Dowry Case: "ಅಮ್ಮ ಬೇಗ ಬಾ" ಎನ್ನುತ್ತಲೇ ಪ್ರಾಣ ಬಿಟ್ಟಳು ಮಗಳು! ವರದಕ್ಷಿಣೆಗಾಗಿ ಕೊಂದರಾ ಕಿರಾತಕರು?

ವರದಕ್ಷಿಣೆ ಜಗಳ ವಿಪರೀತಕ್ಕೆ ಹೋಗ್ತಿದ್ದಂತೆ ರೇಖಾ ಆತಂಕಗೊಂಡಿದ್ದಾಳೆ. ಕೂಡಲೇ ತಾಯಿಗೆ ಕಾಲ್ ಮಾಡಿ, ಕಣ್ಣೀರಿಟ್ಟಿದ್ದಾಳೆ. ನಾವು ಹಿರಿಯರು ಕೂತು ಮಾತನಾಡುತ್ತೇವೆ. ನೀನು ಧೈರ್ಯಗೆಡಬೇಡ ಅಂತ ತಾಯಿಯೂ ಸಮಾಧಾನ ಹೇಳಿದ್ದಾಳೆ. ಆದರೆ ಅವರೆಲ್ಲ ಈಕೆಯ ಮನೆಗೆ ಬರುವ ಹೊತ್ತಿಗೆ ರೇಖಾ ಕೊಲೆಯಾಗಿ ಹೋಗಿದ್ದಾಳೆ.

ಪತಿ ಗಿರೀಶ್ ಜೊತೆ ಮೃತ ರೇಖಾ

ಪತಿ ಗಿರೀಶ್ ಜೊತೆ ಮೃತ ರೇಖಾ

  • Share this:
ಬೆಂಗಳೂರು: ಆಕೆ ಅವರ ಮನೆಯನ್ನು (Family) ಬೆಳಗಲು ಅಂತ ಬಂದ ಸೊಸೆ. ಆಕೆಯೇನೂ ನಿನ್ನೆ ಮೊನ್ನೆ ಮದುವೆಯಾಗಿ (Marriage)  ಬಂದವಳೂ ಅಲ್ಲ. ಆದರೆ ಇಷ್ಟು ವರ್ಷಗಳ ಕಾಲ ಅವಳು ಎಲ್ಲವನ್ನೂ ಸಹಿಸಿಕೊಂಡಿದ್ದಳು. ಗಂಡ (Husband) ಹಾಗೂ ಆತನ ಮನೆಯವರು ಹೊಡೆದರೂ, ಬಡಿದರೂ, ಬೈದರೂ ಎಲ್ಲವನ್ನೂ ಸಹಿಸಿ, ಸಂಸಾರ ನಡೆಸಿಕೊಂಡು ಹೋಗುತ್ತಿದ್ದಳು. ಆದರೆ ಇದೀಗ ಅವಳ ತಾಳ್ಮೆಯೇ (Patience) ಅವಳಿಗೆ ಮುಳುವಾಯಿತು. ಇಷ್ಟು ವರ್ಷ ಇಲ್ಲದ ಧನಪಿಶಾಚಿ ಈಗ ಅವಳ ಸಂಸಾರವನ್ನು ಕಾಡುವುದಕ್ಕೆ ಶುರು ಮಾಡಿತು. ಇದೀಗ ಪತಿ ಹಾಗೂ ಆತನ ಮನೆಯವರ ಧನದಾಹಕ್ಕೆ ಆಕೆ ಬಲಿಯಾಗಿದ್ದಾಳೆ. ವರದಕ್ಷಿಣೆ (Dowry) ಆಸೆಗೆ ಕಿರಾತಕರು ಆಕೆಯನ್ನು ಬಲಿಪಡೆದಿದ್ದಾರೆ. ಹೀಗಂತ ಆಕೆಯ ಕುಟುಂಬಸ್ಥರು ಆರೋಪಿಸಿದ್ದಾರೆ. ಹಾಗಿದ್ರೆ ಅಸಲಿಗೆ ಅಲ್ಲಿ ನಡೆದಿದ್ದೇನು ಅಂತ ನೀವೇ ಓದಿ…

ಅಲ್ಲಿ ಕೊಲೆಯಾಗಿ ಹೋಗಿದ್ದಳು ಮನೆಯ ಸೊಸೆ

ಬೆಂಗಳೂರು ಗ್ರಾಮಾಂತರ ಜಿಲ್ಲೆಯ ನೆಲಮಂಗಲ ತಾಲೂಕಿನ ದಾಬಸ್ ಪೇಟೆಯಲ್ಲಿ ಇಂಥದ್ದೊಂದು ಘಟನೆ ನಡೆದಿದೆ. 30 ವರ್ಷದ ರೇಖಾ ಎಂಬಾಕೆಯ ಶವವಾಗಿ ಪತ್ತೆಯಾಗಿದ್ದಾಳೆ. ಮಾರಕಾಸ್ತ್ರಗಳಿಂದ ಹೊಡೆದು ಕೊಲೆ ಮಾಡಿರುವ ಶಂಕೆ ವ್ಯಕ್ತವಾಗಿದೆ.

12 ವರ್ಷಗಳ ಹಿಂದೆ ರೇಖಾ ಮದುವೆ

ಮೃತ ರೇಖಾ ತುಮಕೂರು ಜಿಲ್ಲೆಯ ದಿಬ್ಬೂರು ಗ್ರಾಮದ ಮೂಲದವರು. ಆಕೆಯನ್ನು ದಾಬಸ್‌ ಪೇಟೆ ಬಳಿಯ ಗಿರೀಶ್ ಎಂಬುವರಿಗೆ ಮದುವೆ ಮಾಡಿಕೊಡಲಾಗಿತ್ತು. ಕಳೆದ 12 ವರ್ಷಗಳ ಹಿಂದೆಯೇ ರೇಖಾ ಹಾಗೂ ಗಿರೀಶ್ ವಿವಾಹವಾಗಿತ್ತು.

ಇದನ್ನೂ ಓದಿ: Double Murder: ಮನೆಯಲ್ಲಿ ಅನ್ನ ತಿಂದವನೇ ದಂಪತಿಯನ್ನು ಕೊಂದಿದ್ದ! ಬಲೆಗೆ ಬಿದ್ದಿದ್ದು ಹೇಗೆ ಹಂತಕ?

ವರದಕ್ಷಿಣೆಗಾಗಿ ಪ್ರತಿನಿತ್ಯ ಕಿರುಕುಳ

ರೇಖಾ ಮದುವೆಯಾಗಿ ಮನೆಗೆ ಬಂದಾಗಿನಿಂದಲೂ ಆಕೆಯ ಗಂಡನ ಕುಟುಂಬಸ್ಥರು ಕಿರುಕುಳ ಶುರು ಮಾಡಿಕೊಂಡಿದ್ದರು. ವರದಕ್ಷಿಣೆ ಹಣ ತೆಗೆದುಕೊಂಡು ಬಾ ಅಂತ ನಿತ್ಯ ಮಾನಸಿಕವಾಗಿ ಹಾಗೂ ದೈಹಿಕವಾಗಿ ಹಿಂಸೆ ಕೊಡುತ್ತಿದ್ದರು ಅಂತ ಮೃತಳ ಕುಟುಂಬಸ್ಥರು ಆರೋಪಿಸುತ್ತಿದ್ದಾರೆ.

ಗಂಡ ಹಾಗೂ ಮಾವನಿಂದ ನಿತ್ಯ ಹಿಂಸೆ

ರೇಖಾ ಪತಿ ಗಿರೀಶ್ ಹಾಗೂ ಆತನ ತಂದೆ, ಅಂದರೆ ರೇಖಾ ಮಾವ ನಾರಾಯಣಪ್ಪ ಇಬ್ಬರೂ ಧನದಾಹಿಗಳು. ಅವರಿಬ್ಬರು ವರದಕ್ಷಿಣೆ ಹಣಕ್ಕಾಗಿ ನಿತ್ಯ ಪಿಡಿಸುತ್ತಾ ಇದ್ದರು. ಅದರಲ್ಲೂ ಈ ಎರಡು ವರ್ಷಗಳಲ್ಲಿ ಗಂಡ ಹಾಗೂ ಮಾವನ ಕಿರುಕುಳ ವಿಪರೀತವಾಗಿತ್ತು. ಈ ಬಗ್ಗೆ ರೇಖಾ ತನ್ನ ಹೆತ್ತವರೊಂದಿಗೆ ದುಃಖ ತೋಡಿಕೊಂಡಿದ್ದಳು ಎನ್ನಲಾಗಿದೆ.

ಮಾರಣಾಂತಿಕವಾಗಿ ಹಲ್ಲೆ ನಡೆಸಿ ರೇಖಾ ಹತ್ಯೆ?

ಇದೀಗ ವರದಕ್ಷಿಣೆ ಕಿರುಕುಳ ವಿಪರೀತಕ್ಕೆ ಹೋಗಿದೆ. ಹೀಗಾಗಿ ರೇಖಾ ಹಾಗೂ ಗಂಡ ಮತ್ತು ಮಾವನ ನಡುವೆ ಮಾತಿಗೆ ಮಾತು ಬೆಳೆದಿದೆ. ಆಗ ಗಂಡ ಹಾಗೂ ಮಾವ ಇಬ್ಬರೂ ಮಾರಣಾಂತಿಕವಾಗಿ ಹಲ್ಲೆ ನಡೆಸಿ, ರೇಖಾ ಹತ್ಯೆ ಮಾಡಿದ್ದಾರೆ ಎನ್ನಲಾಗಿದೆ.

ಸಾಯೋ ಮುನ್ನ ತಾಯಿಗೆ ಕರೆ ಮಾಡಿದ್ದ ಮಗಳು

ಇಲ್ಲಿ ವರದಕ್ಷಿಣೆ ಜಗಳ ವಿಪರೀತಕ್ಕೆ ಹೋಗ್ತಿದ್ದಂತೆ ರೇಖಾ ಆತಂಕಗೊಂಡಿದ್ದಾಳೆ. ಕೂಡಲೇ ತಾಯಿಗೆ ಕಾಲ್ ಮಾಡಿ, ಕಣ್ಣೀರಿಟ್ಟಿದ್ದಾಳೆ. ನಾವು ಹಿರಿಯರು ಕೂತು ಮಾತನಾಡುತ್ತೇವೆ. ನೀನು ಧೈರ್ಯಗೆಡಬೇಡ ಅಂತ ತಾಯಿಯೂ ಸಮಾಧಾನ ಹೇಳಿದ್ದಾಳೆ. ಆದರೆ ಅವರೆಲ್ಲ ಈಕೆಯ ಮನೆಗೆ ಬರುವ ಹೊತ್ತಿಗೆ ರೇಖಾ ಕೊಲೆಯಾಗಿ ಹೋಗಿದ್ದಾಳೆ.

ಇದನ್ನೂ ಓದಿ: Bengaluru: ಇವಳೆಂಥಾ ಕಳ್ಳಿ ಗೊತ್ತಾ? “ಥ್ಯಾಂಕ್ಸ್” ಅನ್ನುತ್ತಲೇ ಚೈನ್ ಕದೀತಾಳೆ ಈ ಲೇಡಿ!

ಮೃತಳ ಮಾವ, ಗಂಡ ಪೊಲೀಸ್ ವಶಕ್ಕೆ

ರೇಖಾ ಹೆತ್ತವರು ದಾಬಸ್ ಪೇಟೆ ಪೊಲೀಸ್ ಠಾಣೆಯಲ್ಲಿ ಆಕೆಯ ಪತಿ ಗಿರೀಶ್ ಹಾಗೂ ಮಾವ ನಾರಾಯಣಪ್ಪ ವಿರುದ್ಧ ದೂರು ನೀಡಿದ್ದಾರೆ. ಈ ದೂರಿನ ಅನ್ವಯ ಇಬ್ಬರನ್ನೂ ಪೊಲೀಸರು ವಶಕ್ಕೆ ಪಡೆದಿದ್ದಾರೆ. ಇನ್ನು ಪರೀಕ್ಷೆಗಾಗಿ ತುಮಕೂರು ಸರ್ಕಾರಿ ಅಸ್ಪತ್ರೆಗೆ ಮೃತ ದೇಹವನ್ನು ರವಾನೆ ಮಾಡಲಾಗಿದೆ. ದಾಬಸ್ ಪೇಟೆ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
Published by:Annappa Achari
First published: