ತಾಯಿ ಜೊತೆ ಅಕ್ರಮ ಸಂಬಂಧ.. ಮಗಳ ಜೊತೆ ಲವ್ವಿಡವ್ವಿ.. Affair-Love-Murder ಸ್ಟೋರಿ ಬಯಲು!

Archana Reddy Murder: ಅರ್ಚನಾ ರೆಡ್ಡಿ ಒಂದಲ್ಲ ಎರಡಲ್ಲ ಮೂರು ಮದುವೆ ಮಾಡಿಕೊಂಡಿದ್ದರು. ಮಗಳಿಗೆ ಜಿಮ್​ ಟ್ರೈನರ್​ ಆಗಿದ್ದ ಆರೋಪಿ ನವೀನ್​​ ತಾಯಿ ಅರ್ಚನಾ ಜೊತೆ ಲಿವಿಂಗ್​ ಟುಗೆದರ್​ ಇದ್ದ. ನಂತರ ಮಗಳೊಂದಿಗೂ ಸುತ್ತಾಡಲು ಶುರು ಮಾಡಿದ್ದ.

ಕೊಲೆಯಾದ ಅರ್ಚನಾ ರೆಡ್ಡಿ, ಆರೋಪಿ ನವೀನ್​

ಕೊಲೆಯಾದ ಅರ್ಚನಾ ರೆಡ್ಡಿ, ಆರೋಪಿ ನವೀನ್​

  • Share this:
ಆನೇಕಲ್​​:  ಡಿ.27 ಸೋಮವಾರದಂದು ಹೊಸೂರು ಮುಖ್ಯರಸ್ತೆ ಹೊಸರೋಡ್ ಜಂಕ್ಷನ್ ಬಳಿ ನಡೆದಿದ್ದ ಅರ್ಚನಾ ರೆಡ್ಡಿ ಹತ್ಯೆ (Archana Reddy Murder) ಪ್ರಕರಣದ ಪ್ರಮುಖ ಆರೋಪಿ ಅರೆಸ್ಟ್ ಆಗಿದ್ದಾನೆ. ಎಲೆಕ್ಟ್ರಾನಿಕ್ ಸಿಟಿ ಪೊಲೀಸರು (Electronic City Police) ಆರೋಪಿ ನವೀನ್ ಮತ್ತು ಆತನ ಸಹಚರ ಅನೂಪ್ ನನ್ನು ಬಂಧಿಸಿ ತೀವ್ರ ತನಿಖೆ ನಡೆಸಿದ್ದಾರೆ.  ಮೃತ ಅರ್ಚನಾ ರೆಡ್ಡಿ ಒಂದಲ್ಲ ಎರಡಲ್ಲ ಮೂರು ಮದುವೆ ಮಾಡಿಕೊಂಡಿದ್ದರು. ಆದ್ರೆ ಯಾವುದೂ ಹೆಚ್ಚು ದಿನ ಉಳಿಯಲಿಲ್ಲ. ಲವ್ ಮಾಡಿ ಮೊದಲ ಮದುವೆ ಮಾಡಿಕೊಂಡಿದ್ದ ಅರವಿಂದ್ ಜೊತೆ 10 ವರ್ಷ ಸಂಸಾರ ನಡೆಸಿದ್ದ ಅರ್ಚನಾ ರೆಡ್ಡಿಗೆ ಯುವಿಕಾ ರೆಡ್ಡಿ ಮತ್ತು ತ್ರಿವಿದ್ ಎಂಬ ಇಬ್ಬರು ಮಕ್ಕಳು ಇದ್ದರು. ಆದ್ರೆ ಇವರ ಸಂಸಾರ ಹೆಚ್ಚು ದಿನ ಉಳಿಯಲಿಲ್ಲ.  ಅರವಿಂದ್ ನಿಂದ ಡಿವೊರ್ಸ್ ಜೊತೆಗೆ 15 ಕೋಟಿ ಜೀವನಾಂಶ ಪಡೆದಿದ್ದಳು ಅರ್ಚನಾ.

ಜಿಮ್​​ ಟ್ರೈನರ್​ ನವೀನ್​ ಜೊತೆ ಅರ್ಚನಾ ಅಫೇರ್​ 

ಕೆಲ ದಿನ ರಿಯಲ್ ಎಸ್ಟೇಟ್ ಬಿಸಿನೆಸ್ ಮಾಡಿಕೊಂಡಿದ್ದ ಅರ್ಚನಾಗೆ ಸಿದ್ದಿಕ್ ಎಂಬ ವ್ಯಕ್ತಿ ಜೊತೆ ಎರಡನೇ ಮದುವೆಯಾಗಿ ಕೇವಲ ಎರಡು ವರ್ಷಕ್ಕೆ ಬ್ರೇಕ್ ಅಪ್​​ ಆಗಿದೆ. ಬಳಿಕ ಸಿಕ್ಕವನೇ ಜಿಮ್ ಟ್ರೈನರ್ ನವೀನ್​​.  ಅರ್ಚನಾ ಮಗಳು ಯುವಿಕಾಗೆ ಜಿಮ್ ಟ್ರೈನಿಂಗ್ ಕೊಡುತ್ತಿದ್ದ ಕಟ್ಟುಮಸ್ತಾಗಿದ್ದ ನವೀನನಿಗೆ ಅರ್ಚನಾ ಕ್ಲೀನ್ ಬೋಲ್ಡ್ ಆಗಿದ್ಲು. ನವೀನ್​​ ಸಹ ಅರ್ಚನಾ ಆಸ್ತಿ ನೋಡಿ  ಬಲೆಗೆ ಹಾಕಿಕೊಂಡಿದ್ದ. ಆಮೇಲೆ ನವೀನನ ಲೈಫ್​​ ಫುಲ್ ಬದಲಾಗಿತ್ತು. ಓಡಾಡಲು ಕಾರು, ಬಾರ್-ಪಬ್, ರೆಸಾರ್ಟ್​​ಗಳಲ್ಲಿ ಪಾರ್ಟಿ ಲೈಫ್​ ಫುಲ್ ಬಿಂದಾಸ್ ಆಗಿತ್ತು. ಅರ್ಚನಾ ಜೊತೆ ಮೂರ್ನಾಲ್ಕು ವರ್ಷ ಲಿವಿಂಗ್ ಟುಗೇದರ್ ರಿಲೇಷನ್​ ಶಿಪ್​​ ಚೆನ್ನಾಗಿಯೇ ಇತ್ತು.  ನೀನೇ ನನ್ನ ಸರ್ವಸ್ವ ಎನ್ನುತ್ತಿದ್ದ ನವೀನ್​​ ಕೊನೆಗೆ ಅರ್ಚನಾಗೆ ವಿಲನ್ ಆಗಿಬಿಟ್ಟ.

ಇದನ್ನೂ ಓದಿ: Bengaluru: ಸೆಕ್ಸ್ ಗೆ ಪೀಡಿಸ್ತಾಳೆ, ಊಟ ಹಾಕದೇ ಹಿಂಸೆ ನೀಡ್ತಾಳೆ: ಪತ್ನಿಯ ವಿರುದ್ಧ ಠಾಣೆ ಮೆಟ್ಟಿಲೇರಿದ ಪತಿ

ಮಗಳ ಜೊತೆಗೂ ನವೀನನ ಪ್ರೇಮದಾಟ 

ಯಾವಾಗ ಅರ್ಚನಾ ಮಗಳು ಯುವಿಕಾಗೆ ಜಿಮ್ ನಲ್ಲಿ ಟ್ರೈನಿಂಗ್ ಕೊಡುವ ವೇಳೆ ಮೈ ಮೈ ತಾಕಿತ್ತು. ಅವಾಗ್ಲೆ ಅರ್ಚನಾ ಇವನಿಗೆ ಬೇಡವಾಗಿದ್ಲು. ಅತ್ತ ಅಮ್ಮನ ಆಸ್ತಿ ಮಗಳ ಜೊತೆ ದೋಸ್ತಿ ಮೇಲೆ ನವೀನನ ಕಣ್ಣು ಬಿದ್ದಿತ್ತು. ಜಿಮ್ ಟ್ರೈನಿಂಗ್ ನೆಪದಲ್ಲಿ ಅರ್ಚನಾ ಮಗಳು ಯುವಿಕಾಗೆ ಕಾಳು ಹಾಕಿ ಬಲೆ ಬೀಸಿ ಬುಟ್ಟಿಗೆ ಹಾಕಿಕೊಳ್ಳುವುದರಲ್ಲಿ ನವೀನ್​​ ಯಶಸ್ವಿ ಸಹ ಆಗುತ್ತಾನೆ. ಬಳಿಕ ಯುವಿಕಾ ಜೊತೆ ಟ್ರಿಪ್, ರೆಸಾರ್ಟ್ ವಾಸ್ತವ್ಯ, ಮೋಜು ಮಸ್ತಿ ಶುರುವಿಟ್ಟುಕೊಳ್ಳುತ್ತಾರೆ. ವಿಷಯ ಅರ್ಚನಾರೆಡ್ಡಿ ಕಿವಿಗೆ ಬೀಳುತ್ತಿದ್ದಂತೆ ಇಬ್ಬರಿಗೂ ವಾರ್ನ್ ಮಾಡುತ್ತಾಳೆ.

ಪೊಲೀಸ್​ ವಾರ್ನಿಂಗ್​ ಬಳಕವೂ ಮಗಳ ಜೊತೆ ಎಸ್ಕೇಪ್​​ 

ವಾರ್ನಿಂಗ್​ಗೆ ಬಗ್ಗದಿದ್ದಾಗ ಕಳೆದ ತಿಂಗಳು  11 ನೇ ತಾರೀಖು ಜಿಗಣಿ ಠಾಣೆಯಲ್ಲಿ ನವೀನನ ವಿರುದ್ಧ ದೂರು ನೀಡಿದ್ದಳು. ಜಿಗಣಿ ಪೊಲೀಸರು ಆರೋಪಿ ನವೀನನ್ನು ಕರೆಸಿ ಅರ್ಚನಾ ರೆಡ್ಡಿ ಕುಟುಂಬದ ತಂಟೆಗೆ ಹೋಗದಂತೆ ವಾರ್ನ್ ಮಾಡಿ  ಸೆಕ್ಷನ್ 324 ಅಡಿಯಲ್ಲಿ ಪ್ರಕರಣ ದಾಖಲಿಸಿ ಮುಚ್ಚಳಿಕೆ ಬರೆಸಿಕೊಂಡು ಕಳುಹಿಸಿದ್ದರು. ಆದ್ರೆ ಇದಾಗಿ ಕೆಲವೇ ದಿನಕ್ಕೆ ಯುವಿಕಾಳನ್ನು ಕರೆದುಕೊಂಡು ನವೀನ್​​ ಪರಾರಿಯಾಗಿದ್ದಾನೆ.

ಮಗಳ ಜೊತೆ ಸೇರಿಕೊಂಡು ಅಮ್ಮನಿಗೆ ಸ್ಕೆಚ್​ 

ಉಂಡು ಹೋದ ಕೊಂಡು ಹೋದ ನವೀನನ ವಿರುದ್ಧ ಸೇಡು ತಿರಿಸಿಕೊಳ್ಳಲು ಮುಂದಾದ ಅರ್ಚನಾ ರೆಡ್ಡಿ ಯುವಿಕಾಳ ಅಂಕೌಂಟ್ ಲಾಕ್ ಮಾಡಿಸುತ್ತಾಳೆ. ಇದರಿಂದ ನವೀನ ಬೀದಿಗೆ ಬೀಳಿತ್ತಾನೆ. ಕಾರಿನಲ್ಲಿ ಬಿಂದಾಸ್ ಆಗಿ‌ ಓಡಾಟ ಮಾಡಿತ್ತಿದ್ದ ನವೀನಾ ಬೈಕ್ ನಲ್ಲಿ ಓಡಾಡುವಂತಾದ. ಜೊತೆಗೆ ಇತ್ತ ಅದಾಗಲೆರ ರೌಡಿ ರೋಹಿತ್ ಜೊತೆ ಸಂಬಂಧ ಕುದುರಿಸಿಕೊಂಡಿದ್ದ ಅರ್ಚನಾ ರೆಡ್ಡಿ ಆತನಿಂದ ನವೀನನಿಗೆ ಯುವಿಕಾಳನ್ನು ಬಿಟ್ಟುಬಿಡುವಂತೆ ವಾರ್ನ್ ಮಾಡಿಸುತ್ತಾಳೆ. ಇದರಿಂದ ರೊಚ್ಚಿಗೆದ್ದ ನವೀನಾ ಅರ್ಚನಾ ರೆಡ್ಡಿ ಇದ್ದರೆ ತಾನೇ ಅಸ್ತಿ ಮತ್ತು ಯುವಿಕಾ ಮತ್ತು ನನ್ನ ಸಂಸಾರಕ್ಕೆ ಅಡ್ಡಿಪಡಿಸುವುದು ಎಂದು ಯುವಿಕಾ ಜೊತೆ ಸ್ಕೇಚ್ ಹಾಕಿ ತನ್ನ ಸಹಚರರ ಜೊತೆ ಸೇರಿ ಅರ್ಚನಾ ರೆಡ್ಡಿಯನ್ನು ಬೀಕರವಾಗಿ ಕೊಲೆ ಮಾಡಿದ್ದಾನೆ ಎನ್ನಲಾಗಿದೆ.

ಇದನ್ನೂ ಓದಿ: Wife Murder: ವೋಟ್ ಮಾಡಲು ಬಂದಿದ್ದಾಕೆಯನ್ನು ಕೊಚ್ಚಿ ಕೊಲೆಗೈದ 2ನೇ ಗಂಡ.. ಕಾರಣವೇನು?

ಮಗನಿಂದ ಎಲ್ಲಾ ಕಥೆ ಬಯಲು 

ಇನ್ನೂ ಅರ್ಚನಾ ಪುತ್ರ ತ್ರಿವೇದ್ ಎಲೆಕ್ಟ್ರಾನಿಕ್ ಸಿಟಿ ಪೊಲೀಸರಿಗೆ ದೂರು ಸಹ ನೀಡಿದ್ದು ನನ್ನ ಅಕ್ಕನ ಜೊತೆ ನವೀನ ಸಲುಗೆ ಹೊಂದಿದ್ದ. ಇದನ್ನು  ನಮ್ಮ ತಾಯಿ ಅರ್ಚನಾ ಪ್ರಶ್ನೆ ಮಾಡಿದ್ರೂ, ಹಾಗಾಗಿಯೇ ಸಂಚು ರೂಪಿಸಿ ನವೀನ್ ಕೊಲೆ ಮಾಡಿದ್ದಾರೆ ಎಂದು ನಿನ್ನೆ ದೂರು ನೀಡಿದ್ದಾನೆ. ಹಾಗಾಗಿ ಎಲೆಕ್ಟ್ರಾನಿಕ್ ಸಿಟಿ ಪೊಲೀಸರು ನವೀನ್ ಜೊತೆಗಿದ್ದ ಅರ್ಚನಾ ಪುತ್ರಿಯನ್ನು ವಿಚಾರಣೆ ನಡೆಸಿದ್ದಾರೆ. ಪೊಲೀಸರ ಪ್ರಾಥಮಿಕ ತನಿಖೆಯಲ್ಲಿ ಆಸ್ತಿಗಾಗಿ ಅರ್ಚನಾ ಮಗಳನ್ನೇ ನವೀನ ಬಳಸಿಕೊಂಡು  ಕೊಲೆಮಾಡಿರುವ ಮಾಹಿತಿ ಲಭ್ಯವಾಗಿದೆ ಎನ್ನಲಾಗ್ತಿದೆ. ಅನೂಪ್ ಹಾಗೂ ನವೀನ್ ಬಂಧಿಸಿ ಕೋರ್ಟಿಗೆ ಹಾಜರು ಪಡಿಸಿರುವ ಇಲೆಕ್ಟ್ರಾನಿಕ್ ಸಿಟಿ ಪೊಲೀಸರು ಮೂರನೇ ಆರೋಪಿ ಸಂತೋಷನನ್ನು ಇಂದು ಬಂಧಿಸಿದ್ದಾರೆ.

ಒಟ್ಟಿನಲ್ಲಿ ಜಿಗಣಿಯಲ್ಲಿ ಐಷಾರಾಮಿ, ನಿವೇಶನಗಳು, ಚನ್ನಪಟ್ಟಣದಲ್ಲಿ ಹತ್ತಾರು ಎಕರೆ ಆಸ್ತಿ, ಎಚ್ಎಸ್ಆರ್ ಬಡಾವಣೆ, ಬೆಳ್ಳಂಡೂರಿನಲ್ಲಿ ಐಶಾರಾಮಿ ಮನೆ, ಕುಂದಲಹಳ್ಳಿ ಬಳಿ ಕೋಟಿ‌ ಕೋಟಿ ಆಸ್ತಿ ಹೊಂದಿದ್ದ ಅರ್ಚನಾ ರೆಡ್ಡಿ ನಡುರಸ್ತೆಯಲ್ಲಿ ಭೀಕರವಾಗಿ ಕೊಲೆಯಾಗಿ ಹೋಗಿದ್ದು,  ಅರ್ಚನಾ ಸಾವು ದಿನಕ್ಕೊಂದು ರೀತಿಯ ಟ್ವಿಸ್ಟ್ ಪಡೆಯುತ್ತಿದ್ದು, ಪೊಲೀಸರ ತನಿಖೆಯಿಂದಷ್ಟೆ ಸತ್ಯಾಸತ್ಯತೆ ಹೊರಬರಬೇಕಿದೆ.
Published by:Kavya V
First published: