ಆನೇಕಲ್ : ಆತ 14 ವರ್ಷದವರೆಗೆ ಎಲ್ಲರಂತೆ ಆರೋಗ್ಯವಾಗಿದ್ದ(Healthy).ಆದ್ರೆ ಅದೊಂದು ದಿನ ಹೊಟ್ಟೆ ನೋವು (Stomach Pain) ಕಾಣಿಸಿಕೊಂಡಿದೆ. ಅಷ್ಟೇ.. ಖಾಸಗಿ ಆಸ್ಪತ್ರೆಯೊಂದಕ್ಕೆ (Private Hospital) ದಾಖಲಾಗಿದ್ದ ಆತನಿಗೆ ಅಲ್ಲಿನ ವೈದ್ಯರು ಸರ್ಜರಿ (Surgery) ಮಾಡಿದ್ದಾರೆ. ಕೆಲ ದಿನದ ಬಳಿಕ ಹಿಂದಿನಂತೆ ಹೊಟ್ಟೆನೋವು. ಮತ್ತೊಂದು ಆಸ್ಪತ್ರೆಗೆ ಚಿಕಿತ್ಸೆಗೆ ಹೋದಾಗ ಮತ್ತೊಂದು ಸರ್ಜರಿ. ಹೀಗೆ ಸರ್ಜರಿಗಳ ಮೇಲೆ ಸರ್ಜರಿ ಮಾಡಿದ ವೈದ್ಯರ ಯಡವಟ್ಟಿಗೆ ಯುವಕನ ಸ್ಥಿತಿ ಚಿಂತಾಜನಕವಾಗಿದ್ದು, ಇದೀಗ ಹಾಸಿಗೆ ಹಿಡಿದಿರುವ ಯುವಕನ ಚಿಕಿತ್ಸೆಗೆ ಹಣವಿಲ್ಲದೆ ವೃದ್ಧ ದಂಪತಿ ಕಂಗಲಾಗಿದ್ದಾರೆ.
ವೈದ್ಯರ ಯಡವಟ್ಟಿನಿಂದ ಹಾಸಿಗೆ ಹಿಡಿದ ಬಾಲಕ
ಬೆಂಗಳೂರು ಹೊರವಲಯ ಆನೇಕಲ್ ತಾಲ್ಲೂಕಿನ ಹರಪನಹಳ್ಳಿ ಗ್ರಾಮದ ನಿವಾಸಿಗಳಾದ ರಾಮಚಂದ್ರ ಮತ್ತು ಶೈಲಾ ದಂಪತಿಯ ಪುತ್ರ ಯೋಗಾನಂದ ನಡೆದಾಡಲು ಆಗದೆ ಆನಾರೋಗ್ಯದಿಂದ ಜರ್ಜರಿತನಾಗಿದ್ದಾನೆ. ಈಗ ಆನಾರೋಗ್ಯ ಪೀಡಿತ ಮಗನನ್ನು ಪೋಷಣೆ ಮಾಡಲಾಗದೆ ವೃದ್ಧ ದಂಪತಿ ಪರದಾಡುತ್ತಿದ್ದಾರೆ. ರಾಮಚಂದ್ರ ಶೈಲಾ ದಂಪತಿಯ ಇಬ್ಬರು ಮಕ್ಕಳಲ್ಲಿ ಒಬ್ಬನಾದ ಯೋಗಾನಂದ ಇದೀಗ ವೈದ್ಯರ ಯಡವಟ್ಟಿಗೆ ಹಾಸಿಗೆ ಹಿಡಿದಿರುವ ಅಮಾಯಕ ಯುವಕ.
ತಾಯಿಯ ಕಣ್ಣೀರು
ಅದೊಂದು ದಿನ ಯೋಗಾನಂದನಿಗೆ ವಿಪರೀತ ಹೊಟ್ಟೆನೋವು ಕಾಣಿಸಿಕೊಳ್ಳುತ್ತದೆ. ಹತ್ತಿರದ ಖಾಸಗಿ ಆಸ್ಪತ್ರೆಗೆ ದಾಖಲು ಮಾಡುತ್ತಾರೆ. ಕರುಳು ಸಂಬಂಧಿತ ಸಮಸ್ಯೆಯಿದೆ ಎಂದು ಸರ್ಜರಿ ಮಾಡುತ್ತಾರೆ. ಬಳಿಕ ಆರೋಗ್ಯ ಸರಿಹೋಯಿತು ಎನ್ನುವಷ್ಟರಲ್ಲಿ ಮತ್ತೆ ಹೊಟ್ಟೆನೋವು ಕಾಣಿಸಿಕೊಳ್ಳುತ್ತದೆ. ಚಿಕಿತ್ಸೆಗೆ ಮತ್ತೊಂದು ಆಸ್ಪತ್ರೆಗೆ ಹೋದಾಗ ಈ ಹಿಂದೆ ವೈದ್ಯರು ಮಾಡಿರುವ ಸರ್ಜರಿ ಸರಿಯಿಲ್ಲ ಎಂದು ಮತ್ತೊಮ್ಮೆ ಸರ್ಜಾರಿ ಮಾಡಿ ಕರುಳನ್ನು ಹೊರಗಡೆ ಬಿಟ್ಟು ಕೈ ತೊಳೆದುಕೊಳ್ಳುತ್ತಾರೆ. ಹಲವು ಆಸ್ಪತ್ರೆಗಳ ಸುತ್ತಾಟದ ಬಳಿಕ ವೈದೇಹಿ ಆಸ್ಪತ್ರೆ ವೈದ್ಯರು ಮತ್ತೊಂದು ಸರ್ಜರಿ ನಡೆಸಿ ಕರುಳನ್ನು ದೇಹದೊಳಗೆ ಸೇರಿಸುತ್ತಾರೆ. ಆದ್ರೆ ಮಗನ ಆರೋಗ್ಯ ಮಾತ್ರ ದಿನದಿಂದ ದಿನಕ್ಕೆ ಕ್ಷೀಣಿಸುತ್ತಿದ್ದು, ಇದೀಗ ನಡೆದಾಡಲಾಗದೇ ಹಾಸಿಗೆ ಹಿಡಿದಿದ್ದಾನೆ ಎಂದು ಯೋಗಾನಂದ ತಾಯಿ ಕಣ್ಣೀರು ಹಾಕಿದ್ದಾರೆ.
ಇದನ್ನೂ ಓದಿ: Salary Problem: ಹಬ್ಬದ ಟೈಂನಲ್ಲೇ ಸಿಗದ ಸಂಬಳ.. ಯಾದಗಿರಿಯಲ್ಲಿ ಸಮುದಾಯ ಆರೋಗ್ಯಾಧಿಕಾರಿಗಳ ಪ್ರತಿಭಟನೆ
ನೆರವು ನೀಡಿ ಪುಣ್ಯ ಕಟ್ಟಿಕೊಳ್ಳಿ
ಇನ್ನೂ ಮನೆಗೆ ಅಧಾರವಾಗಬೇಕಿದ್ದ ಮಗ ಇದೀಗ ಹಾಸಿಗೆ ಹಿಡಿದಿದ್ದಾನೆ. ಇದ್ದ ಬದ್ದ ಆಸ್ತಿ ಮಾರಿ ಇಲ್ಲಿಯವರೆಗೆ ಮಗನ ಚಿಕಿತ್ಸೆಗೆ ಲಕ್ಷಾಂತರ ರೂಪಾಯಿ ಖರ್ಚು ಮಾಡಲಾಗಿದೆ. ಆದರೂ ಆರೋಗ್ಯದಲ್ಲಿ ಚೇತರಿಕೆ ಕಂಡುಬರುತ್ತಿಲ್ಲ. ತಿಂದ ಆಹಾರ ದಕ್ಕುವುದಿಲ್ಲ. ಏನೇ ತಿಂದರೂ, ನೀರು ಕುಡಿದರು ಸಹ ನಿರಂತರವಾಗಿ ಬೇಧಿಯಾಗುತ್ತದೆ. ಇಲ್ಲಿಯವರೆಗೆ ಹತ್ತಾರು ಆಸ್ಪತ್ರೆಗೆ ಅಲೆದಾಡಿದರು ಭೇದಿ ನಿಲ್ಲುತ್ತಿಲ್ಲ. ಹಾಗಾಗಿ ಮಗನ ಸ್ಥಿತಿ ದಿನದಿಂದ ದಿನಕ್ಕೆ ಚಿಂತಾಜನಕವಾಗುತ್ತಿದೆ. ದೇಹದಲ್ಲಿ ಮೂಳೆಗಳು ಕಾಣುತ್ತಿವೆ. ಮಗನ ಸ್ಥಿತಿ ಹೀಗಾದರೆ ಪತಿ ಸಹ ಸಕ್ಕರೆ ಕಾಯಿಲೆಯಿಂದ ಬಳಲುತ್ತಿದ್ದು, ಕಾಲಿನಲ್ಲಿ ಬೆರಳುಗಳನ್ನು ತೆಗೆಯಲಾಗಿದೆ. ಒಮ್ಮೆ ಸ್ಟೋಕ್ ಸಹ ಆಗಿದ್ದು, ಮಾತನಾಡುವ ಸ್ಥಿತಿಯಲ್ಲಿ ಇಲ್ಲ. ದುಡಿಮೆ ಮಾಡುವ ಸ್ಥಿತಿಯಲ್ಲಿ ನಾವಿಲ್ಲ. ಬಾಡಿಗೆ ಮನೆಯಲ್ಲಿ ವಾಸವಾಗಿದ್ದು, ಬಾಡಿಗೆ ಕಟ್ಟಲು ಸಹ ಹಣವಿಲ್ಲ. ಮಗನ ಚಿಕಿತ್ಸೆಗೂ ಸಾಲ ಮಾಡಿಕೊಳ್ಳಲಾಗಿದೆ. ಹಾಗಾಗಿ ಯಾರಾದರೂ ಪುಣ್ಯಾತ್ಮರು ಮಗನ ಚಿಕಿತ್ಸೆಗೆ ನೆರವು ನೀಡಿ ಪುಣ್ಯ ಕಟ್ಟಿಕೊಳ್ಳಿ ಎಂದು ಯುವಕನ ತಾಯಿ ಶೈಲಾ ಕಣ್ಣೀರಿಟಿದ್ದಾರೆ.
ಒಟ್ನಲ್ಲಿ ತನ್ನದಲ್ಲದ ತಪ್ಪಿಗೆ ಇಡೀ ಕುಟುಂಬ ಅಕ್ಷರಶಃ ಸಾವು ಬದುಕಿನ ನಡುವೆ ನಿತ್ಯ ಹೋರಾಟ ನಡೆಸುತ್ತಿದೆ. ತಮ್ಮ ಜೀವನದ ಕೊನೆಯ ಕಾಲದಲ್ಲಿ ನೆರಳಾಗಬೇಕಿದ್ದ ಮಗ ಹಾಸಿಗೆ ಹಿಡಿದಿದ್ದಾನೆ. ಮಗನ ನೆರಳಲ್ಲಿ ನೆಮ್ಮದಿಯ ಬದುಕು ಸಾಗಿಸಬೇಕಿದ್ದ ವೃದ್ಧ ದಂಪತಿ ಮಗನಿಗಾಗಿ ನಿತ್ಯ ಪರದಾಟ ನಡೆಸುತ್ತಿದೆ. ಇಂತಹ ಹತಭಾಗ್ಯ ಕುಟುಂಬಕ್ಕೆ ನೆರವು ನೀಡ ಭಯಸುವವರು ದಯವಿಟ್ಟು ಕೈಲಾದ ಸಹಾಯ ಮಾಡಿ ಬಡ ಕುಟುಂಬಕ್ಕೆ ಆಸರೆಯಾಗಬೇಕಿದೆ.
ದಾನಿಗಳು ಆರ್ಥಿಕ ಸಹಾಯ ಮಾಡಲು ಇಲ್ಲಿದೆ ವಿವರ:
ಬ್ಯಾಂಕ್ : ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ
ಶಾಖೆ: ಜಿಗಣಿ
IFSC ಕೋಡ್ : SBIN0021756
ಯೋಗಾನಂದ ಅಕೌಂಟ್ ನಂಬರ್ : 64150231643
ನಿಮ್ಮ ಜಿಲ್ಲೆಯಿಂದ (ಬೆಂಗಳೂರು ಗ್ರಾಮಾಂತರ)
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ