆಲಸ ಮಾಡಲಾಗುವುದು. ಜೊತೆಗೆ ರೆಸಾರ್ಟ್ ಬಗ್ಗೆ ತಹಶಿಲ್ದಾರ್ರವರಿಗೆ ಪತ್ರ ಬರೆದು ಮಾಹಿತಿ ಕಲೆ ಹಾಕಲಾಗುವುದು. ಒಂದು ವೇಳೆ ರೆಸಾರ್ಟ್ ಅಕ್ರಮ ಎಂದು ಕಂಡು ಬಂದರೆ ಕ್ರಮ ವಹಿಸಲಾಗುವುದು  ಎಂದು ಆನೇಕಲ್ ಉಪವಿಭಾಗದ ಡಿವೈ ಎಸ್ ಪಿ ಮಲ್ಲೇಶ್ ಹೇಳಿಕೆ ನೀಡಿದ್ದಾರೆ. ಒಟ್ನಲ್ಲಿ ಕೊರೊನಾ ಮೂರನೇ ಅಲೆ ಜನರನ್ನು ಕಂಗೆಡಿಸುತ್ತಿರುವ ಇಂತಹ ಹೊತ್ತಿನಲ್ಲಿ ವಿದ್ಯಾವಂತ ಯುವಕ ಯುವತಿಯರೇ ಕೊರೊನಾ ನಿಯಮಗಳನ್ನು ಉಲ್ಲಂಘಿಸಿ ಮೋಜು ಮಸ್ತಿಯಲ್ಲಿ ತೊಡಗಿರುವುದು ನಿಜಕ್ಕೂ ಬೇಸರದ ಸಂಗತಿಯಾಗಿದ್ದು, ಯುವ ಸಮುದಾಯ ಇನ್ನಾದರೂ ಇಂತಹ ಅಕ್ರಮ ಚಟುವಟಿಕೆಗಳಲ್ಲಿ ಭಾಗಿಯಾಗುವುದನ್ನು ನಿಲ್ಲಿಸಬೇಕಿದೆ.
Published by:Kavya V
First published: