Weekend Curfew: ಮಾಸ್ಕ್ ಹಾಕಲ್ಲ ಏನ್ ಮಾಡ್ತೀಯಾ ಎಂದ ಯುವಕನಿಗೆ ಕಪಾಳಮೋಕ್ಷ

ವೀಕೆಂಡ್ ಕರ್ಫ್ಯೂ ಹಿನ್ನೆಲೆ ದೇವನಹಳ್ಳಿ ಪ್ರಮುಖ ರಸ್ತೆಗಳಲ್ಲಿ ಪುರಸಭೆ ಅಧಿಕಾರಿಗಳು ಪರಿಶೀಲನೆ ನಡೆಸುತ್ತಿದ್ದರು. ಈ ಸಮಯದಲ್ಲಿ ಮೂವರು ಯುವಕರು ಹೆಲ್ಮೆಟ್ ಧರಿಸದೇ ಬೈಕ್ ನಲ್ಲಿ ತ್ರಿಬಲ್ ರೈಡಿಂಗ್ ಬಂದಿದ್ದಾರೆ. ಯುವಕರನ್ನು ತಡೆದ ಅಧಿಕಾರಿಗಳು ಮಾಸ್ಕ್ ಧರಿಸುವಂತೆ ತಿಳಿ ಹೇಳಿದ್ದಾರೆ.

ಯುವಕರ ತ್ರಿಬಲ್ ರೈಡಿಂಗ್

ಯುವಕರ ತ್ರಿಬಲ್ ರೈಡಿಂಗ್

  • Share this:
ಕೊರೊನಾ ಮತ್ತು ಓಮೈಕ್ರಾನ್ ನಿಯಂತ್ರಣಕ್ಕಾಗಿ (Corona Virus And Omicron Variant Control) ರಾಜ್ಯ ಸರ್ಕಾರ ವೀಕೆಂಡ್ ಕರ್ಫ್ಯೂ (Weekend Curfew) ಹೇರಿದೆ. ಅನಗತ್ಯವಾಗಿ ಸಂಚಾರಕ್ಕೆ ಸಂಪೂರ್ಣ ಬ್ರೇಕ್ ಹಾಕಲಾಗಿದ್ದು, ಬೆಂಗಳೂರಿನ ಎಲ್ಲಾ ಫ್ಲೈ ಓವರ್ (Bengaluru Flyovers) ಗಳನ್ನು ಬಂದ್ ಮಾಡಲಾಗಿದೆ. ಪ್ರಮುಖ ರಸ್ತೆಗಳಲ್ಲಿ ಪೊಲೀಸರನ್ನು ನಿಯೋಜಿಸಲಾಗಿದ್ದು, ದ್ವಿಚಕ್ರ ವಾಹನ, ಕಾರ್ ಗಳನ್ನು ಪರಿಶೀಲಿಸಲಾಗುತ್ತದೆ. ಇನ್ನು ಪ್ರಯಾಣಿಕರ (Passengers) ಪ್ರಯಾಣದ ಟಿಕೆಟ್, ಉದ್ಯೋಗಿಗಳ ಐಟಿ ಪರಿಶೀಲಿಸಿ ಬಿಡಲಾಗುತ್ತಿದೆ. ಕಾರಣವಿಲ್ಲದೇ ರಸ್ತೆಗೆ ಇಳಿಯುವ ಸವಾರರ ವಾಹನಗಳನ್ನು (Vehicles) ವಶಕ್ಕೆ ಪಡೆಯಲಾಗಿದೆ. ಶುಕ್ರವಾರ ರಾತ್ರಿ 10 ಗಂಟೆಯಿಂದಲೇ ಈ ಪ್ರಕ್ರಿಯೆ ಆರಂಭಗೊಂಡಿದೆ.

ಬೆಂಗಳೂರು ಗ್ರಾಮಾಂತರ ಜಿಲ್ಲೆಯ ದೇವನಹಳ್ಳಿಯಲ್ಲಿ ಮಾಸ್ಕ್ ಹಾಕದೇ ತ್ರಿಬಲ್ ರೈಡಿಂಗ್ ಬಂದ ಯುವಕರಿಗೆ ಪುರಸಭೆ ಅಧಿಕಾರಿ ಕಪಾಳಮೋಕ್ಷ ಮಾಡಿದ್ದಾರೆ. ಇಂದು ಹಳೆ ಬಸ್ ನಿಲ್ದಾಣದ ಬಳಿ ಈ ಘಟನೆ ನಡೆದಿದೆ.

ಇದನ್ನೂ ಓದಿ:  Bengaluru ಅಪಘಾತ, ಸಾವುಗಳ ಅಂಕಿ ಅಂಶ ಬಿಡುಗಡೆ: ಈ ವರ್ಗದ ಜನರೇ ಹೆಚ್ಚು ಮೃತರಾಗಿದ್ದು!

ನೋ ಮಾಸ್ಕ್, ನೋ ಹೆಲ್ಮೆಟ್. ಯುವಕರ ತ್ರಿಬಲ್ ರೈಡಿಂಗ್

ವೀಕೆಂಡ್ ಕರ್ಫ್ಯೂ ಹಿನ್ನೆಲೆ ದೇವನಹಳ್ಳಿ ಪ್ರಮುಖ ರಸ್ತೆಗಳಲ್ಲಿ ಪುರಸಭೆ ಅಧಿಕಾರಿಗಳು ಪರಿಶೀಲನೆ ನಡೆಸುತ್ತಿದ್ದರು. ಈ ಸಮಯದಲ್ಲಿ ಮೂವರು ಯುವಕರು ಹೆಲ್ಮೆಟ್ ಧರಿಸದೇ ಬೈಕ್ ನಲ್ಲಿ ತ್ರಿಬಲ್ ರೈಡಿಂಗ್ ಬಂದಿದ್ದಾರೆ. ಯುವಕರನ್ನು ತಡೆದ ಅಧಿಕಾರಿಗಳು ಮಾಸ್ಕ್ ಧರಿಸುವಂತೆ ತಿಳಿ ಹೇಳಿದ್ದಾರೆ.

ಯುವಕರ ಬೈಕ್ ವಶಕ್ಕೆ ಪಡೆದ ಅಧಿಕಾರಿಗಳು

ಆದ್ರೆ ಮೊಂಡುತನ ಪ್ರದರ್ಶಿಸಿದ ಯುವಕರು, ಮಾಸ್ಕ್ ಧರಿಸಲ್ಲ ಏನು ಮಾಡುತ್ತೀಯಾ ಅಂದಿದ್ದಾರೆ. ಇದರಿಂದ ಕೋಪಗೊಂಡ ಅಧಿಕಾರಿ ಯುವಕನ ಕಪಾಳಕ್ಕೆ ಏಟು ನೀಡಿದ್ದಾರೆ. ನಂತರ ಯುವಕರ ಮಾಹಿತಿ ಪಡೆದು ಬೈಕ್ ವಶಕ್ಕೆ ಪಡೆದುಕೊಂಡಿದ್ದಾರೆ.

ಪ್ರಮುಖ ರಸ್ತೆಗಳಲ್ಲಿ ಪೊಲೀಸರ ಪರಿಶೀಲನೆ 

ಈ ವಾರ ಇಂದು, ನಾಳೆ ಬ್ಯಾರಿಕೇಡ್ ಹಾಕಿ ಚೆಕ್ ಮಾಡಲಾಗುತ್ತಿದೆ. ಪೊಲೀಸರು ಪ್ರಮುಖ ರಸ್ತೆಗಳಲ್ಲಿ ಪರಿಶೀಲನೆ ಮುಂದುವರೆಸಿದ್ದಾರೆ. ಬಿಬಿಎಂಪಿ ಸೂಚನೆ ಹಿನ್ನೆಲೆ ಮಾರುಕಟ್ಟೆ ಸ್ಥಳಾಂತರಕ್ಕೆ ನಿನ್ನೆ ಸಭೆ ನಡೆಸಿ ಮಾಹಿತಿ ನೀಡಲಾಗಿದೆ. ಅದಕ್ಕೆ ವರ್ತಕರು ಇಂದು ಸಹಕಾರ ನೀಡಿದ್ದಾರೆ ಸಂಕ್ರಾಂತಿ ಹಬ್ಬ ಇರುವ ಕಾರಣ ದೇವಾಲಯದ ಹೊರಗಡೆ ಪೊಲೀಸರ ಗಸ್ತು ಇರುತ್ತೆ ಎಂದು ಡಿಸಿಪಿ ಡಾ ಸಂಜೀವ್ ಪಾಟೀಲ್ ನ್ಯೂಸ್ 18 ಕನ್ನಡಕ್ಕೆ ಹೇಳಿದ್ದಾರೆ.

ಇದನ್ನೂ ಓದಿ:  Bengaluru ಶಾಪಿಂಗ್ ಮಾಲ್ ನಲ್ಲಿ ಅಗ್ನಿ ಅವಘಡ: Weekend Curfewನಿಂದಾಗಿ ಉಳಿದ ಜೀವಗಳು!

ವೀಕೆಂಡ್ ಕರ್ಫ್ಯೂ ವೇಳೆ ಏನಿರುತ್ತೆ..? ಏನಿರಲ್ಲಾ..?

ಬೆಂಗಳೂರಿನಲ್ಲಿ ಎರಡು ದಿನ ಶೇ.10ರಷ್ಟು  BMTC ಬಸ್ ಗಳು ಸಂಚರಿಸಲಿವೆ

- ವೀಕೆಂಡ್ ಕರ್ಫ್ಯೂ ವೇಳೆ ಸಾರ್ವಜನಿಕ ಸೇವೆ ಇರುವುದಿಲ್ಲ

- ಶೇ10 ರಷ್ಟು ಮಾತ್ರ ಬಸ್ ಗಳು ರಸ್ತೆಗೆ ಇಳಿಯಲಿದೆ

- ಆರೋಗ್ಯ ಕಾರ್ಯಕರ್ತರು, ಪೊಲೀಸ್ ಸಿಬ್ಬಂದಿಗಳು, ಇತರೆ ಮುಂಚೂಣಿ ಕಾರ್ಯಕರ್ತರಿಗೆ ಮಾತ್ರ ಅವಕಾಶ

- ಏರ್ಪೋರ್ಟ್ ಪ್ರಯಾಣದ ಬಸ್ ನಲ್ಲಿ ಯಾವುದೇ ತೊಡಕು ಇಲ್ಲ

-ಜನ ದಟ್ಟಣೆಗೆ ಅನುಸಾರವಾಗಿ KSRTC ಸೇವೆ

-ಜನ ದಟ್ಟಣೆಗೆ ಅನುಸಾರವಾಗಿ ವೀಕೆಂಡ್ನಲ್ಲಿ KSRTC ಸೇವೆ

-ರಾಜಧಾನಿ ಬೆಂಗಳೂರು ಸೇರಿ ರಾಜ್ಯ ಹಾಗೂ ಅಂತರಾಜ್ಯ ಬಸ್ ಓಡಾಡಲಿವೆ

-ಗೋವಾ, ಮಹಾರಾಷ್ಟ್ರ, ಕೇರಳ ಸೇರಿದಂತೆ ಹೊರ ರಾಜ್ಯದ ಪ್ರಯಾಣಿಕರಿಗೆ ಟಫ್ ರೂಲ್ಸ್

-RTPCR ನೆಗೆಟಿವ್ ವರದಿ ಇಲ್ಲದಿದ್ದರೆ  ಬಸ್ ಗೆ ಪ್ರವೇಶ ಇರುವುದಿಲ್ಲ

-ಕೋವಿಡ್ ರೂಲ್ಸ್ ಫಾಲೋ ಮಾಡಿ KSRTC ಬಸ್ ಸಂಚಾರ ನಡೆಸಲಿದೆ

-ವೀಕೆಂಡ್ ನಲ್ಲಿ 20 ನಿಮಿಷಕ್ಕೊಂದು ಮೆಟ್ರೋ

-ಕರ್ಫ್ಯೂ ವೇಳೆ  ಮೆಟ್ರೋ ಎಂದಿನಂತೆ ಸಂಚಾರ ಇರಲಿದೆ

-ಶನಿವಾರ ಹಾಗೂ ಭಾನುವಾರ 20 ನಿಮಿಷಗಳಿಗೊಮ್ಮೆ ಮೆಟ್ರೋ ಓಡಾಡಲಿದೆ

-ವೀಕೆಂಡ್ ಕರ್ಫ್ಯೂ ವೇಳೆ ಬೆಳಗ್ಗೆ 8 ರಿಂದ  ರಾತ್ರಿ 9 ರವರೆಗೆ ಕಾರ್ಯಾಚರಣೆ

ಆಟೋ, ಓಲಾ ಊಬರ್ ಓಡಾಟಕ್ಕಿಲ್ಲ ಅನುಮತಿ

-ಕರ್ಫ್ಯೂ ವೇಳೆ  ಆಟೋ, ಕ್ಯಾಬ್ ಸಂಚಾರಕ್ಕೆ ಅವಕಾಶ ಇಲ್ಲ

-ಜನರು KSRTC ಬಸ್ನಲ್ಲಿ ಬಂದಿಳಿದರೂ ಮುಂದೆ ಹೋಗೋಕೆ ಬಿಎಂಟಿಸಿ ಬಸ್ಸೂ ಇಲ್ಲ

-ದೂರದಿಂದ ಬರುವ ಪ್ರಯಾಣಿಕರಿಗೆ ತೊಂದರೆ ಸಾಧ್ಯತೆ

-ಹೀಗಾಗಿ ಪರಿಸ್ಥಿತಿ ಅವಲೋಕಿಸಿ ಜನರು ಪ್ರಯಾಣ ಕೈಗೊಳ್ಳುವುದು ಉತ್ತಮ

ಹೋಟೆಲ್, ರೆಸ್ಟೋರೆಂಟ್, ಬಾರ್, ಪಬ್ ಬಂದ್

-ವೀಕೆಂಡ್ ಕರ್ಫ್ಯೂ ವೇಳೆ ಹೋಟೆಲ್, ರೆಸ್ಟೋರೆಂಟ್, ಬಾರ್, ಪಬ್ ಬಂದ್

-ಪಾಸಿಟಿವಿಟಿ ದರ ಕಡಿಮೆ ಇರುವ ಜಿಲ್ಲೆಗಳಲ್ಲಿ ನಿರ್ಧಾರ ತೆಗೆದುಕೊಳ್ಳಲು ಜಿಲ್ಲಾಧಿಕಾರಿಗಳು ಸ್ವತಂತ್ರರು

-ಪಾರ್ಸಲ್ ಗೂ ಅವಕಾಶ
Published by:Mahmadrafik K
First published: