Fraud Case: ದೇವನಹಳ್ಳಿ ಬಳಿ ಸೈಟ್ ಖರೀದಿಸಿದವರಿಗೆ ಉಂಡೇನಾಮ.. ಹೀಗೆಲ್ಲಾ ಮೋಸ ಮಾಡ್ತಾರೆ ಎಚ್ಚರ!

ದೇವನಹಳ್ಳಿ ಬಳಿ ಇರುವ ನಿವೇಶಗಳನ್ನು JP ಗೋಲ್ಡನ್ ಹೋಮ್ಸ್ ಪ್ರಾಪರ್ಟಿ ಪ್ರೈವೇಟ್ ಲಿಮಿಟೆಡ್ ಮೂಲಕ 320 ಜನರಿಗೆ ನೋಂದಾಯಿಸಿ ಕೊಡಲಾಗಿತ್ತು. ಆದರೆ ಕೆಲವು ದಿನ ಕಳೆದ ಮೇಲೆ ಬೆಂಗಳೂರು ಗ್ರಾಮಾಂತರ ಜಿಲ್ಲಾಧಿಕಾರಿ ಲೇಔಟ್ ಅಕ್ರಮ ಎಂದು ಉಲ್ಲೇಖಿಸಿ ಜಮೀನು ಪರಿವರ್ತನೆಯನ್ನು ಅಸಿಂಧು ಎಂದು ಪರಿಗಣಿಸಿದರು.

ಸಾಂದರ್ಭಿಕ ಚಿತ್ರ

ಸಾಂದರ್ಭಿಕ ಚಿತ್ರ

 • Share this:
  ಬೆಂಗಳೂರು:  ಗೃಹ ನಿರ್ಮಾಣ ಸಹಕಾರ ಸಂಘದವರು ಡೆವಲಪರ್ ರೊಬ್ಬರ ಜೊತೆಗೆ ಶಾಮೀಲಾಗಿ ಅಕ್ರಮವಾಗಿ ದೇವನಹಳ್ಳಿ (Devanahalli) ಬಳಿ ನಿವೇಶನ ಮಾರಾಟ (Site Selling) ಮಾಡಿ ಸುಮಾರು 320 ಮಂದಿಗೆ ವಂಚಿಸಿದ್ದಾರೆ(Cheated).  ವಂಚನೆಗೊಳಗಾದ ಬ್ಯಾಂಕಿನ ಮಾಜಿ ಮ್ಯಾನೇಜರ್ ಸತ್ಯನಾರಾಯಣ್ ಎಂಬುವವರು ಜೆ.ಪಿ.ನಗರ ಪೊಲೀಸರಿಗೆ ದೂರು ನೀಡಿದ್ದಾರೆ. ದೇವನಹಳ್ಳಿ ಬಳಿ ಇರುವ ನಿವೇಶಗಳನ್ನು JP ಗೋಲ್ಡನ್ ಹೋಮ್ಸ್ ಪ್ರಾಪರ್ಟಿ ಪ್ರೈವೇಟ್ ಲಿಮಿಟೆಡ್ ಮೂಲಕ 320 ಜನರಿಗೆ ನೋಂದಾಯಿಸಿ ಕೊಡಲಾಗಿತ್ತು. ಆದರೆ ಕೆಲವು ದಿನ ಕಳೆದ ಮೇಲೆ ಬೆಂಗಳೂರು ಗ್ರಾಮಾಂತರ ಜಿಲ್ಲಾಧಿಕಾರಿ ಲೇಔಟ್ ಅಕ್ರಮ ಎಂದು ಉಲ್ಲೇಖಿಸಿ ಜಮೀನು ಪರಿವರ್ತನೆಯನ್ನು ಅಸಿಂಧು ಎಂದು ಪರಿಗಣಿಸಿದ್ದರು.ಈ ಘಟನೆ ಬಳಿಕವಷ್ಟೇ ನಿವೇಶನ ಖರೀದಿದಾರರಿಗೆ ತಾವು ಮೋಸ ಹೋಗಿರುವುದು ತಿಳಿದು ಬಂದಿದೆ. ಈ ಸೈಟ್ ಗಳನ್ನು ಖರೀದಿಸಿದವರಲ್ಲಿ ಹೆಚ್ಚಿನವರು ಬ್ಯಾಂಕಿನ ನಿವೃತ್ತ ಉದ್ಯೋಗಿಗಳೇ ಆಗಿದ್ದಾರೆ. ಸದ್ಯ, ಸತ್ಯನಾರಾಯಣ ಅವರ ದೂರಿನ ಆಧಾರದ ಮೇಲೆ ಆರೋಪಿಗಳ ವಿರುದ್ಧ ಜೆಪಿ ನಗರ ಪೊಲೀಸರು ಎಫ್ಐಆರ್ ದಾಖಲಿಸಿದ್ದಾರೆ.

  ಇದನ್ನೂಓದಿ: Property: ಮೈಸೂರು ರಸ್ತೆ ಭಾಗದಲ್ಲಿ ಸೈಟ್, ಮನೆಗಳ ಖರೀದಿಗೆ ಡಿಮ್ಯಾಂಡಪ್ಪೋ, ಡಿಮ್ಯಾಂಡು! ಕಾರಣ ಏನು ಗೊತ್ತಾ?

  ಪದಾಧಿಕಾರಿಗಳೆಂದು ಪರಿಚಯಿಸಿಕೊಂಡಿದ್ದ ಆರೋಪಿಗಳು 

  ಸ್ಟೇಟ್ ಬ್ಯಾಂಕ್ ಆಫ್ ಮೈಸೂರಿನ ವ್ಯವಸ್ಥಾಪಕರಾಗಿ ನಿವೃತ್ತರಾಗಿರುವ ಎ.ವಿ.ಸತ್ಯನಾರಾಯಣ ಅವರಿಗೆ, ಆರೋಪಿಗಳು ತಾವು ಸ್ಟೇಟ್ ಬ್ಯಾಂಕ್ ಆಫ್ ಮೈಸೂರು ಆಫೀಸರ್ಸ್ ಹೌಸಿಂಗ್ ಕೋಆಪರೇಟಿವ್ ಸೊಸೈಟಿ ಲಿಮಿಟೆಡ್​​ನ ಪದಾಧಿಕಾರಿಗಳೆಂದು ಪರಿಚಯಿಸಿಕೊಂಡಿದ್ದರೆಂದು ದೂರಿನಲ್ಲಿ ಆರೋಪಿಸಲಾಗಿದೆ. ಜೆಪಿ ಗೋಲ್ಡನ್ ಹೋಮ್ಸ್ ಪ್ರಾಪರ್ಟಿ ಪ್ರೈವೇಟ್ ಲಿಮಿಟೆಡ್ಗೆ ಸೇರಿದ ಕಿಶೋರ್ ಮತ್ತಿತರರು ದೇವನಹಳ್ಳಿ ತಾಲೂಕಿನ ಸಿಂಗರಹಳ್ಳಿ ಗ್ರಾಮದಲ್ಲಿ ವಸತಿ ಬಡಾವಣೆಯನ್ನು ಅಭಿವೃದ್ಧಿಪಡಿಸುತ್ತಿದ್ದು,ತಾವು ಬ್ಯಾಂಕಿನ ಕಾನೂನು ಸಲಹೆಗಾರರಿಂದ ಕಾನೂನು ಅಭಿಪ್ರಾಯ ತೆಗೆದುಕೊಂಡಿದ್ದು, ತದನಂತರ ನಿವೇಶನಗಳಿಗೆ ಅನುಮೋದನೆ ನೀಡಲಾಗಿದೆ ಎಂದು ಆರೋಪಿಗಳು ಹೇಳಿದ್ದರು ಎಂದು ದೂರಿನಲ್ಲಿ ಉಲ್ಲೇಖಿತವಾಗಿದೆ.

  ಬ್ಯಾಂಕ್​ ಉದ್ಯೋಗಿಗಳಿಗೇ ವಂಚನೆ..! 

  ಉದ್ದೇಶಿತ ಬಡಾವಣೆಯಲ್ಲಿರುವ ನಿವೇಶನಗಳಿಗೆ ಪ್ರತಿ ಚದರ ಅಡಿಗೆ 550 ರೂ. ಎಂದು ಹೇಳುವ ಸುತ್ತೊಲೆಯೊಂದನ್ನು ಸಹ ಸಂಘ ಹೊರಡಿಸಿತ್ತು. ಅವರ ಮಾತುಗಳನ್ನು ನಂಬಿ, ನನ್ನ ಸಹೋದ್ಯೋಗಿಗಳು, ಸ್ನೇಹಿತರು ಮತ್ತು ನಾನು ಅಲ್ಲಿ ಸೈಟ್ಗಳನ್ನು ಖರೀದಿಸಿದೆವು. ಅದನ್ನು ಜೆಪಿ ಗೋಲ್ಡನ್ ಹೋಮ್ಸ್ ಪ್ರಾಪರ್ಟಿ ಪ್ರೈವೇಟ್ ಲಿಮಿಟೆಡ್ ಮೂಲಕ ನೋಂದಾಯಿಸಲಾಗಿದೆ. ಆದರೆ ಡೆವಲಪರ್ ಹಲವಾರು ವರ್ಷಗಳು ಕಳೆದರೂ ಲೇಔಟ್ ಅನ್ನು ಅಭಿವೃದ್ಧಿಪಡಿಸಲಿಲ್ಲ ಎಂದು ಸತ್ಯನಾರಾಯಣ್ ಆರೋಪಿಸಿದ್ದಾರೆ.

  ಸತ್ಯ ಮುಚ್ಚಿಟ್ಟು ಮೋಸ 

  ಲೇಔಟ್ ಅಂತರಾಷ್ಟ್ರೀಯ ವಿಮಾನ ನಿಲ್ದಾಣಕ್ಕೆ ಸಮೀಪದಲ್ಲಿ ಇರುವುದರಿಂದ, ಬೆಂಗಳೂರು ಅಂತರಾಷ್ಟ್ರೀಯ ವಿಮಾನ ನಿಲ್ದಾಣ ಪ್ರದೇಶ ಯೋಜನಾ ಪ್ರಾಧಿಕಾರದ (BIAAPA) ಅನುಮೋದನೆ ಅಗತ್ಯವಿದೆ. ಪ್ರಾಧಿಕಾರ 2006ರಲ್ಲಿ ಡೆವಲಪರ್ಗಳ ಪ್ರಸ್ತಾವನೆಯನ್ನು ತಿರಸ್ಕರಿಸಿದ್ದರೂ ಖರೀದಿದಾರರಿಗೆ ಈ ವಿಷಯವನ್ನು ಬಹಿರಂಗಪಡಿಸದೆ ಜಮೀನನ್ನು ಕೃಷಿಯಿಂದ ಕೃಷಿಯೇತರ ಉದ್ದೇಶಕ್ಕೆ ಪರಿವರ್ತಿಸಿ ನಿವೇಶನಗಳನ್ನು ಮಾರಾಟ ಮಾಡಲಾಗಿ ಜನರಿಗೆ ವಂಚಿಸಿದ್ದಾರೆ ಎಂದು ಸತ್ಯನಾರಾಯಣ ದೂರಿನಲ್ಲಿ ತಿಳಿಸಿದ್ದಾರೆ.

  ಇದನ್ನೂ ಓದಿ: Nandi Hill: ನಂದಿಬೆಟ್ಟಕ್ಕೆ ತೆರಳುವ ಪ್ರವಾಸಿಗರಿಗೆ ಗುಡ್ ನ್ಯೂಸ್

  320 ಹಿರಿಯ ನಾಗರಿಕರಿಗೆ ದೋಖಾ 

  ನಿವೇಶನ ಖರೀದಿದಾರರಿಗೆ ಇದ್ಯಾವ ವಿಚಾರದ ಬಗ್ಗೆಯೂ ತಿಳಿದಿರಲಿಲ್ಲ, ಕೆಲವು ವರ್ಷಗಳ ನಂತರ ಮಾಲೀಕರಿಗೆ ಆಘಾತ ನೀಡುವಂತೆ, ಕಳೆದ ವರ್ಷ 2021ರ ನವೆಂಬರ್ನಲ್ಲಿ ಬೆಂಗಳೂರು ಗ್ರಾಮಾಂತರ ಜಿಲ್ಲಾಧಿಕಾರಿ ಲೇಔಟ್ ಅಕ್ರಮ ಎಂದು ಉಲ್ಲೇಖಿಸಿ ಜಮೀನು ಪರಿವರ್ತನೆಯನ್ನು ಅಸಿಂಧು ಎಂದು ಪರಿಗಣಿಸಿ ಆದೇಶ ಹೊರಡಿಸಿದರು. ಇಲ್ಲಿ ಸುಮಾರು 320 ಹಿರಿಯ ನಾಗರಿಕರು ಸೈಟ್ ಖರೀದಿಸಿದ್ದರು, ಅವರಲ್ಲಿ ಹೆಚ್ಚಿನವರು ಬ್ಯಾಂಕ್ನ ನಿವೃತ್ತ ಉದ್ಯೋಗಿಗಳಾಗಿದ್ದೇವೆ ಎಂದು ಸತ್ಯನಾರಾಯಣ ಹೇಳಿದ್ದಾರೆ.

  ಸತ್ಯನಾರಾಯಣ ಅವರ ದೂರಿನ ಅನ್ವಯ, ಜೆಪಿ ನಗರ ಪೊಲೀಸರು ಆರೋಪಿಗಳ ವಿರುದ್ಧ ಎಫ್ಐಆರ್ ದಾಖಲಿಸಿದ್ದಾರೆ ಮತ್ತು ಡೆವಲಪರ್, ಗೃಹ ನಿರ್ಮಾಣ ಸಹಕಾರ ಸಂಘದ ನಾಲ್ವರು ಪದಾಧಿಕಾರಿಗಳು ಮತ್ತು ಇತರರ ವಿರುದ್ಧ ಕ್ರಿಮಿನಲ್ ನಂಬಿಕೆ ಉಲ್ಲಂಘನೆ, ವಂಚನೆ ಮತ್ತು ಕ್ರಿಮಿನಲ್ ಪಿತೂರಿ ಪ್ರಕರಣಗಳನ್ನು ದಾಖಲಿಸಿದ್ದಾರೆ. ಕೇಸ್ ಗೆ ಸಂಬಂಧಿಸಿದಂತೆ ಹೆಚ್ಚಿನ ತನಿಖೆ ನಡೆಯುತ್ತಿದೆ.
  Published by:Kavya V
  First published: